ಬ್ಯಾಂಕ್ ಆರ್‌ಡಿ (ರಿಕರಿಂಗ್ ಡಿಪಾಸಿಟ್) ಹಾಗೂ ಮ್ಯೂಚುವಲ್ ಫಂಡ್ ಸಿಪ್ (ಸಿಪ್) ಇವು ಕಡಿಮೆ ಅಪಾಯದ ಅತ್ಯುತ್ತಮ ಹೂಡಿಕೆ ಯೋಜನೆಗಳಾಗಿವೆ.
ಬ್ಯಾಂಕ್ ಆರ್‌ಡಿ (ರಿಕರಿಂಗ್ ಡಿಪಾಸಿಟ್) ಹಾಗೂ ಮ್ಯೂಚುವಲ್ ಫಂಡ್ (ಸಿಪ್) ಇವು ಕಡಿಮೆ ಅಪಾಯದ ಅತ್ಯುತ್ತಮ ಹೂಡಿಕೆ ಯೋಜನೆಗಳಾಗಿವೆ.
ಬ್ಯಾಂಕ್ ಆರ್‌ಡಿ ಹಾಗೂ ಮ್ಯೂಚುವಲ್ ಫಂಡ್ ಸಿಪ್ ಇವೆರಡೂ ಯೋಜನೆಗಳ ಕಾರ್ಯವಿಧಾನ ಭಿನ್ನವಾಗಿದ್ದು ಆಯಾ ವ್ಯಕ್ತಿಗಳು ತಮ್ಮ ಹೂಡಿಕೆಯ ಉದ್ದೇಶವನ್ನು ಆಧರಿಸಿ ಇವುಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಳ್ಳಬಹುದು. ಆಯಾ ವ್ಯಕ್ತಿ ಬಯಸುವ ಆದಾಯದ ಪ್ರಮಾಣ, ರಿಸ್ಕ್ ತಡೆಯುವ ಮಟ್ಟ, ಹಿಂಪಡೆಯುವಿಕೆ ಸೌಲಭ್ಯಗಳು ಹಾಗೂ ತೆರಿಗೆ ವಿನಾಯಿತಿಗಳನ್ನು ನೋಡಿಕೊಂಡು ಸೂಕ್ತ ಯೋಜನೆಯಲ್ಲಿ ಹೂಡಿಕೆ ಆರಂಭಿಸಬಹುದು. ಈ 12 ಆದಾಯಗಳಿಗೆ ತೆರಿಗೆ ಕಟ್ಟಬೇಕಾಗಿಲ್ಲ
ಪ್ರತಿಫಲಗಳು
ಬ್ಯಾಂಕ್ ಆರ್‌ಡಿಗಳಲ್ಲಿನ ಹೂಡಿಕೆ ಮೇಲಿನ ಆದಾಯವನ್ನು ಬ್ಯಾಂಕುಗಳೇ ನಿರ್ಧರಿಸುತ್ತವೆ. ಕಾಲಕಾಲಕ್ಕೆ ಇವುಗಳ ಬಡ್ಡಿದರಗಳನ್ನು ಬ್ಯಾಂಕುಗಳು ಪರಿಷ್ಕರಿಸಬಹುದಾಗಿದೆ. ಆದರೆ ಮ್ಯೂಚುವಲ್ ಫಂಡ್ ಸಿಪ್ ಯೋಜನೆಗಳ ಆದಾಯವು ಹೂಡಿಕೆ ವಿಧಾನ ಹಾಗೂ ಮಾರುಕಟ್ಟೆಯ ಸ್ಥಿತಿಗಳನ್ನು ಆಧರಿಸಿ ವ್ಯತ್ಯಾಸವಾಗುತ್ತದೆ. ಸಿಪ್ ವಿಧಾನದಲ್ಲಿ ಆದಾಯದ ಪ್ರಮಾಣ ನಿಶ್ಚಿತವಾಗಿರುವುದಿಲ್ಲ ಎಂಬುದು ಗೊತ್ತಿರಲಿ. ಪ್ರಸ್ತುತ ಆರ್‌ಡಿ ಬಡ್ಡಿದರಗಳು ಶೇ.6 ರಿಂದ 8 ರ ಆಸುಪಾಸಿನಲ್ಲಿವೆ. ಅದೇ ರೀತಿ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳು ಹಿಂದಿನ ಮೂರು ವರ್ಷಗಳಲ್ಲಿ ವಾರ್ಷಿಕ ಶೇ. 11 ರಿಂದ 12 ರಷ್ಟು ಆದಾಯ ನೀಡಿವೆ.
ಅಪಾಯದ ಅಂಶಗಳು
ಆರ್‌ಬಿಐ ನಿಯಂತ್ರಣಕ್ಕೊಳಪಟ್ಟಿರುವ ಸಾರ್ವಜನಿಕ ಬ್ಯಾಂಕುಗಳಲ್ಲಿನ ಆರ್‌ಡಿ ಖಾತೆಗಳು ಸಂಪೂರ್ಣ ಸುರಕ್ಷಿತವಾಗಿವೆ. ಇದರಲ್ಲಿನ ಹೂಡಿಕೆ ಹಾಗೂ ಆದಾಯಕ್ಕೆ ಸರಕಾರದ ಖಾತರಿ ಇರುತ್ತದೆ. ಆದರೆ ಸಿಪ್‌ಗಳಲ್ಲಿನ ಹೂಡಿಕೆ ಹಾಗೂ ಆದಾಯ ಖಾತರಿದಾಯಕವಾಗಿರುವುದಿಲ್ಲ. ಮ್ಯೂಚುವಲ್ ಫಂಡ್ ನಿಧಿಯನ್ನು ಲಾರ್ಜ್ ಕ್ಯಾಪ್ ಶೇರುಗಳು, ಸ್ಮಾಲ್ ಕ್ಯಾಪ್ ಶೇರುಗಳು, ಬಾಂಡು, ಸರಕಾರದ ಭದ್ರತಾ ಠೇವಣಿಗಳು ಇತ್ಯಾದಿಗಳಲ್ಲಿ ಹೂಡಿಕೆ ಮಾಡಲಾಗುವುದರಿಂದ ಆದಾಯವು ಹಲವಾರು ಅಂಶಗಳನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ. ಮ್ಯೂಚುವಲ್ ಫಂಡ್ ಸಿಪ್‌ಗಳಿಗೆ ಹೋಲಿಸಿದರೆ ಬ್ಯಾಂಕ್ ಆರ್‌ಡಿಗಳು ಹೆಚ್ಚು ಸುರಕ್ಷಿತವಾಗಿವೆ.
ಹಣ ಹಿಂಪಡೆಯುವಿಕೆ
ಅವಧಿಪೂರ್ವವಾಗಿ ಆರ್‌ಡಿ ಖಾತೆಯನ್ನು ಬಂದ್ ಮಾಡಿದರೆ ದಂಡ ಶುಲ್ಕ ಕಟ್ಟಬೇಕಾಗುತ್ತದೆ. ಆದರೆ ಸಿಪ್ ಖಾತೆಯನ್ನು ಅವಧಿಪೂರ್ವವಾಗಿ ಬಂದ್ ಮಾಡಿ ಮೊತ್ತ ಹಿಂಪಡೆಯಲು ಯಾವುದೇ ದಂಡ ಶುಲ್ಕವನ್ನು ಕಟ್ಟಬೇಕಾಗಿಲ್ಲ.
ಅನ್ವಯಿಸುವ ತೆರಿಗೆಗಳು
ಸಿಪ್ ಯೋಜನೆಯಲ್ಲಿನ ಇಎಲ್‌ಎಸ್‌ಎಸ್ ಎಂದು ಕರೆಯಲಾಗುವ ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ ಹೊರತುಪಡಿಸಿದರೆ ಇನ್ನಿತರ ಎಲ್ಲ ಸಿಪ್ ಯೋಜನೆಗಳು ಹಾಗೂ ಬ್ಯಾಂಕ್ ಆರ್‌ಡಿ ಯೋಜನೆಗಳಲ್ಲಿ ಸಿಗುವ ಆದಾಯಕ್ಕೆ ನಿಯಮಾವಳಿಗಳ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ.
ಇಎಲ್‌ಎಸ್‌ಎಸ್‌ನಲ್ಲಿನ ವಾರ್ಷಿಕ 1.5 ಲಕ್ಷ ರೂ. ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ 80ಸಿ ಅನ್ವಯ ತೆರಿಗೆ ವಿನಾಯಿತಿ ಕ್ಲೇಮ್ ಮಾಡಬಹುದು. ಹಾಗೆಯೇ 1 ಲಕ್ಷ ರೂ. ಮೀರಿದ ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ ಹೂಡಿಕೆಗಳಿಗೆ ವಾರ್ಷಿಕ ಶೇ.10 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ಹೂಡಿಕೆಯ ದೂರದೃಷ್ಟಿ ಅಂಶಗಳು
ಅಲ್ಪಾವಧಿಗೆ ಹೂಡಿಕೆ ಮಾಡಲು ಇಚ್ಛಿಸುವವರಿಗೆ ಬ್ಯಾಂಕ್ ಆರ್‌ಡಿ ಉತ್ತಮವಾಗಿದ್ದು, ದೀರ್ಘಾವಧಿಯವರೆಗೆ ಹೂಡಿಕೆ ಮಾಡಿ ಆದಾಯ ಪಡೆಯಲು ಬಯಸುವವರಿಗೆ ಮ್ಯೂಚುವಲ್ ಫಂಡ್ ಸಿಪ್ ಯೋಜನೆಗಳು ಸೂಕ್ತವಾಗಿವೆ. ಆನ್ಲೈನ್ ಮೂಲಕ ಪಿಎಫ್ ವಿತ್ ಡ್ರಾ ಮಾಡೋದು ಹೇಗೆ?


Click it and Unblock the Notifications