ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಜೈಷನ್ (EPFO) ಈಗ ಭವಿಷ್ಯ ನಿಧಿ (provident fund) ಖಾತೆ ಮಾಹಿತಿಗಳನ್ನು ಆನ್ ಲೈನಲ್ಲಿ ನೀಡುತ್ತಿರುವ ಸುದ್ದಿಯನ್ನು ಗುಡ್ ರಿಟರ್ನ್ಸ್.ಇನ್ ನಲ್ಲಿ ಓದಿರುತ್ತೀರಾ.
ಈಗ ಅಂತರ್ಜಾಲ ತಾಣ (www.epfindia.com) ಮೂಲಕ ಎಲ್ಲಾ ಮಾಹಿತಿ ನಿಮ್ಮ ಬೆರಳಿ ತುದಿಯಲ್ಲಿ ಲಭ್ಯವಾಗಲಿದೆ. ನಿಮ್ಮ PF ಖಾತೆಗೆ ಜಮೆಯಾಗಿರುವ ಮೊತ್ತ ಹಾಗೂ ಪಿಎಫ್ ಹಣ ಹಿಂಪಡೆಯುವುದು, ವರ್ಗಾವಣೆ ಮಾಡುವುದು ಇತ್ಯಾದಿ ಕ್ರಿಯೆ ಈಗ ಆನ್ ಲೈನ್ ಮೂಲಕ ಸಾಧ್ಯ.[ಭವಿಷ್ಯ ನಿಧಿ ನೀತಿ ಬದಲಾವಣೆ, ಸರ್ಕಾರದ ಕೈ ಸುಟ್ಟಿದ್ದೇಕೆ?]
ಭವಿಷ್ಯ ನಿಧಿ (Employees' Provident Fund) ಖಾತೆಗೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ? ಅದರಲ್ಲಿ ನಿಮ್ಮ ಕಾಣಿಕೆ ಎಷ್ಟು, ಉದ್ಯೋಗದಾತರ ಕೊಡುಗೆ ಎಷ್ಟು? ಎಂಬ ವಿಷಯಗಳು ನಿಮಗೆ ತಿಳಿದಿದೆಯಾ? ಹೋಗಲಿ, ನಮ್ಮ ಖಾತೆಯಲ್ಲಿ ಎಷ್ಟು ಉಳಿತಾಯವಾಗಿದೆ, ಎಲ್ಲಿ ಈ ವಿಷಯಗಳನ್ನೆಲ್ಲ ತಿಳಿದುಕೊಳ್ಳುವ ವಿಧಾನ ಇಲ್ಲಿ ನೀಡಲಾಗಿದೆ.

ಭವಿಷ್ಯ ನಿಧಿ ಖಾತೆ ಬ್ಯಾಲೆನ್ಸ್ ನೋಡುವುದು ಹೀಗೆ :
1. EPF ಬ್ಯಾಲೆನ್ಸ್ ತಿಳಿಯಲು ಈಲಿಂಕ್ ಕ್ಲಿಕ್ ಮಾಡಿ
2. ನಿಮ್ಮ PF ಖಾತೆ ಹೊಂದಿರುವ EPFO ಕಚೇರಿಯನ್ನು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ PF ಖಾತೆ ಸಂಖ್ಯೆ ನಮೂದಿಸಿ
3. extension ಜಾಗ ಹಾಗೇ ಬಿಡಿ ಏನನ್ನೂ ತುಂಬಿಸಬೇಡಿ
4. ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ಹಾಕಿ (PF ಖಾತೆ ಜೊತೆ ನೀಡಿದ ಮೊಬೈಲ್ ಸಂಖ್ಯೆಯನ್ನೇ ನೀಡತಕ್ಕದ್ದು)
5. ಅರ್ಜಿ ಸಲ್ಲಿಕೆ ಪೂರ್ಣಗೊಂಡನಂತರ ನಿಮ್ಮ ಮೊಬೈಲ್ ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ.
