
ಸಾರ್ವಜನಿಕರಿಗೆ ಉಪಯೋಗವಾಗಲು ಆದಾಯ ತೆರಿಗೆ ಇಲಾಖೆ ಕಾಲ್ ಸೆಂಟರ್ ಕೂಡಾ ಚಾಲನೆ ನೀಡಿದೆ. ಆದಾಯ ತೆರಿಗೆ ಪಾವತಿ ಸುಲಭಗೊಳಿಸಲು ಹಾಗೂ ಸಾರ್ವಜನಿಕರಿಗೆ ತೆರಿಗೆ ಕಟ್ಟಲು ಅನುಕೂಲಕರ ಸೇವೆಗಳನ್ನು ಆದಾಯ ತೆರಿಗೆ ಇಲಾಖೆ ಪರಿಚಯಿಸಿದೆ. ‘Register for Home Visit' ಹಾಗೂ ‘Online Tax Help' ಎಂಬ ಈ ಸೇವೆಗಳು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಆರಂಭಗೊಂಡಿದೆ. ಉಳಿದಂತೆ, ಆನ್ ಲೈನ್ ಮೂಲಕ ತೆರಿಗೆ ಪಾವತಿ ಜನಪ್ರಿಯ ವಿಧಾನವಾಗಿದೆ
ಅದರಲ್ಲೂ ಐಟಿ ಕಾಯ್ದೆಯ ವಿವಿಧ ವಿಭಾಗಗಳಲ್ಲಿ ವಿನಾಯಿತಿ ಬಯಸುವವರು ಅದಕ್ಕೆ ಅಗತ್ಯವಾದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ತೆರಿಗೆ ಕಟ್ಟಲು ಹೊರಟುವ ಮುನ್ನ ನಿಮ್ಮ ಬಳಿ ಈ ಕೆಳಗಿನ ದಾಖಲೆಗಳು ಇದೆಯೆ ಎಂದು ಪರೀಕ್ಷಿಸಿಕೊಳ್ಳಿ
* ಪ್ಯಾನ್ ಕಾರ್ಡ್ ನಂಬರ್
* Form 16 ನಿಮ್ಮ ಕಚೇರಿಯಿಂದ ಸಿಗಲಿದೆ
* ಬ್ಯಾಂಕ್ ಸ್ಟೇಟ್ ಮೆಂಟ್/ ಪಾಸ್ ಬುಕ್ (ಬ್ಯಾಂಕ್ ಠೇವಣಿ ಮೇಲೆ ವಿನಾಯಿತಿ ಲೆಕ್ಕಾಚಾರಕ್ಕೆ)
* ಬ್ಯಾಂಕ್ ಠೇವಣಿ ಅಲ್ಲದೆ ಉಳಿದ ಆದಾಯದ ಬಡ್ಡಿದರ ಮೇಲೆ ಸ್ಟೇಟ್ ಮೆಂಟ್
* ಬ್ಯಾಂಕಿನಿಂದ ಪಡೆದ TDS ಪ್ರಮಾಣ ಪತ್ರ
* Form 26AS- TDSನಲ್ಲಿ ಜಮೆಯಾದ ತೆರಿಗೆ ಲೆಕ್ಕಾಚಾರದ ಬಗ್ಗೆ ತಿಳಿಸಲು ಅವಶ್ಯ
* ಸೆಕ್ಷನ್ 80ಸಿ ವಿನಾಯತಿಗೆ LIC, NSC, PPF ಹೂಡಿಕೆ ಬಗ್ಗೆ ತಿಳಿಸಿ
* 80G ದಾನ ದತ್ತಿ ಮೂಲಕ ವಿನಾಯತಿಗೆ ರಸೀತಿ ನೀಡಿ
* ಗೃಹಸಾಲದ ಮೇಲೆ ನೀಡಿದ ಬಡ್ಡಿದರ ಲೆಕ್ಕಾಚಾರ ನೀಡಬೇಕು. 2,50,000 ರು ತನಕ ವಿನಾಯತಿ ಸಾಧ್ಯ.
* ಮೆಡಿಕಲ್ ಬಿಲ್ (ಒರಿಜಿನಲ್) ನೀಡಿ 15,000 ರು ತನಕ ವಿನಾಯತಿ ಪಡೆಯಬಹುದು
ಇದರ ಜೊತೆಗೆ ಈ ಕೆಳಗಿನ ದಾಖಲೆಗಳನ್ನು ನೀಡುವುದು ಅವಶ್ಯ:
* ಸ್ಟಾಕ್ ಮಾರುಕಟ್ಟೆ ಟ್ರೇಡಿಂಗ್ ಸ್ಟೇಟ್ ಮೆಂಟ್, ಹೂಡಿಕೆಯಿಂದ ಬಂದ ಲಾಭದ ಪ್ರತಿ ನೀಡಬೇಕು
* 80CCF ಅಡಿಯಲ್ಲಿ 20,000 ರು ತನಕ ವಿನಾಯತಿ ಸಾಧ್ಯ
* ಗೃಹ ಸಾಲದ ರೀಪೇಮೆಂಟ್ ಪ್ರಮಾಣ ಪತ್ರ
* ಮುನ್ಸಿಪಲ್ ಕಾರ್ಪೊರೇಷನ್ ತೆರಿಗೆ ರಸೀತಿ
ಗುಡ್ ರಿಟರ್ನ್ಸ್.ಇನ್


Click it and Unblock the Notifications