ಅತೀ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಎಲ್ಲರ ನೆಚ್ಚಿನ 10 ಉದ್ಯಮಗಳು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ವ್ಯಾಪಾರಿ ತನಗೊಂದಿಷ್ಟು ಲಾಭವನ್ನು ಮೀಸಲಿಟ್ಟು, ವಿವಿಧ ರೀತಿಯ ಸರಕು ಮತ್ತು ಸೇವೆಗಳನ್ನು, ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಪದ್ದತಿಯೇ ವ್ಯಾಪಾರ ಎಂದು ಹೇಳಬಹುದು. ಇದು ದೇಶದಲ್ಲೇ, ಅತ್ಯಂತ ಲಾಭದಾಯಕ ವ್ಯಾಪಾರ ಎಂದು ಪರಿಗಣಿಸಲ್ಪಡುತ್ತದೆ. ವ್ಯವಹಾರದಲ್ಲಿ ವಿವಿಧ ರೀತಿಯ ಅವಕಾಶಗಳು ಹುಟ್ಟಿಕೊಂಡಿವೆ. ಕಡಿಮೆ ಬಂಡವಾಳವನ್ನು ಹೂಡಿ, ಕಡಿಮೆ ಶ್ರಮದಲ್ಲಿ ಲಾಭದಾಯಕ ವೃತ್ತಿಯು ನಿಮ್ಮದಾಗಿಸಿಕೊಳ್ಳಬಹುದು. ಚಿಕ್ಕ ವ್ಯವಹಾರದಿಂದ, ಆತ್ಯುತ್ತಮ ಮಟ್ಟಕ್ಕೂ ಸಾಗುವ ಅವಕಾಶವಿದೆ.

  ಒಂದು ಚಿಕ್ಕ ಚಿಲ್ಲರೆ ವ್ಯಪಾರವನ್ನು, ಎಷ್ಟರಮಟ್ಟಿಗಾದರು ವ್ಯವಹಾರವನ್ನು ವೃದ್ಧಿಸಿಕೊಳ್ಳಬಹುದು. ಚಿಲ್ಲರೆ ವ್ಯಾಪಾರದಲ್ಲಿರುವ ಯಶಸ್ಸಿನ ಗುಟ್ಟು, ಅಲ್ಲಿ ಮಾರುವ ಉತ್ಪನ್ನಗಳ ಗುಣ, ವ್ಯಪಾರದ ಸ್ಥಳ ಮತ್ತು ಗ್ರಾಹಕರ ಸಹಾಯದಲ್ಲಿ ಅಡಗಿದೆ. ಮನೆಯಿಂದಲೇ ಚಿಲ್ಲರೆ ವ್ಯವಹಾರವನ್ನು, ಪ್ರಾರಂಭಿಸುವವರು ಇದ್ದಾರೆ.
  ಚಿಲ್ಲರೆ ವ್ಯಾಪಾರದಲ್ಲಿ, ವಿವಿಧ ರೀತಿಯ ವ್ಯವಹಾರಗಳಿವೆ. ಚಿಲ್ಲರೆ ವ್ಯಾಪಾರದಲ್ಲಿ ಲಾಭದಾಯಕ ದಾರಿಯನ್ನು ಹುಡುಕುತ್ತಿರುವ, ಕ್ರಿಯಾತ್ಮಕರು ನಿವಾಗಿದ್ದರೆ, ನಿಮಗಾಗಿ ಅತೀ ಕಡಿಮೆ ಬಂಡವಾಳಾದಲ್ಲಿ ಪ್ರಾರಂಭಿಸುವ ಚಿಲ್ಲರೆ ವ್ಯಾಪಾರದ ವಿಧಾನಗಳು ಇಲ್ಲಿವೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  1. ಕಾಸ್ಮೆಟಿಕ್ ಅಂಗಡಿ

  ಇತ್ತೀಚಿನ ದಿನಗಳಲ್ಲಿ, ಜನರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ತೋರಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಈ ಕೆಲಸ ಬಹಳ ಸೂಕ್ತವಿರುತ್ತದೆ. ಹೆಚ್ಚಾಗಿ ಮಹಿಳೆಯರೇ, ಸೌಂದರ್ಯ ವರ್ಧಕಗಳನ್ನು ಖರೀದಿ ಮಾಡುವುದರಿಂದ, ಮಾತಾಡಿ ವ್ಯವಹರಿಸಲು ಸುಲಭವಾಗುತ್ತದೆ. ಇದೂ ಕೂಡ ಒಂದು ಉತ್ತಮ ಮತ್ತು ಲಾಭದಾಯಕ ವ್ಯಪಾರವಾಗಿದೆ. ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

  2. ಚರ್ಮದಿಂದ ಮಾಡಿದ ವಸ್ತುಗಳು ಮತ್ತು ಸುಗಂಧ ದ್ರವ್ಯಗಳು

  ಚರ್ಮದಿಂದ ಮಾಡಿರುವ ವಸ್ತುಗಳೆಂದರೆ, ಬೆಲ್ಟ್ ಗಳು, ಬ್ಯಾಗ್ ಗಳು, ಕೈಚೀಲಗಳು ಹಾಗೂ ಇತರೆ ವಸ್ತುಗಳು. ಸುಗಂಧ ದ್ರವ್ಯಗಳಿಗೂ ಈಗ ಬಹಳ ಬೇಡಿಕೆ ಇದೆ. ಇದು, ದಿನನಿತ್ಯ ಬೇಕಾಗಿರುವ ವಸ್ತುವಾದ್ದರಿಂದ, ಈ ಕೆಲಸಕ್ಕೆ ಅಂತ್ಯವಿಲ್ಲ. ಇದಕ್ಕೆ ಹೆಚ್ಚಿನ ಬಂಡವಾಳವೂ ಬೇಕಾಗುವುದಿಲ್ಲ ಮತ್ತು ಲಾಭದಾಯಕವೂ ಕೂಡ.

  3. ಮೊಬೈಲ್ ಅಂಗಡಿ

  ಮೊಬೈಲ್ ಅಂಗಡಿಯನ್ನು ನೀವು ಸಾಮಾನ್ಯವಾಗಿ ನೋಡಿರಬಹುದು. ಸದಾ ಬೇಡಿಕೆಯಲ್ಲಿ ಇರುವ ಕೆಲವು ವಸ್ತುಗಳಲ್ಲಿ ಮೊಬೈಲ್ ಕೂಡ ಒಂದು. ಭಾರತದ ಗರಿಷ್ಠ ನೂರಕ್ಕೆ ನೂರು ಶೇಕಡ ಇದಕ್ಕೆ ಅವಲಂಬಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಟೆಕ್ನಾಳಜಿಗಳು ವೇಗವಾಗಿ ಬೆಳೆಯುತ್ತಿರುವುದರಿಂದ, ಕಡಿಮೆ ಬಂಡವಾಳದಿಂದ ಪ್ರಾರಂಭಿಸುವುದು ಸೂಕ್ತ. ಇದರಲ್ಲಿ ಲಾಭದ ಪ್ರಮಾಣ ಹೆಚ್ಚಿರುತ್ತದೆ. ಆದರ ಬಗ್ಗೆ ತಿಳಿದುಕೊಂಡರೆ ಸಾಕಾಗುತ್ತದೆ.

  4. ಜೆರಾಕ್ಸ್ ಅಂಗಡಿ

  ಜೆರಾಕ್ಸ್ ಅಂಗಡಿಯಲ್ಲಿ, ಅದಕ್ಕೆ ಸಂಬಂಧ ಪಡುವ ವಸ್ತುವಾಗಿ, ಪುಸ್ತಕಗಳು, ಹಲವು ರೀತಿಯ ಪೇಪರ್ ಗಳು ಅದರ ಜೊತೆಗೆ ಮಾರಾಟಕ್ಕಿಟ್ಟರೆ ಯಶಸ್ಸು ಕಾಣಬಹುದು. ಜನರಿಗೆ ಬೇಕಾಗುವ ವಸ್ತುಗಳನ್ನು, ಒಂದೇ ಕಡೆ ಸಿಕ್ಕರೆ, ಅತ್ತ ಕಡೆ ಜನರು ವಾಲುತ್ತಾರೆ. ಆದರಿಂದ, ಇಂತಹ ವ್ಯಪಾರವು ಅತೀ ವೇಗದಲ್ಲಿ ಯಶಸ್ಸು ಕಾಣುತ್ತದೆ. ಇದಕ್ಕೆ ಬಂಡವಾಳವೂ ಹೆಚ್ಚಾಗಿ ಬೇಕಾಗುವುದಿಲ್ಲ. ಈ ವೃತ್ತಿ ಕ್ರಮೇಣ ಲಾಭದಾಯಕವಾಗಿರುತ್ತದೆ.

  5. ಯೋಗ ಅಥವಾ ಫಿಟ್ನೆಸ್ ಶಾಪ್ ಗಳು

  ಇತ್ತೀಚಿನ ದಿನದಲ್ಲಿ ಆರೋಗ್ಯದ ಕಡೆ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಆದರಿಂದ, ಹೆಚ್ಚಿನ ಜನರು ಫಿಟ್ನೆಸ್ ಕಡೆಗೆ ಮುಖ ಮಾಡುತ್ತಿದ್ದಾರೆ. ಇದಕ್ಕೆ, ಹೆಚ್ಚಿನ ಬಂಡವಾಳ ಬೇಕಾದರೂ, ಲಾಭಕ್ಕೆ ಯಾವುದೇ ರೀತಿಯ ಮೊಸವಿಲ್ಲ. ಇನ್ನು ಯೋಗ ಕಲಿಸುವ ಕೆಲಸ ಮಾಡಬಹುದು. ಇದಕ್ಕೆ ಯಾವುದೇ ರೀತಿಯ ಬಂಡವಾಳವೂ ಬೇಕಾಗುವುದಿಲ್ಲ. ಅದನ್ನು ಕಲಿಸುವ ಕೌಶಲ್ಯ, ನಿಮಗಿದ್ದರೆ ಸಾಕು. ಪಬ್ಲಿಕ್ ಪಾರ್ಕ್ ಗಳಲ್ಲೂ ಇದನ್ನು ಹೇಳಿಕೊಡುವ ಕೆಲಸ ಮಾಡಬಹುದು.

  6. ಸೌಂದರ್ಯ ಹೆಚ್ಚಿಸುವ ಸಲೂನ್ ಗಳು

  ಇದೂ ಕೂಡ ಭಾರತದಲ್ಲಿ, ಇತ್ತೀಚಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಇನ್ನೂ ಸಿನಿಮಾ ರಂಗದಲ್ಲಿರುವವರಿಗೆ ಇದು ಅತ್ಯಗತ್ಯ. ಇದಕ್ಕೆ ಕೆಲವು ಕೌಶಲ್ಯದ ಅಗತ್ಯವಿದೆ. ಒಮ್ಮೆ ನಿಮ್ಮ ಕೆಲಸ ಮೆಚ್ಚಿಕೊಂಡರೆ, ನಿಮ್ಮಲ್ಲಿಗೆ ಬರಲು ಪ್ರಾರಂಭಿಸುತ್ತಾರೆ. ಇದಕ್ಕೆ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ.

  7. ಕೊರಿಯರ್ ಸೇವೆಗಳು

  ಭಾರತದಲ್ಲಿ, ಪಾರ್ಸೆಲ್ ಮತ್ತು ಕೊರಿಯರ್ ಸೇವೆಗಳ ಸಂಸ್ಥೆಯು ಶೇಕಡ 25 ರಷ್ಟು, ಬೆಳವಣಿಗೆಯನ್ನು ಕಾಣುತ್ತಿವೆ. ಇದರ ಲಾಭವನ್ನು ನೀವೂ ಪಡೆಯ ಬೇಕಾದರೆ, ನಿವಾಗಿಯೇ ಸ್ವಂತವಾಗಿ ಪ್ರಾರಂಭಿಸಬಹುದು ಅಥವಾ ಯಾವುದಾದರೂ ಕಂಪೆನಿಯೊಂದರ ಫ್ರಾಂಚೈಸಿಯನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಗ್ರಾಹಕರಿಗೆ ಸೇವೆ ನೀಡುವಲ್ಲಿ ಉತ್ತಮರಾಗಿರಬೇಕು.

  8. ವೈದ್ಯಕೀಯ ರೋಗ ನಿರ್ಣಯ ಸೆಂಟರ್

  ಇದೂ ಒಂದು ವ್ಯಾಪರವೇ ಆಗಿದೆ. ಹೆಚ್ಚುತ್ತಿರುವ ಖಾಯಿಲೆಗಳಿಂದ, ರೋಗವನ್ನು ನಿರ್ಣಯಿಸಿ ನಿಯಂತ್ರಿಸಲು, ಇಂತಹ ಸೆಂಟರ್ ಗಳು ಕೆಲಸಮಾಡುತ್ತವೆ. ಈ ಕೆಲಸಕ್ಕಾಗಿ ಉತ್ತಮ ಪದವಿ ಮತ್ತು ಹೆಚ್ಚಾಗಿ ಬಂಡವಾಳವೂ ಬೇಕಾಗುತ್ತದೆ. ಇದು ಅತ್ಯಂತ ಲಾಭದಾಯಕವೆಂದು ಹೇಳಬಹುದು.

  9. ಪ್ರವಾಸಕ್ಕೆ ಹೊರಡುವ ಪ್ರಯಾಣಿಕರನ್ನು ಸಂಘಟಿಸುವುದು

  ಇದು ಒಬ್ಬರ ಪಾಲಿಗೆ, ಉತ್ತಮ ವೃತ್ತಿಯಾಗಿ ಪರಿಣಮಿಸಬಹುದು. ಆಸಕ್ತಿಯುಳ್ಳ ಹಲವು ಜನರನ್ನು ಒಟ್ಟುಗೂಡಿಸಿ, ಪ್ರಯಾಣಕ್ಕೆ ಕಲಿಸುವ ಕೆಲಸ ಮಾಡುವುದು. ಇದಕ್ಕೆ, ಹಲವು ಸಂಪರ್ಕಗಳನ್ನು ಹೊಂದಿರಬೇಕಾಗುತ್ತದೆ. ಈ ಕೆಲಸದಲ್ಲಿ ಮುಂದುವರಿಯುತ್ತ, ಕ್ರಮೇಣವಾಗಿ ಲಾಭವನ್ನು ಕಾಣಬಹುದು.

  10. ಫೋಟೋ ಸ್ಟುಡಿಯೋ

  ಫೋಟೋ ಸ್ಟುಡಿಯೋ ಪ್ರಾರಂಭಿಸುವುದು ಅಥವಾ ಛಾಯಾಗ್ರಾಹಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದು. ಎಲ್ಲಾ ಸಮಾರಂಭಗಳಿಗೂ, ಫೋಟೋ ತೆಗೆಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಆದರಿಂದ ಇದಕ್ಕೆ ಬೇಡಿಕೆಯೂ ಹೆಚ್ಚಿದೆ. ಇದನ್ನು ಪ್ರಾರಂಭಿಸಲು ಸ್ಥಳ ಮತ್ತು ಸೂಕ್ತ ಕೌಶಲ್ಯವಿದ್ದರೆ ಸಾಕಾಗುತ್ತದೆ. ಬಂಡವಾಳವೂ ಹೆಚ್ಚಾಗಿ ಬೇಕಾಗುವುದಿಲ್ಲ.

  ಕೊನೆ ಮಾತು

  ನಿಮ್ಮ ತಿಳುವಳಿಕೆಗೆ ಈ ಮೇಲಿನ ಮಾಹಿತಿಯನ್ನು ನೀಡಿದ್ದೇವೆ. ಯಾವುದೇ ಕೆಲಸವಾದರೂ, ಅದರ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ, ಮುಂದುವರಿಸುವುದು ಉತ್ತಮ. ಹಾಗೆಯೇ, ನೀವು ಮನದಟ್ಟು ಮಾಡಿಕೊಳ್ಳಬೇಕಾದ ವಿಷಯವೆಂದರೆ, ಯಾವುದೇ ಕೆಲಸ ಕೀಳಲ್ಲ. ನಾವು ಎಷ್ಟೇ ಓದಿದರು, ನಮ್ಮ ಮನಸ್ಸು ಹೇಳುವ ಕೆಲಸವನ್ನು ಮಾಡಬೇಕು. ಯಾವುದೇ ಕೆಲಸವನ್ನು ಶ್ರಮವಹಿಸಿ ಮಾಡಿದ್ದೆ ಆದರೆ, ನಿಮ್ಮ ಯಶಸ್ಸನ್ನು ಹಿಡಿದಿಡುವ ಶಕ್ತಿ ಯಾರಿಗೂ ಇಲ್ಲ. "ಕಾಯಕವೇ ಕೈಲಾಸ". ನಿಮ್ಮ ಶಕ್ತಿಯ ಬಗ್ಗೆ ನಿಮಗೆ ಮಾತ್ರ ತಿಳಿದಿರುತ್ತದೆ. ನಿಮ್ಮಲ್ಲಿ ನಂಬಿಕೆ ಇಟ್ಟು, ಕೆಲಸವನ್ನು ಪ್ರಾರಂಭಿಸಿ. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ.

  English summary

  Top 10 Business Ideas with Low Investment

  Business means selling product or services to the customer directly for earning a profit. A person running a retail business is called as a retailer.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more