Englishहिन्दी മലയാളം தமிழ் తెలుగు

2018ರಲ್ಲಿ ಉತ್ತಮ ಉದ್ಯೋಗ ಪಡೆಯಬೇಕೆ? ಈ ಕಾರ್ಯತಂತ್ರ ತಪ್ಪದೆ ಅಳವಡಿಸಿ

Written By: Siddu
Subscribe to GoodReturns Kannada

2017 ಭಾರತೀಯ ಸಂಸ್ಥೆಗಳಲ್ಲಿ ನಿರುದ್ಯೋಗದ ಬೆಳವಣಿಗೆಯ ವರ್ಷವಾಗಿತ್ತು. ಬಹುತೇಕ ಉದ್ಯೋಗದಾತರು ಸಂಸ್ಥೆಯ ಬೆಳವಣಿಗೆಗೆ ನೇಮಕ ಅಥವಾ ಬದಲಿ ನೇಮಕದ ವಿಷಯ ಬಂದಾಗ ಇನ್ನೂ ಕಾದು ನೋಡಲು ನಿರ್ಧರಿಸಿದರು. ಜತೆಗೆ ಅನಾಣ್ಯೀಕರಣ ಮತ್ತು ಜಿಎಸ್ಟಿ (GST) ಜಾರಿಯಿಂದ ಏನು ಪರಿಣಾಮಗಳು ಉಂಟಾಗಬಹುದು ಎಂಬುದನ್ನು ಕಂಪನಿಗಳು ಕಾದು ನೋಡುವಂತಾಯಿತು.

ಮ್ಯಾನ್ ಪವರ್ ಗ್ರೂಪ್ ನಡೆಸಿದ ಸಮೀಕ್ಷೆ ಪ್ರಕಾರ ಭಾರತದ ಉದ್ಯೋಗ ನೇಮಕಾತಿಯಲ್ಲಿ ಇತ್ತೀಚಿನ ಇತಿಹಾಸದಲ್ಲಿ ಅತಿ ಕೆಟ್ಟ ವರ್ಷವಾಗಿದೆ. ಜನರು ಉದ್ಯೋಗ ಯಾಕೆ ಕಳೆದುಕೊಳ್ಳುತ್ತಾರೆ? ಇಲ್ಲಿವೆ ಪ್ರಮುಖ 10 ಕಾರಣ

ನೀವು ಅಥವಾ ನಿಮ್ಮ ಸ್ನೇಹಿತರೇನಾದರೂ ಕೆಲಸ ಹುಡುಕುತ್ತಿದ್ದರೆ, ಆ ನೋವಿನ ಅರಿವಾಗಿರುತ್ತದೆ. 2018ರ ಜಾಬ್ ಟ್ರೆಂಡ್ ಮತ್ತು ಅನಿಶ್ಚಿತ ಭವಿಷ್ಯದಲ್ಲಿ ಜಯಗಳಿಸಲು ಏನೇನು ತಂತ್ರವನ್ನು ಪಾಲಿಸಬೇಕು ಎಂದು ನೋಡೋಣ.

