ಹೊಸ ವರ್ಷದ ಪರ್ವಕಾಲದಲ್ಲಿ ಹಳೆಯ ಕಹಿಯನ್ನೆಲ್ಲ ಮರೆತು ಹೊಸ ಸಂಗತಿಗಳಿಗೆ ಮನಸ್ಸನ್ನು ತೆರೆದುಕೊಂಡು ಮುನ್ನಡೆಯುವುದಕ್ಕಿಂತ ಉತ್ತಮ ಸಂಗತಿ ಬೇರೊಂದಿಲ್ಲ.
ಹೊಸ ವರ್ಷದ ಪರ್ವಕಾಲದಲ್ಲಿ ಹಳೆಯ ಕಹಿಯನ್ನೆಲ್ಲ ಮರೆತು ಹೊಸ ಸಂಗತಿಗಳಿಗೆ ಮನಸ್ಸನ್ನು ತೆರೆದುಕೊಂಡು ಮುನ್ನಡೆಯುವುದಕ್ಕಿಂತ ಉತ್ತಮ ಸಂಗತಿ ಬೇರೊಂದಿಲ್ಲ. ಹೊಸ ವರ್ಷಕ್ಕೆ ಹೊಸದೇನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿರುವವರು ನೀವಾಗಿದ್ದಲ್ಲಿ ಅದನ್ನು ಸಾಧಿಸಲು ಏನು ಮಾಡಬೇಕು ಎಂಬುದನ್ನು ನಾವು ಹೇಳಿ ಕೊಡುತ್ತೇವೆ. ಈ ಅಂಕಣದಲ್ಲಿ ತಿಳಿಸಲಾದ ಕ್ರಮಗಳನ್ನು ಅನುಸರಿಸಿ ಜೀವನದಲ್ಲಿ ಬದಲಾವಣೆ ಕಾಣಲು ನೀವೂ ಯತ್ನಿಸಿ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಿರಾ?
1. ಪ್ಲೇಸಮೆಂಟ್ ಕನ್ಸಲ್ಟನ್ಸಿಗಳ ಸಾಮರ್ಥ್ಯ
ಹಲವಾರು ಪ್ಲೇಸಮೆಂಟ್ ಏಜೆನ್ಸಿಗಳಿಗೆ ನಿಮ್ಮ ರೆಸ್ಯೂಮ್ ನೀಡುವುದರಿಂದ ಬೇಗನೆ ಸೂಕ್ತ ನೌಕರಿ ದೊರಕುತ್ತದೆ ಎಂಬುದು ತಪ್ಪು ಕಲ್ಪನೆ. ಏಜೆನ್ಸಿಗಳು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆಧರಿಸಿ ಹಾಗೂ ಹೆಚ್ಚಾಗಿ ಕಂಪನಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತವೆ. ನಿಮಗಾಗಿಯೇ ಯಾವುದೇ ನಿರ್ದಿಷ್ಟ ಕೆಲಸವನ್ನು ಅವರು ಹುಡುಕಲಾರರು ಎಂಬುದು ಗೊತ್ತಿರಲಿ. ಅವರ ಬಳಿ ಈಗಾಗಲೇ ಇರುವ ಸಾವಿರಾರು ರೆಸ್ಯೂಮ್‌ಗಳಲ್ಲಿ ನಿಮ್ಮದೂ ಸೇರಿಕೊಂಡಿರುತ್ತದೆ. ಹೀಗಾಗಿ ಆದಷ್ಟೂ ನಿಮ್ಮ ಸ್ವಸಾಮರ್ಥ್ಯದಿಂದ ಕೆಲಸ ಗಿಟ್ಟಿಸಲು ಯತ್ನಿಸಿ.
2. ನೂರಾರು ಕಡೆ ಅರ್ಜಿ ಹಾಕುವಿಕೆ
ಸಿಕ್ಕ ಸಿಕ್ಕ ಕಡೆಗೆಲ್ಲ ರೆಸ್ಯೂಮ್ ಹಾಕಿ ನೌಕರಿಗೆ ಯತ್ನಿಸುವುದು ಜಾಣತನವಲ್ಲ. ಇದರಿಂದ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಂಡಂತಾಗುತ್ತದೆ. ಇದರಿಂದ ನಿಮಗೆ ಸರಿಹೊಂದದ ಕೆಲಸಗಳಿಗಾಗಿ ಸಮಯ ಹಾಗೂ ಶ್ರಮಗಳನ್ನು ವ್ಯರ್ಥ ಮಾಡಿಕೊಳ್ಳುವಂತಾಗುತ್ತದೆ. ಇದರ ಬದಲು ನಿಮಗೆ ಬೇಕಾದ ರೀತಿಯ ಹುದ್ದೆ ಹಾಗೂ ಕಂಪನಿಗಳತ್ತ ದೃಷ್ಟಿ ಇಟ್ಟು ಅದರ ಬಗ್ಗೆ ಪರಿಶ್ರಮ ಪಡುವುದು ಸರಿಯಾದ ಮಾರ್ಗವಾಗಿದೆ.
3. ಲಕ್ ಹಾಗೂ ಅವಕಾಶಗಳ ನಿರೀಕ್ಷೆ
ನಾನು ಅದೃಷ್ಟವಂತನಾಗಿದ್ದೇನೆ, ನನಗೆ ಬೇಕಾದ ನೌಕರಿ ಸಿಕ್ಕೇ ಸಿಗುತ್ತದೆ ಎಂಬ ದೃಷ್ಟಿಕೋನದಿಂದ ನೌಕರಿ ಹುಡುಕುವುದು ಸರಿಯಲ್ಲ. ಬರೀ ಲಕ್ ಹಾಗೂ ನಿರೀಕ್ಷೆಗಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಇದರ ಬದಲು ಸರಿಯಾದ ತಯಾರಿ ನಡೆಸಲು ಶ್ರಮ ಪಟ್ಟರೆ ಉದ್ದೇಶಿತ ಗುರಿಯನ್ನು ಮುಟ್ಟಲು ಸಾಧ್ಯ.
4. ಮನೆಯಲ್ಲೇ ಕುಳಿತರೆ ಏನೂ ಸಾಧಿಸಲಾಗದು
ಹೊಲದಲ್ಲಿ ಒಂದು ಬಾರಿ ಬೀಜ ಬಿತ್ತಿ ಇನ್ನೇನು ಸಮೃದ್ಧ ಫಸಲು ಬರುತ್ತದೆ ಎಂದು ಮನೆಯಲ್ಲಿ ಕುಳಿತ ರೈತನಿಗೆ ಏನೂ ಸಿಗಲಾರದು. ಹಾಗೆಯೇ ಕೇವಲ ರೆಸ್ಯೂಮ್ ಕಳುಹಿಸುವುದರಿಂದ ಯಾವುದೇ ಉಪಯೋಗವಿಲ್ಲ. ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡುವುದು, ಕಂಪನಿಗಳಲ್ಲಿ ನಿರ್ಣಾಯಕ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕಾಫಿ ನೆಪದಲ್ಲಿ ಭೇಟಿ ಮಾಡಿ ಅವರೊಂದಿಗೆ ಚರ್ಚಿಸುವುದು ಸಾಕಷ್ಟು ಉತ್ತಮ ಫಲ ನೀಡುತ್ತವೆ.
5. ನಿಮಗೇನು ಬೇಕು ಎಂಬುದು ಮಾತ್ರ ಮುಖ್ಯವಾಗಲಾರದು
ನಿಮ್ಮ ಮಹತ್ವಾಕಾಂಕ್ಷೆಗಳು ಎಲ್ಲ ಸಂದರ್ಭಗಳಲ್ಲಿಯೂ ಕೆಲಸ ಮಾಡಲಾರವು. ಹಲವಾರು ಹೊಸಬರು ಹಾಗೂ ಅನುಭವಿಕರು ತಮ್ಮ ಕನಸುಗಳಿಗೆ ತಕ್ಕಂತೆ ಜಗತ್ತು ಸ್ಪಂದಿಸುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಕಂಪನಿಗಳಿಗೆ ಅದಾವುದೂ ಮುಖ್ಯವಲ್ಲ. ಅವರ ಅವಶ್ಯಕತೆಗಳಿಗೆ ತಕ್ಕಂತೆ ನಿಮ್ಮಲ್ಲಿ ಯಾವ ಕೌಶಲಗಳಿವೆ ಹಾಗೂ ಅದಕ್ಕಾಗಿ ಎಷ್ಟು ಸಂಬಳ ನೀಡಬಹುದು ಎಂಬುದು ಮಾತ್ರವೇ ಅವರಿಗೆ ಮುಖ್ಯವಾಗಿರುತ್ತದೆ. ಸಂಬಳದ ಬಗ್ಗೆ ಮಾತನಾಡುವ ಮೊದಲು ಹೊರಗಡೆ ಆ ಕೆಲಸಕ್ಕೆ ಸರಾಸರಿ ಎಷ್ಟು ಸಂಬಳ ಸಿಗುತ್ತಿದೆ ಎಂಬ ಬಗ್ಗೆ ಜ್ಞಾನವಿರುವುದು ಅವಶ್ಯಕ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications