ಹಣ ಉಳಿತಾಯ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್

ದೇವರೆ ಏನಪ್ಪಾ ಮಾಡೋದು? ಎಷ್ಟ್ ದುಡಿದ್ರೂ ಎಲ್ಲಾ ದುಡ್ಡು ಖರ್ಚಾಗುತ್ತೆ. ಕೈಯಲ್ಲಿ ಒಂದ್ ಬಿಡಿಗಾಸು ಉಳಿಯಲ್ಲ.

ದೇವರೆ ಏನಪ್ಪಾ ಮಾಡೋದು? ಎಷ್ಟ್ ದುಡಿದ್ರೂ ಎಲ್ಲಾ ದುಡ್ಡು ಖರ್ಚಾಗುತ್ತೆ. ಕೈಯಲ್ಲಿ ಒಂದ್ ಬಿಡಿಗಾಸು ಉಳಿಯಲ್ಲ. ತಿಂಗಳ ಕೊನೆಗೆ ಮತ್ತೆ ಇನ್ನೊಬ್ಬರ ಮುಂದೆ ಕೈ ಚಾಚುವುದು ಮಾತ್ರ ತಪ್ಪುತ್ತಿಲ್ಲ ಅಂತಾ ನಮ್ಮಲ್ಲಿ ಅನೇಕರು ಗೊಣಗುತ್ತಿರುವುದನ್ನು ನೋಡಿರುತ್ತಿರಿ. ತಿಂಗಳಿಗೆ ರೂ. 5 ಸಾವಿರ, 10 ಸಾವಿರ, 15 ಸಾವಿರ, 20 ಸಾವಿರ, 30 ಸಾವಿರ, 50 ಸಾವಿರ ಹೀಗೆ ಎಷ್ಟೇ ಸಂಬಳ ಪಡೆದರೂ ಎಲ್ಲರ ಸಮಸ್ಯೆ ಹಣ. ಹಣ, ಹಣ..!
ಹಣ ಉಳಿತಾಯ ಮಾತ್ರ ಮಾಡಲು ಆಗ್ತಾ ಇಲ್ಲ ಅಂತಿರಾ... ಹಾಗಿದ್ದರೆ ಇದಕ್ಕೆ ಕಾರಣಗಳೇನಿರಬಹುದು ನೋಡೋಣ ಬನ್ನಿ.

ಬಜೆಟ್ ಪ್ಲಾನ್ ಇಲ್ಲದಿರುವುದು

ಬಜೆಟ್ ಪ್ಲಾನ್ ಇಲ್ಲದಿರುವುದು

ಮೊದಲ ಪ್ರಮುಖ ಕಾರಣವೆಂದರೆ ಬಜೆಟ್ ಯೋಜನೆ ಮಾಡದೆ ಇರುವುದು. ಏಕೆಂದರೆ ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡುವುದು ತುಂಬಾ ಸುಲಭ. ಕೊನೆಗೆ ಹಣ ಹೇಗೆಲ್ಲಾ ಖರ್ಚಾಗಿ ಹೋಯ್ತು ಎಂದು ಲೆಕ್ಕ ಹಾಕುವುದರಲ್ಲೇ ಕಾಲ ಕಳೆಯಬೇಕಾಗುತ್ತದೆ. ಅದಕ್ಕಾಗಿ ಪ್ರತಿ ತಿಂಗಳು ಬಜೆಟ್ ರೂಪಿಸಿ ಅದಕ್ಕೆ ತಕ್ಕಂತೆ ಖರ್ಚುವೆಚ್ಚ ನಿರ್ವಹಿಸಿ. ಹಣ ಖರ್ಚಾದ ಮೇಲೆ ಲೆಕ್ಕ ಹಾಕುವುದಕ್ಕಿಂತ, ನಿಮ್ಮಲ್ಲಿರುವ ಹಣ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು, ಉಳಿತಾಯ ಮಾಡಬೇಕು ಎಂದು ಮೊದಲೆ ನಿರ್ಧರಿಸಿ.

ಇತಿಮಿತಿ ಇರಲಿ

ಇತಿಮಿತಿ ಇರಲಿ

ಹಣದ ವಿಚಾರದಲ್ಲಿ ನಿಮ್ಮಲ್ಲಿ ಹಿಡಿತ, ಇತಿಮಿತಿ ಇರಲೇಬೇಕಾಗುತ್ತದೆ. ಹಣ ಕೈಗೆ ಬಂದರೆ ಸಾಕು ನೀರಿನಂತೆ ಖರ್ಚು ಮಾಡುವ ಶೂರರು ತುಂಬಾ ಜನ ಇದ್ದಾರೆ. ಈಗ ನೀರು ಕೂಡ ಸುಲಭವಾಗಿ ಸಿಗುತ್ತಿಲ್ಲ. ಹಿತಮಿತವಾಗಿ ನೀರನ್ನು ಬಳಸಬೇಕಿದೆ. ಅದೇ ರೀತಿ ಹಣವನ್ನು ಕೂಡ ಹಿತಮಿತವಾಗಿ ಬಳಸುವುದನ್ನು ರೂಢಿಸಿಕೊಳ್ಳಿ.

ಅವಶ್ಯಕತೆಗೆ ಮಹತ್ವವಿರಲಿ

ಅವಶ್ಯಕತೆಗೆ ಮಹತ್ವವಿರಲಿ

ಕಡಿಮೆ ಸಂಬಳವಿದ್ದರೂ ಕೂಡ ಐಶ್ವರ್ಯವಂತನಂತೆ ಬಾಳಲು ಸಾಧ್ಯವಿದೆ. ಹಣವಿದ್ದಾಗ ಮತ್ತು ಇಲ್ಲದಿದ್ದಾಗ ಒತ್ತಡ ಇರೋದು ಸಹಜ. ಆದರೆ ಶಾಂತವಾಗಿ ಯೋಚಿಸಿ. ಹಣವನ್ನು ಅವಶ್ಯಕತೆಗೆ ತಕ್ಕಂತೆ ಮಿತವಾಗಿ, ಹಿತವಾಗಿ ಬಳಸಿ. ಹನಿ ಹನಿಗೂಡಿದರೆ ಹಳ್ಳ ಎನ್ನುವಂತೆ ನೀವು ಉಳಿಸುತ್ತಾ ಹೋದಂತೆ ನಿಮ್ಮ ಹಣ ಹೆಚ್ಚುತ್ತಾ ಹೋಗುತ್ತದೆ.

ಸಾಲಗಳಿಂದ ದೂರವಿರಿ

ಸಾಲಗಳಿಂದ ದೂರವಿರಿ

ಸಾಮಾನ್ಯ ಜನರು ಇಂದಿನ ಖರ್ಚಿಗಾಗಿ ಸಾಲ ಮಾಡುತ್ತಾರೆ. ಕೈಯಲ್ಲಿ ಹಣವಿಲ್ಲದಿದ್ದರೂ ಖರ್ಚು ಮಾಡಲೇಬೇಕೆಂಬ ಪರಿಸ್ಥಿತಿ ಎದುರಾದಾಗ ನಿಮಗೆ ಸಾಲದ ಅಗತ್ಯ ಬೀಳುತ್ತದೆ. ಹಾಗಾಗಿ ಭವಿಷ್ಯದ ನಿಮ್ಮ ಆದಾಯವನ್ನು ಈಗಲೇ ಪಡೆದು ಅದನ್ನು ದೊಡ್ಡ ಮೊತ್ತದ ಬಡ್ಡಿಯೊಂದಿಗೆ ಹಿಂದಿರುಗಿಸಬೇಕಾಗುತ್ತದೆ. ಹೀಗೆ ನೀವು ಪಡೆದುದಕ್ಕಿಂತ ಹೆಚ್ಚು ಪಾವತಿಸುತ್ತ ಹೋದಾಗ ಶ್ರೀಮಂತರಾಗುವುದು ಹೇಗೆ? ಸಾಲಗಳು ನಮ್ಮ ಆದಾಯದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತ ಹೋಗುತ್ತವೆ. ಪ್ರತಿ ತಿಂಗಳು ನೀವು 20 ಸಾವಿರ ರೂಪಾಯಿ ಕಂತು ಕಟ್ಟುತ್ತ ನಡೆದರೆ, ಪಡೆದ 36 ಲಕ್ಷ ರೂಪಾಯಿಗಳ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸಾಲದಲ್ಲಿ ಮುಳುಗಿದರೆ ಶ್ರೀಮಂತರಾಗಲು ಸಾಧ್ಯವೇ ಇಲ್ಲ. ಜೀವನದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕು ಅಂತಿರಾ?

ಲೆಕ್ಕಾಚಾರದ ವ್ಯವಹಾರ/ಹೂಡಿಕೆ ನಿಮ್ಮದಾಗಿರಲಿ

ಲೆಕ್ಕಾಚಾರದ ವ್ಯವಹಾರ/ಹೂಡಿಕೆ ನಿಮ್ಮದಾಗಿರಲಿ

ಪ್ರತಿಯೊಂದು ವ್ಯವಹಾರಗಳಲ್ಲಿನಮ್ಮದೆಯಾದ ಲೆಕ್ಕಾಚಾರ ಇರಬೇಕು. ಅವರೇನು ಅಂತಾರೆ, ಇವರೇನು ಅಂತಾರೆ ಅನ್ನೊದರ ಬಗ್ಗೆ ತಲೆ ಕೆಡಿಸಿಕೊಳ್ಳಲೇಬಾರದು. ಪ್ರತಿಷ್ಠೆಗೊಸ್ಕರ ಏನೇನೋ ಮಾಡಲು ಹೋಗಿ ಇನ್ನೇನೋ ಮಾಡ್ಕೊಂಡು ಕೈ ಸುಟ್ಕೊಬಾರದು. ಯಾವುದಕ್ಕೆ ಖರ್ಚು ಮಾಡಬೇಕು/ಖರ್ಚು ಮಾಡಬಾರದು ಅಥವಾ ಯಾವುದರಲ್ಲಿ ಹಣ ಹೂಡಿಕೆ ಮಾಡಬೇಕು/ಮಾಡಬಾರದು ಅನ್ನುವ ಲೆಕ್ಕಾಚಾರ ನಮ್ಮದಾಗಿರಬೇಕು. ಎಲ್ಲೆಲ್ಲೋ ಹಣ ವೇಸ್ಟ್ ಮಾಡುವ ಬದಲು ಉತ್ತಮ ಇಳುವರಿ ಕೊಡುವ ಕಡೆ ಹೂಡಿಕೆ ಮಾಡಿ. ಹಣ ಉಳಿತಾಯ ಮಾಡಬೇಕೆ? ಇಲ್ಲಿವೆ 10 ಕ್ವಿಕ್ ಟಿಪ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+