For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ನಲ್ಲಿ ಪಿಎಫ್ ಮಾಹಿತಿ ಪಡೆಯುವುದು ಹೇಗೆ?

By Prasad
|

ಆನ್‌ಲೈನ್‌ನಲ್ಲಿ ಪಿಎಫ್ ಮಾಹಿತಿ ಪಡೆಯುವುದು ಹೇಗೆ?
ಭವಿಷ್ಯ ನಿಧಿ (Employees' Provident Fund) ಖಾತೆಗೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ? ಅದರಲ್ಲಿ ನಿಮ್ಮ ಕಾಣಿಕೆ ಎಷ್ಟು, ಉದ್ಯೋಗದಾತರ ಕೊಡುಗೆ ಎಷ್ಟು? ಎಂಬ ವಿಷಯಗಳು ನಿಮಗೆ ತಿಳಿದಿದೆಯಾ? ಹೋಗಲಿ, ನಮ್ಮ ಖಾತೆಯಲ್ಲಿ ಎಷ್ಟು ಉಳಿತಾಯವಾಗಿದೆ, ಎಲ್ಲಿ ಈ ವಿಷಯಗಳನ್ನೆಲ್ಲ ತಿಳಿದುಕೊಳ್ಳಬೇಕು ಎಂಬುದಾದರೂ ತಿಳಿದಿದೆಯಾ?

ಈ ಪ್ರಶ್ನೆಗಳಿಗೆ ನಮ್ಮ ದೇಶದಲ್ಲಿರುವ ನಾಲ್ಕೂವರೆ ಕೋಟಿಗೂ ಅಧಿಕವಿರುವ ಎಷ್ಟು ಭವಿಷ್ಯನಿಧಿ ಚಂದಾದಾರರಿಗೆ ತಿಳಿದಿರುತ್ತದೆ? ಸರಳ ಉತ್ತರವೇನೆಂದರೆ, ಬಹುಪಾಲು ಜನರಿಗೆ ಇದು ತಿಳಿದಿರುವುದಿಲ್ಲ ಮತ್ತು ತಿಳಿದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಹಾಗೆಯೆ, ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕೂಡ ಕಷ್ಟಕರವೆ.

ಭವಿಷ್ಯ ನಿಧಿಯನ್ನು ಹಿಂತೆಗೆದುಕೊಳ್ಳಬೇಕಿದ್ದರೆ ಫಾರಂ 19ರಲ್ಲಿ ಅರ್ಜಿ ಸಲ್ಲಿಸಬೇಕು. ನಾನಾ ಕಾರಣಗಳಿಂದ ವಾಪಸ್ ಬರುವ ಅರ್ಜಿಯನ್ನು ಮತ್ತೆ ಮತ್ತೆ ಸರಿಪಡಿಸಿ ಸಲ್ಲಿಸಬೇಕು. ಅವರಿವರನ್ನು ಹಿಡಿದ ನಂತರವೇ ಅರ್ಜಿ ಸ್ವೀಕೃತವಾಗುತ್ತದೆ. ಕೊನೆಗೆ ಹಣ ವಾಪಸ್ ಬರಲು ಏನಿಲ್ಲೆಂದರೂ 5-6 ತಿಂಗಳಾದರೂ ಬೇಕು. ಅಲ್ಲಿಯವರೆಗೆ, ಅರ್ಜಿಯ ಸ್ಥಿತಿಗತಿ ಏನೆಂದು ತಿಳಿದುಬರುವುದಿಲ್ಲ.

ಆದರೆ, ಇನ್ನು ಮುಂದೆ ಭವಿಷ್ಯ ನಿಧಿ(ಎಂಪ್ಲಾಯೀಸ್ ಪ್ಲಾವಿಡೆಂಟ್ ಫಂಡ್)ಯ ಬಗ್ಗೆ ತಿಳಿದುಕೊಳ್ಳಲು ಪಿಎಫ್ ಕಚೇರಿಗೆ ಎಡತಾಕುವ ಅಗತ್ಯವಿಲ್ಲ. ಇಂಟರ್ನೆಟ್ ಸಂಪರ್ಕವಿದ್ದರೆ ಇದ್ದಲ್ಲಿಂದಲೇ ಆನ್ ಲೈನ್ ಮುಖಾಂತರವೇ ಈ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. www.epfindia.com ಅಂತರ್ಜಾಲ ತಾಣ ಜಾಲಾಡಿ ನಮಗೆ ಅಗತ್ಯವಿರುವ ಸೇವೆಯ ಲಿಂಕ್ ಅನ್ನು ಕ್ಲಿಕ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

ನಿಮ್ಮ ಖಾತೆಯಿರುವ ಪ್ರಾದೇಶಿಕ ಪಿಎಫ್ ಕಚೇರಿಯನ್ನು ಆಯ್ಕೆ ಮಾಡಿಕೊಂಡು, ಯಾವುದೇ ನೊಂದಾವಣೆ ಕೂಡ ಇಲ್ಲದೆ ಅಗತ್ಯ ಮಾಹಿತಿಯನ್ನು ಪಡೆಯಬಹುದು. ಏನಾದರೂ ಕುಂದುಕೊರತೆಗಳಿದ್ದರೆ ವೆಬ್ ಸೈಟಿನಲ್ಲಿ ನೊಂದಾಯಿಸಿಕೊಂಡು ತೊಂದರೆಗಳನ್ನು ನಿವೇದಿಸಿಕೊಳ್ಳಬಹುದು.

ಮೊಬೈಲ್ ಸಂದೇಶ : ನಮ್ಮ ಖಾತೆಯಲ್ಲಿ ನಮೂದಿಸಲಾಗಿರುವ ಸರಿಯಾದ ಇಪಿಎಫ್ ನಂಬರ್ ತಿಳಿಸಿ ಮೊಬೈಲ್ ಮುಖಾಂತರವೂ ನೌಕರರ ಮತ್ತು ಮಾಲಿಕರ ಕೊಡುಗೆ ಎಷ್ಟು, ಮತ್ತು ಎಷ್ಟು ಜಮಾ ಆಗಿದೆ ಎಂಬ ವಿವರಗಳನ್ನು ಪಡೆಯಬಹುದು. ದೇಶದಲ್ಲಿರುವ 120 ಪಿಎಫ್ ಕಚೇರಿಗಳಲ್ಲಿ 112 ಕಚೇರಿಗಳು ಆನ್ ಲೈನ್ ಮೂಲಕ ಮಾಹಿತಿಯನ್ನು ನೌಕರರಿಗೆ ನೀಡುತ್ತಿವೆ. ಅದನ್ನು ಪಡೆಯುವ ಬಗೆ ನೌಕರರಿಗೆ ತಿಳಿದಿರಬೇಕು ಮತ್ತು ಅಂತರ್ಜಾಲ ಬಳಸುವ ಬಗೆ ಗೊತ್ತಿರಬೇಕು.

English summary

How to track Employees' Provident Fund claim status online? | ಆನ್‌ಲೈನ್ ಮೂಲಕ ಭವಿಷ್ಯ ನಿಧಿ ಮಾಹಿತಿ ಪಡೆಯಿರಿ

How to track Employees' Provident Fund claim status online? The Employees' Provident Fund Organization (EPFO) provides you facility to track every bit of information related to your Provident fund with the help of their website www.epfindia.com.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X