Englishहिन्दी മലയാളം தமிழ் తెలుగు

ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಯಾಕೆ ಮಾಡಿಸಬೇಕು?

Written By: Siddu
Subscribe to GoodReturns Kannada

ಪ್ರಧಾನಿ ಮೋದಿಯವರ ಮಹತ್ವದ ಯೋಜನೆಗಳಲ್ಲಿ ಸುರಕ್ಷಾ ವಿಮಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಶದ ಪ್ರತಿಯೊಬ್ಬ ನಾಗರಿಕರ ವಿಮೆ ಸುರಕ್ಷತೆಯನ್ನು ನೀಡುವ ಸಲುವಾಗಿ ಜಾರಿ ತರಲಾದ ಯೋಜನೆಯಾಗಿದೆ.

ಹಣಕಾಸು ಭದ್ರತೆ ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು ಎನ್ನುವುದು ಭಾರತದಲ್ಲಿನ ನೂತನ ಪರಿಕಲ್ಪನೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸುರಕ್ಷಾ ವಿಮಾ ಯೋಜನೆ ಕೂಡ ನೂತನ ಯೋಜನೆಯಾಗಿದ್ದು, ಎಲ್ಲ ವ್ಯಕ್ತಿಗಳು ಈ ವಿಮೆಯನ್ನು ಮಾಡಿಸಬಹುದು. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

ಸುರಕ್ಷಾ ವಿಮಾ ಯೋಜನೆಯ ಉದ್ದೇಶ, ಅರ್ಹತೆ, ವಿಮಾ ಮೊತ್ತ ಹಾಗೂ ಇನ್ನಿತರ ಮಾನದಂಡಗಳೇನು ಎನ್ನುವುದನ್ನು ಇಲ್ಲಿ ನೀಡಲಾಗಿದೆ.

ವಿಮಾ ಉದ್ದೇಶ

ಭಾರತದ ಪ್ರತಿಯೊಬ್ಬ ಪ್ರಜೆಗೂ ಅಪಘಾತ ಇನ್ಸೂರೆನ್ಸ್‌ ಕವರ್ ಒದಗಿಸುವುದು ಈ ಯೋಜನೆ ಉದ್ದೇಶವಾಗಿದೆ. ಅಪಘಾತ, ಆಕಸ್ಮಿಕ ಸಾವು ಇಲ್ಲವೇ ಅಂಗವೈಕಲ್ಯ ಸಂಭವಿಸಿದಲ್ಲಿ ಅಂತಹ ವ್ಯಕ್ತಿಗಳಿಗೆ ಈ ವಿಮೆ ಪ್ರಯೋಜನಕಾರಿ.

ಅರ್ಹತೆ

ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ಮಾಡಿಸಲು 18 ವರ್ಷಗಳನ್ನು ಪೂರೈಸಿರಬೇಕು. 18-70 ವರ್ಷದ ನಡುವಿನ ಪ್ರತಿಯೊಬ್ಬರೂ ಈ ವಿಮೆ ಮಾಡಿಸಬಹುದಾಗಿದ್ದು, ಉಳಿತಾಯ ಖಾತೆಯನ್ನು ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ.

ಪ್ರೀಮಿಯಂ ಮೊತ್ತ

ಸುರಕ್ಷಾ ವಿಮಾ ಯೋಜನೆಯ ಮಾಸಿಕ ಪ್ರೀಮಿಯಂ ಮೊತ್ತ ಕೆವಲ 1 ರೂಪಾಯಿ. ಅಂದರೆ ವಾರ್ಷಿಕವಾಗಿ ರೂ. 12 ಆಗುತ್ತದೆ. ಪ್ರತಿ ತಿಂಗಳಿಗೆ 1 ರೂಪಾಯಿ ಲೆಕ್ಕದಂತೆ 12 ತಿಂಗಳಿಗೆ 12 ರೂಪಾಯಿಗಳು ವಾರ್ಷಿಕ ಕಂತುವಿನ ರೂಪದಲ್ಲಿ ನಿಮ್ಮ ಉಳಿತಾಯ ಖಾತೆಯಿಂದ ಸುರಕ್ಷಾ ವಿಮಾ ಯೋಜನಾ ಖಾತೆಗೆ ಜಮೆಯಾಗುತ್ತದೆ.

ಇನ್ಸೂರೆನ್ಸ್‌ ಕವರ್

ಈ ಯೋಜನೆ ಅಡಿಯಲ್ಲಿ ವಿಮಾದಾರರು ಸೇವಾ ತೆರಿಗೆ ಹೊರತುಪಡಿಸಿ ರೂ. 2 ಲಕ್ಷದವರೆಗೆ ವಿಮಾ ಪರಿಹಾರ ಪಡೆಯುತ್ತಾರೆ. ವ್ಯಕ್ತಿ ಕೈ, ಕಾಲು ಅಥವಾ ದೇಹದ ಯಾವುದೇ ಭಾಗ ಕಳೆದುಕೊಂಡು ಅಂಗವೈಕಲ್ಯ ಅನುಭವಿಸಿದ್ದರೆ ರೂ. 2 ಲಕ್ಷ ವಿಮಾ ಪರಿಹಾರ ಸಿಗುತ್ತದೆ.

ಆಧಾರ್ ಕಾರ್ಡ್ ಕಡ್ಡಾಯ

ವಿಮಾದಾರರು ಗುರುತಿನ ದಾಖಲಾತಿಯಾಗಿ ಹಾಗೂ ಖಾತೆಯೊಂದಿಗೆ ಲಿಂಕ್ ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಸುರಕ್ಷಾ ವಿಮಾ ಯೋಜನೆಯ ಪ್ರೀಮಿಯಂ ಮೊತ್ತವನ್ನು ಸ್ವಯಂಚಾಲಿತವಾಗಿ ಚಂದಾದಾರರ ಉಳಿತಾಯ ಖಾತೆಗೆ ಜಮೆ ಆಗುತ್ತದೆ.

ಪ್ರೀಮಿಯಂ ಅವಧಿ

ಸುರಕ್ಷಾ ವಿಮಾ ಯೋಜನೆಯ ಪ್ರೀಮಿಯಂ ಅವಧಿ ಗರಿಷ್ಠ 70 ವರ್ಷಗಳಾಗಿರುತ್ತದೆ. ಮೆಚುರಿಟಿ ಲಾಭ ಇರುವುದಿಲ್ಲ. ಸಾವಿನ ನಂತರ ಯಾವುದೇ ಲಾಭಾಂಶ ಲಭ್ಯವಿರುವುದಿಲ್ಲ.

ತಜ್ಞರ ಅಭಿಮತ

ಹಣಕಾಸು ಭದ್ರತೆ ಇಲ್ಲದಿರುವ ಹಾಗೂ ವಿಮೆ ರಕ್ಷೆ ಇಲ್ಲದಿರುವ ಹೆಚ್ಚೆಚ್ಚು ಜನರಿಗೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅತ್ಯಗತ್ಯವಾಗಿ ಬೇಕು. ಮಧ್ಯಮ ವರ್ಗದ ಜನರು ಕೂಡ ಇಂತಹ ಯೋಜನೆಗಳ ಹೆಚ್ಚೆಚ್ಚು ಲಾಭ ಪಡೆಯಬೇಕು. ಜತೆಗೆ ಸರ್ಕಾರಗಳು ಮಧ್ಯಮ ವರ್ಗದವರಿಗೆ ಸಂಬಂಧಿತ ಉತತ್ಮ ಯೋಜನೆಗಳನ್ನು ರೂಪಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

English summary

What is Pradhan Mantri Suraksha Bima Yojana?

Pradhan Mantri Suraksha Bima Yojana is available to people between 18 and 70 years of age with bank accounts. It has an annual premium of ₹12 exclusive of taxes.The Service tax exempted on Pradhan Mantri Suraksha Bima Yojana. The amount will be automatically debited from the account.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC