ಹೂಡಿಕೆ ಮಾಡುವ ಮುನ್ನ ಈ ಅಂಶಗಳನ್ನು ತಪ್ಪದೆ ತಿಳಿದುಕೊಳ್ಳಿ

ಬಂಡವಾಳ ಹೂಡಿಕೆಯನ್ನು ಲಾಭದಾಯಕವನ್ನಾಗಿಸಲು, ಬಂಡವಾಳಕ್ಕೆ ತಕ್ಕ ಬಡ್ಡಿದರವನ್ನು ಪಡೆಯಲು ಹಾಗೂ ಅದನ್ನು ರಕ್ಷಿಸಿಡಲು ನಿರ್ವಹಣಾ ಚತುರತೆ ಜತೆಗೆ ಎದುರಿಸಬೇಕಾದ ಅಪಾಯದ ಬಗ್ಗೆ ಹೂಡಿಕೆದಾರರು ಯೋಚಿಸುತ್ತಿರುತ್ತಾರೆ.

ಬಂಡವಾಳ ಹೂಡಿಕೆಯನ್ನು ಲಾಭದಾಯಕವನ್ನಾಗಿಸಲು, ಬಂಡವಾಳಕ್ಕೆ ತಕ್ಕ ಬಡ್ಡಿದರವನ್ನು ಪಡೆಯಲು ಹಾಗೂ ಅದನ್ನು ರಕ್ಷಿಸಿಡಲು ನಿರ್ವಹಣಾ ಚತುರತೆ ಜತೆಗೆ ಎದುರಿಸಬೇಕಾದ ಅಪಾಯದ ಬಗ್ಗೆ ಹೂಡಿಕೆದಾರರು ಯೋಚಿಸುತ್ತಿರುತ್ತಾರೆ.

ಆದರೆ ಖರ್ಚುವೆಚ್ಚ ಹಾಗೂ ತೆರಿಗೆಗಳು ಈ ಹಣಕಾಸು ಉತ್ಪನ್ನಗಳ ಅವಿಭಾಜ್ಯ ಅಂಗಗಳಾಗಿದ್ದು, ಇದು ಗಳಿಸಬಹುದಾದ ಮೊತ್ತದ ಮೇಲೆ ಪರಿಣಾಮ ಬೀರಬಹುದು. ಅಲ್ಲದೇ ನಿಮಗೆ ಸೇರಬಹುದಾದ ಲಾಭದ ಬಹುಪಾಲು ಭಾಗವನ್ನು ನುಂಗಿ ಬಿಡಬಹುದು.

ನೀವು ಗಳಿಸುವ ಲಾಭದ ಮೇಲೆ ಆಗಬಹುದಾದ ಖರ್ಚುವೆಚ್ಚಗಳ ಪರಿಣಾಮವನ್ನು ಗಮನವಿಡಬೇಕು. ಉದಾಹರಣೆಗೆ: ಒಂದು ವರ್ಷದ ಖರ್ಚುವೆಚ್ಚದ ಮೇಲೆ ವಿಧಿಸಲಾಗುವ ಶೇ. 1 ಶುಲ್ಕವು, ಪ್ರತಿವರ್ಷ ವೃದ್ದಿಯಾಗುತ್ತಿದ್ದರೆ ಮುಂದಿನ 20 ವರ್ಷಗಳ ಅವಧಿಯಲ್ಲಿ ಅದು ಶೇ. 16 ರಷ್ಟು ಆಗುತ್ತದೆ. ಹಿಡುವಳಿಯು 25 ವರ್ಷಗಳಿಗಾದರೆ ಶುಲ್ಕವು ಶೇ. 20 ರಷ್ಟು ವೃದ್ದಿಸಿರುತ್ತದೆ. ಇದೇ ರೀತಿ ತೆರಿಗೆಯ ಮೇಲೂ ಪರಿಣಾಮ ಬೀರುವುದರಿಂದ ನಿಮ್ಮ ಮುಂದಿನ ಹೂಡಿಕೆಯ ಮೇಲೆ ಇವು ಪರಿಣಾಮ ಬೀರುತ್ತವೆ.