ಪಿಎಫ್ ಹಣ ಪಡೆಯುವ ಬಗೆ ಸ್ಥಿತಿ ಗತಿ:
ಭವಿಷ್ಯ ನಿಧಿ ಸದಸ್ಯರು/ಚಂದಾದಾರರು/ಪಿಂಚಣಿದಾರರಿಗೆ ಈ ಸೌಲಭ್ಯ ಲಭ್ಯವಿರುತ್ತದೆ. ದೇಶದ ಯಾವುದೇ EPFO ಕಚೇರಿಯಲ್ಲಿ PF ಹಣ ಕ್ಲೇಮ್ ಮಾಡಿದ್ದರೆ ಈ ಸೌಲಭ್ಯ ಬಳಸಿ ಸ್ಥಿತಿ ಗತಿ ತಿಳಿಯಬಹುದು.
ಕ್ಲೇಮ್ ಸ್ಥಿತಿಗತಿ ಮಾಹಿತಿ ನೀಡುವ ಪುಟದಲ್ಲಿ ಹಾಗೂ ನಿಮ್ಮ ಪಿಎಫ್ ಖಾತೆ ನಿರ್ವಹಿಸುವ ಉದ್ಯೋಗದಾತರು (employer) ಹೊಂದಿರುವ ಪ್ರಾದೇಶಿಕ ಪ್ರಾವಿಡೆಂಟ್ ಕಚೇರಿಯನ್ನು ಆಯ್ಕೆ ಮಾಡಿಕೊಳ್ಳಿ. ನಂತರ EPF ಖಾತೆ ಸಂಖ್ಯೆ ನಮೂದಿಸಿ
1. ಕ್ಲೇಮ್ ಸ್ಥಿತಿಗತಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
2. ನೀವು ಕ್ಲೇಮ್ ಮಾಡಿರುವ ಖಾತೆ ಹೊಂದಿರುವ EPF ಕಚೇರಿಯನ್ನು ಡ್ರಾಪ್ ಡೌನ್ ಪಟ್ಟಿಯಲ್ಲಿ ಆಯ್ಕೆ ಮಾಡಿಕೊಳ್ಳಿ
3. ಪ್ರಾದೇಶಿಕ ಕಚೇರಿ ಆಯ್ಕೆ ಮಾಡಿದ ತಕ್ಷಣ ಪ್ರಾದೇಶಿಕ ಸಂಖ್ಯೆ ಸ್ವಯಂಚಾಲಿತವಾಗಿ ನಮೂದಾಗುವುದನ್ನು ಗಮನಿಸಿ
4. Establishment ಕೋಡ್ ಮೂರನೇ ಬಾಕ್ಸ್ ನಲ್ಲಿ ಹಾಕಿ- ಗರಿಷ್ಠ 7 ಸಂಖ್ಯೆಗಳು
5. Establishment ಕೋಡ್ ವಿಸ್ತರಣೆ ಹೊಂದಿದ್ದಾರೆ ಅಥವಾ ಉಪ ಸಂಖ್ಯೆ ಹೊಂದಿದ್ದರೆ ಅದನ್ನೂ ನಮೂದಿಸಿ .ಇಲ್ಲದಿದ್ದರೆ ಬಾಕ್ಸ್ ಖಾಲಿ ಬಿಡಿ
6. ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಿ(ಗರಿಷ್ಠ 7 ಸಂಖ್ಯೆಗಳು೦
7. submit ಬಟನ್ ಒತ್ತಿ ಕ್ಲೇಮ್ ಸ್ಥಿತಿ ಗತಿ ಬಗ್ಗೆ ತಿಳಿಯಿರಿ.
ಈ ಎಲ್ಲಾ ಸೌಲಭ್ಯ ಹಾಗೂ ಪ್ರಕ್ರಿಯೆ ಬಗ್ಗೆ ಯಾವುದೇ ತೊಂದರೆ ಕಂಡು ಬಂದರೆ ಹಾಗೂ ದೂರು ಸಲ್ಲಿಸಬೇಕಾದರೆ ಈ ಲಿಂಕ್ ಬಳಸಿ ಬಹುಕಾಲದಿಂದ ಕಾಡುತ್ತಿರುವ PF ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
(ಗುಡ್ ರಿಟರ್ನ್ಸ್.ಇನ್)


Click it and Unblock the Notifications