For Quick Alerts
ALLOW NOTIFICATIONS  
For Daily Alerts

2018ರಲ್ಲಿ ತೆರಿಗೆ ಉಳಿತಾಯಕ್ಕೆ 5 ELSS ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ

ಕೆಲವು ಇಎಲ್ಎಸ್ಎಸ್ (ELSS) ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಗಳು ಕಳೆದ ಒಂದು ವರ್ಷದಿಂದ ಉತ್ತಮವಾದ ಆದಾಯವನ್ನು ತರುತ್ತಿವೆ. ಇಎಲ್ಎಸ್ಎಸ್ ವಾಸ್ತವದಲ್ಲಿ ಮುಡಿಪಾಗಿಟ್ಟ ಅಥವಾ ತೆಗೆದಿರಿಸಿದ ಮ್ಯೂಚುವಲ್ ಫಂಡ್ ನಿಧಿ ಎನ್ನಬಹುದು.

By Siddu
|

ಕೆಲವು ಇಎಲ್ಎಸ್ಎಸ್ (ELSS) ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಗಳು ಕಳೆದ ಒಂದು ವರ್ಷದಿಂದ ಉತ್ತಮವಾದ ಆದಾಯವನ್ನು ತರುತ್ತಿವೆ. ಇಎಲ್ಎಸ್ಎಸ್ ವಾಸ್ತವದಲ್ಲಿ ಮುಡಿಪಾಗಿಟ್ಟ ಅಥವಾ ತೆಗೆದಿರಿಸಿದ ಮ್ಯೂಚುವಲ್ ಫಂಡ್ ನಿಧಿ ಎನ್ನಬಹುದು.

ಈ ನಿಧಿಗಳಲ್ಲಿ ಹೂಡಿಕೆ ಮಾಡುವ ಮುನ್ನ ಇದರ ಬಗೆಗಳನ್ನು, ಅತ್ಯುತ್ತಮವಾದವುಗಳನ್ನು, ಹೆಚ್ಚು ಆದಾಯ ಕೊಡಬಲ್ಲವುಗಳನ್ನು ಪರಿಗಣಿಸಬೇಕಾಗುತ್ತದೆ. ಇಂತಹ ಪ್ರಮುಖ ಫಂಡ್ ಗಳನ್ನು ಆಧರಿಸಿ ಕೆಲವಾರು ಅಂಶಗಳನ್ನು ಆಧರಿಸಿ ಇಲ್ಲಿ ನೀಡಲಾಗಿದೆ. ಸ್ವಂತಮನೆ ಕಟ್ಟುವುದು ಈಗ ಸುಲಭ! ಇಲ್ಲಿವೆ ವಿವಿಧ ಬಗೆಯ ಗೃಹಸಾಲ ಸೌಲಭ್ಯ

ಇಎಲ್ಎಸ್ಎಸ್ ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಎಂದರೇನು?

ಇಎಲ್ಎಸ್ಎಸ್ ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಎಂದರೇನು?

ಇಎಲ್ಎಸ್ಎಸ್ (Equity Linked Savings Scheme) ಅಥವಾ ಈಕ್ವಿಟಿಯನ್ನು ಆಧರಿಸಿದ ಉಳಿತಾಯ ಯೋಜನೆ ಒಂದು ತೆರೆದ ಅಂತ್ಯದ ಹಾಗೂ ವೈವಿಧ್ಯತೆಯುಳ್ಳ ಮ್ಯೂಚುವಲ್ ಫಂಡ್ ಆಗಿದ್ದು ಇದರಲ್ಲಿ ಹೂಡಿದ ಹೂಡಿಕೆಯನ್ನು ಪ್ರಮುಖವಾಗಿ ಈಕ್ವಿಟಿ ಹಾಗೂ ಈಕ್ವಿಟಿ ಆಧಾರಿತ ಉತ್ಪನ್ನಗಳಲ್ಲಿ ಹೂಡಲಾಗುತ್ತದೆ. ಈ ಹೂಡಿಕೆಯಲ್ಲಿ ಹೂಡುವ ಮೊತ್ತ ಆದಾಯ ತೆರಿಗೆ ವಿಧಿ 80C ಪ್ರಕಾರ ತೆರಿಗೆ ವಿನಾಯಿತಿ ಹೊಂದಿದೆ, ಆದರೆ ಇದು ರೂ. 1.5 ಲಕ್ಷ ದ ಮಿತಿಯೊಳಗಿದ್ದರೆ ಮಾತ್ರ. ಈ ಹೂಡಿಕೆ ತೆರಿಗೆಯನ್ನುಳಿಸಲು ಮಾತ್ರವಲ್ಲ ಹಣವನ್ನು ವೃದ್ದಿಸಲೂ ನೆರವಾಗುತ್ತದೆ. ಇದೊಂದು ಈಕ್ವಿಟಿ ಆಧಾರಿತ ನಿಧಿಯಾಗಿರುವ ಕಾರಣ ಈಕ್ವಿಟಿ ಮಾರುಕಟ್ಟೆಯಲ್ಲಿ ಕಂಡುಬರುವಂತಹ ಏರಿಕೆಯನ್ನು ಹೂಡಿಕೆದಾರ ತನ್ನ ಖಾತೆಯಲ್ಲಿಯೂ ನಿರೀಕ್ಷಿಸಬಹುದು. ಆದರೆ ELSS ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಯೋಜನೆಯನ್ನು ಕನಿಷ್ಟ ಮೂರು ವರ್ಷ ಅನುಸರಿಸಲೇಬೇಕಾಗಿದ್ದು ಹೂಡಿರುವ ಹಣವನ್ನು ಇದಕ್ಕೂ ಮೊದಲು ಹಿಂಪಡೆಯಲು ಸಾಧ್ಯವಿಲ್ಲ.

ಇಎಲ್ಎಸ್ಎಸ್ ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ನಲ್ಲಿಯೇ ಏಕೆ ಹಣ ಹೂಡಬೇಕು?

ಇಎಲ್ಎಸ್ಎಸ್ ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ನಲ್ಲಿಯೇ ಏಕೆ ಹಣ ಹೂಡಬೇಕು?

ಆದಾಯ ತೆರಿಗೆ ವಿಧಿ 80C ಯ ಪ್ರಕಾರ ರೂ. ಒಂದೂವರೆ ಲಕ್ಷದವರೆಗೆ ಆದಾಯ ತೆರಿಗೆ ಅನ್ವಯವಾಗುವುದಿಲ್ಲವಾದುದರಿಂದ ಇಎಲ್ಎಸ್ಎಸ್ ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಅಲ್ಲದೇ ಈಕ್ವಿಟಿ ಮಾರುಕಟ್ಟೆಯನ್ನು ಆಧರಿಸಿ ನಿಮ್ಮ ಹಣವೂ ವೃದ್ದಿಸುತ್ತದೆ. ಇತರ ಸಾಂಪ್ರಾದಾಯಿಕ ಹಾಗೂ ತೆರಿಗೆಗೆ ಒಳಪಡುವ ಯೋಜನೆಗಳಿಗೆ ಹೋಲಿಸಿದರೆ ಕನಿಷ್ಟ ಹೂಡಿಕೆ ಅವಧಿ ಅಥವಾ lock in period ಕಡಿಮೆಯೇ ಇದೆ. ಅಲ್ಲದೇ ಕಾಲಕಾಲಕ್ಕೆ ಪಡೆಯುವ ಬಡ್ಡಿಗಳೂ ತೆರಿಗೆಯಿಂದ ವಿನಾಯಿತಿ ಪಡೆದಿವೆ. ಈಕ್ವಿಟಿ ಆಧಾರಿತ ಉಳಿತಾಯ ಯೋಜನೆ (ELSS) ಎಂದರೇನು?

ಈ ಯೋಜನೆಯ ಅನಾನುಕೂಲತೆಗಳು

ಈ ಯೋಜನೆಯ ಅನಾನುಕೂಲತೆಗಳು

1. ಅಪಾಯದ ಸಾಧ್ಯತೆ 
ELSS ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಮುಖ್ಯವಾಗಿ ಈಕ್ವಿಟಿ ಹಾಗೂ ಈಕ್ವಿಟಿ ಸಂಬಂಧಿತ ಉತ್ಪನ್ನಗಳನ್ನೂ ಆಧರಿಸಿರುವುದೇ ಪರೋಕ್ಷವಾಗಿ ಒಂದು ಅಪಾಯವಾಗಿದೆ. ಹೇಗೆಂದರೆ ಈಕ್ವಿಟಿಯೂ ಕೆಲವು ಗಂಡಾಂತರಗಳನ್ನು ಹಾಗೂ ಅನಿಶ್ಚಿತತೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈಕ್ವಿಟಿಯಿಂದ ನಿರೀಕ್ಷಿತ ಲಾಭ ಬರದೇ ಇದ್ದರೆ ಅಥವಾ ನಷ್ಟವಾದರೆ ಇದನ್ನು ಆಧರಿಸಿದ ಯೋಜನೆಯೂ ಪ್ರಭಾವಿತಗೊಳ್ಳುತ್ತದೆ. ಸಿಪ್ ಬಗ್ಗೆ ನಿಮಗೆಷ್ಟು ಗೊತ್ತು?

2. ಹಿಂಪಡೆಯಲು ಇರುವ ಅಡ್ಡಿ

2. ಹಿಂಪಡೆಯಲು ಇರುವ ಅಡ್ಡಿ

ಈ ಯೋಜನೆಯಲ್ಲಿ ಹಣ ಹೂಡಿದ ಬಳಿಕ ಮೂರು ವರ್ಷಗಳ ಕನಿಷ್ಟ ಅವಧಿಗೂ ಮುನ್ನ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಹಾಗಾಗಿ ಈ ಅವಧಿಯಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಈ ಹಣವಿದ್ದೂ ಇಲ್ಲದಂತಾಗುತ್ತದೆ.

ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣಗಳು

ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣಗಳು

1. ನಿಧಿಯ ಸಾಧನೆ
ELSS ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಗಳನ್ನು ಇವುಗಳ ಹಿಂದಿನ ಮೂರರಿಂದ ಐದು ವರ್ಷಗಳ ಸಾಧನೆಯನ್ನನುಸರಿಸಿ ಆಯ್ಕೆ ಮಾಡಿಕೊಳ್ಳಲಾಗಿದೆ.

2. AUM (Assets Under Management) ಹೂಡಿಕೆ ಒಳಗೊಂಡಿರುವ ಆಸ್ತಿ

2. AUM (Assets Under Management) ಹೂಡಿಕೆ ಒಳಗೊಂಡಿರುವ ಆಸ್ತಿ

ಆಯ್ಕೆ ಮಾಡಿದ ಎಲ್ಲಾ ELSS ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಗಳು ದೊಡ್ಡ ಮೊತ್ತದ ಯೋಜನೆಗಳಾಗಿದ್ದು ಇವುಗಳನ್ನು ಒಳಗೊಂಡಿರುವ ಆಸ್ತಿಯೂ ಸಾಮಾನ್ಯವಾಗಿ ಸಾವಿರ ಕೋಟಿ ರೂ. ಗಳಿಗೂ ಅಧಿಕವಾಗಿದೆ.

3. Crisil Rating (ಕ್ರೈಸಿಲ್ ಸೂಚ್ಯಂಕ)

3. Crisil Rating (ಕ್ರೈಸಿಲ್ ಸೂಚ್ಯಂಕ)

ಈ ಯೋಜನೆಗಳನ್ನು ಕ್ರೈಸಿಲ್ ಸೂಚ್ಯಂಕದಲ್ಲಿ ಶ್ರೇಣಿ-1, ಶ್ರೇಣಿ-2, ಹಾಗೂ ಶ್ರೇಣಿ-3 ಪಡೆದಿರುವಂತಹದ್ದನ್ನೇ ಆರಿಸಿಕೊಳ್ಳಲಾಗಿದೆ.

4. ಮೌಲ್ಯ ಸಂಶೋಧನಾ ಸೂಚ್ಯಂಕ

4. ಮೌಲ್ಯ ಸಂಶೋಧನಾ ಸೂಚ್ಯಂಕ

ELSS ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಗಳಲ್ಲಿ ಪಂಚತಾರಾ, ಚತ್ರುರ್ತಾರಾ ಹಾಗೂ ತ್ರಿತಾರಾ ಸೂಚ್ಯಂಕಗಳನ್ನು ಆಧರಿಸಿ ಆಯ್ದುಕೊಳ್ಳಲಾಗುತ್ತದೆ.

ಮೇಲಿನ ಸೂಚ್ಯಂಕಗಳನ್ನು ಪರಿಗಣಿಸಿಯೇ ಐದು ಅತ್ಯುತ್ತಮ ELSS ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ ಗಳನ್ನು ಆಯ್ಕೆ ಮಾಡಿ ಕೆಳಗೆ ವಿವರಿಸಲಾಗಿದ್ದು ಇವು 2018 ರಲ್ಲಿ ಹೂಡಿಕೆಗೆ ಅತ್ಯಂತ ಸೂಕ್ತವಾಗಿದೆ.

 

1. ರಿಲಾಯನ್ಸ್ ತೆರಿಗೆ ಉಳಿತಾಯ (ELSS) ನಿಧಿ

1. ರಿಲಾಯನ್ಸ್ ತೆರಿಗೆ ಉಳಿತಾಯ (ELSS) ನಿಧಿ

ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ದೀರ್ಘಾವಧಿಗಾಗಿ ಪ್ರಮುಖವಾಗಿ ಈಕ್ವಿಟಿ ಹಾಗೂ ಈಕ್ವಿಟಿ ಆಧಾರಿತ ಯೋಜನೆಗಳಲ್ಲಿ ಹಣ ಹೂಡುವ ಮೂಲಕ ಬಂಡವಾಳ ಲಾಭವನ್ನು ಪಡೆಯುವುದಾಗಿದೆ. ಈ ಯೋಜನೆ ಕಳೆದ ಒಂದು ವರ್ಷದಲ್ಲಿ 45.65% ದಷ್ಟು ಆದಾಯವನ್ನು ಗಳಿಸಿದೆ. ಇದಕ್ಕೂ ಹಿಂದಿನ ಎರಡು ವರ್ಷಗಳಲ್ಲಿ 13.89% ಹಾಗೂ 22.56% ರಷ್ಟು ಲಾಭವನ್ನು ಪಡೆದಿದ್ದು ಸತತ ಏರುಮುಖವಾಗಿ ಸಾಗುತ್ತಿರುವ ಪರಿಯನ್ನು ತೋರಿಸುತ್ತಿದೆ. ವ್ಯಾಲ್ಯೂ ರೀಸರ್ಚ್ ಎಂಬ ಸಂಸ್ಥೆ ಈ ಯೋಜನೆಯನ್ನು ತ್ರಿತಾರ (ಹೆಚ್ಚು ತಾರೆಗಳಿದ್ದಷ್ಟೂ ಉತ್ತಮ) ನಿಧಿ ಎಂದು ಪರಿಗಣಿಸಿದೆ. ಕ್ರೈಸಿಲ್ ಸೂಚ್ಯಂಕದ ಪ್ರಕಾರ ರ್‍ಯಾಂಕ್-3 ಪಡೆದಿದೆ (ಕಡಿಮೆ ಇದ್ದಷ್ಟೂ ಉತ್ತಮ). ಸತತ ಅಭಿವೃದ್ದಿ ಪಡೆಯುತ್ತಿರುವ ಈ ನಿಧಿ ಪ್ರಸ್ತುತ NAV (net asset value) ಮೌಲ್ಯಮಾಪನದಲ್ಲಿ ರೂ. 69.56 ದರ ಪಡೆದಿದೆ.

2. ಟಾಟಾ ಇಂಡಿಯಾ ಉಳಿತಾಯ ಯೋಜನೆ (Tata India Tax Savings Fund)

2. ಟಾಟಾ ಇಂಡಿಯಾ ಉಳಿತಾಯ ಯೋಜನೆ (Tata India Tax Savings Fund)

ಈ ನಿಧಿಯ ಮುಖ್ಯ ಉದ್ದೇಶವೆಂದರೆ ಮಧ್ಯಮ ಹಾಗೂ ದೀರ್ಘಾವಧಿಯ ಹೂಡಿಕೆಯ ಮೂಲಕ ಹಣ ಹೂಡುವವರಿಗೆ ಉತ್ತಮ ದೀರ್ಘಾವಧಿಯ ಬಂಡವಾಳ ಆದಾಯವನ್ನು ಒದಗಿಸುವುದು. ಜೊತೆಗೇ ಬಂಡವಾಳದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವುದೂ ಆಗಿದೆ. ಮಧ್ಯಮ ಹಾಗೂ ದೀರ್ಘಾವಧಿಯ ಹೂಡಿಕೆಯಲ್ಲಿ ಉತ್ಸುಕರಾಗಿರುವವರಿಗೆ ಈ ಯೋಜನೆ ಹೆಚ್ಚು ಅನುಕೂಲಕರವಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಿಸಿ ತನ್ನ ಹೂಡಿಕೆದಾರರಿಗೆ 44.06% ರಷ್ಟು ಲಾಭ ಗಳಿಸಿಕೊಟ್ಟಿದೆ. ಇದಕ್ಕೂ ಹಿಂದಿನ ವರ್ಷಗಳಲ್ಲಿ 18.26% ಹಾಗೂ 21.40% ರಷ್ಟು ಲಾಭ ತಂದಿತ್ತು. ವ್ಯಾಲ್ಯೂ ರೀಸರ್ಚ್ ಸಂಸ್ಥೆ ಈ ಯೋಜನೆ ಪಂಚತಾರಾ (ಹೆಚ್ಚಿದ್ದಷ್ಟೂ ಒಳ್ಳೆಯದು) ಹಾಗೂ ಕ್ರೈಸಿಲ್ ಸೂಚ್ಯಂಕದ ಪ್ರಕಾರ ಶ್ರೇಣಿ -1 (ಕಡಿಮೆ ಇದ್ದಷ್ಟೂ ಒಳ್ಳೆಯದು) ಪಡೆದಿದೆ. ಪ್ರಸ್ತುತ ಬೆಳವಣಿಗೆಯ ಯೋಜನೆಯಡಿಯಲ್ಲಿ NAV ಸಹಾ ರೂ. 81.33. ಇದೆ.

3. ಆದಿತ್ಯಾ ಬಿರ್ಲಾ ಸನ್ ಲೈಫ್ ತೆರಿಗೆ ಮುಕ್ತ 96 (Aditya Birla Sun Life Tax Relief 96)

3. ಆದಿತ್ಯಾ ಬಿರ್ಲಾ ಸನ್ ಲೈಫ್ ತೆರಿಗೆ ಮುಕ್ತ 96 (Aditya Birla Sun Life Tax Relief 96)

ಈ ನಿಧಿಯ ಮುಖ್ಯ ಉದ್ದೇಶವೆಂದರೆ ಈಕ್ವಿಟಿಯಲ್ಲಿ ತೊಡಗಿಸಿರುವ ನಿಮ್ಮ ಬಂಡವಾಳ ಹೆಚ್ಚುವಂತೆ ಹಾಗೂ ಲಾಭದಲ್ಲಿ ತೆರಿಗೆ ಉಳಿಸುವುದು ಈ ಯೋಜನೆ ದೀರ್ಘಾವಧಿಗಾಗಿ ಹೂಡಿಕೆಯನ್ನು ಪರಿಗಣಿಸುವ ವ್ಯಕ್ತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಈ ತೆರಿಗೆ ಉಳಿತಾಯ (ELSS) ನಿಧಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ ವರ್ಷ ಇದರಲ್ಲಿ ಹಣ ಹೂಡಿದ್ದವರಿಗೆ 42.18% ಲಾಭ ತಂದುಕೊಟ್ಟಿದೆ.ಇದಕ್ಕೂ ಮುನ್ನ ಕಳೆದ ಮೂರು ಮತ್ತು ಐದು ವರ್ಷಗಳಲ್ಲಿ ಕ್ರಮವಾಗಿ 16.49% ಹಾಗೂ 21.67% ರಷ್ಟು ಆದಾಯ ನೀಡಿದೆ. ವ್ಯಾಲ್ಯೂ ರೀಸರ್ಚ್ ಪ್ರಕಾರ ಪಂಚತಾರಾ (ಹೆಚ್ಚಿದ್ದಷ್ಟೂ ಒಳ್ಳೆಯದು) ಹಾಗೂ ಕ್ರೈಸಿಲ್ ಸೂಚ್ಯಂಕದ ಪ್ರಕಾರ ಶ್ರೇಣಿ-2 (ಕಡಿಮೆ ಇದ್ದಷ್ಟೂ ಒಳ್ಳೆಯದು) ಪಡೆದಿದೆ. ಪ್ರಸ್ತುತ ಬೆಳವಣಿಗೆಯ ಯೋಜನೆಯಡಿಯಲ್ಲಿ NAV ಸಹಾ ರೂ. 32.20 ಇದೆ.

4. ಆಕ್ಸಿಸ್ ದೀರ್ಘಾವಧಿ ಈಕ್ವಿಟಿ ನಿಧಿ (Axis Long Term Equity Fund)

4. ಆಕ್ಸಿಸ್ ದೀರ್ಘಾವಧಿ ಈಕ್ವಿಟಿ ನಿಧಿ (Axis Long Term Equity Fund)

ಈ ನಿಧಿಯ ಮುಖ್ಯ ಉದ್ದೇಶವೆಂದರೆ ದೀರ್ಘಾವಧಿಯ ಹೂಡಿಕೆಯಲ್ಲಿ ಬಂಡವಾಳ ಅಭಿವೃದ್ದಿ ಹಾಗೂ ಈಕ್ವಿಟಿ ಹಾಗೂ ಈಕ್ವಿಟಿ ಆಧಾರಿತ ವಿವಿಧ ಯೋಜನೆಗಳಲ್ಲಿ ಹಣ ಹೂಡುವ ಮೂಲಕ ಹೆಚ್ಚಿನ ಆದಾಯವನ್ನು ಪಡೆಯುವುದಾಗಿದೆ. ಈ ಯೋಜನೆ ಮೂರರಿಂದ ಐದು ವರ್ಷಗಳ ಅವಧಿಗೆ ಹಣ ಹೂಡುವವರಿಗೆ ಸೂಕ್ತವಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು 37.03% ರಷ್ಟು ಆದಾಯ ತಂದುಕೊಟ್ಟಿದೆ. ಕಳೆದ ಮೂರು ಮತ್ತ್ತು ಐದು ವರ್ಷಗಳಲ್ಲಿ ಕ್ರಮವಾಗಿ 12.44‍% ಮತ್ತು 22.50% ರಷ್ಟು ಆದಾಯ ಗಳಿಸಿದೆ. ವ್ಯಾಲ್ಯೂ ರೀಸರ್ಚ್ ಪ್ರಕಾರ ಚತುರ್ತಾರಾ 4-star (ಹೆಚ್ಚಿದ್ದಷ್ಟೂ ಒಳ್ಳೆಯದು) ಹಾಗೂ ಕ್ರೈಸಿಲ್ ಸೂಚ್ಯಂಕದ ಪ್ರಕಾರ ಶ್ರೇಣಿ-3 (ಕಡಿಮೆ ಇದ್ದಷ್ಟೂ ಒಳ್ಳೆಯದು) ಪಡೆದಿದೆ. ಪ್ರಸ್ತುತ ಬೆಳವಣಿಗೆಯ ಯೋಜನೆಯಡಿಯಲ್ಲಿ NAV ಸಹಾ ರೂ. 41.59 ಇದೆ.

5. ಡಿ ಎಸ್ ಪಿ ಬ್ಲಾಕ್ ರಾಕ್ ತೆರಿಗೆ ಉಳಿತಾಯ ನಿಧಿ

5. ಡಿ ಎಸ್ ಪಿ ಬ್ಲಾಕ್ ರಾಕ್ ತೆರಿಗೆ ಉಳಿತಾಯ ನಿಧಿ

ಈ ನಿಧಿಯ ಮುಖ್ಯ ಉದ್ದೇಶವೆಂದರೆ ಮಧ್ಯಮ ಹಾಗೂ ದೀರ್ಘಾವಧಿಯ ಹೂಡಿಕೆಯ ಮೂಲಕ ಹಣ ಹೂಡುವವರಿಗೆ ಉತ್ತಮ ದೀರ್ಘಾವಧಿಯ ಬಂಡವಾಳ ಆದಾಯವನ್ನು ಒದಗಿಸುವುದು. ಈ ಹೂಡಿಕೆಯಲ್ಲಿ ಬಂಡವಾಳ ಅಭಿವೃದ್ದಿ ಹಾಗೂ ಈಕ್ವಿಟಿ ಹಾಗೂ ಈಕ್ವಿಟಿ ಆಧಾರಿತ ವಿವಿಧ ಯೋಜನೆಗಳಲ್ಲಿ ಹಣ ಹೂಡುವ ಮೂಲಕ ಹೆಚ್ಚಿನ ಆದಾಯವನ್ನು ಪಡೆಯುವುದಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು 35.30% ರಷ್ಟು ಆದಾಯ ತಂದುಕೊಟ್ಟಿದೆ. ಕಳೆದ ಮೂರು ಮತ್ತ್ತು ಐದು ವರ್ಷಗಳಲ್ಲಿ ಕ್ರಮವಾಗಿ 15.94% ಹಾಗೂ 20.31% ರಷ್ಟು ಆದಾಯ ಗಳಿಸಿದೆ. ಕಳೆದ ಒಂದು ವರ್ಷದಲ್ಲಿ ಈ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು 35.30% ರಷ್ಟು ಆದಾಯ ತಂದುಕೊಟ್ಟಿದೆ. ಕಳೆದ ಮೂರು ಮತ್ತ್ತು ಐದು ವರ್ಷಗಳಲ್ಲಿ ಕ್ರಮವಾಗಿ 15.94% ಹಾಗೂ 20.31% ರಷ್ಟು ಆದಾಯ ಗಳಿಸಿದೆ. ಕ್ರೈಸಿಲ್ ಸೂಚ್ಯಂಕದ ಪ್ರಕಾರ ಶ್ರೇಣಿ-3 (ಕಡಿಮೆ ಇದ್ದಷ್ಟೂ ಒಳ್ಳೆಯದು) ಪಡೆದಿದೆ. ಪ್ರಸ್ತುತ ಬೆಳವಣಿಗೆಯ ಯೋಜನೆಯಡಿಯಲ್ಲಿ NAV ಸಹಾ ರೂ. 48.63.ಇದೆ.

ಹಕ್ಕುತ್ಯಾಗ

ಹಕ್ಕುತ್ಯಾಗ

ಈ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಕಟ್ಟುನಿಟ್ಟಾಗಿ ಬದ್ದವಾಗಿರುತ್ತದೆ. ELSS ತೆರಿಗೆ ಉಳಿತಾಯ ಮ್ಯೂಚುಯಲ್ ಫಂಡ್ ಯಾವುದೇ ಆದಾಯವನ್ನು ಖಾತರಿಪಡಿಸುವುದಿಲ್ಲ. ELSS ಫಂಡ್ ನ ಹಿಂದಿನ ಕಾರ್ಯಕ್ಷಮತೆ ಭವಿಷ್ಯದಲ್ಲಿ ಮುಂದುವರೆಯಲು ಸಾಧ್ಯವಾಗುವುದಿಲ್ಲ ಅಥವಾ ಸಾಧ್ಯವಾಗಲೂಬಹುದು. ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಮ್ಯೂಚುಯಲ್ ಫಂಡ್ ಸಲಹೆಗಾರ ಅಥವಾ ಹಣಕಾಸು ಯೋಜಕರನ್ನು ಸಂಪರ್ಕಿಸಿ.

English summary

5 Best ELSS Tax Saving Mutual Funds to invest in 2018

Some of the ELSS tax saving mutual funds has given good returns in the last one year. Today, I will share 5 best ELSS tax saving mutual funds to invest in 2018. These ELSS tax mutual funds are shortlisted based on several key parameters.
Story first published: Tuesday, February 27, 2018, 11:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X