For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ಖಾತೆ ಮೆಚುರಿಟಿ ನಂತರ ವಿಸ್ತರಣೆ: ತಿಳಿದುಕೊಳ್ಳಲೇಬೇಕಾದ 10 ನಿಯಮಗಳು

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಬಡ್ಡಿದರಗಳು ಕ್ರಮೇಣ ಇಳಿಮುಖವಾಗುತ್ತಿದ್ದರೂ ಸಹ ದೀರ್ಘಾವಧಿಯ ಜನಪ್ರಿಯ ಉಳಿತಾಯ ಆಯ್ಕೆಗಳಲ್ಲಿ ಒಂದಾಗಿದೆ. ಪಿಪಿಎಫ್ ಖಾತೆಗಳು 15 ವರ್ಷಗಳ ಮುಕ್ತಾಯ ಅವಧಿಯನ್ನು ಹೊಂದಿದ್ದು, ಅವುಗಳನ್ನು ವಿಸ್ತರಿಸಬಹುದು.

|

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಬಡ್ಡಿದರಗಳು ಕ್ರಮೇಣ ಇಳಿಮುಖವಾಗುತ್ತಿದ್ದರೂ ಸಹ ದೀರ್ಘಾವಧಿಯ ಜನಪ್ರಿಯ ಉಳಿತಾಯ ಆಯ್ಕೆಗಳಲ್ಲಿ ಒಂದಾಗಿದೆ. ಪಿಪಿಎಫ್ ಖಾತೆಗಳು 15 ವರ್ಷಗಳ ಮುಕ್ತಾಯ ಅವಧಿಯನ್ನು ಹೊಂದಿದ್ದು, ಅವುಗಳನ್ನು ವಿಸ್ತರಿಸಬಹುದು. ಯಾವುದೇ ಹಣದ ಅಗತ್ಯವಿಲ್ಲದೇ ಇದ್ದರೆ, ಹಣಕಾಸು ಯೋಜಕರು ಹೇಳುವಂತೆ, ಪಿಪಿಎಫ್ ಖಾತೆದಾರರು ಖಾತೆಯನ್ನು 15 ವರ್ಷಕ್ಕೂ ಮೀರಿ ವಿಸ್ತರಿಸಬೇಕು. ಆದಾಯ ತೆರಿಗೆಯ ವಿಷಯದಲ್ಲಿ, ಪಿಪಿಎಫ್ ಖಾತೆಗಳು ವಿನಾಯಿತಿಯ ಲಾಭವನ್ನು ಪಡೆಯುತ್ತವೆ. ಸೆಕ್ಷನ್ 80 ಸಿ ಅಡಿಯಲ್ಲಿ, ಹಣಕಾಸು ವರ್ಷದಲ್ಲಿ 1.5 ಲಕ್ಷದವರೆಗಿನ ಆದಾಯ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ. ಗಳಿಸಿದ ಬಡ್ಡಿ ಮತ್ತು ಮೆಚುರಿಟಿ ಆದಾಯಗಳು ತೆರಿಗೆ ಮುಕ್ತವಾಗಿರುತ್ತವೆ.

PPF ಖಾತೆಯು ಮೆಚುರಿಟಿಯಾದಂತೆ ನಿಮ್ಮ ಆಯ್ಕೆಗಳು ಯಾವುವು ಎಅಮಬುದನನ್ಉ ನೋಡೋಣ..

ಪಿಪಿಎಫ್ ಮೆಚುರಿಟಿ ನಂತರ

ಪಿಪಿಎಫ್ ಮೆಚುರಿಟಿ ನಂತರ

1. ಖಾತೆಯು ತೆರೆದ ವರ್ಷದಿಂದ 15 ವರ್ಷಗಳ ಮುಕ್ತಾಯದ ನಂತರ ಪಿಪಿಎಫ್ ಖಾತೆಯನ್ನು ಮುಚ್ಚಬಹುದು.
2. ಮೆಚ್ಯೂರಿಟಿ ನಂತರ ಚಂದಾದಾರನು ತನ್ನ / ಅವಳ ಪಿಪಿಎಫ್ ಖಾತೆಯನ್ನು ಮಿತಿ ಇಲ್ಲದೆ ಯಾವುದೇ ಅವಧಿಯವರೆಗೆ ಯಾವುದೇ ಠೇವಣಿಗಳನ್ನು ಮಾಡದೆಯೇ ಉಳಿಸಿಕೊಳ್ಳಬಹುದು.
3. ಖಾತೆಯಲ್ಲಿನ ಬ್ಯಾಲೆನ್ಸ್ ಮುಚ್ಚುವವರೆಗೆ ಬಡ್ಡಿಯನ್ನು ಪಡೆಯಬಹುದು.
4. ಚಂದಾದಾರರು ಪ್ರತಿ ಹಣಕಾಸು ವರ್ಷದಲ್ಲಿ ಯಾವುದೇ ಪ್ರಮಾಣದ ವಿತ್ ಡ್ರಾ ಮೊತ್ತವನ್ನು ಹಿಂತೆಗೆದುಕೊಳ್ಳಬಹುದು. ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ

ಪಿಪಿಎಫ್ ಖಾತೆ ವಿಸ್ತರಣೆ

ಪಿಪಿಎಫ್ ಖಾತೆ ವಿಸ್ತರಣೆ

5. ಪಿಪಿಎಫ್ ಖಾತೆ ಮೆಚುರಿಟಿ ನಂತರ ಚಂದಾದಾರರು ಹೆಚ್ಚಿನ ಕೊಡುಗೆಗಳನ್ನು ಪಡೆಯಲು ಬಯಸಿದರೆ, ಅದನ್ನು ಐದು ವರ್ಷಗಳ ಕಾಲ ವಿಸ್ತರಿಸಬಹುದು.
6. ನೀವು ಪಿಪಿಎಫ್ ಖಾತೆಯನ್ನು ಬಾರಿ ಬೇಕಾದರೂ ವಿಸ್ತರಿಸಬಹುದು. ಅದಕ್ಕ ಮಿತಿ ಇಲ್ಲ.
7. ಆದರೆ ಅವಧಿ ಮುಗಿದ ನಂತರ, ಅವನು / ಅವಳು ಖಾತೆಯ ಮೆಚುರಿಟಿ ದಿನಾಂಕದಿಂದ ಒಂದು ವರ್ಷದಲ್ಲಿ ಫಾರ್ಮ್ ಎಚ್ ಅನ್ನು ಸಲ್ಲಿಸಬೇಕಾಗುತ್ತದೆ.
8. ಪಿಪಿಎಫ್ ಖಾತೆಯ ನೂತನ ಠೇವಣಿಗಳು ಯಾವುದೇ ಬಡ್ಡಿ ಗಳಿಸುವುದಿಲ್ಲ.
9. ಅಲ್ಲದೆ, ಈ ಸಂದರ್ಭದಲ್ಲಿ, ತೆರಿಗೆ ಇಲಾಖೆ ಸೆಕ್ಷನ್ 80 ಸಿ ಅಡಿಯಲ್ಲಿರುವ ಹೊಸ ಠೇವಣಿಗಳು ಕಡಿತಕ್ಕೆ ಅರ್ಹವಾಗಿರುವುದಿಲ್ಲ. ಪಿಪಿಎಫ್ ಖಾತೆ ತೆರೆಯುವ ಮುನ್ನ ನಿಮಗೆ ಗೊತ್ತಿರಬೇಕಾದ ಅಂಶಗಳೇನು..?

ವಿತ್ ಡ್ರಾವಲ್
 

ವಿತ್ ಡ್ರಾವಲ್

ವ್ಯಕ್ತಿಯು ತನ್ನ ಖಾತೆಯನ್ನು ಐದು ವರ್ಷಗಳ ಅವಧಿಗೆ ವಿಸ್ತರಿಸಲು ಆಯ್ಕೆ ಮಾಡಿದರೆ, ಪ್ರತಿ ಬ್ಲಾಕ್ ಅವಧಿಯಲ್ಲಿ ಚಂದಾದಾರರು ಪ್ರತಿ ಬ್ಲಾಕ್ ನ ಪ್ರಾರಂಭದಲ್ಲಿ 60% ಮೊತ್ತ ವಿತ್ ಡ್ರಾವಲ್ ಅನ್ನು ಮೀರುವಂತಿಲ್ಲ. ಈ ಮೊತ್ತವನ್ನು ಒಂದು ಕಂತುಗಳಲ್ಲಿ (ಒಂದು ವರ್ಷ) ಅಥವಾ ಬೇರೆ ವರ್ಷಗಳಲ್ಲಿ ಒಂದಕ್ಕಿಂತ ಹೆಚ್ಚು ಕಂತುಗಳಲ್ಲಿ ಹಿಂತೆಗೆದುಕೊಳ್ಳಬಹುದು. ಒಂದು ವರ್ಷದಲ್ಲಿ ಒಂದು ವಿತ್ ಡ್ರಾವಲ್ ಅನ್ನು ಮೀರುವಂತಿಲ್ಲ. ಪಿಪಿಎಪ್ ನಲ್ಲಿ ಸಾಲ ಪಡೆಯುವ ಮುನ್ನ ಇಲ್ಲೊಮ್ಮೆ ನೋಡಿ...

English summary

PPF account extension after maturity: 10 rules you should know

PPF accounts have a maturity period of 15 years and they can be extended.
Story first published: Wednesday, September 12, 2018, 15:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X