ನಿಶ್ಚಿತ ಠೇವಣಿ ಹೊಂದುವ ಮೂಲಕ ಆಪತ್ಕಾಲದಲ್ಲಿ ಹಣ ವಿನಿಯೋಗಿಸುವ ಉದ್ದೇಶ ಎಲ್ಲರಿಗೂ ಇರುತ್ತದೆ. ಹತ್ತು ಹಲವು ವಿದೇಶಿ ಮೂಲದ ಬ್ಯಾಂಕುಗಳು, ದೇಶಿ ಬ್ಯಾಂಕ್ ಗಳು, ಸಹಕಾರಿ ಸಂಘದ ಬ್ಯಾಂಕುಗಳು ಹೀಗೆ ವಿವಿಧ ಬ್ಯಾಂಕ್ ಗಳ ವಿವಿಧ ಬಡ್ಡಿದರ ನೋಡಿದರೆ ಯಾವುದು ಹೆಚ್ಚಿನ ಲಾಭ ತರಬಲ್ಲದು ಎಂಬುದನ್ನು ಒಮ್ಮೆಗೆ ನಿರ್ಧರಿಸುವುದು ಸ್ವಲ್ಪ ಕಷ್ಟವೇ ಸರಿ.
ಆದಾಯ ತೆರಿಗೆ ಪಾವತಿ ಮಾಡಲು ಕೊನೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಉದ್ಯೋಗಿಗಳಿಗೆ ತೆರಿಗೆ ಉಳಿಸುವ ಕಸರತ್ತು ಶುರುವಾಗುತ್ತದೆ. ಏಪ್ರಿಲ್ 1, 2013 ರಿಂದ ತೆರಿಗೆ ರಿಟರ್ನ್ಸ್ ಆರಂಭವಾಗುವುದಕ್ಕೂ ಮುನ್ನ ತೆರಿಗೆ ಉಳಿತಾಯದ ಸುಲಭ ವಿಧಾನದ ಬಗ್ಗೆ ನಿಮಗೆ ಒಂದು ಸಲಹೆ ಗುಡ್ ರಿಟರ್ನ್ಸ್ .ಇನ್ ನಿಂದ ಸಿಗುತ್ತಿದೆ.
ನಿಶ್ಚಿತ ಠೇವಣಿ ಇಡಲು ಯಾವ ಬ್ಯಾಂಕ್ ಸೂಕ್ತ ಎಂಬ ಲೇಖನ ಓದಿದ ನಂತರ, ನಿಶ್ಚಿತ ಠೇವಣಿ ಇಡುವ ಪ್ರಯೋಜನವನ್ನು ಹಾಗೂ ನಿಶ್ಚಿತ ಠೇವಣಿ ಮೂಲಕ ತೆರಿಗೆ ಉಳಿತಾಯ ಪಡೆಯುವುದು ಹೇಗೆ? ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ಕಾಯ್ದೆಯ 80C ಪ್ರಕಾರ ನಿಶ್ಚಿತ ಠೇವಣಿ ಕೂಡಾ ತೆರಿಗೆ ಉಳಿಸಬಲ್ಲದು. ಹೂಡಿಕೆ ಮಾಡಲು ಅತ್ಯಂತ ಸುಲಭ ಹಾಗೂ ಹಳೆಯ ವಿಧಾನವಾದ ನಿಶ್ಚಿತ ಠೇವಣಿ ಇಟ್ಟರೆ ಶೇಕಡವಾರು ಎಷ್ಟು ಬಡ್ಡಿದರ ಸಿಗಲಿದೆ ಎಂಬುದರ ಮಾಹಿತಿ ಇಲ್ಲಿ ಸಿಗಲಿದೆ. ಉಳಿದಂತೆ ಅತಿ ಹೆಚ್ಚು ಬಡ್ಡಿದರ ನೀಡುವ 7 ಬ್ಯಾಂಕುಗಳ ಪಟ್ಟಿ ಮುಂದಿನ ಸ್ಲೈಡ್ ಗಳಲ್ಲಿ ನೋಡಿ
ಭಾರತ್ ಕೋ ಆಪರೇಟಿವ್ ಬ್ಯಾಂಕ್
ಭಾರತ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ಇಡುವ ಮೂಲಕ ಶೇ 10 ರಷ್ಟು ಬಡ್ಡಿದರ ನಿರೀಕ್ಷಿಸಬಹುದು. ಆದಾಯ ತೆರಿಗೆ ಇಲಾಖೆ ಕಾಯ್ದೆಯ 80C ಪ್ರಕಾರ ನಿಶ್ಚಿತ ಠೇವಣಿ ಕೂಡಾ ತೆರಿಗೆ ಉಳಿತಾಯ ಇದಕ್ಕೆ ಅನ್ವಯವಾಗಲಿದೆ. ಭಾರತ್ ಕೋ ಆಪರೇಟಿವ್ ಬ್ಯಾಂಕಿನ ತೆರಿಗೆ ವಿನಾಯತಿ ಸೌಲಭ್ಯ ವಿವಿಧ ರಾಜ್ಯ(multi-state scheduled bank)ಗಳಲ್ಲಿ ಲಭ್ಯವಿದೆ..
ಅಭ್ಯುದಯ ಕೋ ಆಪರೇಟಿವ್ ಬ್ಯಾಂಕ್
ಅಭ್ಯುದಯ ಕೋ ಆಪರೇಟಿವ್ ಬ್ಯಾಂಕ್ ತೆರಿಗೆ ಉಳಿತಾಯ ಯೋಜನೆಯಿಂದ ಶೇ 9.75 ರ ಬಡ್ಡಿದರ ಪಡೆಯಲು ಸಾಧ್ಯವಿದೆ. ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳು ಲಭ್ಯವಿದೆ. 5 ವರ್ಷಗಳ ನಿಶ್ಚಿತ ಠೇವಣಿ ವ್ಯವಸ್ಥೆ ಕೂಡಾ ಲಭ್ಯವಿದೆ ಎಲ್ಲವೂ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ವ್ಯವಸ್ಥೆಗೆ ಒಳಪಟ್ಟಿದೆ.
ಸಿಟಿ ಯೂನಿಯನ್ ಬ್ಯಾಂಕ್
ತಮಿಳುನಾಡು ಮೂಲದ ಸಿಟಿ ಯೂನಿಯನ್ ಬ್ಯಾಂಕ್ ಕಡೆಯಿಂದ ನಿಶ್ಚಿತ ಠೇವಣಿ ಮಾಡುವ ಮೂಲಕ ಶೇ 9.50 ರಷ್ಟು ಬಡ್ಡಿದರ ಪಡೆಯಬಹುದು. ಸುಮಾರು 5 ವರ್ಷಕ್ಕೆ ಶೇ 9.50 ರಷ್ಟು ಬಡ್ಡಿದರದಂತೆ ನಿರೀಕ್ಷೆ ಇಟ್ಟುಕೊಳ್ಳಬಹುದು.
ಡೆವಲಪ್ಮೆಂಟ್ ಕ್ರೆಡಿಟ್ ಬ್ಯಾಂಕ್
ಮುಂಬೈ ಮೂಲದ ಡೆವೆಲಪ್ಮೆಂಟ್ ಕ್ರೆಡಿಟ್ ಬ್ಯಾಂಕ್ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ಹೂಡಿಕೆ ಮೇಲೆ ಶೇ 9.30 ರಷ್ಟು ಬಡ್ಡಿದರ ನೀಡುತ್ತಿದೆ.
ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ ಲಿ
ತಮಿಳುನಾಡಿನ ಮರ್ಕಂಟೈಲ್ ಬ್ಯಾಂಕ್ ಲಿ. ನಿಶ್ಚಿತ ಠೇವಣಿ ಶೇ 9.25 ರಷ್ಟು ಬಡ್ಡಿದರ ನೀಡುತ್ತಿದೆ. ತಿಂಗಳ ಬಡ್ಡಿದರ, ತ್ರೈಮಾಸಿಕ ಬಡ್ಡಿದರ , ಅರ್ಧ ವಾರ್ಷಿಕ ಹಾಗೂ ವಾರ್ಷಿಕವಾಗಿ ಬಡ್ಡಿದರ ಬದಲಾಯಿಸಬಹುದಾಗಿದೆ. ಹೂಡಿಕೆಗೆ ಅನುಗುಣವಾಗಿ ಬಡ್ಡಿದರ ಬದಲಾವಣೆ ಸಾಧ್ಯವಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತೆರಿಗೆ ಉಳಿತಾಯ ಯೋಜನೆಯಡಿಯಲ್ಲಿ ಶೇ 9.10 ರಷ್ಟು ಬಡ್ಡಿದರ ಸಿಗಲಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಉತ್ತಮ ಬಡ್ಡಿದರ ನೀಡುವ ಬ್ಯಾಂಕ್ ಇದಾಗಿದೆ.
ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್
ಪಂಜಾಬ್ ಹಾಗೂ ಸಿಂದ್ ಬ್ಯಾಂಕ್ ಕೂಡಾ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರೀತಿಯಲ್ಲಿ ನಿಶ್ಚಿತ ಠೇವಣಿ ಹೂಡಿಕೆ ಮೇಲೆ ಉತ್ತಮ ಬಡ್ಡಿದರ ನೀಡುತ್ತಿದೆ. ವಾರ್ಷಿಕವಾಗಿ ಶೇ 9.05 ರಷ್ಟು ಬಡ್ಡಿದರ ನಿರೀಕ್ಷಿಸಬಹುದು.


Click it and Unblock the Notifications