ಸುರಕ್ಷಿತ ಹೂಡಿಕೆಗೆ ಅನೇಕ ಜಾಗಗಳನ್ನು ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಕಲ್ಪಿಸಿಕೊಟ್ಟಿವೆ. ನ್ಯಾಶನಲ್ ಬ್ಯಾಂಕ್ ಫಾರ್ ರುರಲ್ ಡೆವಲಪ್ ಮೆಂಟ್(ನಬಾರ್ಡ್) ಸಹ ತೆರಿಗೆ ವಿನಾಯಿತಿ ಬಾಂಡ್ ಗಳನ್ನು ನೀಡುತ್ತಿದೆ. ಮಾರ್ಚ್ 9 ರಿಂದ 14ರ ಒಳಗಿನ ಅವಧಿಯಲ್ಲಿ ಹೂಡಿಕೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.
ಮಹಾರಾಷ್ಟ್ರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ನಬಾರ್ಡ್ ಗ್ರಾಮೀಣ ಅಬಿವೃದ್ಧಿ ಮತ್ತು ಮೂಲ ಸೌಕರ್ಯ ಗಳ ನೀಡಿಕೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿಕೊಂಡು ಬಂದಿದೆ.[ಮಹಿಳೆಯರಿಗಾಗಿ ಅತ್ಯುತ್ತಮ 5 ಬ್ಯಾಂಕ್ ಖಾತೆಗಳು]

ನಬಾರ್ಡ್ ಟ್ಯಾಕ್ಸ್ ಫ್ರೀ ಬಾಂಡ್ ನ ಹೈಲೈಟ್ಸ್
* ಸಾವಿರ ರು. ಫೇಸ್ ವ್ಯಾಲ್ಯೂ ಹೊಂದಿರುವ ಬಾಂಡ್ ಗಳು
* 5 ಬಾಂಡ್ ಗಳಿಗೆ ಕನಿಷ್ಠ 5 ಸಾವಿರ ರು. ಹೂಡಿಕೆ ಮಾಡಬೇಕು
* 10 ವರ್ಷಕ್ಕೆ 7.29 ಬಡ್ಡಿ, 15 ವರ್ಷಕ್ಕೆ 7.64 ಬಡ್ಡಿ
* ಪ್ರತಿವರ್ಷ ಕೂಪನ್ ಪೇಮೆಂಟ್ ಮಾಡಬಹುದು
* ಎನ್ ಆರ್ ಐ ಗಳಿಗೆ ಹೂಡಿಕೆ ಮಾಡಲು ಅವಕಾಶವಿಲ್ಲ
* ನಿಗದಿತ ಅರ್ಜಿ ಪಡೆದುಕೊಂಡು ಯೋಜನೆಗೆ ಸೇರಿಕೊಳ್ಳಬಹುದು[ಸಾಮಾನ್ಯ ನಾಗರಿಕನ ಮೇಲೆ ಬಜೆಟ್ ಪರಿಣಾಮವೇನು?]
* ಬಿಎಸ್ ಇ ನಲ್ಲೂ ಸಹ ಬಾಂಡ್ ಗಳು ಸ್ಥಾನ ಪಡೆದುಕೊಂಡಿವೆ
* ಟಿಡಿಟ್ ಇದಕ್ಕೆ ಅನ್ವಯವಾಗುವುದಿಲ್ಲ
ಯಾರೆಲ್ಲ ಹೂಡಿಕೆ ಮಾಡಬಹುದು?
ಹೆಚ್ಚು ತೆರಿಗೆ ತುಂಬುತ್ತಿರುವ ವ್ಯಕ್ತಿಗಳಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ. ಬ್ಯಾಂಕ್ ಬಡ್ಡಿ ದರಕ್ಕೆ ಹೋಲಿಸಿದರೆ ಇಲ್ಲಿ ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ. ಒಟ್ಟು ಸುಮಾರು ಶೇ, 8 ರಷ್ಟು ಬಡ್ಡಿ ದರ ಪಡೆದುಕೊಳ್ಳಲು ಸಾಧ್ಯವಿದೆ.
ಶೇ. 30 ಆದಾಯ ತೆರಿಗೆ ತುಂಬುತ್ತಿರುವವರು ಅಂದರೆ ವಾರ್ಷಿಕ 10 ಲಕ್ಷ ರು. ಗೂ ಅಧಿಕ ಆದಾಯ ಹೊಂದಿರುವವರು ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 15 ವರ್ಷದ ಬಾಂಡ್ ನಲ್ಲಿ ಹೂಡಿಕೆ ಮಾಡಿದರೆ ಮಾರುಕಟ್ಟೆ ಆಧರಿಸಿ ಹೇಳುವುದಾದರೆ 11.13 ಬಡ್ಡಿ ದರವನ್ನು ಪಡೆದುಕೊಳ್ಳಲು ಸಾಧ್ಯವಿದೆ.
ಕೊನೆ ಮಾತು
ಬ್ಯಾಂಕ್ ಗಳ ಫಿಕ್ಸೆಡ್ ಡಿಪಾಸಿಟ್ ನಲ್ಲಿ ಹೂಡಿಕೆ ಮಾಡುವ ಬದಲು ಇಲ್ಲಿ ಹಣ ಹಾಕಿದರೆ ತಪ್ಪೇನಿಲ್ಲ. ಇದು ಸುರಕ್ಷಿತ ಎನ್ನುವುದು ಎಲ್ಲದಕ್ಕಿಂತ ಪ್ರಮುಖ ಅಂಶ(ಗುಡ್ ರಿಟರ್ನ್ಸ್. ಇನ್)


Click it and Unblock the Notifications