For Quick Alerts
ALLOW NOTIFICATIONS  
For Daily Alerts

ಮಾತೃಶ್ರೀ ಯೋಜನೆ: ಗರ್ಭಿಣಿಯರಿಗೆ 6 ಸಾವಿರ ಹಣ, ಅರ್ಜಿ ಸಲ್ಲಿಸುವುದು ಹೇಗೆ ಹಾಗು ಬೇಕಾಗುವ ದಾಖಲಾತಿಗಳೇನು?

ಮಹಿಳೆಯರಿಗಾಗಿ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ಪ್ರಕಟಿಸಿದ್ದಾರೆ. ಮಾತೃಶ್ರೀ ಯೋಜನೆಯಡಿ ಅರ್ಜಿ ಸಲ್ಲಿಸುವ ವಿಧಾನ, ಬೇಕಾದ ದಾಖಲಾತಿಗಳು, ಸಿಗುವ ಮೊತ್ತ ಇತ್ಯಾದಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ

By Siddu
|

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಮೊದಲ ಬಜೆಟ್ ನಲ್ಲಿ ಹಲವಾರು ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದು, ಇದರಲ್ಲಿ ಮಹಿಳೆಯರಿಗಾಗಿ ಕೂಡ ಕೆಲ ಯೋಜನೆಗಳನ್ನು ಘೋಷಿಸಿದ್ದಾರೆ.

ಮಹಿಳೆಯರಿಗಾಗಿ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ಪ್ರಕಟಿಸಿದ್ದಾರೆ. ಮಾತೃಶ್ರೀ ಯೋಜನೆಯಡಿ ಅರ್ಜಿ ಸಲ್ಲಿಸುವ ವಿಧಾನ, ಬೇಕಾದ ದಾಖಲಾತಿಗಳು, ಸಿಗುವ ಮೊತ್ತ ಇತ್ಯಾದಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಮಾತೃಶ್ರೀ ಯೋಜನೆ ಏನಿದು?

ಮಾತೃಶ್ರೀ ಯೋಜನೆ ಏನಿದು?

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಕುಟುಂಬ) ಗರ್ಭಿಣಿ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಈ ಯೋಜನೆ ಪ್ರಕಟಿಸಿದೆ. ಈಗಾಗಲೇ ರಾಜ್ಯಸರ್ಕಾರದ ಮಾತೃಪೂರ್ಣ ಮತ್ತು ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆಗಳು ಕೂಡ ಜಾರಿಯಲ್ಲಿವೆ. ಇವುಗಳೊಂದಿಗೆ ಕುಮಾರಸ್ವಾಮಿಯವರು ಮಾತೃಶ್ರೀ ಯೋಜನೆಯನ್ನು ಹೊಸದಾಗಿ ರೂಪಿಸಿದ್ದಾರೆ.  ಬಜೆಟ್ 2018: ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..

ರೂ. 6000 ಸಹಾಯಧನ

ರೂ. 6000 ಸಹಾಯಧನ

ಮಾತೃಶ್ರೀ ಯೋಜನೆ (Mathru shree scheme) ಮುಖಾಂತರ ಫಲಾನುಭವಿಗಳು ಒಟ್ಟು ರೂ. ೬೦೦೦ ಪಡೆಯಬಹುದಾಗಿದೆ. ಇದನ್ನು ಎರಡು ಹಂತದಲ್ಲಿ ನೀಡಲಾಗುತ್ತದೆ. ಮೊದಲನೆಯದು ಹೆರಿಗೆ ಪೂರ್ವದ ಮೂರು ತಿಂಗಳಿಗೆ ತಲಾ ಒಂದು ಸಾವಿರ ಹಾಗು ಹೆರಿಗೆ ನಂತರದ ಮೂರು ತಿಂಗಳು ತಲಾ ಒಂದು ಸಾವಿರ ನೀಡಲಾಗುತ್ತದೆ.

ಅಂಗನವಾಡಿ ಮೇಲುಸ್ತುವಾರಿ

ಅಂಗನವಾಡಿ ಮೇಲುಸ್ತುವಾರಿ

ಮಾತೃಶ್ರೀ ಯೋಜನೆಯ ಮೇಲುಸ್ತುವಾರಿಯನ್ನು ಆಯಾ ಆಯಾ ಗ್ರಾಮಗಳ ಅಂಗನವಾಡಿ ಶಿಕ್ಷಕಿಯರಿಗೆ ಅಥವಾ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿ ಸಲ್ಲಿಕೆ ಹೇಗೆ?

ನಿಮ್ಮ ಗ್ರಾಮದ ಅಥವಾ ಸುತ್ತಮುತ್ತಲಿನ ಅಂಗನವಾಡಿ ಶಿಕ್ಷಕಿಯರು ಅಥವಾ ಆಶಾ ಕಾರ್ಯಕರ್ತೆಯರ ಬಳಿ ನೀವು ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದು. ಬೇಕಾಗುವ ದಾಖಲಾತಿಗಳನ್ನು ಕೂಡ ಇವರಿಗೆ ಸಲ್ಲಿಸಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಿ ಪರಿಪೂರ್ಣ ಮಾಹಿತಿ ಪಡೆಯಿರಿ.

ಬೇಕಾಗುವ ದಾಖಲಾತಿಗಳು

ಬೇಕಾಗುವ ದಾಖಲಾತಿಗಳು

ತಾಯಿ ಕಾರ್ಡ್
ಆಧಾರ್ ಕಾರ್ಡ್
ಚುನಾವಣಾ ಚೀಟಿ
ಆಧಾರ್ ಕಾರ್ಡ್ ಲಿಂಕ್ ಆದ ಬ್ಯಾಂಕ್ ಖಾತೆ
ಪತಿಯ ಆಧಾರ್ ಮತ್ತು ಚುನಾವಣಾ ಚೀಟಿ

ಯೋಜನೆ ಜಾರಿ, ನಿಯಮ

ಯೋಜನೆ ಜಾರಿ, ನಿಯಮ

ನವೆಂಬರ್ ಒಂದರಿಂದ ಮಾತೃಶ್ರೀ ಯೋಜನೆ ಜಾರಿಯಾಗಲಿದ್ದು, ಈ ಯೋಜನೆ ಎರಡು ಮಕ್ಕಳಿಗೆ ಅನ್ವಯವಾಗಲಿದೆ. ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ಈ ಮೊತ್ತ ಜಮೆಯಾಗುತ್ತದೆ.

ಯೋಜನೆ ಮೀಸಲಿಟ್ಟ ಮೊತ್ತ

ಯೋಜನೆ ಮೀಸಲಿಟ್ಟ ಮೊತ್ತ

ಮಾತೃಶ್ರೀ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ರೂ. ೩೫೦ ಕೋಟಿಗಳನ್ನು ಮೀಸಲಿ ಇಡಲಾಗಿದೆ ಎಂದು ಮುಖ್ಯಮಂತ್ರ ಕುಮಾರಸ್ವಾಮಿ ತಿಳಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಈ ಮೊತ್ತವನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು.

ಕಿವಿ ಮಾತು

ಕಿವಿ ಮಾತು

ಗರ್ಭಿಣಿಯರು ಇದಕ್ಕೆ ಬೆಕಾಗಬಹುದಾದ ದಾಖಲಾತಿಗಳನ್ನು ಸರಿಪಡಿಸುವುದು ಒಳಿತು. ತಾಯಿ ಮನೆಯ ಡಾಕ್ಯುಮೆಂಟ್ ಇಲ್ಲವೆ ಬೇರೆ ಬೇರೆ ಡಾಕ್ಯುಮೆಂಟ್ ಗಳು ತಯಾರಿ ಇಟ್ಟುಕೊಳ್ಳುವುದು ಉತ್ತಮ. ನಿಮ್ಮ ಹತ್ತಿರದ ನೆಮ್ಮದಿ ಕೇಂದ್ರ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಮಾಡಿಸಿಕೊಳ್ಳಿ.

ವೃದ್ದಾಪ್ಯ ವೇತನ ಹೆಚ್ಚಳ

ವೃದ್ದಾಪ್ಯ ವೇತನ ಹೆಚ್ಚಳ

ವೃದ್ದಾಪ್ಯ ವೇತನದ ಪ್ರಮಾಣವನ್ನು ಮಾಸಿಕ ರೂ. ೬೦೦ ರಿಂದ ರೂ. ೧೦೦೦ಕ್ಕೆ ಹೆಚ್ಚಿಸಲಾಗಿದೆ.

ಲೈಂಗಿಕ ಕಾರ್ಯಕರ್ತೆರಿಗೆ ಭದ್ರತೆ

ಲೈಂಗಿಕ ಕಾರ್ಯಕರ್ತೆರಿಗೆ ಭದ್ರತೆ

ಲೈಂಗಿಕ ಕಾರ್ಯಕರ್ತೆಯರ ಜೀವನಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹಲವು ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ವಸತಿ, ಕೌಶಲ್ಯಾಭಿವೃದ್ಧಿ, ಸ್ವಯಂ-ಉದ್ಯೋಗ, ಮಾಸಾಶನ, ಆರೋಗ್ಯ ಸೇವೆ, ಆಹಾರ ಭದ್ರತೆ, ಸಾಮಾಜಿಕ ಭದ್ರತೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಎಚ್. ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಶೂನ್ಯ ಬಡ್ಡಿದರದಲ್ಲಿ ೫ ಲಕ್ಷ ಸಾಲ

ಶೂನ್ಯ ಬಡ್ಡಿದರದಲ್ಲಿ ೫ ಲಕ್ಷ ಸಾಲ

ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಬಜೆಟ್‍ನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಒದಗಿಸುತ್ತಿದ್ದ ರೂ. ೩ ಲಕ್ಷಗಳವರೆಗಿನ ಕೃಷಿ ಸಾಲವನ್ನು ರೂ. ೫ ಲಕ್ಷಕ್ಕೆ ಏರಿಸಿರುವುದಾಗಿ ಪ್ರಕಟಿಸಿದ್ದಾರೆ.

English summary

How to Apply for Mathru shree Scheme? What are the required documents?

Mathrushree Scheme: Rs 6,000 for pregnant women, what are the procedures for applying and the necessary documents?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X