1. ತಂತ್ರಜ್ಞಾನ ಮಾರುಕಟ್ಟೆ ನಡೆಸಲಿದೆ

ಪ್ರಪಂಚ ತಾಂತ್ರಿಕ ಯುಗದತ್ತ ಮುನ್ನಡೆಯುತ್ತಿದ್ದು, ಪ್ರತಿಯೊಂದು ರಂಗವನ್ನು ತಂತ್ರಜ್ಞಾನವೇ ಆವರಿಸಿಕೊಳ್ಳುತ್ತಿದೆ. ತಂತ್ರಜ್ಞಾನ ಕೌಶಲ್ಯವಿಲ್ಲದವರು ಉದ್ಯೋಗ ಪಡೆಯುವುದು ಕಷ್ಟ ಎಂಬಂತಾಗಿದೆ.
ಐಟಿ/ಐಟಿಇಎಸ್ ಉದ್ಯಮವು ಬಹಳಷ್ಟು ಉದ್ಯೋಗ ಮಾರುಕಟ್ಟೆಯ ಸವಾಲುಗಳೊಂದಿಗೆ ಹೋರಾಡುತ್ತಿದೆ. ಆದರೂ ಮುಂಬರುವ ವರ್ಷದಲ್ಲಿ ತಾಂತ್ರಿಕವಲ್ಲದ ಕಂಪನಿಗಳು ಮತ್ತು ಹೆಚ್ಚು ಪರಿಣಾಮಕಾರಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕೈಗಾರಿಕೆಗಳು ತಾಂತ್ರಿಕ ನೇಮಕಾತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ನೋಡುತ್ತೇವೆ.
ಟೆಕ್ನಾಲಜಿ ಪ್ರೊಫೆಷನಲ್ ಆಗಿ ನೀವು ಬೆಳೆಯಬೇಕೆಂದಿದ್ದರೆ, ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಮತ್ತು ಸಂಬಂಧಿತ ಕೌಶಲ್ಯಗಳನ್ನು ಕಲಿಯಲು ಸಿದ್ಧರಿರಬೇಕು. ಆಗ ಹಲವಾರು ಬೆಳೆವಣಿಗೆಯ ಮಾರ್ಗಗಳು ಹುಟ್ಟಿಕೊಳ್ಳುತ್ತವೆ. ನೀವು ಟೆಕ್ ಪ್ರೊಫೆಷನಲ್ ಆಗಿರದಿದ್ದರೆ, ನಿಮ್ಮ ಕೆಲಸದ ಸ್ಥಳದಲ್ಲಿ ಆಗುತ್ತಿರುವ ವೇಗದ ಗತಿಯ ಬದಲಾವಣೆಗಳಿಗೆ ಆರಾಮದಾಯಕವಾಗಿ ಒಗ್ಗಿಕೊಂಡು ಎಲ್ಲಾ ಹೊಸ ವಿಷಯಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಲು ಸಿದ್ಧರಿರಬೇಕು.  ಬೆಂಗಳೂರೇ ಹೆಚ್ಚು ಪೀಡಿತ! ದೇಶದ 7 ದೈತ್ಯ ಕಂಪನಿಗಳು ಇನ್ನುಮುಂದೆ ಉದ್ಯೋಗ ನೀಡುತ್ತಿಲ್ಲ!!

2. ಕೌಶಲ್ಯಗಳ ಮೌಲ್ಯ ಬದಲಾಗಬಹುದು

2018ರಲ್ಲಿ ಉದ್ಯೋಗದಾತರು ನಿಮ್ಮಲ್ಲಿನ ಕೌಶಲ್ಯಗಳಿಗೆ ಹೇಗೆ ಬೆಲೆ ಕಟ್ಟುತ್ತಾರೆ ಎಂಬ ತ್ವರಿತ ಕ್ರಮದಲ್ಲಿನ ಬದಲಾವಣೆಯನ್ನು ನೋಡುತ್ತೀರಿ. ಪ್ರತಿ ಉದ್ಯಮವು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಆಟೋಮೇಷನ್, ಡೇಟಾ-ಪ್ರಸರಣ ಮತ್ತು ಬದಲಾಗುವ ಉತ್ಪನ್ನಗಳಿಂದ ಪ್ರಭಾವಿತವಾಗಿದೆ. ಹೊಸ ಕೌಶಲ್ಯಗಳು ಅವಶ್ಯಕವಾಗುತ್ತವೆ ಮತ್ತು ಅವುಗಳ ಮೌಲ್ಯ ಅಧಿಕವಾಗುತ್ತವೆ. ಜೊತೆಗೆ ಇತರೆ ಕೌಶಲ್ಯಗಳು ಅನಗತ್ಯವಾಗುತ್ತವೆ.
ಫಿಕ್ಕಿ-ನಾಸ್ಕಾಮ್ ವರದಿಯಂತೆ 2022ರ ವೇಳೆಗೆ, 9% ಭಾರತೀಯರು ಇಂದು ಅಸ್ತಿತ್ವದಲ್ಲಿರದ ಉದ್ಯೋಗಗಳಲ್ಲಿದ್ದಾರೆ. ಕಲಿಕೆಯ ನಿಲುವು ಗಂಭೀರವಾಗುತ್ತದೆ. ನಿಮ್ಮ ಕೊಡುಗೆಯನ್ನು ಹೆಚ್ಚಾಗಿಸಲು, ಕೌಶಲ್ಯಗಳನ್ನು ಕಲಿಯಲು ಬೇಕಾದ ಕಲಿಕೆಯ ಹೊಸ ಮಾರ್ಗಗಳನ್ನು ನೀವು ಎಷ್ಟು ಉತ್ಸಾಹದಿಂದ ಅಳವಡಿಸಿಕೊಳ್ಳುತ್ತೀರೆಂದು ನೋಡಲು ನಿಮ್ಮ ಉದ್ಯೋಗದಾತರು ಬಯಸುತ್ತಾರೆ. ಹೆಚ್ಚಿನ ಸಂಬಳ ಮತ್ತು ಬೋನಸ್ ಗಳಿಗೆ ಈ ಕೌಶಲ್ಯಗಳಲ್ಲಿ ಪರಿಣಿತಿಯನ್ನು ಪಡೆಯಿರಿ. ಭಾರತದಲ್ಲಿ ಅತಿಹೆಚ್ಚು ಸಂಬಳ ನೀಡುವ ಉದ್ಯೋಗಗಳು ಯಾವುವು ಗೊತ್ತೆ?

3. ಕಾರ್ಯಸ್ಥಳದ ಹೊಂದಿಕೊಳ್ಳುವಿಕೆಯಲ್ಲಿ ಹೆಚ್ಚಳ

ನೀವು ಹೇಗೆ ಕೆಲಸ ಮಾಡುತ್ತೀರಿ ಎಂಬುದರ ಕುರಿತು ನಿಮ್ಮ ಉದ್ಯೋಗದಾತರು ಹೆಚ್ಚು ಮೃದುಧೋರಣೆ ಹೊಂದಿರುತ್ತಾರೆ. ಮನೆಯಿಂದ ಕೆಲಸ, ಕಡಿಮೆ ಇಂಟರ್ ಸಿಟಿ ಪ್ರಯಾಣ ಮತ್ತು ಕ್ರಿಯೇಟಿವ್ ರೀಟೆಂಷನ್ ಪಾಲಿಸಿಗಳು ಕಂಪನಿಯ ಮೇಲಿನ ಒತ್ತಡವನ್ನು ಕಡಿಮೆಯಾಗಿಸಿ ನಿಮ್ಮನ್ನು ಸಕ್ರಿಯ ಮತ್ತು ಸಂತೋಷವಾಗಿಡಲು ಸಹಾಯ ಮಾಡುತ್ತವೆ.
ಊಟದ ಸಮಯದಲ್ಲಿ ನಿಮ್ಮ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುವುದು ಈ ತರಹದ ಕೆಲವು ವೈಯಕ್ತಿಕ ಸವಾಲುಗಲಿದ್ದರೆ, ನಿಮ್ಮ ಮೇಲಧಿಕಾರಿಯೊಂದಿಗೆ ಮಾತುಕತೆ ನಡೆಸಿ ಪರ್ಯಾಯ ಕೆಲಸದ ಸಮಯವನ್ನು ನಿಗದಿಪಡಿಸಿಕೊಳ್ಳಿ ಅಥವಾ ಪ್ರೊ-ರಾಟಾ ಬೇಸಿಸ್ ಸಂಬಳವನ್ನು ಪಡೆಯಿರಿ. ಆದರೆ ಒಪ್ಪಿಕೊಂಡ ಜವಾಬ್ದಾರಿಯನ್ನು ಪೂರೈಸಲು ಮರೆಯದಿರಿ. ಅತ್ತ್ಯುತ್ತಮ ಉದ್ಯೋಗಿಯಾಗುವುದರಿಂದ ಫ್ಲೆಕ್ಸಿಬಿಲಿಟಿಯು ಅಧಿಕವಾಗಬಹುದು.

