ಸುರಕ್ಷಿತ ಎಟಿಎಂ ವ್ಯವಹಾರ ನಡೆಸಲು ನೀವು ತಿಳಿದುಕೊಳ್ಳಬೇಕಾದ 10 ಸಂಗತಿ

ಸುರಕ್ಷಿತ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಉತ್ತೇಜಿಸುವ ಸಲುವಾಗಿ ದೇಶದ ಹಲವು ಬ್ಯಾಂಕುಗಳು ಮುಂದಾಗುತ್ತಿದ್ದು, ದೇಶದ ಅತ್ಯಂತ ದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಸುರಕ್ಷಿತ ಬ್ಯಾಂಕಿಂಗ್ ಕುರಿತು ಮಹತ್ವ

ಸುರಕ್ಷಿತ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಉತ್ತೇಜಿಸುವ ಸಲುವಾಗಿ ದೇಶದ ಹಲವು ಬ್ಯಾಂಕುಗಳು ಮುಂದಾಗುತ್ತಿದ್ದು, ದೇಶದ ಅತ್ಯಂತ ದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಸುರಕ್ಷಿತ ಬ್ಯಾಂಕಿಂಗ್ ಕುರಿತು ಮಹತ್ವದ ಸಲಹೆಗಳನ್ನು ನೀಡಿದೆ.

ಸುರಕ್ಷಿತ ಎಟಿಎಂ ವ್ಯವಹಾರ ನಡೆಸಲು ನೀವು ತಿಳಿದುಕೊಳ್ಳಬೇಕಾದ 10 ಸಂಗತಿ

ಎಟಿಎಂ/ಡೆಬಿಟ್ ಕಾರ್ಡಿನ ಮೂಲಕ ವ್ಯವಹರಿಸುವಾಗ, ಗ್ರಾಹಕರು ತಮ್ಮ ಪಿನ್ ಕೋಡ್ ಗಳನ್ನು ಮರೆಮಾಚಲು ಮರೆಯುವುದು ಮೋಸಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭಗಳನ್ನು ತಪ್ಪಿಸಲು ಗ್ರಾಹಕರು ಸಂಪೂರ್ಣ ಗೌಪ್ಯತೆಯಿಂದ ಎಟಿಎಂ ವಹಿವಾಟುಗಳನ್ನು ನಡೆಸಬೇಕು ಎಂದು ಎಸ್ಬಿಐ ಶಿಫಾರಸು ಮಾಡಿದೆ. ಡಿಸೆಂಬರ್ 1ಕ್ಕೆ ಎಲ್ಪಿಜಿ ಗ್ಯಾಸ್ ಕನೆಕ್ಷನ್ ರದ್ದಾಗಲಿದೆ! ನೀವು ಇದ್ದಿರಾ ಈ ಪಟ್ಟಿಯಲ್ಲಿ..?
ಎಟಿಎಂ/ಡೆಬಿಟ್ ಕಾರ್ಡ್ ಮೂಲಕ ಅನಧಿಕೃತ ವ್ಯವಹಾರ ನಡೆಯುತ್ತಿದ್ದರೆ, ಗ್ರಾಹಕರು ತಕ್ಷಣವೇ ಬ್ಯಾಂಕುಗಳಿಗೆ ಮಾಹಿತಿ ಒದಗಿಸಬೇಕು.

ಎಟಿಎಂ ವ್ಯವಹಾರ ಸುರಕ್ಷಿತವಾಗಿ ನಿರ್ವಹಿಸಲು ನೀವು ಮಾಡಬೇಕಾದ 10 ವಿಷಯಗಳು ಇಲ್ಲಿವೆ:

1. ಎಸ್ಬಿಐ ಪ್ರಕಾರ, ಎಟಿಎಂ ವ್ಯವಹಾರದ ನಂತರ ಕಾರ್ಡ್ ಹಿಂಪಡೆದು ತಕ್ಷಣವೇ ನೀವು ರಸೀದಿಯ ಹಿಂಬದಿ ಸಹಿ ಮಾಡಬೇಕು.
2. ನಿಮ್ಮ ಎಟಿಎಂ ಪಿನ್ ಅನ್ನು ನಿಯಮಿತವಾಗಿ ಬದಲಾಯಿಸುವುದರ ಜೊತೆಗೆ, ಪಿನ್ ಅನ್ನು ಡೆಬಿಟ್ ಕಾರ್ಡಿನೊಂದಿಗೆ ಇಟ್ಟುಕೊಳ್ಳಬಾರದು ಅಥವಾ ಅದರ ಮೇಲೆ ಬರೆಯಬಾರದು. ನೀವು ಯಾವಾಗಲೂ ಅದನ್ನು ನೆನಪಿಟ್ಟುಕೊಳ್ಳಬೇಕು.

3. ಬ್ಯಾಂಕ್/ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್​​/ ಆರ್ಬಿಐ/ಸರ್ಕಾರಿ ಸಂಸ್ಥೆ/ಕುಟುಂಬ/ಸ್ನೇಹಿತರು, ಇತ್ಯಾದಿ ಸೇರಿದಂತೆ ಯಾರಿಗೂ ಎಟಿಎಂ ಕಾರ್ಡ್ ಮತ್ತು ಪಿನ್ ವಿವರಗಳನ್ನು ಒದಗಿಸಬೇಡಿ. ಬ್ಯಾಂಕ್ ಅಥವಾ ಯಾವುದೇ ಇತರ ಸಂಸ್ಥೆಗಳು ಈ ಮಾಹಿತಿಯನ್ನು ಕೇಳುವುದಿಲ್ಲ.
4. ಎಟಿಎಂ ಕೋಣೆಯಲ್ಲಿ ವ್ಯವಹಾರ ಮಾಡುವಾಗ, ಅಪರಿಚಿತರಿಗೆ ಒಳಗೆ ಬರಲು ಬಿಡಬೇಡಿ ಅಥವಾ ವ್ಯವಹಾರಗಳನ್ನು ಪೂರ್ಣಗೊಳಿಸಲು ಅವರ ಸಹಾಯವನ್ನು ತೆಗೆದುಕೊಳ್ಳಬೇಡಿ.
5. ಎಟಿಎಂ / ಪಿಓಎಸ್ (point of sale) ಟರ್ಮಿನಲ್ ಗಳಲ್ಲಿ ಪಿನ್ ಟೈಪ್ ಮಾಡುವಾಗ ನೀವು ಕೀಪ್ಯಾಡ್ ಅನ್ನು ಮರೆಮಾಡಬೇಕು.

6. ಎಟಿಎಂ ಕೊಠಡಿಯಲ್ಲಿ ಖಾತೆಯ ಮಾಹಿತಿಯನ್ನು ಒಳಗೊಂಡಿರುವಂತ ನಿಮ್ಮ ವ್ಯವಹಾರ ಸ್ಲಿಪ್ ಅನ್ನು ಎಸೆಯಬಾರದು.
7. ಎಟಿಎಂನಿಂದ ಹೊರಗೆ ಹೋಗುವ ಮೊದಲು, ಐಡಲ್ ಮೋಡ್ ಮತ್ತು ಗ್ರೀನ್ ಲೈಟ್ ಬ್ಲಿಂಕ್ ಆಗುವ ತನಕ ನಿರೀಕ್ಷಿಸಿ.
8. ನಿಮ್ಮ ಉಪಸ್ಥಿತಿಯಲ್ಲಿ ಹೋಟೆಲ್/ಅಂಗಡಿಗಳು/ಮಾಲ್ ಗಳಲ್ಲಿ ನಿಮ್ಮ ಕಾರ್ಡ್ ಅನ್ನು ಸ್ವೈಪ್ ಮಾಡಬೇಕು. ತಾತ್ಕಾಲಿಕ ಮಳಿಗೆಗಳಲ್ಲಿ ಅಥವಾ PoS ಯಂತ್ರಗಳಲ್ಲಿ ನಿಮ್ಮ ಕಾರ್ಡ್ ಅನ್ನು ಸ್ವೈಪ್ ಮಾಡಬಾರದು.
9. ನಿಮ್ಮ ಎಟಿಎಂ ಕಾರ್ಡ್ ಕಳೆದುಕೊಂಡರೆ ತಕ್ಷಣವೇ 1800 425 3800 ಅಥವಾ 1800 11 22 11 ನಂಬರ್ ಗೆ ಕರೆ ಮಾಡಿ ವರದಿ ಮಾಡಬೇಕು. ಹಳೆ ಕಾರ್ಡ್ ಬ್ಲಾಕ್ ಅಥವಾ ನಾಶಪಡಿಸಿ. ಎಲ್ಲಾ ವ್ಯವಹಾರಗಳಿಗೆ SMS ಎಚ್ಚರಿಕೆಗಳನ್ನು ಪಡೆಯಲು ಬ್ಯಾಂಕ್ ಶಾಖೆಯಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು.
10. ಎಟಿಎಮನಲ್ಲಿ ಹಣವನ್ನು ಪಡೆಯಲಾಗದೆ, ಎಟಿಎಂ "ಕ್ಯಾಶ್ ಔಟ್" ಅನ್ನು ಪ್ರದರ್ಶಿಸದಿದ್ದರೆ ನೀವು ನೋಟಿಸ್ ಬೋರ್ಡ್ ನಲ್ಲಿ ಸೂಚಿಸಿದ ಬ್ಯಾಂಕ್ ಸಂಖ್ಯೆಗೆ ವರದಿ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+