For Quick Alerts
ALLOW NOTIFICATIONS  
For Daily Alerts

ಹೊಸ ವರ್ಷಕ್ಕೆ ಹೊಸ ಬಿಸಿನೆಸ್ ಐಡಿಯಾ ಯಾವುವು ಗೊತ್ತೆ?

ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿಯೊಬ್ಬರೂ ಹೊಸ ವರ್ಷಕ್ಕೆ ಹೊಸ ಯೋಜನೆಗಳನ್ನು, ಗುರಿಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಎಲ್ಲರ ಗುರಿಗಳು, ಯೋಜನೆಗಳು ಬಿನ್ನವಾಗಿರುತ್ತವೆ.

|

ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿಯೊಬ್ಬರೂ ಹೊಸ ವರ್ಷಕ್ಕೆ ಹೊಸ ಯೋಜನೆಗಳನ್ನು, ಗುರಿಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಎಲ್ಲರ ಗುರಿಗಳು, ಯೋಜನೆಗಳು ಬಿನ್ನವಾಗಿರುತ್ತವೆ.
ಹೊಸ ವರ್ಷದ ಸಂದರ್ಭದಲ್ಲಿ ಹೊಸ ಬಿಸಿನೆಸ್ ಆರಂಭಿಸಲು ಬಯಸುವವರಿಗೆ ಒಂದಿಷ್ಟು ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.

ಯಾವ ಹೊಸ ಮಾದರಿಯ ಬಿಸಿನೆಸ್ ಆರಂಭಿಸಿದರೆ ವ್ಯವಹಾರದಲ್ಲಿ ಯಶಸ್ಸು ಪಡೆಯಬಹುದು? ನೂತನವಾಗಿ ಬೆಳವಣಿಗೆ ಹೊಂದುತ್ತಿರುವ ಬಿಸಿನೆಸ್ ಸ್ಟಾರ್ಟ್ಅಪ್ ಐಡಿಯಾಗಳು ಯಾವುವು? ಹಾಗಾದರೆ 2019ನೇ ವರ್ಷದಲ್ಲಿ ಯಾವೆಲ್ಲ ಮಾದರಿಯ ಬಿಸಿನೆಸ್ ಆರಂಭಿಸಬಹುದು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಅಂಕಣ ಓದಿ.

ಅಮುಲ್ ಪ್ರ್ಯಾಂಚೈಸಿ

ಅಮುಲ್ ಪ್ರ್ಯಾಂಚೈಸಿ

ಅಮುಲ್ ನೊಂದಿಗೆ, ನೀವು ಅಮುಲ್ ಫ್ರ್ಯಾಂಚೈಸಿ ಅನ್ನು ಪಡೆದುಕೊಂಡು ತಿಂಗಳಿಗೆ ರೂ. 5 ರಿಂದ 10 ಲಕ್ಷದವರೆಗೆ ಆದಾಯ ಗಳಿಸಬಹುದು. ಅಮುಲ್ ಔಟ್ಲೆಟ್, ಅಮುಲ್ ರೈಲ್ವೇ ಪಾರ್ಲರ್ ಅಥವಾ ಅಮುಲ್ ಕಿಯೋಸ್ಕ್ ಹೀಗೆ ಹಲವು ವಿಧದ ಫ್ರ್ಯಾಂಚೈಸಿ ಗಳನ್ನು ಅಮುಲ್ ನೀಡುತ್ತದೆ. ನೀವು ರೂ. 1.5 ಲಕ್ಷದಿಂದ 2 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಇದರ ಪೈಕಿ ರೂ. 25,000 ಮರುಪಾವತಿಸಲಾಗದ ಬ್ರ್ಯಾಂಡ್ ಭದ್ರತೆ ಆಗಿರುತ್ತದೆ. ರೂ. 1 ಲಕ್ಷ ನವೀಕರಣಕ್ಕಾಗಿ ಮತ್ತು ಉಪಕರಣಗಳಿಗೆ ರೂ. 75,000 ಖರ್ಚು ಮಾಡಲಾಗುವುದು. ಕಂಪನಿಯ ವೆಬ್ಸೈಟ್ನಲ್ಲಿ ನೀವು ಹೆಚ್ಚಿನ ಮಾಹಿತಿ ಪಡೆಯಬಹುದು. ಅಮುಲ್ ಪ್ರಕಾರ, ಫ್ರ್ಯಾಂಚೈಸಿ ಮೂಲಕ ತಿಂಗಳಿಗೆ ಸುಮಾರು 5 ರಿಂದ 10 ಲಕ್ಷ ಆದಾಯವನ್ನು ನೀವು ಪಡೆಯಬಹುದು. ಆದಾಗ್ಯೂ, ಇದು ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ಅಮುಲ್ ಉತ್ಪನ್ನಗಳ ಕನಿಷ್ಠ ಮಾರಾಟ ಬೆಲೆಯ (ಎಮ್ಆರ್ಪಿ) ಮೇಲೆ ನಿಮಗೆ ಕಮಿಷನ್ ಪಾವತಿಸಲಾಗುತ್ತದೆ. ಹಾಲಿನ ಪೌಚ್ ಮೇಲೆ ಶೇ. ೨.೫, ಹಾಲುತ್ಪನ್ನಗಳ ಮೇಲೆ ಶೇ. ೧೦, ಐಸ್ ಕ್ರೀಮ್ ಗಳ ಮೇಲೆ ಶೇ. ೫೦ರಷ್ಟು ಕಮಿಷನ್ ಪಾವತಿಸಲಾಗುತ್ತದೆ.
ಬಿಸಿನೆಸ್ ಮಾದರಿ ಎರಡು: ಅಮುಲ್ ಐಸ್-ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಇನ್ನೊಂದು ಬಿಸಿನೆಸ್ ಮಾದರಿಯಾಗಿದೆ. ಇದಕ್ಕಾಗಿ ಕನಿಷ್ಟ 300 ಚದರ ಅಡಿ ಜಾಗ ಬೇಕಾಗುತ್ತದೆ. ಫ್ರಾಂಚೈಸಿ ಮಾಲೀಕರು ರೂ. 6 ಲಕ್ಷವನ್ನು ಹೂಡಿಕೆ ಮಾಡಬೇಕಾಗಿದ್ದು, ರೂ. 50,000 ಮರುಪಾವತಿಸಲಾಗದ ಬ್ರ್ಯಾಂಡ್ ಭದ್ರತೆಗಾಗಿ ಪಾವತಿಸಬೇಕು. ಪ್ರಾಂಚೈಸಿ ನವೀಕರಣಕ್ಕೆ ರೂ. 4,00,000 ಮತ್ತು ಉಪಕರಣಗಳಿಗಾಗಿ ರೂ. 1,50,000 ಬೆಕಾಗುತ್ತದೆ. ಅಮುಲ್ ಬಿಸಿನೆಸ್ ಪ್ರಾರಂಭಿಸಿ.. ಪ್ರತಿ ತಿಂಗಳು ರೂ. 5-10 ಲಕ್ಷದವರೆಗೆ ಹಣ ಗಳಿಸಿ

ಆರ್ಟಿಫೀಶಿಯಲ್ ಇಂಟೆಲಿಜೆನ್ಸ್
 

ಆರ್ಟಿಫೀಶಿಯಲ್ ಇಂಟೆಲಿಜೆನ್ಸ್

ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಅನ್ನು ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ಆರ್ಟಿಫೀಶಿಯಲ್ ಇಂಟೆಲಿಜನ್ಸ್ ಇದು ಇತ್ತೀಚಿನ ವರ್ಷಗಳಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಮಾನವನ ಯೋಚನಾ ಶಕ್ತಿಯಂತೆ ಸಾಫ್ಟವೇರ್ ಸಹ ಯೋಚಿಸಿ ಕೆಲಸ ಮಾಡುವಂತೆ ಕಲಿಸುವುದೇ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಗಿದೆ. ಈ ಕ್ಷೇತ್ರದಲ್ಲಿ ಸ್ಟಾರ್ಟಪ್ ಆರಂಭಿಸಲು ಇರುವ ಅವಕಾಶಗಳು:

- ಟೆಕ್ನಿಕಲ್ ಕನ್ಸಲ್ಟನ್ಸಿ: ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ನಿಮಗೆ ಪರಿಣಿತಿ ಇದ್ದಲ್ಲಿ ಟೆಕ್ನಿಕಲ್ ಕನ್ಸಲ್ಟನ್ಸಿ ಆರಂಭಿಸಬಹುದು. ಹಲವಾರು ಕಂಪನಿಗಳು ಈ ಕ್ಷೇತ್ರದ ತಂತ್ರಜ್ಞರಿಗಾಗಿ ಹುಡುಕಾಟ ನಡೆಸಿರುವುದರಿಂದ ಇದರಲ್ಲಿ ಒಳ್ಳೆಯ ಅವಕಾಶಗಳಿವೆ.
- ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಧರಿತ ಪರ್ಸನಲ್ ಅಸಿಸ್ಟಂಟ್: ನಿರ್ದಿಷ್ಟ ಕಂಪನಿಯೊಂದಕ್ಕೆ, ಗ್ರಾಹಕರೊಂದಿಗೆ ಸಂವಾದ ನಡೆಸಿ ಅವರ ಅಗತ್ಯತೆಗಳನ್ನು ತಿಳಿದುಕೊಂಡು ಅವನ್ನು ಪರಿಹರಿಸುವ ರೀತಿಯಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಅಭಿವೃದ್ಧಿ ಪಡಿಸುವುದು. ಅಂದರೆ ಗ್ರಾಹಕರ ಸೇವೆಗಾಗಿ ಚಾಟ್ ಬಾಟ್ (ಒಂದು ರೀತಿಯ ರೋಬಾಟ್) ನಿಯೋಜಿಸುವುದು.
- ಯಂತ್ರಗಳ ರಿಪೇರಿಗಾಗಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್: ಸೆನ್ಸರ್ ನೆಟವರ್ಕ ಹಾಗೂ ಆರ್ಟಿಫೀಶಿಯಲ್ ತಂತ್ರಜ್ಞಾನದ ಮೂಲಕ ಕಾರ್ಖಾನೆಗಳ ಯಂತ್ರಗಳಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಹಾಗೂ ಅವುಗಳನ್ನು ದುರಸ್ತಿ ಮಾಡುವುದು. ಈ ರೀತಿಯ ಕೆಲಸ ಇತ್ತೀಚಿನ ದಿನಗಳಲ್ಲಿ ಬಹಳ ಬೇಡಿಕೆ ಪಡೆದುಕೊಳ್ಳುತ್ತಿದೆ.

SEO ಕನ್ಸಲ್ಟೆನ್ಸಿ (Search Engine Optimization)

SEO ಕನ್ಸಲ್ಟೆನ್ಸಿ (Search Engine Optimization)

