Englishहिन्दी മലയാളം தமிழ் తెలుగు

ಬೆಂಗಳೂರೇ ಹೆಚ್ಚು ಪೀಡಿತ! ದೇಶದ 7 ದೈತ್ಯ ಕಂಪನಿಗಳು ಇನ್ನುಮುಂದೆ ಉದ್ಯೋಗ ನೀಡುತ್ತಿಲ್ಲ!!

Written By: Siddu
Subscribe to GoodReturns Kannada

ಭಾರತದ ತಂತ್ರಜ್ಞಾನ (ಐಟಿ) ವಲಯ ಸಂಘಟಿತ ವಲಯದಲ್ಲಿಯೇ ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ರಂಗವಾಗಿದೆ. ಆದರೆ ಈ ವಲಯದಲ್ಲಿಯೇ ಹೆಚ್ಚು ಉದ್ಯೋಗ ಕಡಿತವಾಗುತ್ತಿದೆ ಎಂದರೆ ಒಂದು ಕ್ಷಣ ಎದೆಯಲ್ಲಿ ನಡುಕ ಶುರುವಾಗುತ್ತದೆ.

ಪ್ರಸ್ತುತ ಹಣಕಾಸು ವರ್ಷದ ಕಳೆದ ಆರು ತಿಂಗಳುಗಳಲ್ಲಿ ಪ್ರಮುಖ ಐಟಿ ಸೇವಾ ಕಂಪನಿಗಳಲ್ಲಿ 4157 ಉದ್ಯೋಗ ಕಡಿತವಾಗಿದೆ.

ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!

ಕಳೆದ ವರ್ಷ

ಆದರೆ ಕಳೆದ ವರ್ಷದ ಇದೇ ಅವಧಿಯಲ್ಲಿ ಐಟಿ ಕ್ಷೇತ್ರದಲ್ಲಿ ಸುಮಾರು 60,000 ಜನರಿಗೆ ಹೊಸ ಉದ್ಯೋಗಗಳು ಸಿಕ್ಕಿದ್ದವು. ಆದರೆ ಈ ಬಾರಿ ಹೊಸ ಉದ್ಯೋಗ ಸೃಷ್ಟಿಯ ವಿಷಯ ತಲೆಕೆಳಗಾಗಿದೆ. ಸಮೀಕ್ಷೆಯ ಪ್ರಕಾರ, ಐಟಿ ಕಂಪನಿಗಳ 56,000 ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ವಜಾ ಮಾಡುತ್ತಿರುವ ಪ್ರಸಿದ್ಧ ಕಂಪನಿಗಳು

ಕಾಗ್ನಿಜಂಟ್
ಇನ್ಫೋಸಿಸ್
ವಿಪ್ರೋ
Hcl
ಟೆಕ್ ಮಹೀಂದ್ರಾ
TCS
L & T, ಟಾಟಾ ಮೋಟಾರ್ಸ್ ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?

ಕಾಗ್ನಿಜಂಟ್

ಅಮೆರಿಕಾ ಮೂಲದ ದೈತ್ಯ ಕಂಪೆನಿ ಕಾಗ್ನಿಜಂಟ್ ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಅಧಿಕ ಅಟೋಮೆಷನ್, ಯಾಂತ್ರಿಕತೆಯ ಕಾರಣಕ್ಕೆ ನೌಕರರು ಕಂಪನಿಯನ್ನು ತೊರೆಯುತ್ತಿದ್ದಾರೆ. ನಿರ್ದೇಶಕರು, ಉಪಾಧ್ಯಕ್ಷರು, ಸಹಾಯಕ ವಿ.ಪಿ ಮತ್ತು ಸಂಯೋಜಕರು ಸ್ವಯಂ ನಿವೃತ್ತಿಯನ್ನು ನೀಡಿದ್ದಾರೆ. ಭಾರತದಲ್ಲಿ ಐಟಿ, ಬಿಪಿಒ ವಲಯದ 7 ಲಕ್ಷ ಉದ್ಯೋಗ ಕಡಿತ!

ಇನ್ಫೋಸಿಸ್

ಮುಂದಿನ ದಿನಗಳಲ್ಲಿ ವಜಾಗೊಳಿಸುವ ಪ್ರಕ್ರಿಯೆ ಪ್ರಕಟಿಸುವ ಸಾಧ್ಯತೆಯಿದೆ ಎಂದು ಭಾರತದ ಅತಿ ದೊಡ್ಡ ಸಾಫ್ಟ್ವೇರ್ ಸೇವಾ ರಫ್ತುದಾರ ಸಂಸ್ಥೆ ಇನ್ಫೋಸಿಸ್ ಹೇಳಿದೆ. ನೂರಾರು ಮಧ್ಯಮ, ಕಡಿಮೆ ಮತ್ತು ಸಿನಿಯರ್ ಮಟ್ಟದ ಕಾರ್ಮಿಕರನ್ನು ಕಡಿತಗೊಳಿಸಲು ಕಂಪನಿ ನಿರ್ಧರಿಸಿದೆ. ಕಂಪನಿಯ ಹಣಕಾಸಿನ ಕೊರತೆ ವಜಾಗೊಳಿಸುವಿಕೆಯ ಭಾಗವಾಗಿದೆ. ಇನ್ಫೋಸಿಸ್ 20 ಸಾವಿರ ನೇಮಕಾತಿಗೆ ನಿರ್ಧಾರ

ವಿಪ್ರೋ

ವಿಪ್ರೋ ಸಂಸ್ಥೆ ವ್ಯವಸ್ಥಾಪಕರು ಮತ್ತು ಕಾರ್ಯನಿರ್ವಾಹಕರನ್ನು ಕಡಿತಗೊಳಿಸಲು ಪ್ರಾರಂಭಿಸಿದೆ. ಸುಮಾರು 600 ಜನರನ್ನು ಈಗಾಗಲೇ ಹೊರಹಾಕಿದೆ. ಸುಮಾರು 2000 ಜನರನ್ನು ವಜಾ ಮಾಡುವ ಸಂಭವವಿದೆ. ವಾರ್ಷಿಕ ಮೌಲ್ಯಮಾಪನದ ಭಾಗವಾಗಿ ನೂರಾರು ಉದ್ಯೋಗಿಗಳನ್ನು ವಿಪ್ರೋ ವಜಾ ಮಾಡಲಿದೆ. ಐಟಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು ಕಡಿಮೆ

ಟೆಕ್ ಮಹೀಂದ್ರಾ

ಭಾರತೀಯ ಐಟಿ ಕಂಪನಿಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದ ಟೆಕ್ ಮಹೀಂದ್ರಾ ಕೂಡಾ ಉದ್ಯೋಗಿಗಳನ್ನು ವಜಾ ಮಾಡಲಿದೆ. ಮುಂಬೈ ಮೂಲದ ಟೆಕ್ ಮಹೀಂದ್ರಾ ಎಷ್ಟು ನೌಕರರ ಸಂಖ್ಯೆಯನ್ನು ಕಡಿತಗೊಳಿಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅರ್ಥಶಾಸ್ತ್ರಜ್ಞರು ನೂರಾರು ಜನರು ಹೊರ ಹೋಗಬಹುದು ಎಂದು ವಾದಿಸಿದ್ದಾರೆ. ಕಂಪನಿಯು ಡಿಸೆಂಬರ್ 2016ರ ಕೊನೆಯಲ್ಲಿ 1.17 ಲಕ್ಷ ನೌಕರರನ್ನು ಹೊಂದಿತ್ತು.

ವಜಾಗೊಳಿಸುವಿಕೆಗೆ ಕಾರಣ

ಯುಎಸ್ಎ H1B ವೀಸಾ ನಿಯಂತ್ರಣ
ಕಂಪನಿಗಳ ಅನುಭವಿಸುತ್ತಿರುವ ನಷ್ಟ
ಆಟೊಮೇಷನ್(ಸ್ವಯಂಚಾಲಿತ ವ್ಯವಸ್ಥೆ ಅಳವಡಿಕೆ)
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ)
ಕ್ಲೌಡ್ ಕಂಪ್ಯೂಟಿಂಗ್
ಬದಲಾದ ಹೊಸ ತಂತ್ರಜ್ಞಾನ
ಅಸಮರ್ಥ ಕೌಶಲ್ಯರಹಿತ ನೌಕರರು
ವಾರ್ಷಿಕ ಮೌಲ್ಯಮಾಪನ ಫಲಿತಾಂಶ

ಟಾಟಾ ಮೋಟಾರ್ಸ್ ಮತ್ತು ಎಲ್ & ಟಿ

ಟಾಟಾ ಮೋಟಾರ್ಸ್ ಸಂಸ್ಥೆ ಸಾಂಸ್ಥಿಕ ಪುನರ್ರಚನೆಯ ಭಾಗವಾಗಿ ದೇಶಿಯ 1,500 ವ್ಯವಸ್ಥಾಪಕ(ಆಡಳಿತಾತ್ಮಕ) ನೌಕರರನ್ನು ಕಡಿತಗೊಳಿಸಿದೆ.
ದೇಶದ ಇನ್ನೊಂದು ಪ್ರಮುಖ ಸಂಸ್ಥೆಯಾದ ಲಾರ್ಸೆನ್ ಮತ್ತು ಟೂಬ್ರೊ(LT) 2017ರ ಹಣಕಾಸು ವರ್ಷದ ಮೊದಲರ್ಧದಲ್ಲಿ ಸುಮಾರು 14,000 ಸಾವಿರ ಉದ್ಯೋಗಿಗಳನ್ನು ಕೈಬಿಡುವುದಾಗಿ ಹೇಳಿತ್ತು. ಎಚ್‌ಡಿಎಫ್‌ಸಿ ಬ್ಯಾಂಕು ಕೂಡ ಸುಮಾರು 10 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ.

ಬೆಂಗಳೂರು ಹೆಚ್ಚು ಪೀಡಿತ

ಐಟಿ ಉದ್ಯೋಗವನ್ನೆ ಹೆಚ್ಚು ಅವಲಂಬಿಸುವ ಬೆಂಗಳೂರಿನ ಉದ್ಯೋಗಿಗಳಿಗೆ ಉದ್ಯೋಗ ಕಡಿತ ಹೆಚ್ಚು ಪರಿಣಾಮ ಬೀರಲಿದೆ. ಸುಮಾರು 40 ಲಕ್ಷ ಉದ್ಯೋಗಿಗಳು ಐಟಿಯಲ್ಲಿ ಕಾರ್ಯನಿರತರಾಗಿದ್ದಾರೆ.

ನಾಸ್ಕಾಂ ಇನ್ನಿತರ ವರದಿಗಳು

2022ರ ಹೊತ್ತಿಗೆ ಮಾಹಿತಿ ತಂತಂತ್ರಜ್ಞಾನ (ಐಟಿ) ಮತ್ತು ಬಿಪಿಒ ಕ್ಷೇತ್ರದಲ್ಲಿನ ಕಡಿಮೆ ಕೌಶಲ್ಯದ 7 ಲಕ್ಷದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಮೆರಿಕಾ ಸಂಶೋಧನಾ ಸಂಸ್ಥೆ ಎಚ್‌ಎಫ್‌ಎಸ್‌ ರಿಸರ್ಚ್‌ ವರದಿ ಮಾಡಿದೆ.
2025 ರ ಹೊತ್ತಿಗೆ ಹೊಸ ಐಟಿ ಉದ್ಯಮ 30 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನಾಸ್ಕಾಮ್ ಹೇಳಿದೆ.
ಆದರೂ, 2022ರ ಹೊತ್ತಿಗೆ ಭಾರತದಲ್ಲಿ ಐಟಿ ಮತ್ತು ಬಿಪಿಒ ವಲಯದ ಮಧ್ಯಮ ಕೌಶಲದ ಉದ್ಯೋಗಗಳು 9 ಲಕ್ಷದಿಂದ 10 ಲಕ್ಷದವರೆಗೆ ಅಂದರೆ ಒಂದು ಲಕ್ಷದಷ್ಟು ಹೆಚ್ಚಾಗಲಿವೆ. ಉನ್ನತ ಕೌಶಲದ ಉದ್ಯೋಗಗಳು 3.20 ಲಕ್ಷದಿಂದ 5.10 ಲಕ್ಷದವರೆಗೆ ಹೆಚ್ಚಲಿವೆ ಎನ್ನಲಾಗಿದೆ ಇನ್ನೊಂದು ವರದಿ ತಿಳಿಸಿದೆ.

Read more about: employment, layoffs, finance news, india, it, infosys
English summary

Six major IT companies reduce employee strength

The $156-billion Indian IT industry, often called the biggest job creator in the organised sector, is seeing a tectonic shift in recruitment.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns