ನಿಲ್ಲಿ... ಚೆಕ್ ಬರೆಯುವ ಮುನ್ನ ಇಲ್ಲೊಮ್ಮೆ ನೋಡಿ

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಆಧುನಿಕ ತಂತ್ರಜ್ಞಾನಗಳು ಅಂಗೈಗೆ ಬಂದ ಮೇಲೆ ಹಣ ರವಾನೆ ತಂತ್ರಗಳು ಬಹಳ ಸರಳ ಮತ್ತು ಸುಲಭವಾಗಿದೆ. ಎನ್ ಇಎಫ್ ಟಿ, ಆರ್ ಟಿಜಿಎಸ್ ಬಗೆಯ ಹಣ ರವಾನೆ ತಂತ್ರಗಳು ಬಂದ ಮೇಲೆ ಹಳೆಯ ಚೆಕ್, ಮನಿ ಆರ್ಡರ್ ಪದ್ಧತಿಗಳನ್ನು ದೂರ ಇಡಲಾಗಿದೆ.

  ಮೊಬೈಲ್ ಅಪ್ಲಿಕೇಶನ್ ಗಳು ಸಹ ಹಣ ರವಾನೆಯ ಸುಲಭ ಮಾರ್ಗವನ್ನು ಹೇಳಿಕೊಟ್ಟಿವೆ. ವಿವಿಧ ವಾಲೆಟ್ ಗಳಲ್ಲಿ ಹಣ ಇಟ್ಟುಕೊಂಡು ಫೋನ್ ಮುಖಾಂತರವೇ ಇನ್ನೊಬ್ಬರ ಖಾತೆಗೆ ಕಳಿಸುವ ಅವಕಾಶವೂ ಬಂದಿದೆ.[ನಿಮ್ಮ ಮೊಬೈಲ್ ವಾಲೆಟ್ ಸುರಕ್ಷತೆಗೆ 5 ಟಿಪ್ಸ್]

  ಆದರೆ ಇಂದು ಸಹ ಕೆಲವೊಂದು ಟ್ರಾನ್ಸಾಕ್ಷನ್ ಗಳಿಗೆ ಚೆಕ್ ಬಳಕೆ ಮಾಡಲಾಗುತ್ತಿದೆ. ಆಧಾರದ ಲೆಕ್ಕದಲ್ಲಿ ಚೆಕ್ ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಚೆಕ್ ಬರೆಯುವ ಮುನ್ನ ಯಾವ ಅಂಶಗಳು ನಿಮ್ಮ ತಲೆಯಲ್ಲಿ ಇರಬೇಕು ಎಂಬುದರ ಮೇಲೂ ಗಮನ ಹರಿಸಬೇಕಾಗುತ್ತದೆ.(ಗುಡ್ ರಿಟರ್ನ್ಸ್.ಇನ್)

  ಖಾತೆಯಲ್ಲಿನ ಮೊತ್ತ

  ಚೆಕ್ ನೀಡುವ ಮುನ್ನ ನಿಮ್ಮ ಖಾತೆಯಲ್ಲಿ ಬರೆಯುತ್ತಿರುವ ಹಣದಷ್ಟು ಮೊತ್ತ ಇದೆಯೇ? ಇಲ್ಲವೇ? ಎಂಬುದು ಗೊತ್ತಿರಬೇಕು. ಇಲ್ಲವಾದಲ್ಲಿ ಇದು ನಿಮ್ಮನ್ನು ಮುಂದೆ ಕಾನೂನಿನ ಕುಣಿಕೆಗೆ ಸಿಕ್ಕಿಹಾಕಿಸಬಹುದು.

  ಹಣ ಪಡೆದುಕೊಳ್ಳುವವರ ಸರಿಯಾದ ಹೆಸರು

  ಯಾರಿಗೆ ಚೆಕ್ಕ ಬರೆಯುತ್ತಾ ಇದ್ದೀರಿ ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಹಣ ಪಡೆದುಕೊಳ್ಳುವವರ ಸರಿಯಾದ ಹೆಸರು ಬರೆಯಿರಿ. ಯಾವುದೇ ಬಗೆಯ ಗೊಂದಲಗಳಿಗೆ ಅವಕಾಶ ನೀಡದಂತೆ ಇರಲಿ.

  "ಅಕೌಂಟ್ ಪೇ" ಬಳಸಿಕೊಳ್ಳಿ

  ಚೆಕ್ ನ ಎಡಬದಿಯ ಮೇಲಿನ ಮೂಲೆಯಲ್ಲಿ ಎರಡು ಕೋರೆ ಗೆರೆಗಳನ್ನು ಎಳೆದು "ಅಕೌಂಟ್ ಪೇ"ಎಂದು ನಮೂದು ಮಾಡಿದರೆ ಸಮಸ್ಯೆ ಕಡಿಮೆ.

  ಕ್ರೆಡಿಡ್ ಸ್ಕೋರ್

  ಒಂದು ವೇಳೆ ನೀವು ನೀಡಿದ ಚೆಕ್ ಬೌನ್ಸ್ ಆದರೆ ನಿಮ್ಮ ಬ್ಯಾಂಕ್ ಖಾತೆಯ ಕ್ರೆಡಿಟ್ ಸ್ಕೋರ್ ಮೇಲೆ ಹೊಡೆತ ಬಿಳುತ್ತದೆ ಎಂಬ ಅಂಶವು ನಿಮ್ಮ ಗಮನದಲ್ಲಿ ಇರಬೇಕು.

  ಕಳೆದುಕೊಂಡ್ ಚೆಕ್ ಗಳು

  ಚೆಕ್ ಕಳೆದುಕೊಂಡರೆ ಅಥವಾ ಡ್ಯಾಮೇಜ್ ಮಾಡಿಕೊಂಡರೆ ಬ್ಯಾಂಕಿಗೆ ತಿಳಿಸುವುದು ಉತ್ತಮ. ಆ ನಂಬರ್ ಗೆ ಸಂಬಂಧಿಸಿದ ಚೆಕ್ ಗಳಿಗೆ ಪೇಮೆಂಟ್ ಮಾಡದಂತೆ ತಿಳಿಸುವುದು ಒಳಿತು.

  ಹೆಚ್ಚಿನ ಮೊತ್ತ

  2 ಲಕ್ಷಕ್ಕೂ ಅಧಿಕ ಮೊತ್ತದ ಚೆಕ್ ಆಗಿದ್ದರೆ ಅಲ್ಟ್ರಾವೈಲೆಟ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ. 5 ಲಕ್ಷದ ಮೇಲಿನ ಚೆಕ್ ಗಳಾಗಿದ್ದರೆ ಇನ್ನು ಕೆಲವು ಪರಿಶೀಲನೆ ಮಾಡಬೇಕಾಗುತ್ತದೆ.

  English summary

  Issuing A Cheque? Things You Should Know

  Using technology to access banking services, is an easy task and less time consuming unlike earlier where standing in que for most of the transactions was mandatory. An increase in NEFT, RTGS, and other online transactions have reduced the old methods of banking. But, even now some of the financial transactions demand issue of cheque, such as where individuals need to submit post-dated cheque.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more