For Quick Alerts
ALLOW NOTIFICATIONS  
For Daily Alerts

ಹೊಸ ವರ್ಷಕ್ಕೆ ಸುರಕ್ಷಿತ ಆದಾಯಕ್ಕಾಗಿ 5 ವಿಧಾನಗಳು

ಹೊಸ ವರುಷದ ಸಂದರ್ಭದಲ್ಲಿ ಅನೇಕ ವ್ಯಕ್ತಿಗಳು ಹಣ ಹೂಡಿಕೆ ಮತ್ತು ಉಳಿತಾಯದ ಬಗ್ಗೆ ಯೋಜಿಸುತ್ತಾರೆ. ಹೊಸ ವರ್ಷದ ಮುನ್ನಾ ದಿನದಂದು ತಮ್ಮ ಮುಂಬರುವ ವರ್ಷವನ್ನು ಉತ್ತಮಗೊಳಿಸಲು ಸಾಮಾನ್ಯವಾಗಿ ಹಣಕಾಸಿನ ನಿರ್ಣಯಗಳನ್ನು ಕೈಗೊಳ್ಳುತ್ತಾರೆ.

|

ಹೊಸ ವರುಷದ ಸಂದರ್ಭದಲ್ಲಿ ಅನೇಕ ವ್ಯಕ್ತಿಗಳು ಹಣ ಹೂಡಿಕೆ ಮತ್ತು ಉಳಿತಾಯದ ಬಗ್ಗೆ ಯೋಜಿಸುತ್ತಾರೆ. ಹೊಸ ವರ್ಷದ ಮುನ್ನಾ ದಿನದಂದು ತಮ್ಮ ಮುಂಬರುವ ವರ್ಷವನ್ನು ಉತ್ತಮಗೊಳಿಸಲು ಸಾಮಾನ್ಯವಾಗಿ ಹಣಕಾಸಿನ ನಿರ್ಣಯಗಳನ್ನು ಕೈಗೊಳ್ಳುತ್ತಾರೆ.

2019 ರಲ್ಲಿ ಹಣ ಗಳಿಕೆಗೆ/ಹೂಡಿಕೆಗೆ ಮಾರುಕಟ್ಟೆಯಲ್ಲಿ ಹಲವಾರು ಮಾರ್ಗಗಳಿವೆ. ಆಕ್ರಮಣಕಾರಿ ಹೂಡಿಕೆದಾರರು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು ಎಮದು ಆರ್ಥಿಕ ತಜ್ಞರನ್ನು ಸಲಹೆ ನೀಡುತ್ತಾರೆ.
ಆದಾಗ್ಯೂ, ಸುರಕ್ಷಿತ ಆದಾಯವನ್ನು ಬಯಸುವವರಿಗೆ ನಿಶ್ಚಿತ ಆದಾಯದ ಸಲಕರಣೆಗಳಾದ ಸ್ಥಿರ ಠೇವಣಿ (ಎಫ್ಡಿಗಳು), ಮರುಕಳಿಸುವ ಠೇವಣಿ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(ಎನ್ಎಸ್ಸಿ) ಮತ್ತು ಮಾಸಿಕ ವರಮಾನ ಯೋಜನೆ (ಎಂಐಎಸ್) ನಲ್ಲಿ ಹೂಡಿಕೆ ಮಾಡಬಹುದು. ಹೊಸ ವರ್ಷಕ್ಕೆ ಹೊಸ ಬಿಸಿನೆಸ್ ಐಡಿಯಾ ಯಾವುವು ಗೊತ್ತೆ?

1. ಸ್ಥಿರ ಠೇವಣಿಗಳು(ಎಫ್ಡಿ)

1. ಸ್ಥಿರ ಠೇವಣಿಗಳು(ಎಫ್ಡಿ)

ಸ್ಥಿರ ಠೇವಣಿಗಳು (ಎಫ್ಡಿಗಳು) ಸುರಕ್ಷಿತ ಹೂಡಿಕೆಯ ವಿಧಾನವಾಗಿದ್ದು, ಇದು ಉಳಿತಾಯ ಖಾತೆ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ನಿರ್ದಿಷ್ಟ ಅವಧಿಗಳಲ್ಲಿ ಆದಾಯವನ್ನು ನಿಗದಿಪಡಿಸಲಾಗಿರುತ್ತದೆ. ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಹಣಕಾಸೇತರ ಕಂಪನಿಗಳು (ಎನ್ಬಿಎಫ್ಸಿ) ಮತ್ತು ಅಂಚೆ ಕಚೇರಿ ಮೂಲಕ ಎಫ್ಡಿ ಲಭ್ಯವಿರುತ್ತವೆ.

2. ಮರುಕಳಿಸುವ ಠೇವಣಿಗಳು (RDs)

2. ಮರುಕಳಿಸುವ ಠೇವಣಿಗಳು (RDs)

ಮರುಕಳಿಸುವ ಠೇವಣಿ (RDs) ಒಂದು ರೀತಿಯ ಟರ್ಮ್ ಠೇವಣಿಯಾಗಿದ್ದು, ಇದರಲ್ಲಿ ಒಂದು ಸ್ಥಿರವಾದ ಮೊತ್ತವನ್ನು ಸ್ಥಿರ ಅವಧಿಯವರೆಗೆ ಇರಿಸುವ ಅಗತ್ಯವಿದೆ. ಗ್ರಾಹಕರು ಪ್ರತಿ ತಿಂಗಳು ಮೊತ್ತವನ್ನು ಠೇವಣಿ ಮಾಡಬಹುದು ಮತ್ತು ಅದರ ಮೇಲೆ ಬಡ್ಡಿಯ ಆದಾಯವನ್ನು ಗಳಿಸಬಹುದು.

3. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

3. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ಆದಾಯ ತೆರಿಗೆ ಪ್ರಯೋಜನಗಳೊಂದಿಗೆ ಪಿಪಿಎಫ್ ಯೋಗ್ಯವಾದ ಆದಾಯ ಒದಗಿಸುತ್ತದೆ. ಪಿಪಿಎಫ್ ವಿನಾಯಿತಿ, ವಿನಾಯಿತಿ (ಇಇಇ) ತೆರಿಗೆ ಸ್ಥಿತಿಯ ಕೆಟಗರಿಯಲ್ಲಿ ಬರುತ್ತದೆ. ಅಂದರೆ, ಆದಾಯ, ಪರಿಪಕ್ವತೆಯ ಮೊತ್ತ ಮತ್ತು ಬಡ್ಡಿಯ ಆದಾಯವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇರುತ್ತದೆ.

4. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSCs)

4. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSCs)

ಅಂಚೆ ಕಛೇರಿಗಳಿಂದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಖರೀದಿಸಬಹುದು. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿನ ಠೇವಣಿಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಯಡಿಯಲ್ಲಿ ಕಡಿತಕ್ಕೆ ಅರ್ಹತೆ ಪಡೆಯುತ್ತವೆ. ಎನ್.ಎಸ್.ಸಿ.ಗಳಿಗೆ ಐದು ವರ್ಷಗಳ ಅವಧಿಯ ಲಾಕ್-ಇನ್ ಅವಧಿ ಇರುತ್ತದೆ.

5. ಮಾಸಿಕ ಆದಾಯ ಯೋಜನೆ (ಎಂಐಎಸ್)

5. ಮಾಸಿಕ ಆದಾಯ ಯೋಜನೆ (ಎಂಐಎಸ್)

ಅಂಚೆ ಕಚೇರಿಗಳಲ್ಲಿ ತೆರೆಯಬಹುದಾದ ಮಾಸಿಕ ಆದಾಯ ಯೋಜನೆ (ಎಮ್ಐಎಸ್) 5 ವರ್ಷಗಳ ಮುಕ್ತಾಯ ಅವಧಿಯನ್ನು ಹೊಂದಿದೆ. ಮಾಸಿಕ ಆದಾಯದ ಖಾತೆಯನ್ನು ತೆರೆಯಲು ಕನಿಷ್ಠ ಮೊತ್ತ ರೂ. 1,500 ಅಗತ್ಯವಿರುತ್ತದೆ. ಗರಿಷ್ಠ ಹೂಡಿಕೆಯ ಮಿತಿ ರೂ. 4.5 ಲಕ್ಷ ಆಗಿರುತ್ತದೆ. ಜಂಟಿ ಖಾತೆಗೆ ರೂ. 9 ಲಕ್ಷ ಅಗತ್ಯವಿರುತ್ತದೆ.

English summary

Five Investment Options That Guarantee Safe Returns

People often make financial resolutions on the eve of New Year to make their coming year better.
Story first published: Wednesday, January 2, 2019, 10:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X