2018 ರಲ್ಲಿ ಉದ್ಯೋಗ ಹುಡುಕಲು ದೇಶದ ಉತ್ತಮ ನಗರಗಳು ಯಾವುವು ಗೊತ್ತೆ?

ಜೀವನದಲ್ಲಿ ಉದ್ಯೋಗ ಎಂಬುವುದು ಎಲ್ಲರಿಗೂ ಅತಿ ಅಗತ್ಯವಾಗಿದೆ. ಜೀವನದ ಬಂಡಿ ಸಾಗಿಸಲು ಅಷ್ಟೇ ಅಲ್ಲದೆ ನೆಮ್ಮದಿಯ ಬದುಕಿಗೆ ಸೂಕ್ತ ಉದ್ಯೋಗ ಬೇಕು.

ಜೀವನದಲ್ಲಿ ಉದ್ಯೋಗ ಎಂಬುವುದು ಎಲ್ಲರಿಗೂ ಅತಿ ಅಗತ್ಯವಾಗಿದೆ. ಜೀವನದ ಬಂಡಿ ಸಾಗಿಸಲು ಅಷ್ಟೇ ಅಲ್ಲದೆ ನೆಮ್ಮದಿಯ ಬದುಕಿಗೆ ಸೂಕ್ತ ಉದ್ಯೋಗ ಬೇಕು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ನಮಗೆ ಹೊಂದುವಂತಹ ಸೂಕ್ತ ನೌಕರಿ ಹುಡುಕುವುದು ಅಂದುಕೊಂಡಷ್ಟು ಸುಲಭವಲ್ಲ.

ಒಳ್ಳೆಯ ಸಂಬಳ ಹಾಗೂ ಕೆಲಸದಲ್ಲಿ ಬಡ್ತಿ, ಕೆಲಸ ಹಾಗೂ ವೈಯಕ್ತಿಕ ಜೀವನದ ಸಮತೋಲನ ಮತ್ತು ಹೇರಳ ಉದ್ಯೋಗಗಳ ಅವಕಾಶವಿರುವ ಮಹಾನಗರಗಳಲ್ಲಿ ನೌಕರಿಗಾಗಿ ಹುಡುಕಾಟ ನಡೆಸುವುದು ಜಾಣತನವಾಗಿದೆ. ಕಡಿಮೆ ಉದ್ಯೋಗವಕಾಶಗಳಿರುವ ಚಿಕ್ಕ ನಗರ ಅಥವಾ ಸಾಕಷ್ಟು ಉದ್ಯೋಗವಕಾಶ ಸಿಗುವ ಮೆಟ್ರೊಪಾಲಿಟನ್ ಸಿಟಿ ಹೀಗೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ನಿರ್ಧರಿಸುವುದು ತುಸು ಕಷ್ಟದ ಕೆಲಸ. ಆದರೂ ಭಾರತದಲ್ಲಿ ಉದ್ಯೋಗ ಮಾಡಲು ಕೆಲ ಉತ್ತಮ ನಗರಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದ್ದೇವೆ.. ಅತೀ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಎಲ್ಲರ ನೆಚ್ಚಿನ 10 ಉದ್ಯಮಗಳು

1. ಬೆಂಗಳೂರು

1. ಬೆಂಗಳೂರು

ನೈಸರ್ಗಿಕವಾಗಿ ಸುಂದರವಾಗಿರುವ ಹಾಗೂ ಉದ್ಯಾನಗಳ ನಗರ ಎಂದು ಹೆಸರು ಮಾಡಿರುವ ಬೆಂಗಳೂರು ಮಹಾನಗರದಲ್ಲಿ ಉದ್ಯೋಗ ಮಾಡುತ್ತೇನೆ ಎನ್ನುವವರಿಗೆ ಸಾಕಷ್ಟು ಅವಕಾಶಗಳಿವೆ. ಉದ್ಯೋಗ ವಲಯದ ಹೆಸರಾಂತ ಜಾಲತಾಣ Payscale.com ವರದಿಯ ಪ್ರಕಾರ ಬೆಂಗಳೂರಿನಲ್ಲಿ ಸರಾಸರಿ ಸಂಬಳದ ಪ್ರಮಾಣ 5,85,527 ರೂಪಾಯಿ ಹಾಗೂ ಬೆಳವಣಿಗೆ ದರ ಶೇ. 29ರಷ್ಟಿದೆ. ತನ್ನಲ್ಲಿರುವ ಸಾವಿರಾರು ಐಟಿ ಕಂಪನಿಗಳಿಂದ ಸಿಲಿಕಾನ್ ವ್ಯಾಲಿ ಎಂದು ಹೆಸರಾಗಿರುವ ಬೆಂಗಳೂರು, ಶೇ. 25ರಷ್ಟು ಎಂಜಿನೀಯರಿಂಗ್ ಪದವೀಧರರ ಮೊದಲ ಆಯ್ಕೆಯಾಗಿದೆ. ಮಾತೃಶ್ರೀ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ ಹಾಗು ಬೇಕಾಗುವ ದಾಖಲಾತಿಗಳೇನು?

2. ಮುಂಬೈ

2. ಮುಂಬೈ

ಕನಸುಗಳನ್ನು ಸಾಕಾರಗೊಳಿಸುವ ನಗರವಾಗಿ ಹೆಸರು ಪಡೆದಿರುವ ಮುಂಬೈ ಮಹಾನಗರಿ ವಿಭಿನ್ನ ರೀತಿಯ ಉದ್ಯೋಗವಕಾಶಗಳನ್ನು ಯಾವಾಗಲೂ ಸೃಷ್ಟಿಸುತ್ತ, ಹೊಸಬರಿಗೆ ಆಶಾಕಿರಣವಾಗಿದೆ. ಮುಂಬೈನಲ್ಲಿ ಸರಾಸರಿ ವಾರ್ಷಿಕ ಸಂಬಳ 4,98,475 ರೂಪಾಯಿಗಳಾಗಿದ್ದು, ತಲಾ ಆದಾಯ 1,25,749 ರೂಪಾಯಿಗಳಾಗಿದೆ. ಇಲ್ಲಿ ಮನೆ ಬಾಡಿಗೆ ದರ ದುಬಾರಿ ಆಗಿದ್ದರೂ ಗಳಿಕೆಗೆ ಅಷ್ಟೇ ಹೇರಳ ಅವಕಾಶಗಳೂ ಇವೆ.

3. ದೆಹಲಿ

3. ದೆಹಲಿ

ಹೊಸದಾಗಿ ಉದ್ಯೋಗ ಆರಂಭಿಸಿ ಜೀವನ ಕಟ್ಟಿಕೊಳ್ಳಬಯಸುವವರಿಗೆ ದೆಹಲಿ ಆಕರ್ಷಕವಾಗಿದ್ದು, ಇಲ್ಲಿ ಸರಾಸರಿ ವಾರ್ಷಿಕ ರೂ. 4,82,307 ಸಂಬಳ ಪಡೆಯುವ ಸಾಧ್ಯತೆಗಳಿವೆ. ಎಎಂಆರ್‌ಸಿ ಅಧ್ಯಯನದ ಪ್ರಕಾರ ಶೇ. 32ರಷ್ಟು ಉದ್ಯೋಗಾಕಾಂಕ್ಷಿಗಳು ದೆಹಲಿ ಮಹಾನಗರ ತಮ್ಮ ಮೊದಲ ಆಯ್ಕೆಯಾಗಿದೆ ಎಂದು ಹೇಳಿದ್ದು ಕಂಡು ಬಂದಿದೆ.

4. ಪುಣೆ

4. ಪುಣೆ

ಇನ್ಫರ್ಮೇಶನ್ ಟೆಕ್ನಾಲಜಿ, ಅಟೊಮೊಬೈಲ್ ಹಾಗೂ ಉತ್ಪಾದನಾ ಉದ್ದಿಮೆಗಳ ಸಂಗಮವಾಗಿರುವ ಪುಣೆ ದೇಶದ ಮತ್ತೊಂದು ಬೃಹತ್ ಉದ್ಯೋಗವಕಾಶಗಳ ನಗರವಾಗಿದೆ. ಸರಾಸರಿ ವಾರ್ಷಿಕ 5,30,918 ರೂಪಾಯಿ ಸಂಬಳ ಪಡೆಯುವ ಸಾಧ್ಯತೆ ಇರುವ ಇದು ಹೊಸಬರಿಗೂ ಅವಕಾಶಗಳ ಆಗರವಾಗಿದೆ.

5. ಚೆನ್ನೈ

5. ಚೆನ್ನೈ

ಅಟೊಮೊಬೈಲ್ ಉದ್ದಿಮೆಯ ರಾಜಧಾನಿ ಎಂದು ಕರೆಸಿಕೊಳ್ಳುವ ಚೆನ್ನೈ, ಹಲವಾರು ದಕ್ಷಿಣ ಭಾರತದ ಕಂಪನಿಗಳ ಪ್ರಮುಖ ಕೇಂದ್ರವಾಗಿದೆ. ಸಮತೋಲಿತ ಬಜೆಟ್ ನಲ್ಲಿ ಜೀವನ ಸಾಗಿಸಬಹುದಾದ ಉತ್ತಮ ನಗರಗಳಲ್ಲಿ ಚೆನ್ನೈ ಒಂದಾಗಿದೆ. ವಾರ್ಷಿಕವಾಗಿ ಸರಾಸರಿ 4,44,235 ರೂಪಾಯಿಗಳಷ್ಟು ಸಂಬಳ ಪಡೆಯಬಹುದಾದ ಹಾಗೂ ಶೇ. 6ರಷ್ಟು ಉದ್ಯೋಗದಲ್ಲಿ ಬೆಳವಣಿಗೆ ಹೊಂದಿರುವ ನಗರ ಇದಾಗಿದೆ.

6. ಹೈದರಾಬಾದ್

6. ಹೈದರಾಬಾದ್

ಮುತ್ತುಗಳ ನಗರಿ ಹೈದರಾಬಾದ್ ತನ್ನಲ್ಲಿನ ವಿಶಿಷ್ಟ ಪುರಾತನ ಸ್ಮಾರಕಗಳಿಂದಲೂ ಹೆಸರಾಗಿದೆ. ಈ ಮಹಾನಗರದಲ್ಲಿ ಜಗತ್ತಿನ ಬೃಹತ್ ಕಂಪನಿಗಳಾದ ಗೂಗಲ್, ಫೇಸ್ ಬುಕ್ ಮತ್ತು ಮೈಕ್ರೊಸಾಫ್ಟ್ ಕಚೇರಿಗಳೂ ಇವೆ ಎಂಬುದನ್ನು ತಿಳಿದರೆ ಆಶ್ಚರ್ಯವಾಗುತ್ತದೆ. ವಾರ್ಷಿಕ ಸರಾಸರಿ 4,89,505 ರೂಪಾಯಿ ಸಂಬಳ ನೀಡುವ ಇದು ದೇಶದ ಶೇ. 30ರಷ್ಟು ಜನರ ಮೆಚ್ಚಿನ ಆಯ್ಕೆಯಾಗಿದೆ.

7. ಚಂಡೀಗಢ

7. ಚಂಡೀಗಢ

ಸುಂದರ ನಗರವಾಗಿ ಕರೆಸಿಕೊಳ್ಳುವ ಚಂಡೀಗಢ ವಾಸಿಸಲು ಅತ್ಯಂತ ಮಧುರವಾದ ನಗರವಾಗಿದೆ. ಹೊಸದಾಗಿ ನೌಕರಿ ಜೀವನ ಆರಂಭಿಸಲು ಈ ನಗರ ಸೂಕ್ತವಾಗಿದೆ. ಟೆಲಿಕಮ್ಯುನಿಕೇಶನ್ ಕ್ಷೇತ್ರದ ಹಲವಾರು ಕಂಪನಿಗಳನ್ನು ಹೊಂದಿರುವ ಇಲ್ಲಿ ವಾರ್ಷಿಕ ಸರಾಸರಿ 5,52,485 ರೂಪಾಯಿ ಸಂಬಳ ಪಡೆಯುವ ಅವಕಾಶವಿದೆ. ಇಲ್ಲಿನ ಶೇ. 22ರಷ್ಟು ಜನ ವರ್ಷಕ್ಕೆ 10 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಗಳಿಸುವುದು ವಿಶೇಷವಾಗಿದೆ. ಉತ್ತಮ ಜೀವನ ಸೇರಿದಂತೆ ಒಳ್ಳೆಯ ಉದ್ಯೋಗ ಭವಿಷ್ಯವನ್ನು ಚಂಡೀಗಢ ನೀಡುತ್ತದೆ.

8. ಗುರುಗ್ರಾಮ

8. ಗುರುಗ್ರಾಮ

ಈ ಮುಂಚೆ ಗುರಗಾಂವ್ ಎಂದು ಕರೆಯಲ್ಪಡುತ್ತಿದ್ದ ಹರಿಯಾಣಾ ರಾಜ್ಯದ ಪ್ರಮುಖ ನಗರ ಗುರುಗ್ರಾಮ ಉದ್ಯೋಗಾವಕಾಶಗಳಿಗೆ ಹೆಸರಾಗಿದೆ. ಇಲ್ಲಿ ಶೇ.11ರಷ್ಟು ಉದ್ಯೋಗ ಬೆಳವಣಿಗೆಯ ಅವಕಾಶಗಳಿವೆ. ಇಲ್ಲಿ ಕೆಲಸ ಮಾಡುವ ಶೇ. 59 ರಷ್ಟು ಉದ್ಯೋಗಿಗಳು ವರ್ಷಕ್ಕೆ ೩ ರಿಂದ ೧೦ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದು, ಕೆಲಸದಲ್ಲಿ ಉನ್ನತಿ ಹೊಂದುವ ಅವಕಾಶಗಳು ಹೇರಳವಾಗಿವೆ. ಗುರುಗ್ರಾಮನಲ್ಲಿ ವಾರ್ಷಿಕ ಸರಾಸರಿ ಸಂಬಳ 7,50,000 ರೂಪಾಯಿಗಳಾಗಿದೆ.

ನೀವು ಕೆಲಸದ ಹುಡುಕಾಟದಲ್ಲಿದ್ದರೆ ಮೇಲೆ ತಿಳಿಸಿದ ಪ್ರಮುಖ ನಗರಗಳು ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಬಲ್ಲವು.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+