Englishहिन्दी മലയാളം தமிழ் తెలుగు

ಜನರು ಉದ್ಯೋಗ ಯಾಕೆ ಕಳೆದುಕೊಳ್ಳುತ್ತಾರೆ? ಇಲ್ಲಿವೆ ಪ್ರಮುಖ 10 ಕಾರಣ

Written By: Siddu
Subscribe to GoodReturns Kannada

ದೇಶದಲ್ಲಿ ಕೋಟ್ಯಾಂತರ ಜನ ನಿರುದ್ಯೋಗಿಗಳಿದ್ದಾರೆ. ಕೆಲವರು ಕೆಲಸ ಹುಡುಕುತ್ತಿದ್ದರೆ, ಕೆಲವರು ಅರೆ ನಿರುದ್ಯೋಗಿಗಳಿದ್ದಾರೆ. ತಮ್ಮ ಶಿಕ್ಷಣ, ತರಬೇತಿ, ಅನುಭವಕ್ಕೆ ಸರಿಹೊಂದದ ಕೆಲಸದಿಂದಾಗಿ ಕಡಿಮೆ ಗಂಟೆ ಕೆಲಸ ಮಾಡುವವರಿದ್ದಾರೆ. ಇನ್ನೂ ಹಲವರಿಗೆ ಮಾಡುವ ಕೆಲಸದಲ್ಲಿ ನೆಮ್ಮದಿ, ತೃಪ್ತಿಯಿಲ್ಲ.

ಪ್ರಸ್ತುತ ದಿನಗಳಲ್ಲಿ ಲಾಬ್ ಲಾಸ್, ಕೆಲಸದಿಂದ ವಜಾ ಮಾಡುವ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯುತ್ತಿವೆ. ಈಗಾಗಲೇ ಐಟಿ, ಬಿಟಿ, ಇನ್ನಿತರ ರಂಗದ ಸಾವಿರಾರು ನೌಕರರು ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?

ಹಾಗಿದ್ದರೆ ಉದ್ಯೋಗ ಕಳೆದುಕೊಳ್ಳಲು ಕಾರಣಗಳೇನು ಇದರಲ್ಲಿ ಕಂಪನಿ ಮತ್ತು ಉದ್ಯೋಗಿಗಳ ಪಾತ್ರಗಳೇನು ಎಂಬುದನ್ನು ನೋಡೋಣ...

1. ಕಾಲಕ್ಕೆ ತಕ್ಕಂತೆ ಬದಲಾವಣೆ

ಬದಲಾವಣೆ ಜಗದ ನಿಯಮ. 'ವೇಗದ ಬದಲಾವಣೆ' ಎನ್ನುವುದು ಹೊಸ ಟ್ರೆಂಡ್. ಬದಲಾವಣೆ, ಅಭಿವೃದ್ಧಿ ಎನ್ನುವುದು ಸದಾ ಹರಿಯುವ ನೀರಿನಂತೆ ಚಲನಶೀಲ.
ಕಳೆದ ಐದು ವರ್ಷಗಳಲ್ಲಿ ನೀವು ಪ್ರಸ್ತುತ ಕೌಶಲ್ಯಗಳನ್ನು ಅಥವಾ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ನಿಮ್ಮ ಸಹದ್ಯೋಗಿಗಳಿಗಿಂತಲೂ ತುಂಬಾ ಹಿಂದಿದ್ದಿರಿ ಎಂದರ್ಥ. ಪ್ರತಿಯೊಂದು ಸಂಸ್ಥೆಯೂ ತನ್ನ ಉದ್ಯೋಗಿಗಳು ಕಾಲಕ್ಕೆ ತಕ್ಕಂತೆ ಹೊಸ ಕೌಶಲ್ಯಗಳನ್ನು ಕಲಿತುಕೊಂಡು ಬದಲಾಗುತ್ತಿರಬೇಕು ಎನ್ನುತ್ತವೆ. ಇಲ್ಲದಿದ್ದರೆ ತಾಂತ್ರಿಕಯುಗದಲ್ಲಿ ಕೆಲಸ ಕಳೆದುಕೊಳ್ಳುವುದು ಖಚಿತ.

2. ಉತ್ತಮ ಸಂಬಂಧ ಕೌಶಲ್ಯ

ಉದ್ಯೋಗಿಗಳಲ್ಲಿನ ಕಳಪೆ ಸ್ವಯಂಜಾಗೃತಿ, ಸ್ವಯಂ ಕೇಂದ್ರಿತ ವರ್ತನೆ ಇತರರೊಂದಿಗೆ ಕೆಲಸ ಮಾಡುವಾಗ ಕೊರತೆಯಾಗಿ ಕಾಡುತ್ತದೆ. ವೃತ್ತಿಪರರಾಗಿ ಎಷ್ಟೇ ಸಮರ್ಥರಾಗಿದ್ದರೂ ಸಹದ್ಯೋಗಿಗಳೊಂದಿಗೆ ಉತ್ತಮ ಬಾಂದವ್ಯಗಳಿಲ್ಲದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ನಿಮ್ಮಲ್ಲಿನ ಕಳಪೆ ಸಂಬಂಧದ ಕೌಶಲ್ಯಗಳು ಮಾರಕವಾಗಬಲ್ಲವು. ಅದಕ್ಕೆ ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವುದು.

3. ನೈತಿಕ ವೈಫಲ್ಯ

ಪ್ರತಿಯೊಬ್ಬ ವ್ಯಕ್ತಿಯ ನೈತಿಕ ಮೌಲ್ಯವೆನ್ನುವುದು ತುಂಬಾ ಪ್ರಮುಖ. ನೈತಿಕವಾಗಿ ವಿಫಲರಾದರೆ ವೃತ್ತಿಪರರಾಗಿ ಇಲ್ಲವೆ ಸಾಮಾಜಿಕವಾಗಿ ಬದುಕುವುದು ಕಷ್ಟವಾಗಬಹುದು. ಕೆಲ ಉತ್ತಮ ದಕ್ಷ ಕೆಲಸಗಾರರು ನೈತಿಕ ಅದಪತನದಿಂದಾಗಿ ಕೆಲವೇ ದಿನಗಳಲ್ಲಿ ಮೂರ್ಖರಾಗುವುದುಂಟು.

4. ಕೆಲಸದಲ್ಲಿ ವೈಫಲ್ಯ

ಕೆಲ ಸಂದರ್ಭಗಳಲ್ಲಿ ಉದ್ಯೋಗಿಗಳು ತಮ್ಮ ಕೊಟ್ಟಿರುವಂತ ಕೆಲಸ/ಪ್ರಾಜೆಕ್ಟ್ ಗಳನ್ನು ಯಶಸ್ವಿಯಾಗಿಸಲು ವೈಫಲ್ಯವಾಗುವುದು ಮತ್ತು ಅದಕ್ಕೆ ಸರಿಯಾದ ಕಾರಣ ನೀಡದೆ ಇರುವುದು ಕೂಡ ಉದ್ಯೋಗ ಕಳೆದುಕೊಳ್ಳಲು ಕಾರಣವಾಗಿರುತ್ತದೆ. ಕೆಲ ಸಿಇಒ ಗಳು ಕೆಲ ತಿಂಗಳಗಳವರೆಗೆ ನನ್ನ ಅಸೈನ್ಮೆಂಟ್ ಗಳನ್ನು ನಿರ್ಲಕ್ಷಿಸಿ ಎಂದು ಹೇಳುವುದುಂಟು. ಅಂದರೆ ಅವರು ತಮ್ಮ ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದರ್ಥ.

5. ನಕರಾತ್ಮಕ ಚರ್ಚೆ


ನಕರಾಥ್ಮಕವದಂತಿ, ಊಹಾಪೋಹಗಳ ಮೂಲವಾಗಿರುವುದರಿಂದ ಹಲವರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ನಕರಾತ್ಮಕ ಜನರ ಸಂಭಾಷಣೆ, ಚರ್ಚೆಗಳು ಕೆಲಸದ ವಾತಾವರಣವನ್ನು ಹಾಳುಮಾಡಬಲ್ಲವು. ಇನ್ನೊಬ್ಬರಲ್ಲಿ ನಕರಾತ್ಮಕ ವಿಚಾರಗಳನ್ನು, ಧೋರಣೆಗಳನ್ನು ತುಂಬುತ್ತಿರುತ್ತಾರೆ.

6. ಸೋಮಾರಿತನ

ಸೋಮಾರಿತನ ನಮ್ಮಲ್ಲಿನ ಅತಿದೊಡ್ಡ ಶತ್ರು. ಅತಿ ಸೋಮಾರಿ ವ್ಯಕ್ತಿಗಳು ತಾನೊಬ್ಬ ಸೋಮಾರಿ ಕೆಲಸಗಾರ ಎಂಬುದನ್ನು ಸಂಸ್ಥೆಯವರಿಗೆ ತಿಳಿದಿದೆ ಎಂದು ಅರಿತಿರುವುದಿಲ್ಲ. ಇತರರಿಂದ ಕಳಪೆ ಕೆಲಸದ ಸಮಯ ಮತ್ತು ಕಳಪೆ ಕೆಲಸದ ನೀತಿಗಳನ್ನು ಮರೆಮಾಡಲು ಸಾಧ್ಯವಿರುವುದಿಲ್ಲ. ಹೀಗಾಗಿ ನಮ್ಮಲ್ಲಿನ ಆಲಸಿತನ ನಮ್ಮ ವಿಭಾಗದ ಪ್ರತಿಯೊಬ್ಬರಿಗೂ ಗೊತ್ತಾಗುವ ಮುನ್ನ ಅದರಿಂದ ಹೊರಬರುವುದು ಉತ್ತಮ.

7. ವರ್ತನೆ

ಪ್ರತಿಯೊಬ್ಬ ನೌಕರನಲ್ಲೂ ಅರ್ಹತೆ ಇರುತ್ತದೆ. ಅರ್ಹತೆಗೆ ತಕ್ಕಂತ ವರ್ತನೆ ಕೂಡ ಇರುತ್ತದೆ. ದಕ್ಷ, ಪ್ರಾಮಾಣಿಕ ಅರ್ಹ ವರ್ತನೆ ದೀರ್ಘಾವದೀವರೆಗೆ ಕೆಲಸ ಮಾಡುವಂತೆ ಪ್ರೋತ್ಸಾಹಿಸುತ್ತದೆ. ಉದ್ಯೋಗಿಗಳಲ್ಲಿ ದಕ್ಷ, ಅರ್ಹ ವರ್ತನೆಯ ವಿಫಲತೆಯಿಂದಾಗಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ.

8. ಉತ್ಪಾದಕತೆ ಪ್ರದರ್ಶಿಸುವಲ್ಲಿ ವಿಫಲ

ಸಂಸ್ಥೆಗಳ ಕೆಲಸಗಾರರು ತಾವು ಮಾಡುವ ಕೆಲಸಕ್ಕೆ ನಿಯಮಿತವಾಗಿ ಸರಿಯಾದ ನ್ಯಾಯ ಒದಗಿಸುತ್ತಿದ್ದಾರೆ ಎನ್ನುವುದು ಪ್ರಮುಖ ಸಂಗತಿ. ಇಲ್ಲದಿದ್ದರೆ, ಇತರೆ ಆಯ್ಕೆ/ಮಾರ್ಗಗಳನ್ನು ಅನುಸರಿಸಬೇಕು. ಪ್ರಾಮಾಣಿಕವಾಗಿಯೂ ಅವರು ಉತ್ತಮ ಉತ್ಪಾದಕ ಕೊಡುಗೆಯನ್ನು ನೀಡಲು ವಿಫಲರಾದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ.

9. ಸ್ವಯಂ ಕೇಂದ್ರಿತ ವರ್ತನೆ

ಹೆಚ್ಚು ಹೆಚ್ಚು ಕೆಲಸಗಾರರು ಅವರ ವರ್ತನೆ ಮತ್ತು ನೇರವಾದ ಕೆಲಸ, ನಡೆನುಡಿ ಬಗ್ಗೆ ಮೌಲ್ಯಮಾಪನಕ್ಕೆ ಒಳಗಾಗುತ್ತಾರೆ. ಟೀಮ್ ಜತೆ ಕೆಲಸ ಮಾಡುತ್ತಾರೆಯೆ, ಸ್ವಯಂ ಆಸಕ್ತಿಯಲ್ಲಿ ನಿಸ್ಸಂದೇಹವಾಗಿ ಕೆಲಸ ಮಾಡುತ್ತಾರೆಯೆ, ನಯ-ವಿನಯತೆ ತೋರಿಸುತ್ತಾರೆಯೆ ಅಥವಾ ದುರಹಂಕಾರ ಪ್ರದರ್ಶಿಸುತ್ತಾರೆಯೆ ಇತ್ಯಾದಿ ಅಂಶಗಳೆಲ್ಲವೂ ನೌಕರರ ಮೇಲೆ ಪರಿಣಾಮ ಬೀರುತ್ತವೆ.

10. ಕಂಪನಿ ವೈಫಲ್ಯ

ಉದ್ಯೋಗಿಗಳ ವೈಫಲ್ಯದೊಂದಿಗೆ ಕಂಪನಿಗಳ ಆರ್ಥಿಕ ದೀವಾಳಿತನ, ಆಡಳಿತಾತ್ಮಕ ವೈಫಲ್ಯಗಳು ಕೂಡ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳನ್ನು ನೌಕರರು ಎದುರಿಸಿದ್ದಾರೆ. ಮಾಲೀಕರು ಕಂಪನಿಗಳನ್ನು ನಿರ್ವಹಿಸಲು ವಿಫಲರಾದಾಗ ಇಂತಹ ಸಂದರ್ಭಗಳು ಎದುರಾಗುತ್ತವೆ. ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!

English summary

Why people lose their job, here are 10 Reasons

These 10 things also be important reason on losing your job.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns