For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ: 12 ರೂ.ಗೆ 2 ಲಕ್ಷ ವಿಮೆ ಪಡೆಯುವುದು ಹೇಗೆ?

ಮೇ 2015 ರಲ್ಲಿ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು (ಪಿಎಂಎಸ್‌ಬಿವೈ) ಜಾರಿಗೆ ತಂದಿತು. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನಾ (ಪಿಎಂಜೆಜೆಬಿವೈ) ಸಹ ಇದೇ ದಿನದಿಂದ ಜಾರಿಯಾಯಿತು.

|

ಮೇ 2015 ರಲ್ಲಿ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು (ಪಿಎಂಎಸ್‌ಬಿವೈ) ಜಾರಿಗೆ ತಂದಿತು. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನಾ (ಪಿಎಂಜೆಜೆಬಿವೈ) ಸಹ ಇದೇ ದಿನದಿಂದ ಜಾರಿಯಾಯಿತು. ಅಪಘಾತ ಸಂದರ್ಭಗಳಲ್ಲಿ ವಿಮಾ ರಕ್ಷಣೆ ನೀಡುವ ಪಿಎಂಎಸ್‌ಬಿವೈ ಯೋಜನೆಯನ್ನು ಜುಲೈ 2018 ರಲ್ಲಿದ್ದಂತೆ 13.74 ಕೋಟಿ ಜನ ಪಡೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಯಾಕೆ ಮಾಡಿಸಬೇಕು?

 

ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ ಎಂದರೇನು?

ಇದೊಂದು ಟರ್ಮ ಲೈಫ್ ಇನ್ಸುರೆನ್ಸ್ ಯೋಜನೆಯಾಗಿದ್ದು, ಅಪಘಾತದಿಂದ ಸಂಭವಿಸಬಹುದಾದ ಶಾಶ್ವತ ಅಂಗವಿಕಲತೆ ಅಥವಾ ಸಾವಿನ ಸಂದರ್ಭದಲ್ಲಿ ವಿಮಾ ಸುರಕ್ಷೆಯ ಖಾತರಿಯನ್ನು ಈ ಯೋಜನೆ ನೀಡುತ್ತದೆ. 18 ರಿಂದ 70 ವರ್ಷದೊಳಗಿನ ಯಾರು ಬೇಕಾದರೂ ಈ ಯೋಜನೆಗೆ ಒಳಪಡಬಹುದು. ಅಪಘಾತದಿಂದ ಶಾಶ್ವತ ಅಂಗವಿಕಲತೆ ಅಥವಾ ಮರಣ ಸಂಭವಿಸಿದಲ್ಲಿ 2 ಲಕ್ಷ ರೂ. ವಿಮಾ ಮೊತ್ತ ಹಾಗೂ ಭಾಗಶಃ ಅಂಗವಿಕಲತೆ ಆದಲ್ಲಿ 1 ಲಕ್ಷ ರೂ.ಗಳನ್ನು ವಿಮಾ ಮೊತ್ತವಾಗಿ ನೀಡಲಾಗುತ್ತದೆ. ಈ ಯೋಜನೆಯ ಮತ್ತಷ್ಟು ಮಾಹಿತಿಗಳನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ.

ಅರ್ಹತೆ

ಅರ್ಹತೆ

ಯೋಜನೆಗೆ ಒಳಪಡುವ ಬ್ಯಾಂಕಿನ ಶಾಖೆಯಲ್ಲಿ ಖಾತೆ (ವೈಯಕ್ತಿಕ ಅಥವಾ ಜಂಟಿ) ಹೊಂದಿರುವ 18 ರಿಂದ 70 ವಯೋಮಾನದೊಳಗಿನ ವ್ಯಕ್ತಿಗಳು. ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಮಾಡಿಸಿದವರಿಗೆ ನೂರೆಂಟು ಲಾಭ! ತಪ್ಪದೇ ಓದಿ..

ಕಂತು ಪಾವತಿ ವಿಧಾನ
 

ಕಂತು ಪಾವತಿ ವಿಧಾನ

ಯೋಜನೆ ಪಡೆದುಕೊಂಡವರು ನಿರ್ದಿಷ್ಟ ವರ್ಷದ ಜೂನ್ 1 ರಿಂದ ಮುಂದಿನ ವರ್ಷದ ಮೇ 31 ರವರೆಗೆ ವಿಮಾ ಸುರಕ್ಷೆಯನ್ನು ಹೊಂದಿರುತ್ತಾರೆ. ಜೂನ್ 1 ರಿಂದ ಮುಂದಿನ ಒಂದು ವರ್ಷದ ಅವಧಿಗೆ ವಿಮಾ ಸುರಕ್ಷೆ ಪಡೆಯಬೇಕಾದರೆ ಮೇ 31 ರೊಳಗೆ ಕಂತು ಪಾವತಿ ಮಾಡಬೇಕು. ಇದನ್ನು ಅಟೊ ಡೆಬಿಟ್ ಮೂಲಕ ಮಾತ್ರ ಮಾಡಬಹುದು. ಅಂದರೆ ಮೇ 31 ರೊಳಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಒಂದು ಬಾರಿಯ ಕಂತಾದ 12 ರೂ. ಗಳನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಚಾಲಿತವಾಗಿ ಡೆಬಿಟ್ ಮಾಡಲಾಗುತ್ತದೆ. ಒಂದು ವೇಳೆ ಜಂಟಿ ಖಾತೆಯಾದಲ್ಲಿ ಎಲ್ಲ ಖಾತೆದಾರರಿಗೂ ಒಬ್ಬರಿಗೆ 12 ರೂ.ಗಳಂತೆ ಕಂತಿನಲ್ಲಿ ವಿಮಾ ಸುರಕ್ಷೆ ದೊರೆಯುತ್ತದೆ. ಇದನ್ನು ಸಹ ಅಟೊ ಡೆಬಿಟ್ ಮೂಲಕವೇ ಪಾವತಿಸಬಹುದು.

ವಿಮಾ ಸುರಕ್ಷೆಯ ಅವಧಿ

ವಿಮಾ ಸುರಕ್ಷೆಯ ಅವಧಿ

ವರ್ಷಕ್ಕೊಮ್ಮೆ ಈ ವಿಮೆಯನ್ನು ಪಡೆದುಕೊಳ್ಳಬಹುದು ಅಥವಾ ಒಂದೇ ಬಾರಿ ದೀರ್ಘಾವಧಿಗೂ ವಿಮೆಯನ್ನು ಪಡೆಯಬಹುದು. ಯಾವುದೇ ರೀತಿಯ ವಿಮೆ ಪಡೆದರೂ ವರ್ಷಕ್ಕೊಮ್ಮೆ ಖಾತೆಯಿಂದ ಕಂತನ್ನು ಅಟೊ ಡೆಬಿಟ್ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?

ನಿಮ್ಮ ಖಾತೆ ಇರುವ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ. ನಿರ್ದಿಷ್ಟ ಫಾರ್ಮ ಅನ್ನು ತುಂಬಿ ಅಟೊ ಡೆಬಿಟ್ ಅನ್ನು ಚಾಲನೆಗೊಳಿಸಿ. ಬಹುತೇಕ ಎಲ್ಲ ಪ್ರಮುಖ ಬ್ಯಾಂಕ್‌ಗಳಲ್ಲಿ ಯೋಜನೆ ಲಭ್ಯವಿದೆ.

ಪಾಲುದಾರ ವಿಮಾ ಕಂಪನಿಗಳು

ಪಾಲುದಾರ ವಿಮಾ ಕಂಪನಿಗಳು

ದೇಶದ ಸಾರ್ವಜನಿಕ ವಲಯದ ಜನರಲ್ ಇನ್ಸುರೆನ್ಸ್ ಕಂಪನಿಗಳು ಮತ್ತು ಇತರ ಜನರಲ್ ಇನ್ಸುರೆನ್ಸ್ ಕಂಪನಿಗಳು ಪಾಲುದಾರ ಬ್ಯಾಂಕುಗಳ ಸಹಯೋಗದಲ್ಲಿ ಈ ಯೋಜನೆಯನ್ನು ಒದಗಿಸುತ್ತವೆ ಮತ್ತು ನಿರ್ವಹಣೆ ಮಾಡುತ್ತವೆ.

ಇತರೆ ಮುಖ್ಯ ಮಾಹಿತಿ

ಇತರೆ ಮುಖ್ಯ ಮಾಹಿತಿ

ಯೋಜನೆಯಿಂದ ಹೊರಬರುವುದು, ಮರುಸೇರುವುದು ಸಾಧ್ಯವೆ?
ಹೌದು. ಬೇಕೆಂದಾಗ ಯೋಜನೆಯಿಂದ ಹೊರಗುಳಿಯಬಹುದು ಮತ್ತು ಬಯಸಿದರೆ ಭವಿಷ್ಯದಲ್ಲಿ ಮತ್ತೆ ಯೋಜನೆಗೆ ಸೇರ್ಪಡೆ ಆಗಬಹುದು.

ವಿಮಾ ಸುರಕ್ಷೆ ಯಾವಾಗ ಲ್ಯಾಪ್ಸ್ ಆಗುತ್ತದೆ?
70 ವರ್ಷಗಳಾದಾಗ
ಬ್ಯಾಂಕ್ ಖಾತೆ ಬಂದ್ ಮಾಡಿದಲ್ಲಿ
ಕಂತು ಕಟ್ಟಲು ಬೇಕಾದ ಕನಿಷ್ಠ ಮೊತ್ತ ಇಡದಿರುವುದು

ಮತ್ತೊಂದು ವಿಮಾ ಯೋಜನೆ ಪಡೆದಿರುವಾಗಲೂ ಪಿಎಂಎಸ್‌ಬಿವೈ ಅನ್ವಯಿಸುತ್ತದೆಯೆ?
ಹೌದು. ಅನ್ವಯಿಸುತ್ತದೆ.

ನೈಸರ್ಗಿಕ ವಿಕೋಪಗಳಿಂದುಂಟಾಗುವ ಸಾವು ಅಥವಾ ಅಂಗವಿಕಲತೆಗೆ ಯೋಜನೆ ಅನ್ವಯಿಸುತ್ತದೆಯೆ?

ನೈಸರ್ಗಿಕ ವಿಕೋಪಗಳಿಂದುಂಟಾಗುವ ಸಾವು ಅಥವಾ ಅಂಗವಿಕಲತೆಗೆ ಯೋಜನೆ ಅನ್ವಯಿಸುತ್ತದೆಯೆ?

ಹೌದು. ಪಿಎಂಎಸ್‌ಬಿವೈ ನಿಯಮಗಳ ಪ್ರಕಾರ ನೈಸರ್ಗಿಕ ಕಾರಣಗಳಿಂದ ಸಾವು ಅಥವಾ ಅಂಗವಿಕಲತೆ ಆದಲ್ಲಿ ವಿಮಾ ಸುರಕ್ಷೆ ಪಡೆಯಬಹುದು. ಆದರೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಯೋಜನೆ ಅನ್ವಯವಾಗಲಾರದು. ಒಂದು ವೇಳೆ ವ್ಯಕ್ತಿಯ ಕೊಲೆ ಆದರೂ ವಿಮೆ ಅನ್ವಯಿಸುತ್ತದೆ.

ಕ್ಲೈಮ್ ಮೊತ್ತ ಪಡೆಯುವುದು ಹೇಗೆ?

ಕ್ಲೈಮ್ ಮೊತ್ತ ಪಡೆಯುವುದು ಹೇಗೆ?

ಒಂದೊಮ್ಮೆ ಅಂಗವಿಕಲತೆ ಉಂಟಾದಲ್ಲಿ ಕ್ಲೇಮ್ ಮೊತ್ತವನ್ನು ಪಾಲಿಸಿದಾರನ ಖಾತೆಗೆ ಹಾಕಲಾಗುವುದು. ಒಂದೊಮ್ಮೆ ಸಾವು ಸಂಭವಿಸಿದಲ್ಲಿ ಖಾತೆ ತೆರೆಯುವಾಗ ತಿಳಿಸಲಾದ ನಾಮಿನಿಯ ಖಾತೆಗೆ ಹಣ ವರ್ಗಾಯಿಸಲಾಗುವುದು.

ಪಾಲಿಸಿ ಕ್ಲೈಮ್ ಮಾಡಲು ಎಫ್‌ಐಆರ್ ಕಡ್ಡಾಯವೆ?

ಪಾಲಿಸಿ ಕ್ಲೈಮ್ ಮಾಡಲು ಎಫ್‌ಐಆರ್ ಕಡ್ಡಾಯವೆ?

ಯಾವುದೇ ವಾಹನ ಅಪಘಾತ, ಅಥವಾ ನೀರಲ್ಲಿ ಮುಳುಗಿ ಸಾವು ಅಥವಾ ಮತ್ತಾವುದೇ ಅಪರಾಧ (ಕೊಲೆ ಮುಂತಾದುವು) ಸಂದರ್ಭಗಳಲ್ಲಿ ಎಫ್‌ಐಆರ್ ಕಡ್ಡಾಯವಾಗಿದೆ. ಪ್ರಾಣಿಗಳ ದಾಳಿ, ಮರದಿಂದ ಕೆಳಗೆ ಬೀಳುವುದು ಮುಂತಾದ ಪ್ರಕರಣಗಳಲ್ಲಿ ಆಸ್ಪತ್ರೆಯ ವರದಿಯನ್ನು ನೀಡಿದರೆ ಸಾಕು. ಒಟ್ಟಾರೆಯಾಗಿ ಪ್ರಕರಣದ ದಾಖಲೆಯನ್ನು ಸಲ್ಲಿಸುವುದು ಅಗತ್ಯ.

ಎನ್‌ಆರ್‌ಐ ಗಳಿಗೆ ಪಿಎಂಎಸ್‌ಬಿವೈ ಅನ್ವಯಿಸುತ್ತದೆಯೆ?

ಎನ್‌ಆರ್‌ಐ ಗಳಿಗೆ ಪಿಎಂಎಸ್‌ಬಿವೈ ಅನ್ವಯಿಸುತ್ತದೆಯೆ?

ಹೌದು. ಭಾರತದಲ್ಲಿನ ಬ್ಯಾಂಕ್ ಶಾಖೆಯಲ್ಲಿ ಅರ್ಹ ಖಾತೆಯನ್ನು ಹೊಂದಿದ ಎನ್‌ಆರ್‌ಐಗಳು ಈ ಯೋಜನೆಯನ್ನು ಪಡೆದುಕೊಳ್ಳಬಹುದು. ಆದರೆ ಇವರಿಗೆ ಕೆಲ ಹೆಚ್ಚುವರಿ ನಿಯಮಗಳು ಅನ್ವಯಿಸುತ್ತವೆ. ಒಂದೊಮ್ಮೆ ಕ್ಲೇಮ್ ಪಾವತಿಸುವ ಸಂದರ್ಭ ಬಂದಲ್ಲಿ ಪಾಲಿಸಿದಾರಕ ಅಥವಾ ನಾಮಿನಿಗೆ ಭಾರತೀಯ ರೂಪಾಯಿಗಳಲ್ಲೇ ಕ್ಲೇಮ್ ಪಾವತಿ ಮಾಡಲಾಗುತ್ತದೆ.

Read more about: government schemes money savings
English summary

Pradhan Mantri Suraksha Bima Yojana: How To Get Rs 2 Lakh Insurance Cover?

Pradhan Mantri Suraksha Bima Yojana (PMSBY), an accidental death insurance scheme, has touched 13.74 crore by the end of July 2018.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X