ETF ಚಿನ್ನ ಹೂಡಿಕೆಗೆ ಇಗೋ ಇಲ್ಲಿದೆ ಉಪಾಯ

ಚಿನ್ನದ ಮೇಲೆ ಬಂಡವಾಳ ಹೂಡಿಕೆ ಎಲ್ಲ ಕಾಲಕ್ಕೂ ಅನುಕೂಲಕರ. ಚಿನ್ನದ ಮೇಲೆ ಹಣ ಹೂಡಿದರೆ ನಷ್ಟವಂತೂ ಆಗುವುದಿಲ್ಲ. ಚಿನ್ನ ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ ಎನ್ನುವುದು ಉತ್ಪೇಕ್ಷೆಯಲ್ಲ. ಇದು ಹಿಂದಿನಿಂದಲೂ ಬೆಳೆದುಕೊಂಡು ಬಂದಿರುವ ನಂಬಿಕೆ ಹಾಗೂ ನಂಬಿಕೆ ಉಳಿಸಿಕೊಂಡಿರುವ ಹೂಡಿಕೆ ವಿಧಾನವಾಗಿದೆ.

ಚಿನ್ನದ ಮೇಲಿನ ಹೂಡಿಕೆ ಅನೇಕ ವಿಧಾನಗಳಿದೆ. ತತ್ ಕ್ಷಣವೇ ಚಿನ್ನದ ಸಾಲ ಪಡೆಯುವುದು ಹೇಗೆ? ಎಂಬುದನ್ನು ಇಲ್ಲಿ ಓದಿರುತ್ತೀರಿ. ಚಿನ್ನಾಭರಣ ಮೇಲೆ ಹೂಡಿಕೆ ಮಾಡುವುದು, ಚಿನ್ನದ ಕಾಯಿನ್/ಬಾರ್ ಗಳು, ಇ-ಗೋಲ್ಡ್, ಗೋಲ್ಡ್ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್(ETF) ಹಾಗೂ ಗೋಲ್ಡ್ ಫ್ಯೂಚರ್ಸ್..ಇತ್ಯಾದಿ. [ಸಂಪೂರ್ಣ ವಿವರ ಇಲ್ಲಿದೆ]

ಈ ಪೈಕಿ ETF ಹೂಡಿಕೆಗೂ ಮುನ್ನ ಸೂಕ್ತ ಸಲಹೆ ಅತ್ಯಗತ್ಯ. ETF ಬಗ್ಗೆ ಸಂಕ್ಷಿಪ್ತ ವಿವರ ತಿಳಿದು ನಂತರ ನಂಬಲರ್ಹವಾದ ಪ್ರಮುಖ ETF ಗಳ ವಿವರಗಳನ್ನು ಮುಂದಿನ ಚಿತ್ರ ಸರಣಿಯಲ್ಲಿ ನೋಡಿ...

ETF ಒಂದು ಮ್ಯೂಚಿಯಲ್ ಫಂಡ್ ಹೂಡಿಕೆ ವಿಧಾನವಾಗಿದೆ. ಷೇರುಪೇಟೆಯಲ್ಲಿ ಜಾಲಾಡುವವರಿಗೆ, ಅಲ್ಪಸ್ವಲ್ಪ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿ ಅನುಭವ ಉಳ್ಳವರಿಗೆ ಇದು ಸೂಕ್ತ ವಿಧಾನ. ಬಂಡವಾಳ ಹೂಡಿಕೆಯನ್ನು ಚಿನ್ನವಾಗಿ ಪರಿವರ್ತಿಸಿ ಶೇಖರಿಸಿಡುವುದು ಈ ವಿಧಾನದ ಮಾದರಿ.

ETF ಮೂಲಕ ಚಿನ್ನ ಖರೀದಿಸುವುದೆಂದರೆ ಎಲೆಕ್ಟ್ರಾನಿಕ್ ಮಾದರಿ ವ್ಯಾಪಾರ ಮಾಡಿದಂತಾಗುತ್ತದೆ. ಯೂನಿಟ್ ಲೆಕ್ಕದಲ್ಲಿ ಚಿನ್ನ ಮಾರಾಟಕ್ಕೆ ಲಭ್ಯವಿರುತ್ತದೆ. ಪ್ರತಿ ಯೂನಿಟ್ ಒಂದು ಗ್ರಾಮ್ ಚಿನ್ನಕ್ಕೆ ಸಮನಾಗಿರುತ್ತದೆ.

ಎಸ್ ಬಿಐ ಗೋಲ್ಡ್ ಇಟಿಎಫ್

ಎಸ್ ಬಿಐ ಗೋಲ್ಡ್ ಇಟಿಎಫ್

SBI Gold ETF ಟಾಪ್ ಗೋಲ್ಡ್  ಇಟಿಎಫ್ ಆಗಿದ್ದು, ಚಿನ್ನದ ಮಾರುಕಟ್ಟೆ ದರವನ್ನು ಸತತವಾಗಿ ನಿಗಾ ಇಡಲಿದೆ. ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಸರಾಸರಿ ಶೇ 1.9 ರಷ್ಟು  ರಿಟರ್ನ್ಸ್ ನೀಡಲಿದೆ.Excellent hedge againt inflation and extremely liquid.

ಮೋತಿಲಾಲ್ ಓಸ್ವಾಲ್ ಷೇರ್ ಇಟಿಎಫ್

ಮೋತಿಲಾಲ್ ಓಸ್ವಾಲ್ ಷೇರ್ ಇಟಿಎಫ್

MOSt ಚಿನ್ನದ ಷೇರುಗಳು ಹೂಡಿಕೆದಾರರಿಗೆ ಪ್ರಪ್ರಥಮ ಬಾರಿಗೆ ನೇರವಾಗಿ ಸಂಸ್ಥೆಯ ಮ್ಯಾನೇಜ್ಮೆಂಟ್ ಸ್ವತ್ತಿನಿಂದ ಚಿನ್ನ ನೇರ ಖರೀದಿಗೆ ಅವಕಾಶ ನೀಡುತ್ತದೆ.  ಷೇರುಪೇಟೆಯಿಂದ ನೇರ ಚಿನ್ನದ ಇಟಿಎಫ್ ಗಳನ್ನು ಖರೀದಿಸಿ ಚಿನ್ನದ ಬಾರ್ ಗಳಾಗಿ ಪರಿವರ್ತಿಸಬಹುದು. 10 ಗ್ರಾಂ ಕಡಿಮೆ ತೂಕದ ಬಾರ್ ಗಳು ಲಭ್ಯವಿದ್ದು, ಯಾವುದೇ ಸಮಯದಲ್ಲಿ ಇಟಿಎಫ್ ಗಳನ್ನು ಬಾರ್ ಗಳಾಗಿ ವಿನಿಮಯಕ್ಕೆ ಲಭ್ಯವಿರುತ್ತದೆ.

ಐಡಿಬಿಐ ಗೋಲ್ಡ್ ಇಟಿಎಫ್

ಐಡಿಬಿಐ ಗೋಲ್ಡ್ ಇಟಿಎಫ್

IDBI Gold Exchange Traded Fund ಇದು open ended ಚಿನ್ನ ವಿನಿಮಯ ವ್ಯವಹಾರ ಯೋಜನೆಯಾಗಿದೆ. ಸ್ಥಳೀಯ ಮಾರುಕಟ್ಟೆಯ ಚಿನ್ನದ ದರದ ತುಲನೆ ಮಾಡುತ್ತಿರುತ್ತದೆ. ಐಡಿಬಿಐ ಗೋಲ್ಡ್ ಇಟಿಎಫ್ ನ ಪ್ರತಿ ಯೂನಿಟ್ 24 ಕ್ಯಾರೆಟ್ ಶೇ 99.5 ಶುದ್ಧ ಚಿನ್ನ ಹೊಂದಿರುತ್ತದೆ. ಇದು ಸುರಕ್ಷಿತವಾಗಿ ಇರಿಸಲಾಗಿರುತ್ತದೆ.

ಕೋಟಕ್ ಗೋಲ್ಡ್ ಇಟಿಎಫ್

ಕೋಟಕ್ ಗೋಲ್ಡ್ ಇಟಿಎಫ್

Kotak Gold ETF ಇದು open-ended ವಿನಿಮಯ ವ್ಯವಹಾರ ನಿಧಿಯಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡಿ ಸ್ಥಳೀಯ ಮಾರುಕಟ್ಟೆ ಸ್ಪಾಟ್ ದರದ ಮೇಲೆ ನಿಗಾ ವಹಿಸಲಿದೆ. KGETF ಪ್ರತಿ ಯೂನಿಟ್ ಅಂದಾಜು 1 ಗ್ರಾಂ ಚಿನ್ನಕ್ಕೆ ಸಮಾನಾಗಿರುತ್ತದೆ

ಆಕ್ಸಿಸ್ ಗೋಲ್ಡ್ ಇಟಿಎಫ್

ಆಕ್ಸಿಸ್ ಗೋಲ್ಡ್ ಇಟಿಎಫ್

Axis Gold ETFs 99.5% ಶುದ್ಧ ಚಿನ್ನವನ್ನು ಪ್ರೀಮಿಯಂ ಶುಲ್ಕವಿಲ್ಲದೆ ಮಾರುಕಟ್ಟೆಯಿಂದ ಖರೀದಿಸಬಹುದು.ಹಣದುಬ್ಬರದ ವಿರುದ್ಧ ಉತ್ತಮವಾದ ಹೂಡಿಕೆ ಇದಾಗಿದೆ.

ರಿಲಯನ್ಸ್ ಗೋಲ್ಡ್

ರಿಲಯನ್ಸ್ ಗೋಲ್ಡ್

Reliance Shares Gold ETF ಹೂಡಿಕೆ ಉದ್ದೇಶ ಚಿನ್ನದ ಮೇಲೆ ಹೂಡಿಕೆಯಿಂದ ಬರುವ ರಿಟರ್ನ್ಸ್ ಅನುಗುಣವಾದ ದರ ಒದಗಿಸುವುದು. (ಹಾಗೂ Gold related securities as permitted by Regulators from time to time). ಮಾ.28ಕ್ಕೆ ಅನ್ವಯವಾಗುವಂತೆ ನಿಧಿ ನಿವ್ವಳ ಸ್ವತ್ತಿನ ಮೌಲ್ಯ 2760.76890

ಯುಟಿಐ ಗೋಲ್ಡ್

ಯುಟಿಐ ಗೋಲ್ಡ್

UTI Gold ETF ಕಳೆದ ಮೂರುವರ್ಷಗಳಲ್ಲಿ ಶೇ 20ರಷ್ಟು ರಿಟರ್ನ್ಸ್ ನೀಡಿದೆ. ಮಾ.28ಕ್ಕೆ ಅನ್ವಯವಾಗುವಂತೆ ನಿಧಿ ನಿವ್ವಳ ಸ್ವತ್ತಿನ ಮೌಲ್ಯ Rs 2,821.147. ಹೂಡಿಕೆಯ ಶೇಖರಣೆ ಹಾಗೂ ಕಳ್ಳತನದ ಭಯವಿಲ್ಲೆ ಚಿನ್ನದ ಇಟಿಎಫ್ ಖರೀದಿಸಲು ಉತ್ತಮ ಅವಕಾಶ.

ಕೆನರಾ ರೊಬೆಕೊ

ಕೆನರಾ ರೊಬೆಕೊ

Canara Robeco Gold ETF ಇದು ಕೂಡಾ ಮುಕ್ತವಾದ Gold ETF Fund ಆಗಿದ್ದು, ಚಿನ್ನದ ದರದ ಮೇಲೆ ನಿಗಾವಹಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಶೇ 20.91 ರಷ್ಟು ರಿಟರ್ನ್ ನೀಡಿದೆ. ಮಾ.28ಕ್ಕೆ ಅನ್ವಯವಾಗುವಂತೆ ನಿವ್ವಳ ಸ್ವತ್ತಿನ ಮೌಲ್ಯ ರು 2970.3311

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+