ಇಂಟರ್ನೆಟ್ ಮಾರುಕಟ್ಟೆದಾರ ಆಗಬಯಸುವರು SEO ಕನ್ಸಲ್ಟೆನ್ಸಿಯನ್ನು ಪ್ರಾರಂಭಿಸಬಹುದು. ಇದಕ್ಕೆ ಹೆಚ್ಚು ಬಂಡವಾಳದ ಅಗತ್ಯತೆ ಇರುವುದಿಲ್ಲ. ವೇಗವಾದ ಇಂಟರ್ನೆಟ್ ಮಾರುಕಟ್ಟೆ ತಂತ್ರಾಂಶಗಳನ್ನು ಹೊಂದಿರುವ ತಂತ್ರಜ್ಞರು SEO ಸಲಹೆಗಾರರು ಎನ್ನುವರು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ತುಂಬಾ ಇದೆ. ಪ್ರತಿನಿತ್ಯ ಸಾವಿರಾರು ವೆಬ್ಸೈಟ್ ಮತ್ತು ಬ್ಲಾಗ್ ಖಾತೆಗಳನ್ನು ತೆರೆಯಲಾಗುತ್ತದೆ. ಆದರೆ ಅದರಲ್ಲಿ ಕೆಲವು ಮಾತ್ರ ಉಳಿಯುತ್ತವೆ. ಹೆಚ್ಚಿನವು ಹೆಚ್ಚಿನ ರೇಟಿಂಗ್ ಹಾಗೂ ಬ್ಲಾಗ್ ಮಾರುಕಟ್ಟೆ ಜ್ಞಾನದ ಕೊರತೆಯಿಂದ ವೈಫಲ್ಯ ಅನುಭವಿಸುತ್ತವೆ. ನಿಮಗೆ ಇದರ ಬಗ್ಗೆ ಜ್ಞಾನ ಇದ್ದರೆ SEO ಕನ್ಸಲ್ಟೆನ್ಸಿ ಪ್ರಾರಂಭಿಸಬಹುದು. ಇದನ್ನು ಬಹಳ ಹಾಗೂ ತ್ವರಿತವಾಗಿ ಸ್ಥಾಪಿಸಬಹುದು. SEO ಕನ್ಸಲ್ಟೆನ್ಸಿ ಹೆಗೆ ಕಾರ್ಯನಿರ್ವಹಿಸುತ್ತದೆ ಎಂದು ನಿಮಗೆ ಜ್ಞಾನ ಇಲ್ಲದಿದ್ದಲ್ಲಿ ಮೂರು ತಿಂಗಳ ತರಬೇತಿ ಪಡೆಯಬಹುದು.

ಆಹಾರ ತಯಾರಿಕೆ

ಆಹಾರ ತಯಾರಿಕೆ

ಬ್ರೆಡ್ ತಯಾರಕ: ಇದು ಆಹಾರಕ್ಕೆ ಸಂಬಂಧಿಸಿರುವ ತಯಾರಿಕಾ ಉದ್ಯಮ. ನೀವು ಬೇಕರ್ ಆಗಿ ನಿಮ್ಮ ಸ್ವಂತ ಬ್ರೆಡ್ ತಯಾರಿಕಾ ಉದ್ಯಮವನ್ನು ಪ್ರಾರಂಭಿಸಬಹುದು.
ಬಿಸ್ಕತ್ತು ತಯಾರಿಕೆ: ಬಿಸ್ಕತ್ತು ಇನ್ನೊಂದು ಲಾಭದಾಯಕ ಉದ್ಯಮವಾಗಿದೆ. ನೀವು ನಿಮ್ಮ ಸ್ವಂತ ಸಣ್ಣ ಗೃಹಾಧಾರಿತ ಬಿಸ್ಕತ್ತು ತಯಾರಿಕಾ ಉದ್ಯಮ ಅಥವಾ ಸ್ವಯಂಚಾಲಿತ ಬಿಸ್ಕತ್ತು ತಯಾರಿಕಾ ಕಾರ್ಖಾನೆಯನ್ನೂ ಕೂಡ ಸ್ಥಾಪಿಸಬಹುದು.
ಕ್ಯಾಂಡಿ ತಯಾರಿಕೆ: ನಿಮಗೆ ಕ್ಯಾಂಡಿ ಅಥವಾ ಚಾಕೋಲೇಟ್ ತಯಾರಿಸುವ ಆಸಕ್ತಿ ಇದ್ದರೆ ನೀವು ನಿಮ್ಮ ಸ್ವಂತ ಕ್ಯಾಂಡಿ ಅಥವಾ ಚಾಕೋಲೇಟ್ ಮಾಡಬಹುದು ಮತ್ತು ಅದನ್ನು ಮಾರಾಟ ಮಾಡಲು ಪ್ಯಾಕ್ ಮಾಡಬಹುದು.
ಐಸ್ ಕ್ರೀಂ ತಯಾರಿಕೆ: ಐಸ್ ಕ್ರೀಂ ವಿವಿಧ ರುಚಿ,ಬಣ್ಣ ಮತ್ತು ರೂಪಗಳಲ್ಲಿ ದೊರೆಯುತ್ತದೆ. ಈ ವ್ಯಾಪಾರವನ್ನು ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ದೊಡ್ಡ ಪ್ರಮಾಣದ ವ್ಯಾಪಾರಕ್ಕಾಗಿ, ನೀವು ಕಾರ್ಖಾನೆ ಮತ್ತು ಯಂತ್ರೋಪಕರಣಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಮನೆಯಲ್ಲೇ ಕುಳಿತು ಕೆಲಸ ಮಾಡಿ, ಪ್ರತಿದಿನ ರೂ. 1000 ಗಳಿಸಿ..

ಶಿಶುಪಾಲನಾ ಕೇಂದ್ರ (ಬೇಬಿ ಕೇರ್)

ಶಿಶುಪಾಲನಾ ಕೇಂದ್ರ (ಬೇಬಿ ಕೇರ್)

ವೇಗವಾಗಿ ಬೆಳೆಯುತ್ತಿರುವ ನಗರೀಕರಣದಿಂದಾಗಿ ಹಾಗೂ ಒತ್ತಡದ ಜೀವನ ಶೈಲಿಯಿಂದಾಗಿ ಶಿಶುಗಳ ಪಾಲನೆ ಮಾಡುವುದು ಪೋಷಕರಿಗೆ ದುಸ್ತರವಾಗುತ್ತಿದೆ. ಉತ್ತಮವಾದ ನಿರ್ವಹಣೆ ನಿಮ್ಮಿಂದ ಸಾಧ್ಯವಾದರೆ ನಿಮ್ಮ ಮನೆಯಿಂದಲೇ ಈ ಕಾರ್ಯವನ್ನು ಪ್ರಾರಂಭಿಸಬಹುದು. ಇಲ್ಲಿ ಒಬ್ಬರೆ ಮಕ್ಕಳನ್ನು ನಿರ್ವಹಿಸಬಹುದಾಗಿದ್ದು, ಇದಕ್ಕೆ ಬಂಡವಾಳದ ಅಗತ್ಯವು ತುಂಬಾ ಕಡಿಮೆ. ಹಾಗಾಗಿ ಇದೊಂದು ಅತ್ಯುತ್ತಮ ಆಯ್ಕೆ ಎಂದೇ ಹೇಳಬಹುದು.

ಬಿಗ್ ಡೇಟಾ ಅನಾಲಿಟಿಕ್ಸ್ ಕನ್ಸಲ್ಟನ್ಸಿ

ಬಿಗ್ ಡೇಟಾ ಅನಾಲಿಟಿಕ್ಸ್ ಕನ್ಸಲ್ಟನ್ಸಿ

ಬೃಹತ್ ಗಾತ್ರದ ಮಾಹಿತಿಯನ್ನು ಸಂಸ್ಕರಿಸಿ ಅದನ್ನು ಅರ್ಥಪೂರ್ಣವಾಗಿ ಮಂಡಿಸುವ ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಯೇ ಬಿಗ್ ಡೇಟಾ ಅನಾಲಿಟಿಕ್ಸ್ ಆಗಿದೆ. ಭವಿಷ್ಯದಲ್ಲಿ ಬಿಗ್ ಡೇಟಾ ಅನಾಲಿಟಿಕ್ಸ್ ತಂತ್ರಜ್ಞರು ಹಾಗೂ ಕನ್ಸಲ್ಟನ್ಸಿಗಳಿಗೆ ದೊಡ್ಡ ಬೇಡಿಕೆ ಉಂಟಾಗಲಿದೆ. ಬಹುತೇಕ ಎಲ್ಲ ದೊಡ್ಡ ಕಂಪನಿಗಳಿಗೂ ಬಿಗ್ ಡೇಟಾ ತಂತ್ರಜ್ಞಾನ ನಿರ್ವಹಿಸುವ ಪರಿಣಿತರ ಅವಶ್ಯಕತೆ ಉಂಟಾಗಲಿದೆ. ಈ ಕ್ಷೇತ್ರದಲ್ಲಿ ನಿಮಗೆ ಜ್ಞಾನವಿದ್ದರೆ ಬಿಸಿನೆಸ್ ಆರಂಭಿಸಿ ಉತ್ತಮವಾಗಿ ಸಂಪಾದಿಸಬಹುದು.

ಟ್ಯೂಷನ್ ಮತ್ತು ನೃತ್ಯ/ಏರೋಬಿಕ್ ತರಗತಿಗಳು

ಟ್ಯೂಷನ್ ಮತ್ತು ನೃತ್ಯ/ಏರೋಬಿಕ್ ತರಗತಿಗಳು

ನೀವು ನೃತ್ಯ ಮತ್ತು ಏರೋಬಿಕ್ ನಲ್ಲಿ ನೈಪುಣ್ಯತೆ ಸಾಧಿಸಿದಲ್ಲಿ ಈ ತರಗತಿಗಳನ್ನು ಪ್ರಾರಂಭಿಸುವುದರ ಮೂಲಕ ಉತ್ತಮ ಆದಾಯವನ್ನೆ ಗಳಿಸಬಹುದು.
ಟ್ಯೂಷನ್ (Tutions): ನಿಮ್ಮಿಂದ ಮಕ್ಕಳನ್ನು ನಿರ್ವಹಿಸಲು ಮತ್ತು ಕಲಿಸಲು ಸಾಧ್ಯವಾದರೆ ಟ್ಯೂಷನ್ ನಂದಾಗಿ ಉತ್ತಮ ಸಂಪಾದನೆ ಮಾಡಬಹುದು. ಇಲ್ಲಿ ನಿರ್ದಿಷ್ಟ ಮಟ್ಟದ ನೈಪುಣ್ಯತೆಯ ಹಾಗೂ ಜ್ಞಾನದ ಅಗತ್ಯ ಇರುತ್ತದೆ.

ರೋಬೊಟಿಕ್ ಅಟೊಮೇಶನ್

ರೋಬೊಟಿಕ್ ಅಟೊಮೇಶನ್

ರೋಬೊಟಿಕ್ ಅಟೊಮೇಶನ್ ತಂತ್ರಜ್ಞಾನವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಯಾವುದೇ ಕೆಲಸವನ್ನು ಆರ್ಟಿಫೀಶಿಯಲ್ ತಂತ್ರಜ್ಞಾನ ಬಳಸಿಕೊಂಡು ರೋಬೊಟ್‌ಗಳ ಮೂಲಕ ಮಾಡಿಸುವುದೇ ರೋಬೊಟಿಕ್ ಅಟೊಮೇಶನ್ ಆಗಿದೆ. ಈ ಕ್ಷೇತ್ರದಲ್ಲಿನ ಬಿಸಿನೆಸ್ ಅವಕಾಶಗಳು ಹೀಗಿವೆ:
- ಅವಶ್ಯಕತೆಗೆ ತಕ್ಕಂತೆ ರೋಬೊಟ್ ತಯಾರಿಸುವುದು: ನಿರ್ದಿಷ್ಟ ಕೆಲಸಗಳನ್ನು ನಿರ್ವಹಿಸುವಂತೆ ರೋಬೊಟ್‌ಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಸಾಕಷ್ಟು ಬೇಡಿಕೆ ಇದೆ. ಹಲವಾರು ಕಂಪನಿಗಳು ರೋಬೊಟ್‌ಗಳನ್ನು ಕೆಲಸಕ್ಕಾಗಿ ನಿಯೋಜಿಸುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಾಗುತ್ತಿವೆ.
- ಆರ್‌ಪಿಎ ಟೂಲ್ ಡಿಸೈನ್ ಮತ್ತು ತರಬೇತಿ: ರೋಬೊಟಿಕ್ ಪ್ರೊಸೆಸ್ ಅಟೊಮೇಶನ್ ಟೂಲ್ ಡಿಸೈನ್ ಮತ್ತು ತರಬೇತಿ ಕ್ಷೇತ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದರಲ್ಲಿ ಅತಿ ಹೆಚ್ಚು ಸಂಖ್ಯೆಯ ಅವಕಾಶಗಳು ಇರಲಿವೆ ಎಂದು ಅಂದಾಜಿಸಲಾಗಿದೆ.

ಇವೆಂಟ್ ಮ್ಯಾನೇಜ್‍ಮೆಂಟ್

ಇವೆಂಟ್ ಮ್ಯಾನೇಜ್‍ಮೆಂಟ್

ಉದ್ಯಮ ಭಾರತದಲ್ಲಿ ತುಂಬಾ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಇದು ಒಂದಾಗಿದೆ. ಪ್ರತಿ ವರ್ಷವು ಸಾವಿರಾರು ಇವೆಂಟ್ ಗಳನ್ನು ನೋಡಬಹುದು. ಕಾರ್ಪೊರೇಟ್ ಇವೆಂಟ್ಸ್, ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪಕ್ಷ, ಸಂಘಟನೆಗಳು ಆಯೋಜಿಸುವ ಇವೆಂಟ್ಸ್ ಗಳು ಇರುತ್ತವೆ. ಇದನ್ನು ಪ್ರಾರಂಭಿಸಲು ಸಲ್ಪ ಮಟ್ಟಿಗೆ ಬಂಡವಾಳ ಬೇಕಾಗುತ್ತದೆ. ಜತೆಗೆ ಹಣವನ್ನು ಹೆಚ್ಚು ಗಳಿಸಬಹುದು. ಪ್ರಾರಂಭದಲ್ಲಿ ಉತ್ತಮ ಸಂಪರ್ಕ ಸಾಮರ್ಥ್ಯ ಹೊಂದಿರಬೇಕು. ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮ

ಬಟ್ಟೆ/ಟೀ-ಶರ್ಟ್ ಪ್ರಿಂಟಿಂಗ್

ಬಟ್ಟೆ/ಟೀ-ಶರ್ಟ್ ಪ್ರಿಂಟಿಂಗ್

ಟೀ-ಶರ್ಟ್ ಪ್ರಿಂಟಿಂಗ್ ಅಥವಾ ನೂತನ ಶೈಲಿಯ ಬಟ್ಟೆಗಳ ವ್ಯವಹಾರ ಬಹು ಜನಪ್ರಿಯತೆ ಪಡೆಯುತ್ತಿದೆ. ದೇಶದಲ್ಲಿರುವ ಬಹುತೇಕ ಎಲ್ಲ ದೊಡ್ಡ ಸಂಘ, ಸಂಸ್ಥೆಗಳು ಹಾಗೂ ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ತಮ್ಮ ಕಂಪನಿ ಹೆಸರಿನ ಪ್ರಿಂಟ್ ಇರುವ ಟೀ-ಶರ್ಟ್ ಗಳ ಅವಶ್ಯಕತೆ ಇರುತ್ತದೆ. ಕಂಪನಿಗಳಿಗೆ ಬೇಕಾದ ಹಾಗೆ, ವೈವಿಧ್ಯಮಯವಾಗಿ ಟೀ-ಶರ್ಟ್ ಪ್ರಿಂಟ್ ಮಾಡಿಕೊಡುವುದು ಲಾಭದಾಯಕ ಉದ್ಯಮವಾಗಿದೆ.

ಬ್ಲಾಗಿಂಗ್

ಬ್ಲಾಗಿಂಗ್

ಹೊಸ ಟ್ರೆಂಡ್ ಗಳಲ್ಲಿ ಬ್ಲಾಗಿಂಗ್ ಕೂಡ ಒಂದು. ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಹಣಗಳಿಸುವ ಹೊಸ ವಿಧಾನವೆಂದರೆ ಬ್ಲಾಗಿಂಗ್ ಅಥವಾ ಬ್ಲಾಗ್ ಬರವಣಿಗೆ. ಇದಕ್ಕಾಗಿ ಅತಿ ಕಡಿಮೆ ಬಂಡವಾಳ ಸಾಕು. ಇದಕ್ಕಾಗಿ ಒಂದು ಡೊಮೈನ್ ಹೆಸರನ್ನು ಪಡೆಯಲು ಅಲ್ಪ ಬಂಡವಾಳ ಬೇಕಾಗುತ್ತದೆ. ಸುಮಾರು ರೂ. 3600 ನೀಡಿದರೆ ಅನಿಯಮಿತ ಸ್ಥಳಾವಕಾಶವಿರುವ ಅಂತರ್ಜಾಲ ತಾಣದ ಕೊಂಡಿ ದೊರಕುತ್ತದೆ. ನಿಮ್ಮ ಬರವಣಿಗೆಗಳನ್ನು ಹೆಚ್ಚು ಹೆಚ್ಚು ಜನರಿಗೆ ಒದಗಿಸುವ ಮೂಲಕ ಚಿಕ್ಕಾಸೂ ಖರ್ಚಿಲ್ಲದೇ ಪ್ರಚಾರ ಮಾಡಿ ಜಾಹೀರಾತಿನ ಮೂಲಕ ಹಣ ಗಳಿಸಬಹುದು.

ಯೂ ಟ್ಯೂಬ್ ಚಾನೆಲ್

ಯೂ ಟ್ಯೂಬ್ ಚಾನೆಲ್

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಎಲ್ಲರನ್ನು ಆಕರ್ಷಿಸುವ ಮಾದ್ಯಮವಾಗಿದೆ. ಚಿಕ್ಕ ಬಂಡವಾಳದಿಂದ ದೊಡ್ಡದನ್ನು ಗಳಿಸ ಬಯಸುವ ಪ್ರತಿಭಾಶಾಲಿಗಳಿಗೆ ಯೂಟ್ಯೂಬ್ ಉತ್ತಮ ಮಾಧ್ಯಮವಾಗಿದೆ. ಯಾರು ಬೇಕಾದರೂ ತಮ್ಮ ವಿಚಾರಗಳನ್ನು ಉಚಿತವಾಗಿ ಯೂಟ್ಯೂಬ್ ವೀಡಿಯೋ ಮೂಲಕ ಅಪ್ಲೋಡ್ ಅಥವಾ ತಾಣದಲ್ಲಿ ದಾಖಲಿಸಬಹುದು. ಈ ವಾಹಿನಿಗಳು ಎಷ್ಟು ಜನಪ್ರಿಯವಾಗುತ್ತವೋ ಅದನ್ನು ಅನುಸರಿಸಿ ಯೂಟ್ಯೂಬ್ ಹಣವನ್ನು ಸಂದಾಯ ಮಾಡುತ್ತದೆ. ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..

English summary

New Year, New Business Ideas are given here..

Countdown to New Year's Eve has begun. Everyone will have new plans and goals for the new year. But everyone's goals and plans are different.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X