Trains Cancelled in Bangalore: ಫೆಬ್ರವರಿವರೆಗೆ ಬೆಂಗಳೂರಿನಿಂದ 14 ರೈಲು ರದ್ದು, ಟ್ರೇನ್ ಸಂಖ್ಯೆ, ವಿವರ

ಭಾರತೀಯ ರೈಲ್ವೆಯು ಬೆಂಗಳೂರಿನಿಂದ ಹೊರಡುವ ಹಲವಾರು ರೈಲುಗಳನ್ನು ರದ್ದು ಮಾಡಿದೆ. ನೀವು ಫೆಬ್ರವರಿವರೆಗೆ ಬೆಂಗಳೂರಿನಿಂದ ಇತರೆಡೆ ರೈಲು ಪ್ರಯಾಣ ಮಾಡುವ ಯೋಜನೆ ಹಾಕಿಕೊಂಡಿದ್ದರೆ, ಈ ಸುದ್ದಿಯನ್ನು ಓದಲೇಬೇಕು. ಯಾಕೆಂದರೆ ಒಂದಲ್ಲ ಎರಡಲ್ಲ 14 ರೈಲುಗಳು ಫೆಬ್ರವರಿವರೆಗೆ ರದ್ದಾಗಿರುತ್ತದೆ.

ಉತ್ತರ ಪ್ರದೇಶದ ಮಥುರಾದಲ್ಲಿ ಯಾರ್ಡ್ ಮರುನಿರ್ಮಾಣ ಕಾರ್ಯದಿಂದಾಗಿ ರೈಲ್ವೆಯು ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕೊಯಮತ್ತೂರುಗಳನ್ನು ದೆಹಲಿ ಮತ್ತು ಚಂಡೀಗಢದೊಂದಿಗೆ ಸಂಪರ್ಕಿಸುವ ಸುಮಾರು 14 ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಿದೆ. ಅಂದರೆ ಈ ರೈಲು ರದ್ದಾಗುವುದರಿಂದ ಬೆಂಗಳೂರಿಗರಿಗೆ ಮಾತ್ರವಲ್ಲ, ಹುಬ್ಬಳ್ಳಿ, ಮೈಸೂರು ಮತ್ತು ಕೊಯಮತ್ತೂರು ಜನರಿಗೂ ಪ್ರಭಾವ ಉಂಟಾಗಲಿದೆ. ರದ್ದಾದ ರೈಲುಗಳ ವಿವರ ಇಲ್ಲಿದೆ ಮುಂದೆ ಓದಿ...

ಫೆಬ್ರವರಿವರೆಗೆ ಬೆಂಗಳೂರಿನಿಂದ 14 ರೈಲು ರದ್ದು, ಸಂಖ್ಯೆ, ವಿವರ

ರದ್ದಾದ ರೈಲುಗಳ ವಿವರ ಇಲ್ಲಿದೆ

* ರೈಲು ಸಂಖ್ಯೆ 12213 ಯಶವಂತಪುರ-ದೆಹಲಿ ಸರಾಯ್ ರೋಹಿಲ್ಲಾ: ಜನವರಿ 20, 27 ಮತ್ತು ಫೆಬ್ರವರಿ 3 ರಂದು ರದ್ದುಗೊಳಿಸಲಾಗಿದೆ. ಉಳಿದ ದಿನ ಕಾರ್ಯನಿರ್ವಹಿಸಲಿದೆ.
* ರೈಲು ಸಂಖ್ಯೆ 12214 ದೆಹಲಿ-ಸರಾಯ್ ರೋಹಿಲ್ಲಾ-ಯಶವಂತಪುರ: ಜನವರಿ 22, 29 ಮತ್ತು ಫೆಬ್ರವರಿ 5 ರಂದು ರೈಲು ರದ್ದುಗೊಳಿಸಲಾಗಿದೆ. ಉಳಿದ ದಿನ ರೈಲು ಎಂದಿನಂತೆ ಕಾರ್ಯನಿರ್ವಹಿಸುತ್ತದೆ.
* ರೈಲು ಸಂಖ್ಯೆ 12629 ಯಶವಂತಪುರ-ಹಜರತ್ ನಿಜಾಮುದ್ದೀನ್: ಜನವರಿ 23, 25, 30 ಮತ್ತು ಫೆಬ್ರವರಿ 1 ರಂದು ರದ್ದುಗೊಳಿಸಲಾಗಿದೆ. ಉಳಿದ ದಿನ ರೈಲು ಇರಲಿದೆ.

* ರೈಲು ಸಂಖ್ಯೆ 12630 ಹಜರತ್ ನಿಜಾಮುದ್ದೀನ್-ಯಶವಂತಪುರ: ಜನವರಿ 26, 31, ಫೆಬ್ರವರಿ 2 ಮತ್ತು 7 ರಂದು ರೈಲು ರದ್ದುಗೊಳಿಸಲಾಗಿದೆ. ಉಳಿದ ದಿನ ಕಾರ್ಯನಿರ್ವಹಿಸಲಿದೆ.
* ರೈಲು ಸಂಖ್ಯೆ 12649 ಯಶವಂತಪುರ-ಹಜರತ್ ನಿಜಾಮುದ್ದೀನ್: ಜನವರಿ 22, 24, 26, 27, 28, 29, 31, ಫೆಬ್ರವರಿ 2, 3 ಮತ್ತು 4 ರಂದು ರದ್ದುಗೊಳಿಸಲಾಗಿದೆ. ಅತೀ ಅಧಿಕ ದಿನಗಳು ಈ ರೈಲು ರದ್ದಾಗಿರುತ್ತದೆ.
* ರೈಲು ಸಂಖ್ಯೆ 12650 ಹಜರತ್ ನಿಜಾಮುದ್ದೀನ್-ಯಶವಂತಪುರ: ಜನವರಿ 25, 27, 28, 29, 30, ಫೆಬ್ರವರಿ 1, 3, 4, 5, ಮತ್ತು 6 ರಂದು ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 12781 ಮೈಸೂರು-ಹಜರತ್ ನಿಜಾಮುದ್ದೀನ್: ಜನವರಿ 12, 19 ಮತ್ತು ಫೆಬ್ರವರಿ 2 ರಂದು ರದ್ದುಗೊಳಿಸಲಾಗಿದೆ. ಇದು ಮುಖ್ಯವಾಗಿ ಮೈಸೂರಿನ ಜನರಿಗೆ ಪ್ರಭಾವ ಬೀರಲಿದೆ.
* ರೈಲು ಸಂಖ್ಯೆ 12782 ಹಜರತ್ ನಿಜಾಮುದ್ದೀನ್-ಮೈಸೂರು: ಜನವರಿ 15, 22 ಮತ್ತು ಫೆಬ್ರವರಿ 5 ರಂದು ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 20657 ಎಸ್‌ಎಸ್ಎಸ್‌‌ ಹುಬ್ಬಳ್ಳಿ-ಹಜರತ್ ನಿಜಾಮುದ್ದೀನ್: ಜನವರಿ 12, 19, 26 ಮತ್ತು ಫೆಬ್ರವರಿ 2 ರಂದು ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 20658 ಹಜರತ್ ನಿಜಾಮುದ್ದೀನ್-ಎಸ್ಎಸ್ಎಸ್ ಹುಬ್ಬಳ್ಳಿ: ಜನವರಿ 14, 21, 28 ಮತ್ತು ಫೆಬ್ರವರಿ 4 ರಂದು ರೈಲು ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 22685 ಯಶವಂತಪುರ-ಚಂಡೀಗಢ: ಜನವರಿ 20, 24, 27, 31 ಮತ್ತು ಫೆಬ್ರವರಿ 3 ರಂದು ರೈಲು ರದ್ದುಗೊಳಿಸಲಾಗಿದೆ.

* ರೈಲು ಸಂಖ್ಯೆ 22686 ಚಂಡೀಗಢ-ಯಶವಂತಪುರ: ಜನವರಿ 23, 27, 30, ಫೆಬ್ರವರಿ 3 ಮತ್ತು 6 ರಂದು ರೈಲು ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 12647 ಕೊಯಮತ್ತೂರು-ಹಜರತ್ ನಿಜಾಮುದ್ದೀನ್: ಜನವರಿ 21 ಮತ್ತು 28 ರಂದು ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 12648 ಹಜರತ್ ನಿಜಾಮುದ್ದೀನ್-ಕೊಯಮತ್ತೂರು: ಜನವರಿ 24 ಮತ್ತು 31 ರಂದು ರೈಲು ರದ್ದುಗೊಳಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+