Englishहिन्दी മലയാളം தமிழ் తెలుగు

ಏಪ್ರಿಲ್ 2017: ಅನ್ವಯವಾಗುವ ಹೊಸ ಆದಾಯ ತೆರಿಗೆ(ITR) ನಿಯಮಗಳು

Written By: Siddu
Subscribe to GoodReturns Kannada

ಲೋಕಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರವಾಗಿದ್ದು, 2017-18ರ ಹಣಕಾಸು ವರ್ಷದ ಬಜೆಟ್ ಮಂಡನೆ ಕೂಡ ಪೂರ್ಣಗೊಂಡಿದೆ. ಬಜೆಟ್ 2017 ತೆರಿಗೆ ಪ್ರಸ್ತಾಪಗಳು ಈಗ ಕಾನೂನಾಗಿ ಮಾರ್ಪಟ್ಟಿವೆ. ಹಣಕಾಸು ಮಸೂದೆ 2017 ಸೇರಿದಂತೆ ಇನ್ನಿತರ ಪ್ರಮುಖ 40 ತಿದ್ದುಪಡಿಗಳನ್ನು ಸೂಚಿಸಲಾಗಿದೆ. ಭಾರತದಲ್ಲಿ ಈ ಆದಾಯಗಳಿಗೆ ತೆರಿಗೆ ಇಲ್ಲ

ಏಪ್ರಿಲ್ 1ರಿಂದ ಜಾರಿ ಆಗಿರುವ ಕೆಲ ಪ್ರಮುಖ ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ಬದಲಾವಣೆಗಳ ವಿವರ ಇಲ್ಲಿದೆ...

1. 12,500 ತೆರಿಗೆ ಉಳಿತಾಯ

ಒಟ್ಟು 2.5 ಲಕ್ಷದಿಂದ 5 ಲಕ್ಷದ ನಡುವಿನ ಆದಾಯದ ಮೇಲಿನ ತೆರಿಗೆ ದರವನ್ನು ಶೇ. 10 ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಅಂದರೆ ಪ್ರತಿವರ್ಷ ರೂ. 12,500 ತೆರಿಗೆ ಉಳಿತಾಯ ಆಗಲಿದೆ. ಅಲ್ಲದೆ ಒಂದು ಕೋಟಿಗಿಂತ ಹೆಚ್ಚು ಆದಾಯ ಹೊಂದಿರುವವರು ರೂ. 14,806(ಮೇಲ್ತೆರಿಗೆ ಮತ್ತು ಸೇಸ್ ಒಳಗೊಂಡಂತೆ) ಉಳಿತಾಯ ಮಾಡಲಿದ್ದಾರೆ.

2. ತೆರಿಗೆ ರಿಬೇಟ್ ಇಳಿಕೆ

ರೂ. 3.5 ಲಕ್ಷದವರೆಗೆ ಆದಾಯ ಹೊಂದಿರುವ ತೆರಿಗೆದಾರರಿಗೆ ಪ್ರತಿ ವರ್ಷ ಇದ್ದ ತೆರಿಗೆ ರಿಬೇಟ್ ನ್ನು 5,000 ದಿಂದ 2,500ಕ್ಕೆ ಇಳಿಸಲಾಗಿದೆ. ಹಿಂದೆ ಆದಾಯದ ಮಿತಿ 5 ಲಕ್ಷ ಇತ್ತು.

3. ಮೇಲ್ತೆರಿಗೆ

ರೂ. 50 ಲಕ್ಷದಿಂದ 1 ಕೋಟಿ ಆದಾಯದ ಮಿತಿ ಹೊಂದಿರುವ ತೆರಿಗೆದಾರರ ಮೇಲೆ ಶೇ. 10ರಷ್ಟು ಮೇಲ್ತೆರಿಗೆ ವಿಧಿಸಲಾಗುತ್ತದೆ. 1 ಕೋಟಿಗಿಂತ ಹೆಚ್ಚು ಆದಾಯ ಹೊಂದಿರುವ ಶ್ರೀಮಂತರ ಮೇಲೆ ಶೇ. 15ರಷ್ಟು ಮೇಲ್ತೆರಿಗೆ ವಿಧಿಸಲಾಗುತ್ತದೆ.

4. ಬಾಡಿಗೆ ಪಾವತಿ

ಯಾವುದೇ ಒಬ್ಬ ವ್ಯಕ್ತಿ ಅಥವಾ ಹಿಂದು ಅವಿಭಕ್ತ ಕುಟುಂಬ ತಿಂಗಳಿಗೆ ರೂ. 50,000 ಸಾವಿರಕ್ಕೆ ಟಿಡಿಎಸ್ ಶೇ. 5ರಷ್ಟು ಕಡಿತ ಮಾಡಲಾಗುತ್ತದೆ. (ತೆರಿಗೆ ಲೆಕ್ಕಪರಿಶೋಧನೆ ಅಗತ್ಯವಿರುವುದಿಲ್ಲ)

5. ಜಮೀನು ಮತ್ತು ಕಟ್ಟಡ ಸಂಬಂಧಿತ ಗಳಿಕೆ

ಜಮೀನು ಮತ್ತು ಕಟ್ಟಡ ಸಂಬಂಧಿತ ದೀರ್ಘಾವಧಿ ಕ್ಯಾಪಿಟಲ್ ಗಳಿಕೆ ಅವಧಿಯನ್ನು ಮೂರು ವರ್ಷದಿಂದ ಎರಡು ವರ್ಷಗಳಿಗೆ ಇಳಿಸಲಾಗಿದೆ.

6. ಕಾರ್ಪೋರೇಟ್ ತೆರಿಗೆ ದರ ಶೇ. 25ಕ್ಕೆ ಇಳಿಕೆ

2017-18ರ ಸಾಲಿನ ಹಣಕಾಸು ವರ್ಷದಲ್ಲಿ ಕಂಪನಿಗಳ 50 ಕೋಟಿವರೆಗಿನ ವಾರ್ಷಿಕ ವಹಿವಾಟು ಮೇಲಿನ ಕಾರ್ಪೋರೇಟ್ ತೆರಿಗೆ ದರವನ್ನು ಶೇ. 25ಕ್ಕೆ ಇಳಿಸಲಾಗಿದೆ. ಶೇ. 30ರಷ್ಟು ಇರುವ ಸಂಸ್ಥೆಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

7. ಒಂದು ಪುಟದ ತೆರಿಗೆ ರಿಟರ್ನ್ ಫಾರ್ಮ್

ಕೇಂದ್ರ ಸರ್ಕಾರ ತೆರಿಗೆ ರಿಟರ್ನ್ ಅರ್ಜಿಯನ್ನು ಈಗ ಇನ್ನೂ ಸರಳಗೊಳಿಸಿದೆ. ಹೊಸ ತೆರಿಗೆ ರಿಟರ್ನ್ ಫಾರ್ಮ್ ನ್ನು ಪರಿಚಯಿಸಿದೆ. ಈ ಒಂದು ಪುಟದ ತೆರಿಗೆ ರಿಟರ್ನ್ ಫಾರ್ಮ್ ನಲ್ಲಿ 5 ಲಕ್ಷದವರೆಗೆ ಆದಾಯ ಇರುವ ತೆರಿಗೆದಾರರು ತುಂಬಬಹುದು(ಬಿಸಿನೆಸ್ ಆದಾಯ ಹೊರತುಪಡಿಸಿ). ಈ ಕೆಟಗರಿಯಲ್ಲಿಮೊದಲ ಬಾರಿ ರಿಟರ್ನ್ಸ್ ಫೈಲಿಂಗ್ ಮಾಡುವವರು ಸಾಮಾನ್ಯವಾಗಿ ಪರಿಶೀಲನೆಗೆ ಒಳಪಡುವುದಿಲ್ಲ.

8. ತೆರಿಗೆ ಪಾವತಿ ವಿಳಂಬ ಆದಲ್ಲಿ ದಂಡ

2017-18ರಲ್ಲಿ ತೆರಿಗೆ ಪಾವತಿ ಮಾಡುವಲ್ಲಿ ವಿಳಂಬವಾದಲ್ಲಿ(ಡಿಸೆಂಬರ್ 31, 2018) ರೂ. 5,000 ದಂಡ ವಿಧಿಸಲಾಗುತ್ತದೆ. ಡಿಸೆಂಬರ್ 31ರ ನಂತರ ಪಾವತಿಸಿದಲ್ಲಿ ಹತ್ತು ಸಾವಿರ ದಂಡ ಕಟ್ಟಬೇಕಾಗುತ್ತದೆ.

9. ITR ನಲ್ಲಿ ಕೇವಲ 18 ಕಾಲಂ

ಐಟಿಆರ್-1 ಅರ್ಜಿಯಲ್ಲಿ ಈ ಹಿಂದೆ ಇದ್ದ ಅನೇಕ ಅನಗತ್ಯ ಕಾಲಂಗಳನ್ನು 2017-18ನೇ ಸಾಲಿನ ಆರ್ಥಿಕ ವರ್ಷದ ಹೊಸ ಅರ್ಜಿಯಲ್ಲಿ ಕೈಬಿಡಲಾಗಿದ್ದು, ಕೇವಲ 18 ಕಾಲಂ ಮಾತ್ರ ಉಳಿಸಿಕೊಳ್ಳಲಾಗಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ. ಐಟಿಆರ್ ವಿವರ ಸಲ್ಲಿಕೆ ಅರ್ಜಿಯಲ್ಲಿ ಕೆಲವು ಕಾಲಂಗಳನ್ನು ಮಾತ್ರ ಭರ್ತಿ ಮಾಡಬೇಕಾಗುತ್ತದೆ.

10. 80ಸಿ, 80 ಡಿ ಕಾಲಂ

ತೆರಿಗೆ ಕಾಯಿದೆ ಸೆಕ್ಷನ್ 80C, 80D ಅಡಿಯಲ್ಲಿ ಜೀವವಿಮೆ, ಭವಿಷ್ಯನಿಧಿ, ಗೃಹಸಾಲ, ವೈದ್ಯಕೀಯ ವಿಮೆಗಳ ಮೇಲೆ ತೆರಿಗೆ ಕಡಿತ ಇಲ್ಲವೇ ತೆರಿಗೆ ವಿನಾಯಿತಿ ಪಡೆಯಲು ಈ ಮೊದಲಿದ್ದ 80C ಮತ್ತು 80 ಕಾಲಂ ಉಳಿಸಿಕೊಳ್ಳಲಾಗಿದೆ. ಬಿಸಿನೆಸ್ ಆದಾಯ ಹೊಂದಿರದ ಹಿಂದು ಅವಿಭಜಿತ ಕುಟುಂಬ ಮತ್ತು ವ್ಯಕ್ತಿಗಳು ಐಟಿಆರ್1 ಸಹಜ, ಐಟಿಆರ್ 2 ಮತ್ತು 2ಎ ಮತ್ತು ಬಿಸಿನೆಸ್ ಆದಾಯ ಹೊಂದಿರುವವರು ಐಟಿಆರ್-4 ಸುಗಮ ಅರ್ಜಿ ಭರ್ತಿ ಮಾಡಬೇಕಾಗುತ್ತದೆ.

11. ಆಧಾರ್ ಕಡ್ಡಾಯ

ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮತ್ತು ಶಾಶ್ವತ ಖಾತೆ ಸಂಖ್ಯೆಗಾಗಿ(PAN) ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ಇನ್ನುಮುಂದೆ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮತ್ತು ಆಧಾಯ ತೆರಿಗೆ ಪ್ಯಾನ್ ಅರ್ಜಿ ಸಲ್ಲಿಕೆಗೆ 12 ಅಂಕೆಗಳ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದ್ದು, ಬೆರಳಚ್ಚು ಮತ್ತು ಐರಿಸ್ ಸ್ಕ್ಯಾನ್ ನಂತಹ ಬಯೋಮೆಟ್ರಿಕ್ ಮೂಲಕ ಇದು ಬೆಂಬಲಿತವಾಗಿದೆ. ಹಣಕಾಸು ಮಸೂದೆ 2017 ಸೇರಿದಂತೆ ಇನ್ನಿತರ ಪ್ರಮುಖ 40 ತಿದ್ದುಪಡಿಗಳನ್ನು ಸೂಚಿಸಲಾಗಿದೆ.

English summary

10 most important income-tax changes from April 1

With the passage of the Finance Bill on Wednesday, the Lok Sabha has completed the budgetary exercise for 2017-18. The tax proposals in the Budget 2017 have now become law. Below are 10 most important income-tax changes that will affect you april 2017.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC