For Quick Alerts
ALLOW NOTIFICATIONS  
For Daily Alerts

ಎಲ್ಐಸಿಯ ಜೀವನ ಶಾಂತಿ Vs ಜೀವನ ಅಕ್ಷಯ Vs ಜೀವನ್ ನಿಧಿ Vs ಜೀವನ ಉಮಂಗ ಯೋಜನೆಗಳಲ್ಲಿ ಯಾವುದು ಉತ್ತಮ?

|

ನಮ್ಮ ಜೀವನದುದ್ದಕ್ಕೂ ಹಣಕಾಸಿನ ಬಿಕ್ಕಟ್ಟು ಬರದಂತೆ ನೋಡಿಕೊಳ್ಳುವುದು ಬಹುಮುಖ್ಯ ಸಂಗತಿ. ಇಂದಿನ ಕ್ರಮ, ಯೋಜನೆಗಳು ನಮ್ಮ ನಾಳೆಯನ್ನು ನಿರ್ಧರಿಸುತ್ತದೆ ಎಂದರೆ ತಪ್ಪಾಗಲಾರದು. ಹೀಗಾಗಿ ಇಂದೇ ಒಂದು ಪರಿಪೂರ್ಣ ನಿವೃತ್ತಿ ವೇತನ ಯೋಜನೆಯನ್ನು ನಿಮ್ಮದಾಗಿಸಿಕೊಂಡರೆ ಭವಿಷ್ಯದಲ್ಲಿ ನೆಮ್ಮದಿ ಕಾಣಬಹುದು ಅಲ್ಲವೇ?

ಹಾಗಾದರೆ ಕೆಳಗಿನ ಎಲ್ಐಸಿ ಪಿಂಚಣಿ ಯೋಜನೆಗಳನ್ನು ಓದಿ, ನಿಮಗೆ ಸೂಕ್ತವಾದದ್ದನ್ನು ಆರಿಸಿಕೊಳ್ಳಿ.

ಇಲ್ಲಿಯವರೆಗೆ, ಲೈಫ್ ಇನ್ಶುರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಹೆಚ್ಚಾಗಿ ಜೀವನ ಅಕ್ಷಯ ಪಾಲಿಸಿ ಮೂಲಕ ಸರ್ಕಾರೇತರರಿಗೆ ಪಿಂಚಣಿ ಅಗತ್ಯಗಳನ್ನು ಪೂರೈಸುತ್ತಿತ್ತು. ಆದಾಗ್ಯೂ, 2004 ರಲ್ಲಿ ಕೇಂದ್ರೀಯ ಮತ್ತು ರಾಜ್ಯ ಸರ್ಕಾರಗಳ ಪಿಂಚಣಿ ಪಾಲಿಸಿಯ ಬದಲಾವಣೆಯ ನಂತರ ಎನ್ಪಿಎಸ್ ಗೆ ಹಣವು ಹರಿದುಹೋದಂತೆ, ಎಲ್ಐಸಿ ಮತ್ತೊಂದು ಜೀವನ ಶಾಂತಿ ಎಂಬ ಪಿಂಚಣಿ ಯೋಜನೆಯನ್ನು ಜಾರಿ ತಂದಿದೆ.

 

ಎಲ್ಐಸಿ ಪಾಲಿಸಿ ಮಾಹಿತಿಯನ್ನು ಆನ್ಲೈನ್, ಫೋನ್ ಹಾಗು ಎಸ್ಎಂಎಸ್ ಮೂಲಕ ಚೆಕ್ ಮಾಡೋದು ಹೇಗೆ?

ಎಲ್ಐಸಿ ಮೂಲಕ ಪಿಂಚಣಿ ಪಡೆಯಲು ಇತರ ಆಯ್ಕೆಗಳೊಂದಿಗೆ 'ಜೀವನ ಶಾಂತಿ' ಯೋಜನೆ ಹೋಲಿಸಿದರೆ ಈ ಕೆಳಕಂಡ ಅಂಶಗಳನ್ನು ಪರಿಗಣಿಸಬಹುದು:

1. ಜೀವನ ಶಾಂತಿ Vs ಜೀವನ ಅಕ್ಷಯ:

1. ಜೀವನ ಶಾಂತಿ Vs ಜೀವನ ಅಕ್ಷಯ:

ಏನಿದು ಎಲ್ಐಸಿ ಆಧಾರ ಸ್ತಂಭ್ ವಿಮೆ? ಇದರ ಪ್ರಯೋಜನಗಳೇನು?

2. ಜೀವನ ಶಾಂತಿ Vs ಜೀವನ ನಿಧಿ:

2. ಜೀವನ ಶಾಂತಿ Vs ಜೀವನ ನಿಧಿ:

ಜೀವನ ಶಾಂತಿ ತಕ್ಷಣ ಮತ್ತು ಮುಂದೂಡಲ್ಪಟ್ಟ ವರ್ಷಾಶನವನ್ನು ನೀಡಿದರೆ, ಜೀವನ ನಿಧಿ ಉದ್ದೇಶವು ವರ್ಷಾಶನವನ್ನು ಮುಂದೂಡುವುದಾಗಿದೆ. ಭಾರೀ ಮೊತ್ತದ ಹಣವನ್ನು ಕೈಯಲ್ಲಿ ಹೊಂದಿರದ ವ್ಯಕ್ತಿಗೆ, ಜೀವನ ನಿಧಿ ತನ್ನ ನಿಯಮಿತ ಪ್ರೀಮಿಯಂ ಆಯ್ಕೆಯ ಮೂಲಕ ಕಾರ್ಪಸ್ ಅನ್ನು ಸಂಗ್ರಹಿಸುವ ಅವಕಾಶವನ್ನು ಒದಗಿಸುತ್ತದೆ. ಮುಂದೂಡಲ್ಪಟ್ಟ ವರ್ಷಾಶನವನ್ನು ಬಯಸುತ್ತಿರುವ ಭಾರೀ ಮೊತ್ತದ ಹಣ ಹೊಂದಿರುವ ವ್ಯಕ್ತಿ, ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಒಂದು ವ್ಯತ್ಯಾಸವಿದೆ - ಜೀವನ ನಿಧಿ ಸಂಗ್ರಹಣಾ ಹಂತದ ಸಮಯದಲ್ಲಿ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಆದ್ದರಿಂದ, ಪಿಂಚಣಿ ಬಯಸುವವರು ವರ್ಷಾಶನ ಪಾವತಿಯ ಪ್ರಾರಂಭವಾಗುವ ಮೊದಲು ಸಾವನ್ನಪ್ಪಿದರೆ, ಜೀವನ ನಿಧಿ ಪಾಲಿಸಿಯಲ್ಲಿ ನಾಮಿನಿಗೆ ವಿಮೆ ಮಾಡಿದ ಮೊತ್ತ (ಸಮ್ ಅಷೂರ್ಡ್) ಮತ್ತು ಬೋನಸ್ ದೊರೆಯುತ್ತದೆ. ಜೀವನ ಶಾಂತಿಯಲ್ಲಿ ನಾಮಿನಿಯು ಖರೀದಿಯ ಬೆಲೆಯನ್ನು ಹಿಂಪಡೆಯಬಹುದು ಮತ್ತು ಪಾವತಿಸಿದ ಒಟ್ಟು ವರ್ಷಾಶನವನ್ನು ಕಡಿತಗೊಳಿಸಿದ ನಂತರ ಖಾತರಿಪಡಿಸಿದ ಹೆಚ್ಚುವರಿ ಮೊತ್ತವಿದ್ದಲ್ಲಿ ಸಾಯುವ ತನಕ ಪಡೆಯಬಹುದು ಅಥವಾ ಖರೀದಿ ದರದ ಶೇ. 110, ಇವೆರಡರ ಯಾವ ಮೊತ್ತ ಹೆಚ್ಚೋ ಅದನ್ನು ಪರಿಗಣಿಸಲಾಗುತ್ತದೆ .

3. ಜೀವನ ಶಾಂತಿ Vs ಜೀವನ ಉಮಂಗ:
 

3. ಜೀವನ ಶಾಂತಿ Vs ಜೀವನ ಉಮಂಗ:

ಜೀವನ ಉಮಂಗ ಸಂಪೂರ್ಣ ಜೀವನ ಯೋಜನೆಯಾಗಿದ್ದರೂ, ಪಿಂಚಣಿ ಯೋಜನೆಯಲ್ಲ. ಆದರೆ ಪ್ರೀಮಿಯಂ ಪಾವತಿಸುವ ಅವಧಿ (ಪಿಪಿಟಿ) ಪೂರ್ಣಗೊಂಡ ನಂತರ, ಇದು ಹಣದ ರೂಪದಲ್ಲಿ ಖಾತರಿಯ ವಾರ್ಷಿಕ ಲಾಭವನ್ನು ನೀಡುತ್ತದೆ. ಆದ್ದರಿಂದ, ಇದು ವರ್ಷಾಶನದಂತೆ ಹಣವನ್ನು ಹರಿಸುವುದಷ್ಟೇ ಅಲ್ಲದೆ, ಬೇರೆ ಪಿಂಚಣಿ ಯೋಜನೆಗಳಂತೆ ಅಲ್ಲ. ಜೀವನ ಉಮಂಗ ಅಡಿಯಲ್ಲಿ ಆದಾಯವು ತೆರಿಗೆ ಮುಕ್ತವಾಗಿರುತ್ತದೆ. ಆದಾಗ್ಯೂ, ಜೀವನ ಉಮಂಗ ನಿಯಮಿತ ಪ್ರೀಮಿಯಂ ಯೋಜನೆಯಾಗಿದ್ದು, ಜೀವನ ಶಾಂತಿಗಿಂತ ಭಿನ್ನವಾಗಿದೆ. ಪಾಲಿಸಿದಾರರು ಮುಂದೂಡಲ್ಪಟ್ಟ ವರ್ಷಾಶನ ಆಯ್ಕೆಯನ್ನು ಆಯ್ಕೆ ಮಾಡುವ ಒಂದು ಸಮಗ್ರ ಯೋಜನೆಯನ್ನು ಇದು ಹೊಂದಿದೆ. ಆದ್ದರಿಂದ, ಭಾರೀ ಮೊತ್ತದ ನಗದು ಹೊಂದಿರುವ ವ್ಯಕ್ತಿಗೆ ಜೀವನ ಶಾಂತಿ ಉತ್ತಮವಾದುದು. ಆದರೆ, ರೀಟೇಲ್ ಹೂಡಿಕೆದಾರರಿಗೆ ವಿಶೇಷವಾಗಿ ನಿಯಮಿತ ಮತ್ತು ಖಾತರಿಪಡಿಸದ ತೆರಿಗೆ ರಹಿತ ಆದಾಯವನ್ನು ಬಯಸುವವರಿಗೆ, ಜೀವನ್ ಉಮಾಂಗ್ ಉತ್ತಮವಾದುದು.

ಜೀವನದ ಸಂಧ್ಯಾಕಾಲದಲ್ಲಿ ಸುಖವಾಗಿರಲು ಇವುಗಳಲ್ಲಿ ನಿಮಗೆ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಳ್ಳಿ.

English summary

LIC Jeevan Shanti Vs Jeevan Akshay Vs Jeevan Nidhi Vs Jeevan Umang: Which Policy is Good?

Life Insurance Corporation of India mostly used to cater to the needs of non-government pension seekers through its Jeevan Akshay policy.
Story first published: Tuesday, September 18, 2018, 10:22 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more