ಹೊಸ ವರ್ಷ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹಣಕಾಸು ವರ್ಷದ ಆರಂಭ ಮುಂದೆ ಇದ್ದರೂ ಹಣ ಹೂಡಿಕೆ ಮಾಡುವುದಿದ್ದರೆ ಯಾವ ಕ್ಷೇತ್ರ ಒಳ್ಳೆಯದು ಎಂಬುದನ್ನು ಇಂದೇ ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ.
ಹೂಡಿಕೆ ನಿಧಿಯ ಬಂಡವಾಳ, ಹೂಡಿಕೆ ತರುವ ರಿಟರ್ನ್ಸ್ ಎರಡನ್ನು ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಎಲ್ಲಿ ಹೂಡಿಕೆ ಮಾಡಿದರರೆ ಉತ್ತಮ ಎಂಬುದಕ್ಕೆ ಉತ್ತರ ಹೇಳುವ ಯತ್ನ ಇಲ್ಲಿದೆ.

ಬಿರ್ಲಾ ಸನ್ ಲೈಫ್ ಈಕ್ವಿಟಿ ಫಂಡ್
ಎಸ್ ಐಪಿ (ವ್ಯವಸ್ಥಿತ ಹೂಡಿಕೆ ತಂತ್ರ) ದ ಅನ್ವಯ ಬಿರ್ಲಾ ಸನ್ ಲೈಫ್ ಈಕ್ವಿಟಿ ಫಂಡ್ ನಲ್ಲಿ 1000 ರು, ಹೂಡಿಕೆ ಮಾಡಬಹುದು. 1998ರಲ್ಲೇ ಆರಂಭವಾದ ಫಂಡ್ ಉತ್ತಮ ಇತಿಹಾಸ ಹೊಂದಿದ್ದು ಶೇ. 25 ರರ್ಷಟು ರಿಟರ್ನ್ಸ್ ನೀಡುತ್ತಿದೆ. ಬಿರ್ಲಾ ಸನ್ ಲೈಫ್ ಈಕ್ವಿಟಿ ಫಂಡ್ ಅಡಿ ಹೂಡಿಕೆ ಮಾಡಿದರೆ 3 ವರ್ಷಕ್ಕೆ ಶೇ. 17 ಮತ್ತು 5 ವರ್ಷಕ್ಕೆ 10.20 ರಿಟರ್ನ್ಸ್ ಪಡೆಯುವುದು ಪಕ್ಕಾ.[ಷೇರು ಮಾರುಕಟ್ಟೆಯಲ್ಲಿ ಕಡಿಮೆ ಹಣ ಹೂಡಿಕೆ ಹೇಗೆ?]
ಇದರ ಮಾರುಕಟ್ಟೆ ಬಂಡವಾಳವನ್ನು ಲೆಕ್ಕಹಾಕಿದರೆ ಐಸಿಐಸಿಐ, ಮಾರುತಿ, ಎಚ್ ಡಿಎಫ್ ಸಿ, ಇನ್ಫೋಸಿಸ್ ಸಂಸ್ಥೆಗಳೇ ಶೇ. 18 ರಷ್ಟನ್ನು ಹೊಂದಿವೆ. ಎಚ್ ಡಿ ಎಫ್ ಸಿ ಮತ್ತು ಮಾರುತಿ ಪ್ರತಿ ತ್ರೈಮಾಸಿಕಕ್ಕೆ ಶೇ. 25 ಲಾಭ ಪಡೆದುಕೊಳ್ಳುತ್ತಲೇ ಸಾಗುತ್ತಿರುವುದನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಬಹುದು.
ಅಂಶಗಳು ಮತ್ತು ಇತಿಹಾಸವನ್ನು ಗಮನಿಸಿದರೆ ಮೇಲೆ ತಿಳಿಸಿದ ಖಾಸಗಿ ವಲಯಕ್ಕೆ ಸೇರಿದ ಫಂಡ್ ಗಳ ಮೇಲೆ ಹೂಡಿಕೆ ಮಾಡಿದರೆ ನಷ್ಟವಾಗುವುದಿಲ್ಲ ಎಂದು ಹೇಳುತ್ತವೆ.
ಐಸಿಐಸಿಐ ಪ್ರೊಡೆನ್ಶಿಯಲ್ ಡೈನಾಮಿಕ್ ಫಂಡ್
ಐಸಿಐಸಿಐ ಪ್ರೊಡೆನ್ಶಿಯಲ್ ಡೈನಾಮಿಕ್ ಫಂಡ್ ಮೇಲೆಯೂ ಸಹ ಸಣ್ಣ ಪ್ರಮಾಣದ ಹೂಡಿಕೆ ಮಾಡಲು ಸಾಧ್ಯವಿದೆ. 3 ವರ್ಷದ ರಿಟರ್ನ್ಸ್ ಶೇ. 21 ರವರೆಗೂ ತಲುಪಬಹುದು. 5 ವರ್ಷದ ರಿಟರ್ನ್ಸ್ ಶೇ, 10 ರಷ್ಟಾಗಬಹುದು.[ಉಳಿತಾಯದ ಹಣಕ್ಕೆ ಅಧಿಕ ಬಡ್ಡಿ ನೀಡುವ ಬ್ಯಾಂಕ್‌ಗಳು ಯಾವುವು?]
ಐಸಿಐಸಿಐ ಪ್ರೊಡೆನ್ಶಿಯಲ್ ಡೈನಾಮಿಕ್ ಫಂಡ್ ಗೆ ಸಂಬಂಧಿಸಿದ ಮಾರುಕಟ್ಟೆಯ ಬಂಡವಾಳ ಲೆಕ್ಕ ಹಾಕುವುದಾದರೆ ಎಚ್ ಡಿ ಎಫ್ ಸಿ, ಪವರ್ ಗ್ರಿಡ್ ಮತ್ತು ಟಾಟಾ ಮೋಟಾರ್ಸ್ ಬಳಿ ಶೇ. 21 ರಷ್ಟಿವೆ.
ಟಾಟಾ ಮೋಟಾರ್ಸ್ ಸಹ ಉತ್ತಮ ರಿಟರ್ನ್ಸ್ ನೀಡುತ್ತಿವೆ. ಮುಂದಿನ ಎರಡು ಮೂರು ವರ್ಷಗಳನ್ನು ಗಮನದಲ್ಲಿ ಇಟ್ಟುಕೊಂಡು ಸಿದ್ಧಾಂತವನ್ನು ಹೇಳಬಹುದು. ಮಾರುಕಟ್ಟೆ ಬದಲಾವಣೆಯೊಂದಿಗೆ ಬರುವ ಆದಾಯವೂ ಹೆಚ್ಚು ಕಡಿಮೆ ಆಗಬಹುದು.(ಗುಡ್ ರಿಟರ್ನ್ಸ್ .ಇನ್)


Click it and Unblock the Notifications