4. ಅನುಭವ ಇಲ್ಲದಿದ್ದರೂ ಉತ್ತಮ ಸಂಭಾವನೆ

ಯುವ ಉದೋಗಿಗಳಿಗಿದು ಖುಷಿಯ ವಿಷಯ. ಆದರೆ ಅನುಭವಿಗಳಿಗೆ ಬೇಸರ. ಇತ್ತೀಚಿನ ಕ್ರಮದ ಪ್ರಕಾರ ಸಂಬಳದ ಹೆಚ್ಚಳ ಮತ್ತು ಅನುಭವಕ್ಕೂ ಯಾವುದೇ ಸಂಭಂದವಿಲ್ಲ. ಹಿಂದೆ ಮಾಡಿದ ಕೆಲಸಕ್ಕೆ ಭವಿಷ್ಯದಲ್ಲಿ ಯಾವುದೇ ಮಾನ್ಯತೆಯಿರುವುದಿಲ್ಲ ಎಂದು ಕಪನಿಗಳು ಈಗಾಗಲೇ ಅರಿತಿವೆ. ಆದ್ದರಿಂದ ಅನುಭವಕ್ಕೂ ಸಂಭಾವನೆಗೂ ಯಾವುದೇ ಸಂಬಂಧವಿರುವುದಿಲ್ಲ.
ನಿಮ್ಮ ಬೋನಸ್ ಮತ್ತು ಸಂಬಳ ಹೆಚ್ಚಳದ 65% ನೀವು ಕಂಪನಿಯಲ್ಲಿ ಎಷ್ಟು ಸಮಯದಿಂದ ಇದ್ದೀರಿ ಎಂಬುದನ್ನು ಅವಲಂಬಿಸದೆ ಕಂಪನಿ ಮತ್ತು ವೈಯಕ್ತಿಕ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಉತ್ತಮ ಭವಿಷ್ಯವಿರುವ ಕಂಪನಿಗಳನ್ನು ಆಯ್ಕೆ ಮಾಡಿ. ನೀವು ಯಾವುದೇ ವಯಸ್ಸಿನವರದಿದ್ದರೂ ವೈಯಕ್ತಿಕ ಮತ್ತು ಕಂಪನಿಯ ಗುರಿ ತಲುಪಿ ಉತ್ತಮ ವಾರ್ಷಿಕ ಹೆಚ್ಚಳವನ್ನು ಪಡೆಯಿರಿ.

5. ಕ್ಯಾಂಪಸ್ ಹೈರಿಂಗ್ ಮತ್ತು ಭವಿಷ್ಯದ ಬಗ್ಗೆ ಗಮನ

ಕ್ಯಾಂಪಸ್ ಹೈರಿಂಗ್ ಹೆಚ್ಚು ನೇಮಕಾತಿ ಮತ್ತು ಉತ್ತಮ ವೇತನ ಒದಗಿಸುತ್ತದೆ. ಸೇವೆಗಳು, ಗ್ರಾಹಕರು, ರಿಟೇಲ್ ಮತ್ತು ಇನ್ಫ್ರಾಸ್ಟ್ರಕ್ಚರ್ ಕಾರ್ಯಕೇತ್ರಗಳು ಹೊಸ ಯೋಜನೆಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ ಮತ್ತು ಕ್ಯಾಂಪಸ್ ಹೈರಿಂಗ್ ತ್ವರಿತವಾಗಿ ವಿಸ್ತರಣೆಯಾಗಲು ನೆರವಾಗುತ್ತಿದೆ. ನೀವು 2018ರಲ್ಲಿ ಪದವೀಧರರಾಗಿಲ್ಲದಿದ್ದರೆ, ನಿಮ್ಮ ಇಂಗ್ಲಿಷ್ ಮತ್ತು ಗಣಿತ ವಿಷಯಗಳ ಮೇಲೆ ಹೆಚ್ಚಿನ ಗಮನ ಹರಿಸಿ. ಏಕೆಂದರೆ ಕ್ಯಾಂಪಸ್ ಚಟುವಟಿಕೆಗಳಲ್ಲಿ ಚೆನ್ನಾಗಿ ಮಾತನಾಡುವ, ಬರೆಯುವ, ತಂತ್ರಜ್ಞಾನ ಮತ್ತು ಡೇಟಾದ ಬಗ್ಗೆ ಮಾಹಿತಿ ಇರುವ, ಹೊಸ ವಿಷಯಗಳನ್ನು ಕಲಿಯಲು ಇಚ್ಛೆ ಇರುವುವರಿಗೆ ಬಹಳ ಸಹಾಯ ಮಾಡುತ್ತದೆ.

6. ನಿಮ್ಮ ಕೆಲಸವನ್ನು ಉಳಿಸಿಕೊಳ್ಳುತ್ತೀರಾ?

