For Quick Alerts
ALLOW NOTIFICATIONS  
For Daily Alerts

ಸಿಟಿಸಿ ಮತ್ತು ಟೇಕ್ ಹೋಮ್ ಸ್ಯಾಲರಿ ನಡುವಿನ ವ್ಯತ್ಯಾಸವೇನು?

ಸಂದರ್ಶನ ಮುಗಿಸಿ ಕೆಲಸಕ್ಕೆ ಸೇರುವ ಮುನ್ನ ನೇಮಕಾತಿ ಪತ್ರದಲ್ಲಿ (Appointment Letter) ಇರುವ ಸಂಬಳದ ಮೊತ್ತ ನೋಡಿ ಖುಷಿ ಪಟ್ಟಿರುತ್ತೇವೆ. ಆದರೆ ಮೊದಲ ತಿಂಗಳ ಸಂಬಳ ಕೈಗೆ ಬಂದಾಗ ಏನೋ ಒಂಥರಾ ಬೇಸರ ಉಂಟಾಗುತ್ತದೆ.

By Siddu Thoravat
|

ಸಂದರ್ಶನ ಮುಗಿಸಿ ಕೆಲಸಕ್ಕೆ ಸೇರುವ ಮುನ್ನ ನೇಮಕಾತಿ ಪತ್ರದಲ್ಲಿ (appointment letter) ಇರುವ ಸಂಬಳದ ಮೊತ್ತ ನೋಡಿ ಖುಷಿ ಪಟ್ಟಿರುತ್ತೇವೆ. ಆದರೆ ಮೊದಲ ತಿಂಗಳ ಸಂಬಳ ಕೈಗೆ ಬಂದಾಗ ಏನೋ ಒಂಥರಾ ಬೇಸರ ಉಂಟಾಗುತ್ತದೆ. ನೇಮಕಾತಿ ಪತ್ರದಲ್ಲಿರುವ ಮೊತ್ತಕ್ಕೂ ಪಾವತಿಯಾದ ಮೊತ್ತಕ್ಕೂ ಏನೋ ವ್ಯತ್ಯಾಸ ಇರುವಂತೆ ಅನಿಸುತ್ತದೆ.

 

ಈಗ ನೀವು ನಿಮ್ಮ ಕಂಪನಿಯನ್ನು ದೂರುವಂತಿಲ್ಲ. ನೇಮಕಾತಿ ಪತ್ರ ಕೈಗೆ ಪಡೆಯುವ ಮುನ್ನ ಸಿಟಿಸಿ ಮತ್ತು ಟೇಕ್ ಹೋಮ್ ನಡುವಿನ ವ್ಯತ್ಯಾಸ ತಿಳಿದುಕೊಂಡು ನಂತರದಲ್ಲಿ ಸಹಿ ಮಾಡಬೇಕಾಗುತ್ತದೆ. ಆದರೆ ನೀವು ಇಲ್ಲಿ ಎಡವಿರುವುದು ನಿಮ್ಮದೇ ತಪ್ಪು. ಹಾಗಾಗಿ ಸಿಟಿಸಿ ಮತ್ತು ಟೇಕ್ ಹೋ ಸ್ಯಾಲರಿ ನಡುವಿನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. ಸ್ಯಾಲರಿ ಸ್ಲಿಪ್: ತಪ್ಪದೆ ತಿಳಿದುಕೊಳ್ಳಬೇಕಾದ 8 ಅಂಶಗಳು

ಸಿಟಿಸಿ (cost to company) ಅಂದರೆ ಏನು?

ಸಿಟಿಸಿ (cost to company) ಅಂದರೆ ಏನು?

ಉದ್ಯೋಗಿಗಳಿಗೆ ಉದ್ಯೋಗದಾತ ಸಂಸ್ಥೆ ಕೊಡ ಮಾಡುವ ಮೊತ್ತವನ್ನು ಕಾಸ್ಟ್ ಟು ಕಂಪನಿ ಎಂದು ಕರೆಯಬಹುದು. ಇದು ಬೋನಸ್ ಮತ್ತಿತರ ಸಂಗತಿಗಳನ್ನು ಒಳಗೊಂಡಿರುತ್ತದೆ. ಭವಿಷ್ಯ ನಿಧಿ ಕೂಡ ಸಿಟಿಸಿ ಯೊಳಗೆ ಒಳಗೊಂಡಿರುತ್ತದೆ. ಹಾಗಾಗಿ ನಿಮಗೆ ಕಂಪನಿ ವೇತನದ ಆಫರ್ ನೀಡಿದ ಮೊತ್ತಕ್ಕಿಂತ ಶೇ. 10-20 ರಷ್ಟು ಕಡಿಮೆ ಹಣ ಕೈ ಸೇರುತ್ತದೆ. ಅಂದರೆ ಪಿಎಫ್ ಮತ್ತಿತರ ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ಟೇಕ್ ಹೋಂ ಸ್ಯಾಲರಿ (Take Home Salary) ಹೆಚ್ಚಿಸಿಕೊಳ್ಳುವುದು ಹೇಗೆ?

ಒಟ್ಟು ಸಂಬಳ (ಗ್ರಾಸ್ ಸ್ಯಾಲರಿ) ಅಂದರೇನು?

ಒಟ್ಟು ಸಂಬಳ (ಗ್ರಾಸ್ ಸ್ಯಾಲರಿ) ಅಂದರೇನು?

ಉದಾಹರಣೆಯೊಂದಿಗೆ ಇದನ್ನು ನೋಡೋಣ..
ಬೆಸಿಕ್ ಸ್ಯಾಲರಿ ರೂ. 3,೦೦,೦೦೦
ಮನೆ ಬಾಡಿಗೆ ಪಾವತಿ ರೂ. 60 ಸಾವಿರ
ವೈದ್ಯಕೀಯ ವೆಚ್ಚಕ್ಕೆ ರೂ.15 ಸಾವಿರ
ಕನ್ವೆಯನ್ಸ್ ವೆಚ್ಚ ರೂ. 8 ಸಾವಿರ
ಒಟ್ಟು ವೇತನದ ಮೊತ್ತ ವರ್ಷಕ್ಕೆ ರೂ. 3,83,000 (ತಿಂಗಳಿಗೆ ಗ್ರಾಸ್ ಸ್ಯಾಲರಿ ರೂ. 31,917)

ಕಡಿತಗಳು ಯಾವವು?
 

ಕಡಿತಗಳು ಯಾವವು?

ಬೆಸಿಕ್ ಸ್ಯಾಲರಿ ಮತ್ತು ಎಚ್ಆರ್ಎ ಮೇಲಿನ ತೆರಿಗೆ ರೂ. 11,000
ಇಪಿಎಫ್ (ಬೆಸಿಕ್ ಸ್ಯಾಲರಿ ಮೇಲೆ ಶೇ. 12) ರೂ. 36,000
ವೈದ್ಯಕೀಯ ವಿಮೆ ರೂ. 3600
ನೆಟ್ ಸ್ಯಾಲರಿ ರೂ. 3,39,400 (ಪ್ರತಿ ತಿಂಗಳಿಗೆ ವೇತನ-28,283 ರೂ.)
ಇಲ್ಲಿ ನಿಮಗೆ ವ್ಯತ್ಯಾಸ ಸರಿಯಾಗಿ ಗೊತ್ತಾಗುವುದು, ಮೇಲಿನ ಅಂಕಿ ಅಂಶಾಗಳು ನಿಮ್ಮ ಸಿಟಿಸಿ ಮತ್ತು ನೆಟ್ ಸ್ಯಾಲರಿ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಸೂಚಿಸುವುದು.

ಮೊದಲೇ ತಿಳಿದುಕೊಳ್ಳಿ

ಮೊದಲೇ ತಿಳಿದುಕೊಳ್ಳಿ

ನಿಮಗೆ ಕಂಪನಿ ಸ್ಯಾಲರಿ ಆಫರ್ ನೀಡಿದಾಗಲೇ ಇದನ್ನೆಲ್ಲ ತಿಳಿದುಕೊಳ್ಳುವುದು ಉತ್ತಮ. ಕೆಲವೊಮ್ಮೆ ತೆರಿಗೆ ವಿನಾಯಿತಿಯಿಂದಲೂ ತಪ್ಪಿಸಿಕೊಳ್ಳಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗುವ ಸಂಭವವಿರುತ್ತದೆ. ಇದರೊಂದಿಗೆ ವೈದ್ಯಕೀಯ ವಿಮೆಯನ್ನು ಭರ್ತಿ ಮಾಡುವುದು ಕಡ್ಡಾಯ. ಕಂಪನಿಯಿಂದ ಊಟಕ್ಕೆ ಕೂಪನ್ ಪಡೆಯುವ ಮೂಲಕ ತೆರಿಗೆ ವಿನಾಯಿತಿ ಪಡೆದುಕೊಳ್ಳುವ ತಂತ್ರವೂ ಕೆಲವು ಕಟಡೆ ಚಾಲ್ತಿಯಲ್ಲಿದೆ. ಸಿಬ್ಬಂದಿ ಮತ್ತು ಕಂಪನಿ ನಡುವಿನ ಕರಾರಿಗೆ ಸಂಬಂಧಿಸಿಯೇ ವೇತನ ಪಾವತಿಯಾಗುತ್ತಿರುತ್ತದೆ. ಸ್ಯಾಲರಿ ಸ್ಲಿಪ್ ನಲ್ಲಿನ ಸಂಬಳ ಕಡಿತದ ಬಗ್ಗೆ ನಿಮಗೆಷ್ಟು ಗೊತ್ತು?

ಕೊನೆ ಮಾತು

ಕೊನೆ ಮಾತು

ಕೆಲಸಕ್ಕೆ ಸೇರುವ ಮೊದಲು ಅಥವಾ ಅಪಾಂಟ್ಮೆಂಟ್ ಲೆಟರ್ ಗೆ ಸಹಿ ಹಾಕುವ ಮೊದಲು ಸ್ಯಾಲರಿ ಕುರಿತಾಗಿ ಸಮಗ್ರ ಮಾತುಕತೆ ಮಾಡಿಕೊಳ್ಳಬೇಕು ಮತ್ತು ತೆರಿಗೆ ವಿನಾಯಿತಿ ತಂತ್ರಗಳನ್ನು ತಿಳಿದುಕೊಂಡಿರಬೇಕು.

Read more about: salary money finance news savings tds
English summary

Difference Between CTC and Take Home Salary Explained

You need to know about Cost to Company (CTC), Take-Home Salary, Net Salary, and Gross Salary differences.
Story first published: Tuesday, August 7, 2018, 14:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X