ಸರ್ಕಾರದ ಕೆಲ ಪ್ರಮುಖ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು ಡಿಸೆಂಬರ್ 31ರ ಒಳಗಾಗಿ ಜೋಡಣೆ ಮಾಡಬೇಕು. ಆದರೆ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31, 2018ರವರೆಗೆ ಗಡುವು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಸರ್ಕಾರದ ಕೆಲ ಪ್ರಮುಖ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕು. ಆದರೆ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31, 2018ರವರೆಗೆ ಗಡುವು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಬ್ಯಾಂಕು ಖಾತೆ ಮತ್ತು ಮೊಬೈಲ್ ಫೋನ್ ಸೇವೆಗಳು ಸೇರಿದಂತೆ ಮಾರ್ಚ್ 31ರ ಒಳಗೆ ಆಧಾರ್ ಲಿಂಕ್ ಮಾಡುವಂತೆ ಕೊನೆ ದಿನಾಂಕವನ್ನು ಪ್ರಕಟಿಸಲಾಗಿತ್ತು. ಆದರೆ ಆಧಾರ್ ಜೋಡಣೆ ಮಾಡಲು ಗಡುವು ನೀಡಲಾಗಿದ್ದ ದಿನಾಂಕವನ್ನು ಮುಂದೂಡುವ ನಿರೀಕ್ಷೆ ಇದೆ.
ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗಿಲ್ಲ. ಇದಕ್ಕಾಗಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಹೊಸ ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿ ಈ 7 ಸೇವೆಗಳಿಗಾಗಿ ಆಧಾರ್ ಲಿಂಕ್ ಮಾಡಬೇಕು. ಇಲ್ಲಿದೆ ಗಡುವು ವಿವರ
OTP ಮೂಲಕ ಜೋಡಣೆ
ಜನವರಿ 1, 2018ರಿಂದ OTP (one time password) ಮೂಲಕ ನಿಮ್ಮ ಮೊಬೈಲ್ ನ್ನು ಆಧಾರ್ ಗೆ ಲಿಂಕ್ ಮಾಡಬಹುದಾಗಿದೆ. ಜನವರಿ 1 ರಿಂದ ಧ್ವನಿ ನಿರ್ದೇಶಿತ ವ್ಯವಸ್ಥೆಯಡಿ ಮೊಬೈಲ್ ನಿಂದ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮನೆಯಿಂದ ಮೊಬೈಲ್ ಗೆ ಆಧಾರ್ ಲಿಂಕ್ ಮಾಡಿ
ಹಿಂದೆ ಕಂಪನಿಗಳ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಮೊಬೈಲ್ ಗೆ ಆಧಾರ್ ಜೋಡಣೆ ಮಾಡಬೇಕಾಗಿತ್ತು. ಅಲ್ಲಿ ಕೆಲವೊಮ್ಮೆ ತಾಂತ್ರಿಕ ತೊಂದರೆಗಳಿಂದಾಗಿ ವಿಳಂಬವಾಗುತ್ತಿತ್ತು ಅಲ್ಲದೆ ಲಿಂಕ್ ಸಾಧ್ಯ ಆಗುತ್ತಿರಲಿಲ್ಲ.
ಗ್ರಾಹಕರು ಮೊಬೈಲ್ ಮೂಲಕ ಆಧಾರ್ ಜೋಡಣೆ ಮಾಡುವ ವ್ಯವಸ್ಥೆ ಜಾರಿ ಮಾಡುವಂತೆ ಒತ್ತಾಯಿಸಿದ್ದರಿಂದ OTP ಮೂಲಕ ಧ್ವನಿ ನಿರ್ದೇಶಿತ ವ್ಯವಸ್ಥೆಯಡಿ ಆಧಾರ್ ಜೋಡಣೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಹೀಗಾಗಿ ಜನವರಿ 1 ಗ್ರಾಹಕರು ಮನೆಯಿಂದಲೇ ಮೊಬೈಲ್ ಗೆ ಆಧಾರ್ ಲಿಂಕ್ ಮಾಡಬಹುದಾಗಿದೆ.
ಡಿಸೆಂಬರ್ 31 ಕೊನೆ ದಿನ
ಬ್ಯಾಂಕ್ ಖಾತೆ, ವಿಮಾ ಪಾಲಿಸಿ (ಹಣಕಾಸು ಸೇವೆಗಳು), ಮ್ಯೂಚುವಲ್ ಫಂಡ್/ಇಕ್ವಿಟಿ, ಸಾಮಾಜಿಕ ಭದ್ರತಾ ಯೋಜನೆ (ಎಲ್ಪಿಜಿ ಸಬ್ಸಿಡಿ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವಿದ್ಯಾರ್ಥಿವೇತನ ಯೋಜನೆಗಳು, ಪಿಂಚಣಿ ಸೌಲಭ್ಯ ಮತ್ತು ಪಡಿತರ ಯೋಜನೆಯಡಿ ಆಹಾರ), ಪೋಸ್ಟ್ ಆಫೀಸ್ ಯೋಜನೆ ಮುಂತಾದ ಪ್ರಮುಖ ಯೋಜನೆಗಳ ಸೌಲಭ್ಯ ಪಡೆಯಲು ಡಿಸೆಂ ಬರ್ 31 ಒಳಗಾಗಿ ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ.


Click it and Unblock the Notifications