ಬಂಡವಾಳ ಹೂಡಿಕೆಯಲ್ಲಿನ ವೆಚ್ಚಗಳು, ಶುಲ್ಕಗಳು, ಹಾಗು ತೆರಿಗೆಯು ನಿಮ್ಮ ಬಂಡವಾಳದ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸರಿಯಾಗಿ ವಿಚಾರಿಸಿದಲ್ಲಿ ನಿಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುತ್ತದೆ.

ನಿಮಗೆ ಎದುರಾಗಬಹುದಾದ ಅಂತಹ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದೆ ನೋಡಿ...

1. ಹೂಡಿಕೆ ಮಾಡುವಾಗ ಯಾವ ರೀತಿಯ ಶುಲ್ಕ ಪಾವತಿಸಬೇಕಾಗಬಹುದು?

1. ಹೂಡಿಕೆ ಮಾಡುವಾಗ ಯಾವ ರೀತಿಯ ಶುಲ್ಕ ಪಾವತಿಸಬೇಕಾಗಬಹುದು?

ಸಾಮಾನ್ಯವಾಗಿ, ನೀವು ಹೂಡಿಕೆ ಮಾಡುವ ಹಣದ ಮೌಲ್ಯದ ಆಧಾರದ ಮೇಲೆ ಕಮಿಷನ್ ಅಥವಾ ದಲ್ಲಾಳಿ ಶುಲ್ಕವನ್ನು ನೀವು ವಿಧಿಸಬೇಕಾಗಬಹುದು. ಶುಲ್ಕವನ್ನು ಹೂಡಿಕೆಯ ಹಣದ ಮೌಲ್ಯಕ್ಕೆ ಶೇಕಡಾವಾರು ಆಧಾರದ ಮೇಲೆ ಅಥವಾ ನಿಗದಿತ ಮೌಲ್ಯವನ್ನು ಮುಂಚಿತವಾಗಿ ಸೂಚಿಸಲಾಗುತ್ತದೆ. (ಉದಾಹರಣೆ : ಷೇರು ದಲ್ಲಾಳಿ ವಿಧಿಸುವ ದಲ್ಲಾಳಿ ಶುಲ್ಕ ಅಥವಾ ಮ್ಯೂಚುಯಲ್ ಫಂಡ್ ವಿತರಕರು ವಿಧಿಸುವ ಶುಲ್ಕ)

2. ಹೂಡಿಕೆ ನಂತರ ಸಿಗುವ ಲಾಭ, ಬಂಡಾಳ ಕಾಪಾಡಿಟ್ಟುಕೊಳ್ಳಲು, ತಿರುಗಿ ಪಡೆಯಲು ತಗಲುವ ವೆಚ್ಚ?

2. ಹೂಡಿಕೆ ನಂತರ ಸಿಗುವ ಲಾಭ, ಬಂಡಾಳ ಕಾಪಾಡಿಟ್ಟುಕೊಳ್ಳಲು, ತಿರುಗಿ ಪಡೆಯಲು ತಗಲುವ ವೆಚ್ಚ?

ಷೇರು ಮಾರುಕಟ್ಟೆಯಲ್ಲಿ ಖರೀದಿಸಿದ ಷೇರುಗಳು ಹಾಗೂ ಡಿಬೆಂಚರ್ಗಳಿಂದ ಹೂಡಿಕೆಯ ಲಾಭ ಗಳಿಸಲು ಡಿಮ್ಯಾಟ್ ಮತ್ತು ದಲ್ಲಾಳಿ ಖಾತೆಯನ್ನು ತೆರೆದು, ಅದರ ಮೂಲಕ ವ್ಯವಹಾರವನ್ನು ನಡೆಸಬಹುದು. ಕೆಲವೊಮ್ಮೆ ಹೀಗೆ ತೆರೆದ ಖಾತೆಯನ್ನು ರದ್ದುಗೊಳಿಸುವಾಗ ಮ್ಯೂಚುಯಲ್ ಫಂಡ್ಸ್ ಗಳಿಂದ ಶುಲ್ಕ ಪಾವತಿಗೆ ಕೇಳಬಹುದು. ಇದು ಬಂಡವಾಳದ ಬಿಡುಗಡೆ ಮೌಲ್ಯವನ್ನು ಕಡಿಮೆ ಮಾಡುತ್ತದೆ.

3. ವಿಧಿಸುವ ಶುಲ್ಕ ಸಮಾಧಾನಕರವಾಗಿದೆಯೆ? ನಿಯಂತ್ರಕ ಮಿತಿ ಬಯಸುವಿರಾ?

3. ವಿಧಿಸುವ ಶುಲ್ಕ ಸಮಾಧಾನಕರವಾಗಿದೆಯೆ? ನಿಯಂತ್ರಕ ಮಿತಿ ಬಯಸುವಿರಾ?

ಕೆಲವು ಖರ್ಚುವೆಚ್ಚಗಳು ಕಾಯಿದೆಯ ಮಿತಿಯೊಳಗೆ ಬರುತ್ತವೆ. ಅಂತಹ ವೆಚ್ಚಗಳು ಮ್ಯೂಚುವಲ್ ಫಂಡ್ ಗಳಿಂದ ವಿಧಿಸಲ್ಪಡುತ್ತವೆ. ವಾಸ್ತವವಾಗಿ ವಿಧಿಸಲ್ಪಡುವ ಶುಲ್ಕಗಳು ಆಯಾ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಸ್ಪರ್ಧಾತ್ಮಕ ನಿಲುವುಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಇತರೆ ಠೇವಣಿ ಶುಲ್ಕಗಳು ಇಂತಹ ಕಾಯಿದೆಯ ಮಿತಿಯೊಳಗೆ ಬರುವುದಿಲ್ಲ. ಹೂಡಿಕೆದಾರರು ಸೇವಾದಾರರ ಬಳಿ ವ್ಯವಹರಿಸಿ ಇಂತಹ ಕೆಲವು ಕಾಯಿದೆಯ ಮಿತಿಗಳನ್ನು ಸಡಿಲಗೊಳಿಸಿಕೊಳ್ಳಬಹುದು. ಆದರೆ ನೀವು ಬಳಸದೇ ಇರುವಂತಹ ಸೇವೆಗಳಿಗೆ ಸೇವಾ ಶುಲ್ಕವನ್ನು ತೆರಬೇಕಾಗಬಹುದು. ಇದರ ಬಗ್ಗೆ ಎಚ್ಚರವಿರಲಿ.

4. ಹಣಕಾಸು ಹೂಡಿಕೆಯ ಕಾರ್ಯಾಚರಣೆ ವೇಳೆ ಖರ್ಚುವೆಚ್ಚಗಳಿರುತ್ತವೆಯೆ?

4. ಹಣಕಾಸು ಹೂಡಿಕೆಯ ಕಾರ್ಯಾಚರಣೆ ವೇಳೆ ಖರ್ಚುವೆಚ್ಚಗಳಿರುತ್ತವೆಯೆ?

ಹೂಡಿಕೆಯನ್ನು ವ್ಯವಸ್ಥಿತಗೊಳಿಸಲು ಹಣಕಾಸು ಹೂಡಿಕೆಯ ಅವಧಿಯಲ್ಲಿ ಕೆಲವು ಉತ್ಪನ್ನಗಳಿಂದ ಶುಲ್ಕ ವಿಧಿಸಲಾಗುತ್ತದೆ. ಇವುಗಳಲ್ಲಿ ರಾಷ್ಟ್ರೀಯ ಪಿಂಚಣಿ ಮಂಡಳಿ, ಮ್ಯೂಚುವಲ್ ಫಂಡ್ಸ್ ಮತ್ತು ಯೂನಿಟ್ ಲಿಂಕ್ಡ್ ಹೂಡಿಕೆಗಳಲು ಒಳಗೊಂಡಿವೆ. ಹೀಗಾಗಿ ಪಾವತಿಸಬೇಕಾದಂತಹ ಶುಲ್ಕಗಳ ಪಟ್ಟಿಯನ್ನು ಕೇಳಿ ಪಡೆದುಕೊಳ್ಳುವುದು ಉತ್ತಮ.

5. ಹೂಡಿಕೆಗಳ ಮೇಲೆ ವಿಧಿಸಲ್ಪಡುವ ಶುಲ್ಕಗಳ ಮಾಹಿತಿಯನ್ನು ಎಲ್ಲಿ ಪಡೆಯಬಹುದು?

5. ಹೂಡಿಕೆಗಳ ಮೇಲೆ ವಿಧಿಸಲ್ಪಡುವ ಶುಲ್ಕಗಳ ಮಾಹಿತಿಯನ್ನು ಎಲ್ಲಿ ಪಡೆಯಬಹುದು?

ಸಾಮಾನ್ಯವಾಗಿ ಉತ್ಪನ್ನ ಹೂಡಿಕೆಯ ಸಮಯದಲ್ಲಿ ನೀಡಲಾಗುವಂತಹ ಆಫರ್ ಡಾಕ್ಯುಮೆಂಟ್ ನಂತಹ ದಾಖಲೆಗಳಲ್ಲಿ ಇಂತಹ ಮಾಹಿತಿಯನ್ನು ನೀಡಿರುತ್ತಾರೆ. ನಿಮ್ಮ ಹೂಡಿಕೆಯ ಮೇಲೆ ಪರಿಣಾಮ ಬೀರಬಹುದಾದಂತಹ ಎಲ್ಲ ರೀತಿಯ ವೆಚ್ಚಗಳ ಮಾಹಿತಿಯನ್ನು ವಿವರಣೆ ಸಹಿತ ಕೇಳಿ ಪಡೆಯಿರಿ.

6. ಯಾವ ರೀತಿಯ ಹೆಚ್ಚುವರಿ ಶುಲ್ಕಗಳನ್ನು ತೆರಬೇಕಾಗಬಹುದು?

6. ಯಾವ ರೀತಿಯ ಹೆಚ್ಚುವರಿ ಶುಲ್ಕಗಳನ್ನು ತೆರಬೇಕಾಗಬಹುದು?

ಹೆಚ್ಚುವರಿ ಶುಲ್ಕ ಹಾಗು ವಿಧಿಸಲಾಗುವ ದಂಡಗಳ ಬಗ್ಗೆ ಹೂಡಿಕೆ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಬಳಿ ವಿವರಣೆಯನ್ನು ಕೇಳಿ ಪಡೆಯಿರಿ. ಬ್ಯಾಂಕ್ ಖಾತೆಯಲ್ಲಿ ಇಡಬೇಕಾದ ಮಿನಿಮಮ್ ಮೊತ್ತ ಕೂಡ ಶುಲ್ಕಕ್ಕೆ ಎಡೆಮಾಡಬಹುದು. ಮುಂಚಿತವಾಗಿ ನ್ಯಾಷನಲ್ ಸರ್ಟಿಫಿಕೇಟ್(NSC) ಸ್ವಾಧೀನಪಡಿಸಿಕೊಳ್ಳುವುದು ಕೂಡ ಅತ್ಯಂತ ಕಡಿಮೆ ಮೊತ್ತದ ಬಡ್ಡಿಗೆ ಕಾರಣವಾಗಬಹುದು. ಅಧಿಕ ಮೊತ್ತದ ಹೂಡಿಕೆ ವ್ಯವಹಾರ ಕಡಿಮೆ ಮೊತ್ತದ ದಲ್ಲಾಳಿ ಶುಲ್ಕಕ್ಕೆ ಅವಕಾಶ ಮಾಡಿಕೊಡಬಹುದು.

7. ಗುಪ್ತ ವೆಚ್ಚಗಳು ಇದ್ದಲ್ಲಿ ಅವು ಯಾವುವು?

7. ಗುಪ್ತ ವೆಚ್ಚಗಳು ಇದ್ದಲ್ಲಿ ಅವು ಯಾವುವು?

ನಿಮ್ಮ ಹೂಡಿಕೆಗಳು ಶುಲ್ಕ ಪಾವತಿಗೆ ಒಳಪಡದಂತಹ ಪಟ್ಟಿಗೆ ಸೇರಿದ್ದರೂ, ಅದರಿಂದ ಶುಲ್ಕ ಪಾವತಿಯಾಗುತ್ತಿದ್ದರೆ ಅದು ಗುಪ್ತವೆ ಚ್ಚಗಳಿಗೆ ಒಳಪಡುತ್ತದೆ. ಉದಾಹರಣೆಗೆ ಕೆಲವೊಂದು ಯೋಜನೆಗಳಲ್ಲಿ ಮ್ಯೂಚುವಲ್ ಫಂಡ್ ನಿಮ್ಮ ಖಾತೆಯಿಂದ ಭದ್ರತಾ ಠೇವಣಿಗಳ ಕೊಂಡು ಕೊಳ್ಳುವಿಕೆಯಲ್ಲಿ ತೊಡಗಿಕೊಂಡಾಗ ಪರೋಕ್ಷವಾಗಿ ಸಂಬಂಧಪಟ್ಟ ಹೆಚ್ಚುವರಿ ಶುಲ್ಕವನ್ನು ಹೂಡಿಕೆದಾರರು ಪಾವತಿಸಬೇಕಾಗುತ್ತದೆ. ಇಂತಹ ನಿಮ್ಮ ಆದಾಯವನ್ನು ಕಡಿಮೆಗೊಳಿಸುವಂತಹ ಯಾವುದಾದರೂ ವೆಚ್ಚಗಳಿದ್ದಲ್ಲಿ ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ಕೇಳಿ ಪಡೆಯಿರಿ.

8. ನಮಗೆ ವಿಧಿಸಲ್ಪಟ್ಟ ಶುಲ್ಕಗಳ ಮಾಹಿತಿಯನ್ನು ನಾವು ಹೇಗೆ ಪಡೆಯಬಹುದು?

8. ನಮಗೆ ವಿಧಿಸಲ್ಪಟ್ಟ ಶುಲ್ಕಗಳ ಮಾಹಿತಿಯನ್ನು ನಾವು ಹೇಗೆ ಪಡೆಯಬಹುದು?

ಹಣಕಾಸು ಹಾಗೂ ಬಂಡವಾಳ ಹೂಡಿಕೆ ಸೇವೆಯನ್ನು ಒದಗಿಸುವವರು ನೀಡಲಾಗುವ ಖಾತೆಯ ವರದಿಯಲ್ಲಿ ನಿಮಗೆ ಇದರ ಮಾಹಿತಿ ಸಿಗುತ್ತದೆ. ನೀವು ಹೂಡಿದ ಬಂಡವಾಳಕ್ಕೆ ಅದರ ಮೌಲ್ಯವನ್ನು ನಿಗದಿ ಪಡಿಸುವ ಮುನ್ನ ನಿಮ್ಮ ಬಂಡವಾಳದ ಮೊತ್ತಕ್ಕೆ ಕೆಲವು ವೆಚ್ಚಗಳನ್ನು ಭರಿಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಇವುಗಳನ್ನು ನಿಮ್ಮ ಖಾತೆಯ ವರದಿಯಲ್ಲಿ ನಮೂದಿಸಿರುವುದಿಲ್ಲ. ಇವುಗಳ ಬಗ್ಗೆ ಮಾಹಿತಿಯನ್ನು ಕೊಡುವ ಬಗ್ಗೆ ಸೇವಾದಾರರನ್ನು ಕೇಳಿರಿ ಹಾಗೂ ಇಂತಹ ವಿವರಣೆಗಳು ಇದ್ದಲ್ಲಿ ಅಂತಹ ವಿವರಣೆಯನ್ನು ಕೂಲಂಕುಷವಾಗಿ ತಾಳೆ ಮಾಡಿ ನೋಡಿಕೊಳ್ಳಬೇಕು.

9. ಉತ್ಪನ್ನ ಹಾಗೂ ಸೇವಾ ಸಲಹೆಗಾರರು ಸ್ವೀಕರಿಸಬಹುದಾದ ಪರಿಹಾರ ಶುಲ್ಕಗಳು ಯಾವುವು?

9. ಉತ್ಪನ್ನ ಹಾಗೂ ಸೇವಾ ಸಲಹೆಗಾರರು ಸ್ವೀಕರಿಸಬಹುದಾದ ಪರಿಹಾರ ಶುಲ್ಕಗಳು ಯಾವುವು?

ಸಲಹೆಗಾರರ ಪರಿಹಾರದ ಬಗ್ಗೆ ವಿವರಗಳನ್ನು ಮುಂಚೆಯೇ ಕೇಳಿ ಪಡೆಯಿರಿ. ಇದರಿಂದ ಉತ್ಪನ್ನ ಹಾಗೂ ಸೇವೆಗಳ ಬಡ್ಡಿ ದರಗಳು ಸೇವಾದಾರರ ಲಾಭಕ್ಕಾಗಿ ಇರದೆ ನಿಮ್ಮ ಸೂಚನೆಯಂತೆ ಇರುತ್ತದೆ. ಪರಿಹಾರ ಮೊತ್ತ, ಅವರ ಲೆಕ್ಕಾಚಾರದ ಆಧಾರದ ಮೂಲಗಳು ಹಾಗೂ ಅವುಗಳು ಯಾರಿಂದ ಸ್ವೀಕರಿಸಲ್ಪಡುತ್ತದೆ ಎಂಬ ಅವಶ್ಯಕ ಪ್ರಶ್ನೆಗಳಿಗೂ ವಿವರಗಳನ್ನು ಪಡೆಯಿರಿ.

ಕೊನೆ ಮಾತು

ಕೊನೆ ಮಾತು

ಹೂಡಿಕೆಗೆ ಮುನ್ನ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಾಗೂ ಉತ್ತಮ ಸೇವೆ ಒದಗಿಸುವ ಸೇವಾದಾರರ ಬಗ್ಗೆ ಅಧ್ಯಯನ ನಡೆಸಿ ಖರ್ಚುವೆಚ್ಚಗಳ ಬಗ್ಗೆ ಕೂಲಂಕಷವಾಗಿ ಸಮಾಲೋಚಿಸಿ. ಇದರಿಂದ ಕೆಲವು ಅನಾವಶ್ಯಕ ಖರ್ಚುವೆಚ್ಚಗಳನ್ನು ತಡೆಯಬಹುದು. ಹೂಡಿಕೆಗಳ ಮೇಲೆ ಅನ್ವಯವಾಗುವಂತಹ ವೆಚ್ಚಗಳು ಹಾಗೂ ತೆರಿಗೆಗಳ ಆಧಾರದ ಮೇಲೆ ನಿಮ್ಮ ಹೂಡಿಕೆಯ ವೆಚ್ಚಗಳನ್ನು ಕಡಿಮೆ ದರಕ್ಕೆ ಮಾರ್ಪಡಿಸಬಹುದಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+