ಮೂರು ಅಧಿಕ ಡಿವಿಡೆಂಡ್-ಪಾವತಿಸುವ ಸ್ಟಾಕ್‌ಗಳಾದ ಕೋಲ್‌ಗೇಟ್ ಪಾಮೋಲಿವ್, ಎಂಪಿಎಸ್ ಮತ್ತು ಶ್ರೀರಾಮ್ ಫೈನಾನ್ಸ್ ಸೋಮವಾರ, ನವೆಂಬರ್ 6, 2023 ರಂದು ಎಕ್ಸ್-ಡಿವಿಡೆಂಡ್ ಟ್ರೇಡ್ ಅನ್ನು ನಡೆಸಲಿದೆ. ಈ ಸ್ಟಾಕ್‌ಗಳು ಶೇಕಡ 200 ರಿಂದ ಸುಮಾರು ಶೇಕಡ 2200 ವರೆಗೆ ಡಿವಿಡೆಂಡ್ ಅನ್ನು ಪಾವತಿಸುವ ಸ್ಟಾಕ್‌ಗಳಾಗಿದೆ.
ಡಿವಿಡೆಂಡ್ ಅಂದಾಜು ಹೇಳುವಂತೆಯೇ ಈ ಷೇರುಗಳ ಬೆಲೆಯೂ ಕೂಡಾ ಗಮರ್ನಾಹವಾಗಿದೆ. ನಂತರದ ಡಿವಿಡೆಂಡ್ ಮೌಲ್ಯವಿಲ್ಲದೆ ಸ್ಟಾಕ್ ವಹಿವಾಟನ್ನು ಪ್ರಾರಂಭಿಸುವ ದಿನವೇ ಸ್ಟಾಕ್‌ನ ಎಕ್ಸ್-ಡಿವಿಡೆಂಡ್ ದಿನಾಂಕವಾಗಿದೆ. ಹಾಗಾದರೆ ಏನಿದು ಎಕ್ಸ್ ಡಿವಿಡೆಂಡ್, ಯಾವೆಲ್ಲ ಸ್ಟಾಕ್‌ಗಳು ಈ ಭಾರೀ ಪ್ರಮಾಣದ ಡಿವಿಡೆಂಡ್ ನೀಡುತ್ತದೆ ಎಂದು ತಿಳಿಯೋಣ ಮುಂದೆ ಓದಿ...

ಏನಿದು ಎಕ್ಸ್ ಡಿವಿಡೆಂಡ್ ಟ್ರೇಡ್?
ಸ್ಟಾಕ್‌ಗಳಿಗೆ ಎಕ್ಸ್-ಡಿವಿಡೆಂಡ್ ದಿನಾಂಕವನ್ನು ಸಾಮಾನ್ಯವಾಗಿ ರೆಕಾರ್ಡ್ ದಿನಾಂಕಕ್ಕಿಂತ ಒಂದು ದಿನ ಮುಂಚೆ ನಡೆಸಲಾಗುತ್ತದೆ. ರೆಕಾರ್ಡ್ ದಿನಾಂಕ ಎಂದರೆ ಡಿವಿಡೆಂಡ್ ಪಾವತಿಸುವ ದಿನಾಂಕವಾಗಿದೆ. ನೀವು ಸ್ಟಾಕ್ ಅನ್ನು ಅದರ ಹಿಂದಿನ ಡಿವಿಡೆಂಡ್ ದಿನಾಂಕ ಅಥವಾ ನಂತರ ಖರೀದಿಸಿದರೆ, ನೀವು ಮುಂದಿನ ಡಿವಿಡೆಂಡ್ ಪಾವತಿಯನ್ನು ಪಡೆಯಲಾಗುವುದಿಲ್ಲ. ಬದಲಾಗಿ, ಮಾರಾಟಗಾರನು ಲಾಭಾಂಶವನ್ನು ಪಡೆಯುತ್ತಾನೆ. ನೀವು ಎಕ್ಸ್-ಡಿವಿಡೆಂಡ್ ದಿನಾಂಕದ ಮೊದಲು ಸ್ಟಾಕ್ ಖರೀದಿಸಿದರೆ, ನಿಮಗೆ ಡಿವಿಡೆಂಡ್ ಲಭ್ಯವಾಗುತ್ತದೆ.
ಕೋಲ್‌ಗೇಟ್ ಪಾಮೋಲಿವ್ (ಭಾರತ) ಡಿವಿಡೆಂಡ್
ಈ ಎಫ್‌ಎಂಸಿಜಿ ದೈತ್ಯ ಡಿವಿಡೆಂಡ್ ಕಿಂಗ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಹಣಕಾಸು ವರ್ಷ 2023 ರಲ್ಲಿ ಪ್ರತಿ ಷೇರಿಗೆ 39 ರೂಪಾಯಿಯಂತೆ ಶೇಕಡ 3,900 ರಷ್ಟು ಡಿವಿಡೆಂಡ್ ಅನ್ನು ಪಾವತಿಸಿದೆ. ಪ್ರಸಕ್ತ ಹಣಕಾಸು ವರ್ಷ 2024 ರಲ್ಲಿ ಕಂಪನಿಯು ತನ್ನ ಮೊದಲ ಮಧ್ಯಂತರ ಲಾಭಾಂಶವನ್ನು ಪ್ರತಿ ಷೇರಿಗೆ 22 ರೂಪಾಯಿ ಅಥವಾ ಶೇಕಡ 2,200 ರೂಪಾಯಿಯಂತೆ ಘೋಷಿಸಿದೆ.
ಮೊದಲ ಮಧ್ಯಂತರ ಲಾಭಾಂಶವು ಅರ್ಹ ಷೇರುದಾರರನ್ನು ನಿರ್ಧರಿಸಲು ನವೆಂಬರ್ 6 ರ ರೆಕಾರ್ಡ್ ದಿನಾಂಕವಾಗಿದೆ. ಆದರೆ ಪಾವತಿಯನ್ನು ನವೆಂಬರ್ 21, 2023 ರಿಂದ ನಡೆಸಲಾಗುತ್ತದೆ. ಹಣಕಾಸು ವರ್ಷ 2024 ರ ಎರಡನೇ ತ್ರೈಮಾಸಿಕದಲ್ಲಿ ಕೋಲ್‌ಗೇಟ್‌ನ ನಿವ್ವಳ ಲಾಭವು ಶೇಕಡ 22.3 ರಷ್ಟು ಏರಿಕೆಯಾಗಿ, 340 ಕೋಟಿ ರೂಪಾಯಿಗೆ ತಲುಪಿದೆ.
ಅಲ್ಲದೆ ಕೋಲ್‌ಗೇಟ್ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಮಾರಾಟದಲ್ಲಿ ಶೇಕಡ 6.1 ರಷ್ಟು ಹೆಚ್ಚಳ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಯ ಮಾರಾಟಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಸೆಪ್ಟೆಂಬರ್ 30, 2023 ರಂತೆ 1,462.4 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ತ್ರೈಮಾಸಿಕದಲ್ಲಿ ದೇಶೀಯ ಬೆಳವಣಿಗೆಯು ಶೇಕಡ 6.6 ಎಂದು ವರದಿಯಾಗಿದೆ. ಈ ಸಮಯಕ್ಕೆ ಕೋಲ್‌ಗೇಟ್ ಷೇರು ಸುಮಾರು ಶೇಕಡ 0.027 ರಷ್ಟು ಏರಿಕೆಯಾಗಿ, 74.82 ರೂಪಾಯಿಗೆ ತಲುಪಿದೆ.
ಶ್ರೀರಾಮ್ ಫೈನಾನ್ಸ್ ಡಿವಿಡೆಂಡ್
ಎನ್‌ಬಿಎಫ್‌ಸಿ ಪ್ರಮುಖ ಸಂಸ್ಥೆಯು ಪ್ರತಿ 10 ರೂಪಾಯಿಯ ಇಕ್ವಿಟಿ ಷೇರಿಗೆ 20 ರೂಪಾಯಿಯ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ನವೆಂಬರ್ 6, 2023 ರ ಸೋಮವಾರದಂದು ರೆಕಾರ್ಡ್ ದಿನಾಂಕವಾಗಿದೆ. ಡಿವಿಡೆಂಡ್ ಪಾವತಿಯು ಶೇಕಡ 200 ರಷ್ಟು ಏರಿಕೆಯಾಗಿದೆ. ಮಧ್ಯಂತರ ಡಿವಿಡೆಂಡ್ ಪಾವತಿಯನ್ನು ಅರ್ಹ ಷೇರುದಾರರಿಗೆ ಶನಿವಾರ, ನವೆಂಬರ್ 25, 2023 ರಂದು ಅಥವಾ ಮೊದಲು ಮಾಡಲಾಗುತ್ತದೆ. ಶ್ರೀರಾಮ್ ಫೈನಾನ್ಸ್ ಷೇರು ಈ ಸಮಯಕ್ಕೆ ಶೇಕಡ 0.27 ರಷ್ಟು ಇಳಿಕೆಯಾಗಿ, 2,008.15 ರೂಪಾಯಿಗೆ ತಲುಪಿದೆ.
ಎಂಪಿಎಸ್ ಡಿವಿಡೆಂಡ್
ಕಂಪನಿಯ ಮಂಡಳಿಯು ಹಣಕಾಸು ವರ್ಷ 2024 ಕ್ಕಾಗಿ ಪ್ರತಿ ಷೇರಿಗೆ 10 ರೂಪಾಯಿ ಮುಖಬೆಲೆಗೆ 30 ರೂಪಾಯಿಯ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಅರ್ಹ ಷೇರುದಾರರನ್ನು ನಿರ್ಧರಿಸುವ ರೆಕಾರ್ಡ್ ದಿನಾಂಕ ನವೆಂಬರ್ 6, 2023 ರಂದು ನಿಗದಿಪಡಿಸಲಾಗಿದೆ. ನವೆಂಬರ್ 25, 2023 ರಂದು ಅಥವಾ ಮೊದಲು ಇದನ್ನು ಪಾವತಿಸಲಾಗುತ್ತದೆ. ಶೇಕಡ 300 ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ. ಎಂಪಿಎಸ್ ಷೇರು ಸುಮಾರು ಶೇಕಡ 1.43 ರಷ್ಟು ಇಳಿಕೆಯಾಗಿ, 1,512 ರೂಪಾಯಿಗೆ ತಲುಪಿದೆ.


Click it and Unblock the Notifications