ಉದ್ಯೋಗದ ಸುರಕ್ಷತೆಯು ನಿಮ್ಮ ಕಾಳಜಿಯಾಗಿದ್ದರೆ, ನಿಮ್ಮ ಕಾರ್ಯಕೇತ್ರದಲ್ಲಿ ಪ್ರಮುಖ ವ್ಯಕ್ತಿಯಾಗಬೇಕು. ಹೆಚ್ಚು ಜನರ ಅಗತ್ಯವಿಲ್ಲದೇ ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಪ್ರಕ್ರಿಯೆಗಳೊಂದಿಗೆ ನೀವು ವಿಶ್ವಾಸಾರ್ಹವಾಗಿ ಫಲಿತಾಂಶಗಳನ್ನು ನೀಡುತ್ತೀರಾ? ಹೊಸ ಕಾರ್ಯಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಇತರ ತಂಡಗಳಲ್ಲಿ ಹೊರೆ ಮತ್ತು ಮ್ಯಾನ್ ಪವರನ್ನು ಕಡಿಮೆ ಮಾಡುತ್ತಿರುವಿರಾ? ತಂಡದಲ್ಲಿ ಒಬ್ಬ ಉತ್ತಮ ಉದ್ಯೋಗಿಯಾಗಿ ಬೇರೆ ತಂಡಗಳಿಗೂ ಸಹಾಯ ಮಾಡುತ್ತಾ ಕೊಡುಗೆ ನೀಡುತ್ತಿದ್ದೀರಾ? ಹಾಗಾದರೆ 2018ರಲ್ಲಿ ನಿಮ್ಮ ಕೆಲಸ ಸುರಕ್ಷಿತವಾಗಿರುತ್ತದೆ.

7. ಹೈಪರ್-ಲೋಕಲ್ ಉದ್ಯೋಗಗಳಿಗೆ ಕೆಲಸ

ರಿಮೋಟ್ ಕೆಲಸಗಳನ್ನು ಹೊರತುಪಡಿಸಿ, ಕಂಪನಿಗಳು ಸ್ಥಳೀಯರಿಗೆ (ಹೈಪರ್-ಲೋಕಲ್) ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತವೆ. 2017ರಲ್ಲಿ ಸಂಸ್ಥೆಯ ನಿರ್ವಾಹಕರು ವೆಚ್ಚವನ್ನು ಕಡಿಮೆ ಮಾಡಲು ರಾತ್ರೋರಾತ್ರಿ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿದರು. 2018ರಲ್ಲಿ ಹೊಸ ಪ್ರೊಜೆಕ್ಟ್ ಗಳಿಗೆ ತ್ವರಿತವಾಗಿ ಸ್ಥಳೀಯರನ್ನು ಹೈರ್ ಮಾಡಲಾಗುತ್ತದೆ. ಹತ್ತಿರದಲ್ಲೇ ನೆಲೆಸಿದ್ದರೆ ಸಂದರ್ಶನ ಮಾಡಲೂ ಸುಲಭ. ಹೈರಿಂಗ್ ಟೈಮ್ ಮತ್ತು ರಿಲೋಕೇಷನ್ ವೆಚ್ಚವೂ ಕಡಿಮೆಯಾಗುತ್ತದೆ.

8. ಕಠಿಣವಾದ ಪರಿಶೀಲನೆ

ನೇಮಕಾತಿಗೆ ತಗಲುವ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಕಂಪನಿಗಳು ಬಹಳ ಅಪಾಯದ ಸಾಹಸಕ್ಕಿಳಿಯುತ್ತಿವೆ. ಆದ್ದರಿಂದ ಕೆಲಸ ಕೊಡುವುದಕ್ಕಿಂತ ಮುಂಚೆ ನಿಮ್ಮ ಕಠಿಣ ತಪಾಸಣೆ ಮತ್ತು ಪರಿಶೀಲನೆ ನಡೆಯಬಹುದು. ಇದರಲ್ಲಿ ಸೋಶಿಯಲ್ ಮಿಡಿಯಾದಲ್ಲಿನ ಉಪಸ್ಥಿತಿ ಮೊದಲನೇ ಹಂತ. ಹೆಸರನ್ನು ಗೂಗಲ್ ಮಾಡಿ ಏನು ಮಾಹಿತಿ ಸಿಗಬಹುದೆಂದು ನೋಡಬಹುದು. ಉತ್ತಮವಾದ ಲಿಂಕ್ಡ್ಇನ್ ಪ್ರೊಫೈಲ್ ರೂಪಿಸಿ. ನಿಮ್ಮ ಬಗ್ಗೆ ನಕರಾತ್ಮಕ ಭಾವನೆ ತರುವ ಯಾವುದೇ ಮಾಹಿತಿಯನ್ನು ಫೇಸ್ಬುಕ್ ಅಥವಾ ಇತರೆ ಸೋಷಿಯಲ್ ಮೀಡಿಯಾಗಳಿಂದ ತೆಗೆದು ಹಾಕಿ. ತಾಂತ್ರಿಕ ಮತ್ತು ಸೈಕೋಮೆಟ್ರಿಕ್ ಪರೀಕ್ಷೆಗೆ ಸಿದ್ಧರಾಗಿರಿ. ಮಾಜಿ ಉದ್ಯೋಗದಾತರು ಮತ್ತು ಸಹೋದ್ಯೋಗಿಗಳನ್ನು ಸಂಪರ್ಕಿಸುವ ಸಾಧ್ಯತೆ ಇರುತ್ತದೆ.

9. 6 ಸೆಕೆಂಡುಗಳು/60 ಸೆಕೆಂಡುಗಳ ಹೈರಿಂಗ್

ಕಂಪನಿಗಳ ಹತ್ತಿರ ಬಹಳ ಕಡಿಮೆ ಸಮಯವಿರುತ್ತದೆ ಮತ್ತು ಮೆನೇಜರ್ ಗಳು ನಿಮ್ಮ ರೆಸ್ಯೂಮನ್ನು ಕೇವಲ 6 ಸೆಕೆಂಡ್ ಗಳಲ್ಲಿ ಓದಿ, ಮೊದಲ 60 ನಿಮಿಷಗಳಲ್ಲಿ ಇಂಟರ್ವ್ಯೂ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳಬಹುದು. ಆದ್ದರಿಂದ ಒಳ್ಳೆಯ ಫಲಿತಾಂಶಕ್ಕಾಗಿ ಉತ್ತಮ ರೆಸ್ಯೂಮ್ ಬರೆಯಲು ಖರ್ಚು ಮಾಡಿ.

10. ರೆಸ್ಯೂಮ್ ಉತ್ತಮವಾಗಿರಲಿ

ಓದಲು ಸುಲಭವಾಗುವಂತಹ ಫಾರ್ಮ್ಯಾಟ್, ಮುಖ್ಯವಾದ ಅಂಶಗಳನ್ನು ಸರಿಯಾಗಿ ಕಾಣುವಂತೆ ಮಾಡಿ. ಸಂಖ್ಯೆಗಳೊಂದಿಗೆ ವಾಕ್ಯಗಳನ್ನು ಪಟ್ಟಿ ಮಾಡಿರಿ. ಪ್ರಮುಖವಾದ ಕೌಶಲ್ಯಗಳು ಮತ್ತು ಸಾಧನೆಗಳಲ್ಲೂ ಮೇಲಿನ ಭಾಗದಲ್ಲಿ ನಮೂದಿಸಿ ಮತ್ತು ಈ ರೆಸ್ಯೂಮ್ ತಯಾರಿಸುವಾಗ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಡಿ.
ಭಾರತದ ಪ್ರೊಫೆಷನಲ್ ರೆಸ್ಯೂಮ್ ರೈಟಿಂಗ್ ಸರ್ವಿಸ್ ಗಳ ಸಹಾಯದಿಂದ ಅತ್ತ್ಯುತ್ತಮ ರೆಸ್ಯೂಮ್ ತಯಾರಿಸಿಕೊಳ್ಳಿ.
ಇಂಟರ್ವ್ಯೂ ಸಮಯದಲ್ಲಿ ನಿಮ್ಮ ಉಡುಗೆ ತೊಡುಗೆ, ಹೇಗೆ ಕಾಣುತ್ತೀದ್ದೀರಿ, ಸಮಯಕ್ಕೆ ಸ್ವಲ್ಪ ಮೊದಲೇ ಇಂಟರ್ವ್ಯೂ ಸ್ಥಳ ತಲುಪಿ, ಮೊದಲ ಕೆಲವು ಪ್ರಶ್ನೆಗಳನ್ನು ಜಾಗರೂಕತೆಯಿಂದ ಕೇಳಿ, ಮುಂಚಿತವಾಗಿ ಚುರುಕಾದ ಉತ್ತರಗಳನ್ನು ಸಿದ್ಧಪಡಿಸಿ ಮತ್ತು ಪ್ರತಿಕ್ರಿಯಿಸಿ. ಈ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟು ಮುಂದುವರೆಯುವುದರಿಂದ ಸಂದರ್ಶನದಲ್ಲಿ ಯಶಸ್ಸು ಸಿಗುವುದು ಖಂಡಿತ.

Read more about: job, layoffs, employment, finance news, savings
English summary

These 9 strategies can help you retain or find a job in 2018

A survey by Manpower Group measuring hiring outlook for India reported the worst year in recent history. If you or your friends were looking for a job, this was a harrowing time. Let’s look at the job trends for 2018 and your strategy for dealing with an uncertain future.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns