ಪ್ರತಿಯೊಬ್ಬರೂ ಸಹ ಪ್ರತಿ ತಿಂಗಳ ಆದಾಯವನ್ನು ಇಷ್ಟ ಪಡುತ್ತಾರೆ. ಅದರಲ್ಲೂ ಸ್ಥಿರ ಠೇವಣಿಗಳ ಮೇಲೆ ಪ್ರತಿ ತಿಂಗಳು ಆದಾಯ ಇದೇ ಎಂದರೆ ಬಿಡಲಾದಿತೆ?
ಎಲ್ಲ ಹೂಡಿಕೆದಾರರು ಅದರಲ್ಲೂ ನಿವೃತ್ತಿಯಾದ ಹೂಡಿಕೆದಾರರು ಪ್ರತಿ ತಿಂಗಳಿಗೂ ನಿರಂತರ ಆದಾಯ ಬಯಸುತ್ತಾರೆ. ಅದಕ್ಕಾಗಿ ತಿಂಗಳ ಆಧಾರದ ಮೇಲೆ ಉತ್ತಮ ಬಡ್ಡಿದರ ಕೊಡುವ ಹೂಡಿಕೆಗಳಿಗಾಗಿ ಹುಡುಕುತ್ತಿರುತ್ತಾರೆ.
ಪ್ರತಿ ತಿಂಗಳ ಬಡ್ಡಿದರದ ಆದಾಯಕ್ಕಾಗಿ ಹೂಡಿಕೆ ಮಾಡುವ ಎಲ್ಲ ಸ್ಥಿರ ಠೇವಣಿಗಳ ಮೇಲೂ ತೆರಿಗೆ ಇರುತ್ತದೆ ಎಂಬುದನ್ನು ಗಮನಿಸಬೇಕು. ಇಲ್ಲಿ ಯಾವುದೇ ಮ್ಯೂಚುವಲ್ ಫಂಡ್ ಗಳ ಬಗ್ಗೆ ಮಾಹಿತಿ ಕೊಡುತ್ತಿಲ್ಲ. ಕೇವಲ ತಿಂಗಳ ಆಧಾರದ ಮೇಲೆ ಉತ್ತಮ ಬಡ್ಡಿದರ ಕೊಡಬಲ್ಲ ಸ್ಥಿರ ಠೇವಣಿಗಳ(ಎಫ್ಡಿ) ಬಗ್ಗೆ ಸಲಹೆ ನೀಡುತ್ತಿದ್ದೇವೆ. (ಪ್ರತಿ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕೆ? ಇಲ್ಲಿವೆ 8 ಮಾರ್ಗ)
ಪ್ರತಿ ತಿಂಗಳು ಉತ್ತಮ ಬಡ್ಡಿದರ ಕೊಡಬಲ್ಲ ಉತ್ತಮ ಸ್ಥಿರ ಠೇವಣಿಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
DHFL ಆಶ್ರಯ ಸ್ಥಿರ ಠೇವಣಿ
DHFL ಆಶ್ರಯ ಪ್ರತಿ ತಿಂಗಳು ಶೇ. 8.10ರಷ್ಟು ಬಡ್ಡಿದರವನ್ನು 12 ತಿಂಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ನೀಡುತ್ತದೆ. 14 ರಿಂದ 120 ತಿಂಗಳ ಕಾಲಾವಧಿ ಮೇಲೆ ಶೇ. 8.35ರಷ್ಟು ಬಡ್ಡಿದರವನ್ನು ಇದು ಘೋಷಿಸಿದೆ. ಬೇರೆ ಎಲ್ಲ ಬ್ಯಾಂಕುಗಳಿಗೆ ಹೋಲಿಸಿದರೆ ಇದು ಉತ್ತಮವಾದ ಬಡ್ಡಿದರ ಎಂದೇ ಹೇಳಬಹುದು.
ಬಜಾಜ್ ಪಿನ್ ಸರ್ವ್
ಸ್ಥಿರ ಠೇವಣಿಗಳ ಮೇಲೆ ಪ್ರತಿ ತಿಂಗಳೂ ಹೆಚ್ಚು ಬಡ್ಡಿದರ ಬಯಸುತ್ತಿದ್ದಲ್ಲಿ ಬಜಾಜ್ ಪಿನ್ ಸರ್ವ್ ಉತ್ತಮ ಆಯ್ಕೆ ಆಗಿದೆ.
12 ರಿಂದ 17 ತಿಂಗಳ ಸ್ಥಿರ ಠೇವಣಿಗಳ ಮೇಲೆ ವಾರ್ಷಿಕವಾಗಿ 8.23% ಬಡ್ಡಿದರ ಸಿಗುತ್ತದೆ. ಅದೇ ರೀತಿ 18 ರಿಂದ 60 ತಿಂಗಳ ಸ್ಥಿರ ಠೇವಣಿಗಳ ಮೇಲೆ 8.32% ಬಡ್ಡಿದರ ನೀಡಲಾಗುತ್ತದೆ. ಬಡ್ಡಿದರ ಪ್ರತಿ ತಿಂಗಳಿಗೆ ಸಿಗುತ್ತದೆ.
ಇವು ಎಎಎ ದರ್ಜೆಯ ಸ್ಥಿರ ಠೇವಣಿಗಳಾಗಿದ್ದು, ತುಂಬಾ ಸುರಕ್ಷಿತವಾಗಿವೆ. ಪ್ರತಿ ತಿಂಗಳ ಆದಾಯಕ್ಕೆ ಉತ್ತಮವಾದ ಆಯ್ಕೆ.
ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್
ಒಂದು ವರ್ಷದ ಅವಧಿಗೆ ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ತಿಂಗಳ ಸ್ಥಿರ ಠೇವಣಿಗಳ ಮೇಲೆ 7.95% ಬಡ್ಡಿದರವನ್ನು ಘೋಷಿಸಿವೆ. 2-3 ವರ್ಷಗಳ ಅವಧಿಗೆ 8.19% ಬಡ್ಡಿದರ ಲಭ್ಯವಿದೆ. ನೀವು ಐದು ವರ್ಷಗಳ ಅವಧಿವರೆಗೆ 8.42% ಪ್ರತಿ ತಿಂಗಳು ಬಡ್ಡಿದರ ಪಡೆಯಬಹುದಾಗಿದೆ.
ಅಂಚೆ ಕಚೇರಿ ತಿಂಗಳ ಆದಾಯ ಯೋಜನೆ
ಅಂಚೆ ಕಚೇರಿ ಸ್ಥಿರ ಠೇವಣಿಗಳು ಸಹ ಪ್ರತಿ ತಿಂಗಳ ಆದಾಯಕ್ಕಾಗಿ ಉತ್ತಮ ಆಯ್ಕೆ ಎಂದೇ ಹೇಳಬಹುದು. ಇವು HDFC ಬ್ಯಾಂಕಿನ ತಿಂಗಳ ಬಡ್ಡಿದರಕ್ಕಿಂತಲೂ ಸ್ವಲ್ಪ ಕಡಿಮೆಯಾಗಿರುತ್ತದೆ.
ಇವು 7.8% ಬಡ್ಡಿದರವನ್ನು ಒದಗಿಸುತ್ತವೆ. ಇವು ತುಂಬಾ ಸುರಕ್ಷಿತ ಠೇವಣಿಗಳು ಎಂದೇ ಜನಜನಿತವಾಗಿವೆ. ಇದು ಭಾರತ ಸರ್ಕಾರದ ಸ್ವಾಮ್ಯದಲ್ಲಿ ನಡೆಯುವ ಸಂಸ್ಥೆಯಾಗಿದೆ. ಜತೆಗೆ ಇವು ಪ್ರತಿ ತಿಂಗಳ ಸ್ಥಿರ ಠೇವಣಿಗಳ ಆದಾಯಕ್ಕೆ ಉತ್ತಮವಾದವುಗಳಾಗಿವೆ.
ಫೆಡರಲ್ ಬ್ಯಾಂಕು
ಪ್ರತಿ ತಿಂಗಳು ಸ್ಥಿರ ಠೇವಣಿಗಳ ಮೇಲೆ ಆದಾಯ ಕೊಡಬಲ್ಲ ಕೆಲವೆ ಬ್ಯಾಂಕುಗಳಲ್ಲಿ ಫೆಡರಲ್ ಬ್ಯಾಂಕು ಕೂಡ ಒಂದು.
ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರದ ಕುರಿತು ಬ್ಯಾಂಕಿನವರೊಂದಿಗೆ ವಿಚಾರಿಸಿ ತಿಳಿದುಕೊಳ್ಳಬೇಕಾಗಿದೆ. ಏಕೆಂದರೆ ಈ ಬ್ಯಾಂಕಿನ ಸ್ಥಿರ ಠೇವಣಿಗಳ ಅವಧಿ ಮತ್ತು ಮೊತ್ತದ ಪ್ರಮಾಣ ಆಗಾಗ್ಗೆ ಬದಲಾಗುತ್ತಿರುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಫೆಡರಲ್ ಬ್ಯಾಂಕಿನಂತೆಯೇ ಯೂನಿಯನ್ ಬ್ಯಾಂಕ್ ಕೂಡ ಸ್ಥಿರ ಠೇವಣಿಗಳ ಮೇಲೆ ಪ್ರತಿ ತಿಂಗಳು ಆದಾಯವನ್ನು ನೀಡುತ್ತದೆ. ಇದು ಸಾಮಾನ್ಯವಾಗಿ ಶೇ. 7 ರಿಂದ ಶೇ. 7.25ರಷ್ಟು ಬಡ್ಡಿದರ ನೀಡುತ್ತದೆ. ಜತೆಗೆ ಒಂದು ಸಲ ಬ್ಯಾಂಕಿನವರೊಂದಿಗೆ ವಿಚಾರಣೆ ಮಡಿದಾಗ ಇದರ ಕುರಿತು ಸರಿಯಾದ ಮಾಹಿತಿ ಲಭ್ಯವಾಗುತ್ತದೆ.
ಯುಕೊ ಬ್ಯಾಂಕ್
ಯುಕೊ ಬ್ಯಾಂಕ್ ಕೂಡ ಸ್ಥಿರ ಠೇವಣಿಗಳ ಮೇಲೆ ಪ್ರತಿ ತಿಂಗಳು ಆದಾಯವನ್ನು ನೀಡುತ್ತದೆ. ಈ ಬ್ಯಾಂಕು ಸ್ಥಿರ ಠೇವಣಿಗಳ ಮೇಲೆ ಉನ್ನತ ಬಡ್ಡಿದರ ನೀಡುತ್ತಿದ್ದು, ಎಎಎ ದರ್ಜೆಯ ಕಂಪನಿಯಾಗಿದೆ. ಇದು ಪ್ರತಿ ತಿಂಗಳ ಆದಾಯದ ಯೋಜನೆಯನ್ನು ಹೊಂದಿದ್ದು, ಬ್ಯಾಂಕಿನವರೊಂದಿಗೆ ವಿಚಾರಿಸಿ ದೃಢಿಕರಿಸಬೇಕು.


Click it and Unblock the Notifications