Englishहिन्दी മലയാളം தமிழ் తెలుగు

ಹೂಡಿಕೆದಾರರಿಗೆ ಸುಲಭ 7 ಟಿಪ್ಸ್ ಗಳು

Written By: Siddu
Subscribe to GoodReturns Kannada

ಸರಳ ಸಲಹೆಗಳನ್ನು ನೀಡುವುದು ಸುಲಭವಲ್ಲ. ಹಾಗೇ ಕೊಟ್ಟ ಸಲಹೆಗಳನ್ನು ಪಾಲಿಸುವುದು ಕೂಡ ಸುಲಭವಲ್ಲ. ಆದರೆ ಹಣ ಸಂಪಾದನೆ ಮತ್ತು ಉಳಿತಾಯದ ಧ್ಯೇಯ ಇರುವವರು ಅನುಸರಿಸಿದರೆ ಉತ್ತಮ ಹಣ ಗಳಿಸುವುದರಲ್ಲಿ ಸಂಶಯವಿಲ್ಲ.

ಹೂಡಿಕೆದಾರರಿಗೆ ವ್ಯವಹಾರ ಹೇಗೆ ಮಾಡಬೇಕು? ಹೆಚ್ಚು ಲಾಭ ಹೇಗೆ ಗಳಿಸುವುದು? ಹೂಡಿಕೆ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಗಳೇನು? ಇತ್ಯಾದಿ ವಿಚಾರಗಳ ಬಗ್ಗೆ ಗೊಂದಲವಿರುತ್ತದೆ. ಹೂಡಿಕೆದಾರರಿಗೆ ಇಲ್ಲಿ ಕೆಲ ಸರಳ ಟಿಪ್ಸ್ ಗಳನ್ನು ನೀಡಲಾಗಿದೆ... ಹೂಡಿಕೆ

ಕಂಡಕಂಡವರ ಮಾತು ಕೇಳಬೇಡಿ

ನಿಮ್ಮ ಸಹೋದರ, ಕಸಿನ್, ನೆರೆಹೊರೆಯವರು ಅಥವಾ ಬ್ರೋಕರ್ ಗಳು ನೀಡುವ ಸಲಹೆಗಳನ್ನು ಅದೇ ಸರಿ ಎಂಬಂತೆ ಪಾಲಿಸಬೇಡಿ. ಹೂಡಿಕೆಯಲ್ಲಿ ತೊಡಗಿರುವ ನಿಮಗೆ ಹೂಡಿಕೆ ಉದ್ದೇಶ ಮತ್ತು ಕಾರಣ ಗೊತ್ತಿರುತ್ತದೆ. ಸ್ವತಂತ್ರವಾಗಿ ಮಾರುಕಟ್ಟೆಯ ಬಗ್ಗೆ ವಿಶ್ಲೇಷಣೆ, ಸಂಶೋಧನೆ ಮಾಡಿ. ಹೂಡಿಕೆದಾರನಾಗಿ ಸ್ವಯಂ ಸಾಮರ್ಥ್ಯ, ಸ್ವಯಂಜ್ಞಾನ ತುಂಬಾ ಅತ್ಯಗತ್ಯವಾಗಿರುವುದರಿಂದ ಮಾರುಕಟ್ಟೆಯ ತಂತ್ರಗಳನ್ನು ಅರಿಯಿರಿ.

ಜಾಣ ನಡೆ ಅಳವಡಿಸಿ

ಷೇರುಪೇಟೆಯಲ್ಲಿ ವ್ಯವಹಾರ ನಡೆಸುತ್ತಿರುವಾಗ ಅನಿರೀಕ್ಷಿತವಾಗಿ ನಷ್ಟ ಸಂಭವಿಸುತ್ತದೆ. ನಷ್ಟ ಅನುಭವಿಸಿದ ಕೂಡಲೇ ಹೂಡಿಕೆಯ ಸಾಹಸ ಬೇಡ. ಆದ ತಪ್ಪನ್ನು ವಿಶ್ಲೇಷಿಸಿ ಮುಂದೆ ಆಗಬಹುದಾದ ನಷ್ಟವನ್ನು ತಪ್ಪಿಸಿ. ಲಾಭದ ಹಾದಿಯಲ್ಲಿರುವಾಗಲೂ ಸಹ ಇದೇ ನಿಯಮ ಅನುಸರಿಸಿ. ಷೇರುಪೇಟೆಯಲ್ಲಿ ಒಂದಿಷ್ಟು ಹಣ ಸಂಪಾದಿಸಿರುವಾಗಲೇ ಷೇರುಪೇಟೆ ದಿಢೀರ್ ಕುಸಿಯಲು ಆರಂಭಿಸಿದರೆ ಲಾಭ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಕೂಡಲೇ ವ್ಯವಹಾರ ನಿಲ್ಲಿಸುವುದರಿಂದ ಲಾಭವನ್ನು ಉಳಿಸಬಹುದು.

ನಷ್ಟದ ಪಾಠ

ಪ್ರತಿಯೊಬ್ಬ ವ್ಯಕ್ತಿ ತಾನು ಮಾಡುವ ತಪ್ಪುಗಳಿಂದ ಕಲಿಯಬೇಕಾಗುತ್ತದೆ. ಜತೆಗೆ ಮಾಡಿದ ತಪ್ಪುಗಳನ್ನು ಮತ್ತೆ ಮತ್ತೆ ಮಾಡಬಾರದು. ಒಂದು ವೇಳೆತಪ್ಪು ನಡೆ/ನಿರ್ಧಾರದಿಂದ ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸುತ್ತಿರುತ್ತೇವೆ. ಆದರೆ ಇಂತಹ ಸಂದರ್ಭಗಳಲ್ಲಿ ಎಲ್ಲಿ ಎಡವಿದ್ದೀವಿ, ಎಡವಲು ಕಾರಣವೇನು ಎನ್ನುವುದನ್ನು ಅರಿತುಕೊಂಡು, ಮತ್ತೆ ಅಂತಹ ತಪ್ಪುಗಳಾಗದಂತೆ ಎಚ್ಚರವಹಿಸಬೇಕು.

ಅತಿ ಆಸೆ ಗತಿ ಗೇಡು

ನಾವು ಮಾಡುವ ಹೂಡಿಕೆ ಮೇಲೆ ನಂಬಿಕೆ ಇಲ್ಲದಿದ್ದಾಗ ಹೂಡಿಕೆ ಮಾಡಲು ಹೋಗಬಾರದು. ನಂಬಿಕೆ ಇಲ್ಲದಿರುವ ಷೇರುಗಳಲ್ಲಿ ಹಣ ಹೂಡುವುದೇನೊ ಸುಲಭ. ತುರ್ತು ಅಗತ್ಯಗಳಿಗಾಗಿ ಇಂತಹ ಸಾಹಸಕ್ಕೆ ಕೆಲವರು ಕೈಹಾಕುತ್ತಾರೆ. ಷೇರು ಏರಿಕೆ ಅಥವಾ ಇಳಿಕೆ ಷೇರಪೇಟೆಯನ್ನು ಅವಲಂಬಿಸಿರುತ್ತದೆ. ಬದಲಾಗಿ ಕಂಪನಿಯಲ್ಲಿನ ಹಣಕಾಸು ಪರಿಸ್ಥಿತಿಯಲ್ಲಿನ ಬದಲಾವಣೆಯಿಂದಲ್ಲ ಎನ್ನುವುದು ಗೊತ್ತಿರಬೇಕು. ನೀವು ಹೂಡುವ ಬಂಡವಾಳ ಉತ್ತಮ ಲಾಭ ನೀಡಬೇಕಾದರೆ ದೀರ್ಘಾವಧಿಯ ಉತ್ತಮ ಷೇರುಗಳಲ್ಲಿ ಹೂಡಿಕೆ ಮಾಡುವ ಆಯ್ಕೆ ನಿಮ್ಮದಾಗಿರಲಿ.

ಸಾಲ ಬೇಡ

ಸಾಲ ಪಡೆದುಕೊಂಡು ಹೂಡಿಕೆ ಮಾಡುವುದು ತುಂಬಾ ಅಪಾಯಕಾರಿ. ಕೆಲ ಸಂದರ್ಭದಲ್ಲಿ ಕೈ ಹಿಡಿದರೆ, ಹೆಚ್ಚಿನ ಸಂದರ್ಭದಲ್ಲಿ ನಿಮ್ಮ ಯೋಜನೆ ಉಲ್ಟಾ ಆಗುವ ಸಾಧ್ಯೆ ಇರುತ್ತದೆ. ಎಲ್ಲ ಸಮಯದಲ್ಲೂ ಯಶಸ್ಸು ಸಿಗಬೇಕು ಅಂತೆನಿಲ್ಲ. ಆದರೆ ನಷ್ಟ ಮಾಡಿಕೊಳ್ಳಬಾರದು ಅಲ್ವೆ? ಮಾರುಕಟ್ಟೆಯಲ್ಲಿನ ಏರಿಳಿತಗಳು ಕೆಲ ಬಾರಿ ದೊಡ್ಡ ಮಟ್ಟದ ನಷ್ಟಕ್ಕೆ, ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.

ಇತಿಮಿತಿ ಇರಲಿ

ಹೆಚ್ಚೆಚ್ಚು ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಉತ್ತಮವಾದ ಉನ್ನತ ದರ್ಜೆಯ ಕೆಲ ಕಂಪನಿಗಳಲ್ಲಿ ಹೂಡಿಕೆ ಮಾಡಿ. ಒಂದೇ ಕ್ಷೇತ್ರದ ಕಂಪನಿಗಳಲ್ಲಷ್ಟೇ ಹೂಡಿಕೆ ಬೇಡ. ಏಕೆಂದರೆ ಒಂದು ಕಂಪನಿಯ ಷೇರು ನಷ್ಟ ಅನುಭವಿಸಿದರೆ ಇನ್ನೊಂದು ಕಂಪನಿ ಕೈ ಹಿಡಿಯಬಹುದು. ಏನೋ ಒಂದು ಅಂದಾಜಿನಲ್ಲಿ ಹೂಡಿಕೆ ಮಾಡಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಹೀಗಾಗಿ ನಿಖರತೆ ಇರಲಿ.

ಪುಸ್ತಕ ಓದುವ ಹವ್ಯಾಸ

ಪೇಟೆಯಲ್ಲಿ ಹೂಡಿಕೆ ಕುರಿತಾಗಿ ಸಾಕಷ್ಟು ಪುಸ್ತಕಗಳಿವೆ. ಅಂತವುಗಳನ್ನು ಓದಿ ಜ್ಞಾನ ಸಂಪಾದಿಸಿಕೊಳ್ಳಿ. ವಾರೆನ್ ಬಫೆಟ್, ಪೀಟರ್ ಥೇಲ್, ರಿಚರ್ಡ್ ಬ್ರಾನ್ಸನ್, ರಾಕೇಶ್ ಜುಂಜುನ್ವಾಲಾ ಹೀಗೆ ಕೆಲ ಖ್ಯಾತರ ಸಲಹೆಗಳನ್ನು ಪಾಲಿಸಿ. ಝೀರೋ ಟು ಒನ್ ನಂತಹ ಪುಸ್ತಕಗಳನ್ನು ಓದಿ. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

English summary

Simple 7 investment tips for high returns

It is not easy to give simple advice. It is ever more difficult to follow them. Simply because if you do follow them and make money, your main assumption in life ‘what is complicated is good’ is shattered.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC