ಈ 12 ಆದಾಯಗಳಿಗೆ ತೆರಿಗೆ ಕಟ್ಟಬೇಕಾಗಿಲ್ಲ

ತೆರಿಗೆ ಕಟ್ಟುವುದನ್ನು ಹೆಚ್ಚಿನ ಜನರು ಇಷ್ಟ ಪಡುವುದಿಲ್ಲ! ತೆರಿಗೆಯಿಂದ ತಪ್ಪಿಸಿಕೊಳ್ಳಲು ಬಯಸುವವರು ಕೆಲವೊಮ್ಮೆ ಕಾನೂನಾತ್ಮಕವಾಗಿ ಪ್ರಯತ್ನಿಸಿದರೆ, ಮತ್ತೆ ಕೆಲವೊಮ್ಮೆ ಕಾನೂನು ಉಲ್ಲಂಘನೆ ಮಾಡುತ್ತಾರೆ.

ತೆರಿಗೆ ಕಟ್ಟುವುದನ್ನು ಹೆಚ್ಚಿನ ಜನರು ಇಷ್ಟ ಪಡುವುದಿಲ್ಲ! ತೆರಿಗೆಯಿಂದ ತಪ್ಪಿಸಿಕೊಳ್ಳಲು ಬಯಸುವವರು ಕೆಲವೊಮ್ಮೆ ಕಾನೂನಾತ್ಮಕವಾಗಿ ಪ್ರಯತ್ನಿಸಿದರೆ, ಮತ್ತೆ ಕೆಲವೊಮ್ಮೆ ಕಾನೂನು ಉಲ್ಲಂಘನೆ ಮಾಡುತ್ತಾರೆ.
ತೆರಿಗೆ ಕಟ್ಟಲು ಇಚ್ಚಿಸದವರಿಗೆ ಅಥವಾ ತೆರಿಗೆ ವಿನಾಯಿತಿ ಬಯಸುವವರಿಗೆ ಹಲವು ಮಾರ್ಗಗಳಿವೆ. ಕೆಲ ಆದಾಯಗಳಿಗೆ ಮತ್ತು ಹೂಡಿಕೆ ಯೋಜನೆಗಳಿಗೆ ತೆರಿಗೆ ಕಟ್ಟಬೇಕಾಗಿಲ್ಲ.

ತೆರಿಗೆ ಉಳಿತಾಯ ಮಾಡಬಹುದಾದ ಅನೇಕ ಹೂಡಿಕೆ ವಿಧಾನಗಳಿದ್ದು ಅವುಗಳ ಬಗ್ಗೆ ತಿಳಿಯೋಣ ಬನ್ನಿ..

ಇಎಲ್ಎಸ್ಎಸ್ (Equity-Linked Savings Scheme)

ಇಎಲ್ಎಸ್ಎಸ್ (Equity-Linked Savings Scheme)

ಮ್ಯೂಚುವಲ್ ಫಂಡ್ ELSS 3 ವರ್ಷಗಳ ಲಾಕ್-ಇನ್ ಅವಧಿಯಲ್ಲಿ ಹೊಂದಿದ್ದು, ಆಕರ್ಷಕ ಆದಾಯದೊಂದಿಗೆ, ಮ್ಯೂಚುವಲ್ ಫಂಡ್ ELSS ಒಂದು ತೆರಿಗೆ ಉಳಿತಾಯ ಹೂಡಿಕೆಯಾಗಿ ಹೆಚ್ಚು ಜನಪ್ರಿಯವಾಗಿದೆ. ELSS ಕಳೆದ ಮೂರು ವರ್ಷಗಳಲ್ಲಿ ಸರಾಸರಿ ಶೇ. 9.78 ರಷ್ಟು ಆದಾಯ ಹಿಂದಿರುಗಿಸಿದೆ.
ELSS (Equity Linked Saving Scheme)-ಇದೊಂದು ಈಕ್ವಿಟಿ ಮ್ಯೂಚುವಲ್ ಫಂಡ್ ಆಗಿದ್ದು ಹೆಸರೇ ತಿಳಿಸುವಂತೆ ಈಕ್ವಿಟಿ ಹಾಗೂ ಇದನ್ನು ಅವಲಂಬಿಸಿದ ಉತ್ಪನ್ನದಲ್ಲಿ ಹಣವನ್ನು ಹೂಡಲಾಗುತ್ತದೆ. ಆದರೆ ಈ ಹೂಡಿಕೆಗಳಲ್ಲಿ ಒಮ್ಮೆ ಹೂಡಿದ ಹಣವನ್ನು ಕನಿಷ್ಟ ಮೂರು ವರ್ಷಗಳವರೆಗೆ ತೆಗೆಯಲಾಗುವುದಿಲ್ಲ. ELSSನಲ್ಲಿ ಹೂಡಿದ ಹೂಡಿಕೆಯಿಂದ ಪಡೆದ ಲಾಭ ವಿಧಿ 80C ಪ್ರಕಾರ ತೆರಿಗೆ ವಿನಾಯಿತಿ ಪಡೆದಿದೆ. ಮೂರು ವರ್ಷ ಕಳೆದ ಬಳಿಕ ದೊರಕುವ ಪರಿಪಕ್ವ ಮೊತ್ತವೂ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ. ಅಲ್ಲದೇ ಈ ಹೂಡಿಕೆಯ ಲಾಭಾಂಶವೂ ತೆರಿಗೆ ವಿನಾಯಿತಿ ಪಡೆದಿರುತ್ತದೆ. ಭಾರತದಲ್ಲಿ ಈ 25 ಆದಾಯ ಹಾಗು ಹೂಡಿಕೆಗಳಿಗೆ ತೆರಿಗೆ ಇಲ್ಲ!

ಈಕ್ವಿಟಿ (Equity Mutual Funds)

ಈಕ್ವಿಟಿ (Equity Mutual Funds)

ಈಕ್ವಿಟಿ ಅಥವಾ Equity Mutual Funds ಹಾಗೂ ELSS (Equity-Linked Savings Scheme) ಮೇಲೆ ಹೂಡಿದ ಹೂಡಿಕೆಯಲ್ಲಿ ಪಡೆದ ಆದಾಯವೂ ತೆರಿಗೆಯಿಂದ ಮುಕ್ತವಾಗಿದೆ. ಈಕ್ವಿಟಿ ಅಥವಾ ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡುವ ಹೂಡಿಕೆಗಳನ್ನು ಕನಿಷ್ಟ ಒಂದು ವರ್ಷದವರೆಗಾದರೂ ಉಳಿಸಿಕೊಂಡು ಬಂದಿದ್ದರೆ ಈ ಮೂಲಕ ಪಡೆಯುವ ದೀರ್ಘಾವಧಿಯ ಲಾಭಗಳೂ ವಿಧಿ 10(38) ಪ್ರಕಾರ ತೆರಿಗೆಯಿಂದ ವಿನಾಯಿತಿ ಹೊಂದಿರುತ್ತವೆ. ಆದರೆ ಇದಕ್ಕಾಗಿ Security Transaction Tax (STT) ಎಂಬ ಸುರಕ್ಷಾ ತೆರಿಗೆಯನ್ನು ಪ್ರತ್ಯೇಕವಾಗಿ ಪಾವತಿಸುವುದು ಅಗತ್ಯವಾಗಿದೆ.

ಪಿಪಿಎಫ್ ಖಾತೆ (Public Provident Fund)

ಪಿಪಿಎಫ್ ಖಾತೆ (Public Provident Fund)

ಪಿಪಿಎಫ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಒಂದು ಜನಪ್ರಿಯ ನಿವೃತ್ತಿ ಯೋಜನೆಯಾಗಿದ್ದು, ಜನೆವರಿ-ಮಾರ್ಚ್ ೨೦೧೯ರ ಅವಧಿಗೆ ಶೇ. 8 ರಷ್ಟು ಬಡ್ಡಿದರ ಹೊಂದಿದೆ. ಮಾಸಿಕ ವೇತನ ಪಡೆಯುವ ಉದ್ಯೋಗಿಗಳಿಗೂ ಸ್ವ ಉದ್ಯೋಗಿಗಳಿಗೂ ಅನ್ವಯಿಸುತ್ತದೆ. ಈ ಖಾತೆಯನ್ನು ಭಾರತದ ಯಾವುದೇ ನಾಗರಿಕರು ರಾಷ್ಟ್ರೀಕೃತ ಬ್ಯಾಂಕ್, ಆಯ್ದ ಅಂಚೆ ಕಛೇರಿ ಹಾಗೂ ಕೆಲವು ನಿಗದಿತ ಖಾಸಗಿ ಬ್ಯಾಂಕ್ ಗಳಲ್ಲಿ ತೆರೆಯಬಹುದು. ಆದಾಯ ತೆರಿಗೆ ವಿಧಿ 80C ಪ್ರಕಾರ ತೆರಿಗೆ ವಿನಾಯಿತಿ ಇದೆ. ಈ ಖಾತೆಯಲ್ಲಿ ದೊರಕುವ ಬಡ್ಡಿಯೂ ಆಕರ್ಷಕವಾಗಿದ್ದು, ಹೂಡಿಕೆ ಪರಿಪಕ್ವಗೊಂಡಾಗಲೂ ಈ ಮೊತ್ತ ತೆರಿಗೆಯಿಂದ ಮುಕ್ತವಾಗಿರುತ್ತದೆ.

ಸುಕನ್ಯಾ ಸಮೃದ್ದಿ ಖಾತೆ (Sukanya Samriddhi Account)

ಸುಕನ್ಯಾ ಸಮೃದ್ದಿ ಖಾತೆ (Sukanya Samriddhi Account)

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಪ್ರಾರಂಭಿಸಿದ ಯೋಜನೆಯಾಗಿದ್ದು, ಶೇ. 8.5 ರಷ್ಟು ಬಡ್ಡಿದರವನ್ನು ನೀಡುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದ್ದರೆ ಈ ಖಾತೆಯನ್ನು ತೆರೆಯುವುದು ಅತಿ ಅಗತ್ಯ. ಖಾತೆಯನ್ನು ಯಾವುದೇ ಅಂಗೀಕೃತ ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ತೆರೆಯಬಹುದು. ಈ ಖಾತೆಯಲ್ಲಿ ಹೂಡಿದ ಹೂಡಿಕೆಗಳು ವಿಧಿ 80C ಪ್ರಕಾರ ತೆರಿಗೆಯಿಂದ ಮುಕ್ತವಾಗಿದೆ. ಪರಿಪಕ್ವ ಮೊತ್ತ ಹಾಗೂ ವರ್ಷಿಕ ಬಡ್ಡಿಯೂ ತೆರಿಗೆಯಿಂದ ಮುಕ್ತವಾಗಿವೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS)

ರಾಷ್ಟ್ರೀಯ ಪಿಂಚಣಿ ಯೋಜನೆ (NPS)

ಎನ್.ಪಿ.ಎಸ್ ಮೂಲಕ ಸೆಕ್ಷನ್ 80 ಸಿ ಅಡಿಯಲ್ಲಿ ರೂ. 1.5 ಲಕ್ಷದ ಸಾಮಾನ್ಯ ತೆರಿಗೆ ಪ್ರಯೋಜನವನ್ನು ಹೊರತುಪಡಿಸಿ, ಒಬ್ಬ ವ್ಯಕ್ತಿಯು ಸೆಕ್ಷನ್ 80CCD (1b) ಅಡಿಯಲ್ಲಿ ರೂ. 50,000 ವರೆಗಿನ ಹೆಚ್ಚುವರಿ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ಉದ್ಯೋಗದಾತನು ರಾಷ್ಟ್ರೀಯ ಪಿಂಚಣಿ ಯೋಜನೆಗೆ ಶೇ. ೧೦ರಷ್ಟು ವೇತನವನ್ನು ವರ್ಗಾಯಿಸಿದರೆ ಇದು ಸಾಧ್ಯವಾಗುತ್ತದೆ.
ಎನ್ಪಿಎಸ್ ಕಳೆದ ಐದು ವರ್ಷಗಳಿಂದ ಶೇ. 10.84 ರಿಟರ್ನ್ ಒದಗಿಸುತ್ತಿದೆ. ಹೆಚ್ಚುವರಿಯಾಗಿ, ನಿವೃತ್ತಿಯ ಸಮಯದಲ್ಲಿ ಶೇ. 60ರಷ್ಟು ಹಣವನ್ನು ಹಿಂಪಡೆಯುವುದು ತೆರಿಗೆ ಮುಕ್ತವಾಗಿರುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಖಾತೆ ಆನ್ಲೈನ್ ಮೂಲಕ ತೆರೆಯುವುದು ಹೇಗೆ?

ಇಪಿಎಫ್ (ಉದ್ಯೋಗಿಯ ಭವಿಷ್ಯ ನಿಧಿ)

ಇಪಿಎಫ್ (ಉದ್ಯೋಗಿಯ ಭವಿಷ್ಯ ನಿಧಿ)

ಸೇವೆ ಸಲ್ಲಿಸಿದ ಐದು ವರ್ಷಗಳ ಬಳಿಕ, ಇಪಿಎಫ್ ಮೊತ್ತವನ್ನು ಖಾತೆಯಿಂದ ಪಡೆದುಕೊಂಡರೆ, ಅದು ಕರ ಮುಕ್ತವಾಗಿರುತ್ತದೆ. ಒಂದು ವೇಳೆ ಇಪಿಎಫ್ ಮೊತ್ತವನ್ನು ಐದು ವರ್ಷಗಳಿಗಿಂತಲೂ ಮೊದಲೇ ಖಾತೆಯಿಂದ ಪಡೆದುಕೊಂಡಲ್ಲಿ ಆ ಮೊತ್ತವು ಸಂಪೂರ್ಣವಾಗಿ ತೆರಿಗೆಯ ವ್ಯಾಪ್ತಿಗೆ ಬರುತ್ತದೆ. "ಐದು ವರ್ಷಗಳ ನಿರಂತರ ಸೇವೆ" ಎಂಬುದರ ಅರ್ಥವೇನೆಂದರೆ, ಈ ಐದು ವರ್ಷಗಳ ಅವಧಿಯಲ್ಲಿ ನೀವು ಹಲವಾರು ಉದ್ಯೋಗಗಳನ್ನು ಅಥವಾ ಸಂಸ್ಥೆಗಳನ್ನು ಬದಲಾಯಿಸಿದ್ದರೂ ಕೂಡಾ ನಿಮ್ಮ ಇಪಿಎಫ್ ಖಾತೆಯು ಐದು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯವರೆಗೂ ಕ್ರಿಯಾತ್ಮಕವಾಗಿದೆ (ಸಕ್ರಿಯವಾಗಿ ಪಿಎಫ್ ದೇಣಿಗೆಯನ್ನು ಉದ್ಯೋಗದಾತ ಸಂಸ್ಥೆಯಿಂದ ನಿರಂತರವಾಗಿ ಪಡೆಯುತ್ತಿದೆ) ಎಂದಾಗಿರುತ್ತದೆ.

ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS)

ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS)

ಹಿರಿಯ ನಾಗರಿಕ ಉಳಿತಾಯ ಯೋಜನೆ 2017 ರ ಜನವರಿಯಿಂದ ಮಾರ್ಚ್ 2019 ರವರೆಗೆ ಶೇ. 8.7 ಶೇ. ಬಡ್ಡಿದರ ಒದಗಿಸುತ್ತದೆ. ಇದು 5 ವರ್ಷಗಳ ಲಾಕ್-ಇನ್ ಅವಧಿ ಹೊಂದಿದ್ದು, 3 ವರ್ಷಗಳ ವರೆಗೆ ವಿಸ್ತರಿಸಬಹುದು. 60 ವರ್ಷ ವಯಸ್ಸಿನ ವ್ಯಕ್ತಿಗೆ ಈ ಯೋಜನೆಯು ಮಾನ್ಯವಾಗಿದೆ. 58 ವರ್ಷ ವಯಸ್ಸಿನ ನಂತರ ಸ್ವಯಂಪ್ರೇರಿತ ನಿವೃತ್ತಿಯನ್ನು ಪಡೆದವರು ಮತ್ತು ಉದ್ಯೋಗದಲ್ಲಿರದ ವ್ಯಕ್ತಿಗಳು ಇದನ್ನು ಆರಿಸಿಕೊಳ್ಳಬಹುದು.

ಎಫ್ಡಿ (ತೆರಿಗೆ ಉಳಿತಾಯವಿರುವ ಬ್ಯಾಂಕ್ ಎಫ್ಡಿ)

ಎಫ್ಡಿ (ತೆರಿಗೆ ಉಳಿತಾಯವಿರುವ ಬ್ಯಾಂಕ್ ಎಫ್ಡಿ)

ಹೆಚ್ಚಿನ ವಾಣಿಜ್ಯ ಬ್ಯಾಂಕುಗಳು ತೆರಿಗೆ ಉಳಿತಾಯ ಸ್ಥಿರ ಠೇವಣಿಗಳನ್ನು (ಎಫ್ಡಿ) ನೀಡುತ್ತವೆ. ಇದು ಐದು ವರ್ಷಗಳ ಲಾಕ್-ಇನ್ ಅವಧಿ ಹೊಂದಿದ್ದು, ಬ್ಯಾಂಕ್ ಎಫ್ಡಿ ಮೇಲೆ ಪ್ರಸ್ತುತ ಶೇ. 7.5 ರಿಂದ ಶೇ. 8.25 ರವರೆಗೆ ಬಡ್ಡಿದರ ಲಭ್ಯವಿದೆ.

ವಿಮಾ ಪಾಲಿಸಿ

ವಿಮಾ ಪಾಲಿಸಿ

ಜೀವ ವಿಮೆಯಲ್ಲಿಯೂ ತೆರಿಗೆ ವಿನಾಯಿತಿಯ ಲಾಭಗಳಿವೆ. ಭಾರತದಲ್ಲಿ ಯಾವುದೇ ಎಲ್ಐಸಿ (Life Insurance Corporation of India) ಅಥವಾ ಭಾರತೀಯ ಜೀವವಿಮಾ ಸಂಸ್ಥೆಯಿಂದ ಅಥವಾ ಅಂಗೀಕೃತ ಖಾಸಗಿ ವಿಮಾ ಸಂಸ್ಥೆಯಿಂದ ಪಾಲಿಸಿಯನ್ನು ಕೊಳ್ಳಬಹುದು. ಈ ವಿಮೆಗೆ ನೀಡುವ ಕಂತಿನ ಮೊತ್ತ ವಿಧಿ 80C ಪ್ರಕಾರ ತೆರಿಗೆಯಿಂದ ಮುಕ್ತವಾಗಿದೆ. ವಿಮಾ ಪಾಲಿಸಿ ಪರಿಪಕ್ವಗೊಂಡಾಗಲೂ ಈ ಮೊತ್ತ ತೆರಿಗೆಯಿಂದ ಮುಕ್ತವಾಗಿರುತ್ತದೆ. ವಿಮೆಯನ್ನು ಲಾಭಕರ ಹೂಡಿಕೆಯನ್ನಾಗಿ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಈ ವಿಮೆಯ ಉದ್ದೇಶವೇ ಅಕಾಲಿಕ ಸಂದರ್ಭಗಳಿಗೆ ನೆರವಾಗುವುದಾಗಿದೆ.

ಯುಲಿಪ್ (Unit-linked insurance plan)

ಯುಲಿಪ್ (Unit-linked insurance plan)

ಯುಲಿಪ್ ಕಳೆದ ಐದು ವರ್ಷಗಳಲ್ಲಿ ಶೇ. 8 ರಿಂದ 14 ರವರೆಗಿನ ವ್ಯಾಪ್ತಿ ನಡುವಿನ ಬಡ್ಡಿ ದರವನ್ನು ಹೊಂದಿದೆ. ಯುಲಿಪ್ ಸಾಂಪ್ರದಾಯಿಕ ವಿಮಾ ಯೋಜನೆಗಳಿಗೆ ಹೋಲುತ್ತಿದ್ದು, ಇದು ಹೂಡಿಕೆಯ ಲಾಭವನ್ನು ನೀಡುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್ಎಸ್ಸಿ)

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್ಎಸ್ಸಿ)

ಎನ್ಎಸ್ ಸಿ ಮೇಲಿನ ಬಡ್ಡಿದರವು ಜನವರಿ-ಮಾರ್ಚ್ 2019 ರ ಅವಧಿಗೆ ಶೇ. 8 ರಷ್ಟಿದೆ. NSC ಯೊಂದಿಗೆ, ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಮತ್ತು ಗಳಿಸಿದ ಬಡ್ಡಿ ಮೇಲೆ ತೆರಿಗೆ ಲಾಭವನ್ನು ಪಡೆಯಬಹುದು.

ಪಿಂಚಣಿ ಯೋಜನೆಗಳು

ಪಿಂಚಣಿ ಯೋಜನೆಗಳು

ಕಳೆದ ಐದು ವರ್ಷಗಳಿಂದ ಪಿಂಚಣಿ ಯೋಜನೆಗಳ ಮೇಲೆ ಪಡೆಯುವ ಬಡ್ಡಿದರ ಶೇ. 8 ರಿಂದ 10 ರವರೆಗೆ ಇದೆ. ಭಾರತದಲ್ಲಿ ಈ ಆದಾಯಗಳಿಗೆ ತೆರಿಗೆ ಇಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+