For Quick Alerts
ALLOW NOTIFICATIONS  
For Daily Alerts

ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿದರೆ ಬದುಕು ಚೆನ್ನ

|

ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿದರೆ ಬದುಕು ಚೆನ್ನ
ಷೇರು ಮಾರುಕಟ್ಟೆಯ ಗೂಳಿ, ಕರಡಿಗೆ ಭಯ ಬೀಳುವರು ನಿರಾಳವಾಗಿ ಬೆಳೆಬಾಳುವ ಲೋಹಗಳ ಮೇಲೆ ಹೂಡಿಕೆ ಮಾಡಬಹುದು. ಬಹುಶಃ ನೀವು ಈಗಾಗಲೇ ಹಲವು ತೊಲೆ ಬಂಗಾರದ ಒಡೆಯರಾಗಿರಬಹುದು. ಉಂಗುರ, ಚೈನ್, ನೆಕ್ಸೆಸ್ ಎಲ್ಲವೂ ನಿಮ್ಮಲ್ಲಿರಬಹುದು. ಆದರೆ ಇಂತಹ ಬೆಳೆಬಾಳುವ ಲೋಹಗಳಿಗೆ ಕಳ್ಳಕಾಕರ ಭೀತಿ ಯಾವತ್ತಿಗೂ ಇರುತ್ತದೆ.

ಈ ರೀತಿ ಆಭರಣ ರೂಪದಲ್ಲಿ, ನಾಣ್ಯ ರೂಪದಲ್ಲಿ ಖರೀದಿಸುವುದಕ್ಕಿಂತಲೂ ಸುಲಭ, ಸರಳ ಉಪಾಯ ಇಲ್ಲಿದೆ. ಚಿನ್ನ, ಬೆಳ್ಳಿ ಮತ್ತು ಇತರ ಲೋಹಗಳ ಮೇಲೆ ವ್ಯವಸ್ಥಿತ ಹೂಡಿಕೆ ಯೋಜನೆ(ಎಸ್ಐಪಿ) ಹೂಡಿಕೆ ಮಾಡುವುದು ಈಗ ಸುಲಭವಾಗಿದೆ. ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ ಲಿಮಿಟೆಡ್ ಮೂಲಕ ಸುಲಭವಾಗಿ, ಸರಳವಾಗಿ, ಕ್ರಮಬದ್ಧವಾಗಿ ಹೂಡಿಕೆ ಮಾಡಬಹುದಾಗಿದೆ.

ಇನ್ಮುಂದೆ ಚಿನ್ನ, ಬೆಳ್ಳಿ, ತಾಮ್ರ, ಲೆಡ್, ಸತು, ಬಿಳಿಲೋಹ ಸೇರಿದಂತೆ ಪ್ರಮುಖ ಲೋಹಗಳ ಮೇಲೆ ಪ್ರತಿದಿನ, ಪ್ರತಿವಾರ, ಪ್ರತಿತಿಂಗಳು ಅಥವಾ ಯಾವಾಗ ಹೂಡಿಕೆ ಮಾಡಲು ಬಯಸುವಿರೋ ಅಂದು ಕ್ರಮಬದ್ಧವಾಗಿ ಹೂಡಿಕೆ ಮಾಡಬಹುದಾಗಿದೆ. ರಾಷ್ಟ್ರೀಯ ಸ್ಪಾಟ್ ವಿನಿಮಯ ಕೇಂದ್ರ(ಎನ್ಎಸ್ಇಎಲ್) ಮೂಲಕ ಇ-ಸೀರಿಸ್ ಉತ್ಪನ್ನಗಳ ಮೇಲೆ ಇನ್ ವೆಸ್ಟ್ ಮಾಡಬಹುದಾಗಿದೆ.

ನಿಯಮಿತವಾಗಿ ಎನ್ಎಸ್ಇಎಲ್ ಕಂಪನಿಯ ಇಂಟರ್ ನೆಟ್ ಟ್ರೇಡಿಂಗ್ ಪ್ಲಾಟ್ ಫಾರ್ಮ್ ಮೂಲಕ ಅಥವಾ ಪರ್ಯಾಯವಾಗಿ ಬ್ರೋಕರೊಬ್ಬರನ್ನು ನಿಯೋಜಿಸಿಕೊಂಡು ಇ-ಸೀರಿಸ್ ಉತ್ಪನ್ನಗಳ ಮೇಲೆ ಹೂಡಿಕೆ ಮಾಡಬಹುದಾಗಿದೆ. ಇ-ಚಿನ್ನ ಅಥವಾ ಇ ಬೆಳ್ಳಿ ಇತ್ಯಾದಿ ಲೋಹಗಳ ಮೇಲೆ ಹೂಡಿಕೆ ಮಾಡಲು ಎಸ್ಐಪಿ ಅತ್ಯಂತ ಸೂಕ್ತ ವಿಧಾನ. ಎಸ್ಐಪಿ ಅಂದ್ರೆ ಕ್ರಮಬದ್ಧ ಹೂಡಿಕೆ ಯೋಜನೆ.

ಕ್ರಮಬದ್ಧ ಹೂಡಿಕೆ ಯೋಜನೆ(ಎಸ್ಐಪಿ)ಯ ಲಾಭಗಳು

ಸಣ್ಣ ಹೂಡಿಕೆ: ಹನಿಹನಿ ನೀರು ಸೇರಿ ನದಿ, ಸಮುದ್ರವಾದ ಕಥೆ ನಿಮಗೆ ಗೊತ್ತಿರಬಹುದು. ಅದೇ ರೀತಿ ಎಸ್ಐಪಿನಲ್ಲಿ ಸಣ್ಣ ಮೊತ್ತದ ಹೂಡಿಕೆ ಮಾಡಬಹುದು. ಮೊತ್ತ ಅತ್ಯಲ್ಪವಾದರೂ ಕ್ರಮಬದ್ಧವಾಗಿ ಹೂಡಿಕೆ ಮಾಡಬೇಕು ಅಷ್ಟೇ. ಆಭರಣ, ಷೇರು, ಚಿನ್ನದ ನಾಣ್ಯಗಳು, ಇಟಿಎಫ್ ಮೇಲೆ ಈ ರೀತಿ ಹೂಡಿಕೆ ಮಾಡಲು ಸಾಧ್ಯವಿಲ್ಲ. ಸಣ್ಣ ಸಣ್ಣ ಮೊತ್ತ ಹೂಡಿಕೆ ಮಾಡುವರಿಗೆ ಎಸ್ಐಪಿ ಇ ಸೀರಿಸ್ ಉತ್ಪನ್ನ ಬೆಸ್ಟ್.

ಕ್ರಮಬದ್ಧ ಉಳಿತಾಯದ ಅಭ್ಯಾಸ: ನಿಮ್ಮಲ್ಲಿ ಶಿಸ್ತುಬದ್ಧ ಉಳಿತಾಯದ ಮನೋಭಾವನೆ ಬೆಳೆಸಲು ಎಸ್ಐಪಿ ನೆರವಾಗುತ್ತದೆ. ಪ್ರತಿತಿಂಗಳು, ಪ್ರತಿವಾರ, ಪ್ರತಿದಿನ ಇಂತಿಷ್ಟು ಹೂಡಿಕೆ ಮಾಡಲು ನಿರ್ಧರಿಸಿಬಿಟ್ಟರೆ ಉಳಿತಾಯ ತನ್ನಿಂದ ತಾನೇ ಶುರುವಾಗುತ್ತದೆ.

ರೂಪಾಯಿ ಮೌಲ್ಯ ಏರಿಳಿತ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರೆನ್ಸಿ ದರದಲ್ಲಿ ಏರಿಳಿತವಾದರೆ ಎಸ್ಐಪಿ ಹೂಡಿಕೆದಾರರಿಗೆ ಯಾವುದೇ ಬಾಧೆಯಾಗದು. ನಿರಾಳವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರಬಹುದು. ಚಿನ್ನದ ದರ ತಗ್ಗಿರುವಾಗ ಹೆಚ್ಚೆಚ್ಚು ಹೂಡಿಕೆ ಮಾಡಬಹುದು.

ಸೂಕ್ತ ಸಮಯಕ್ಕೆ ಕಾಯೋ ಹಂಗಿಲ್ಲ: ಖರೀದಿ ಮತ್ತು ಮಾರಾಟಕ್ಕೆ ಸೂಕ್ತ ಸಮಯ ಹುಡುಕುವ ಅಗತ್ಯವಿಲ್ಲ. ಷೇರು ಮಾರುಕಟ್ಟೆಯಂತೆ ರಿಸ್ಕ್ ಇಲ್ಲ. ಕ್ರಮಬದ್ಧವಾಗಿ ಹೂಡಿಕೆ ಮಾಡುತ್ತಿದ್ದರೆ ಆಯ್ತು. ಸಣ್ಣ ಹೂಡಿಕೆದಾರರಿಗೆ ಇದು ಹೆಚ್ಚು ಸೂಕ್ತ. ಬೇಕಿದ್ರೆ ಇಂದೇ ಹೂಡಿಕೆ ಆರಂಭಿಸಬಹುದು.

ಸಂಪತ್ತಿನ ಕ್ರೋಡೀಕರಣ: ಉತ್ತಮವಾದ ಉಳಿತಾಯ ಮತ್ತು ಹೂಡಿಕೆ ಅಭ್ಯಾಸವು ದೀರ್ಘಕಾಲಕ್ಕೆ ಸಂಪತ್ತಿನ ಕ್ರೋಡಿಕರಣಕ್ಕೆ ನೆರವಾಗುತ್ತದೆ. ಗಳಿಸಿದ ಹಣವನ್ನು ಉಳಿಸಲು ಎಸ್ಐಪಿ ನೆರವಾಗುತ್ತದೆ.

ನಗದಾಗಿ ಪರಿವರ್ತನೆ ಸುಲಭ: ಎಸ್ಐಪಿ ಹೂಡಿಕೆಯನ್ನು ಮತ್ತೆ ನಗದಾಗಿ ಪರಿವರ್ತಿಸುವುದು ಸುಲಭ. ಒಂದೆರಡು ದಿನಗಳಲ್ಲಿ ನೀವು ಹೂಡಿಕೆ ಮಾಡಿದ ಹಣ ವಾಪಸ್ ಸಿಗುತ್ತದೆ.

ಸುರಕ್ಷಿತ: ಚಿನ್ನ, ಬೆಳ್ಳಿ ಖರೀದಿಸಿದರೆ ಅದನ್ನು ಸುಭದ್ರವಾಗಿ ಇಟ್ಟುಕೊಳ್ಳುವ ಅಗತ್ಯವಿರುತ್ತದೆ. ರಾಷ್ಟ್ರೀಯ ಸ್ಪಾಟ್ ವಿನಿಮಯ ಕೇಂದ್ರದಲ್ಲಿ ಇ ಸೀರಿಸ್ ಉತ್ಪನ್ನಗಳ ಮೇಲೆ ಎಸ್ಐಪಿ ಹೂಡಿಕೆ ಮಾಡಿದರೆ ಈ ಕಷ್ಟವಿಲ್ಲ.

ಇತ್ತೀಚೆಗೆ ಚಿನ್ನದ ದರದಲ್ಲಿ ಸಾಕಷ್ಟು ಏರುಪೇರಾಗುತ್ತಿದೆ. ಇದರ ಪ್ರಯೋಜನವನ್ನು ಎಸ್ಐಪಿ ಹೂಡಿಕೆದಾರರು ಪಡೆಯಬಹುದು. ಕರಡಿ, ಗೂಳಿಗಳ ಭಯವಿಲ್ಲದೇ ಬೆಳೆಬಾಳುವ ಲೋಹಗಳ ಮೇಲೆ, ಇ ಸೀರಿಸ್ ಉತ್ಪನ್ನಗಳ ಮೇಲೆ ಹೂಡಿಕೆ ಮಾಡಿ. ಹೆಚ್ಚಿನ ಮಾಹಿತಿಗೆ www.nationalspotexchange.com ಭೇಟಿ ನೀಡಿ.

English summary

Invest in e-gold, silver through SIP | ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿದರೆ ಬದುಕು ಚೆನ್ನ

Now investment in some commodities has been made easier by the National Spot Exchange Limited (NSEL), through a unique option of investing in e-gold, silver and other metals through Systematic Investment Plan (SIP).
Story first published: Tuesday, June 19, 2012, 14:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X