For Quick Alerts
ALLOW NOTIFICATIONS  
For Daily Alerts

ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಿರಾ? ಹಾಗಿದ್ದರೆ ಇಲ್ಲಿ ನೋಡಿ..

|

ಹೊಸ ವರ್ಷ ಬಾಳಿನಲ್ಲಿ ಹೊಸ ಶುಭವಾದ ಸಂಗತಿಯನ್ನು ಹೊತ್ತು ತರಲಿ ಎಂಬುದು ಎಲ್ಲರ ನಿರೀಕ್ಷೆ ಆಗಿರುತ್ತದೆ. ಇನ್ನು ಕೆಲವರು ಹೊಸ ವರ್ಷದಲ್ಲಿ ನಿರ್ದಿಷ್ಟವಾದ ಯಾವುದೋ ಕೆಲಸವನ್ನು ಸಾಧನೆ ಮಾಡಬೇಕೆಂದು ಅಂದುಕೊಂಡಿರುತ್ತಾರೆ. ಹಾಗೆಯೇ ಹಲವರು ಈಗಿರುವ ಕೆಲಸವನ್ನು ಬದಲಾಯಿಸಿ ಹೆಚ್ಚು ಸಂಬಳದ, ಹೆಚ್ಚು ನೆಮ್ಮದಿಯ ಕೆಲಸ ಹುಡುಕಿಕೊಂಡು ನಿರಾಳರಾಗಬೇಕೆಂದು ಸಂಕಲ್ಪ ಮಾಡಿರುತ್ತಾರೆ.

2019 ರಲ್ಲಿ ಅತಿಹೆಚ್ಚು ಬೇಡಿಕೆಯಲ್ಲಿರುವ ಟಾಪ್ 10 ಉದ್ಯೋಗಗಳು

ಹೊಸ ವರ್ಷದ ಪರ್ವಕಾಲದಲ್ಲಿ ಹಳೆಯ ಕಹಿಯನ್ನೆಲ್ಲ ಮರೆತು ಹೊಸ ಸಂಗತಿಗಳಿಗೆ ಮನಸ್ಸನ್ನು ತೆರೆದುಕೊಂಡು ಮುನ್ನಡೆಯುವುದಕ್ಕಿಂತ ಉತ್ತಮ ಸಂಗತಿ ಬೇರೊಂದಿಲ್ಲ. ಹೊಸ ವರ್ಷಕ್ಕೆ ಹೊಸದೇನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿರುವವರು ನೀವಾಗಿದ್ದಲ್ಲಿ ಅದನ್ನು ಸಾಧಿಸಲು ಏನು ಮಾಡಬೇಕು ಎಂಬುದನ್ನು ನಾವು ಹೇಳಿ ಕೊಡುತ್ತೇವೆ. ಈ ಅಂಕಣದಲ್ಲಿ ತಿಳಿಸಲಾದ ಕ್ರಮಗಳನ್ನು ಅನುಸರಿಸಿ ಜೀವನದಲ್ಲಿ ಬದಲಾವಣೆ ಕಾಣಲು ನೀವೂ ಯತ್ನಿಸಿ.

 

ಹೊಸ ವರ್ಷದಲ್ಲಿ ಉಜ್ವಲ ಭವಿಷ್ಯಕ್ಕಾಗಿ ಈ ಕ್ರಮಗಳನ್ನು ಅನುಸರಿಸಿ:

ಗುರಿ ಸಾಧನೆಗೆ ಪ್ರೊಜೆಕ್ಟ್ ತಯಾರಿಸಿ

ಗುರಿ ಸಾಧನೆಗೆ ಪ್ರೊಜೆಕ್ಟ್ ತಯಾರಿಸಿ

ಏನೇ ಹೊಸದನ್ನು ಮಾಡಬೇಕಾದರೂ ಮೊದಲಿಗೆ ಅದರ ಬಗ್ಗೆ ನಿಖರವಾದ ವರದಿ (ಪ್ರಾಜೆಕ್ಟ್) ತಯಾರಿಸುವುದು ಸೂಕ್ತ. ಆಫೀಸಿನಲ್ಲಿ ನಿಮಗೆ ವಹಿಸಲಾಗುವ ಪ್ರೊಜೆಕ್ಟ್‌ನಂತೆಯೇ ಇದನ್ನು ಸಹ ಪ್ಲಾನ್ ಮಾಡಿ. ನಿಮ್ಮ ಗುರಿ ಸಾಧನೆಗೆ ಒಂದು ಕಾಲಾವಧಿ ನಿಗದಿಪಡಿಸಿಕೊಳ್ಳಿ. ಈಗಾಗಲೇ ನೀವು ಮಧ್ಯಮದಿಂದ ಹಿರಿಯ ಅನುಭವಿಕ ಉದ್ಯೋಗಿಯಾಗಿದ್ದರೆ ಸುಮಾರು 6 ತಿಂಗಳಲ್ಲಿ ಇದಕ್ಕೂ ಉತ್ತಮ ಹುದ್ದೆಯ ಉದ್ಯೋಗ ಸಿಗಬಹುದು. ಒಂದೊಮ್ಮೆ ನೀವು ಹೊಸಬರು ಅಥವಾ ಕಿರಿಯರಾಗಿದ್ದರೆ ಬದಲಾವಣೆಗೆ 2 ತಿಂಗಳ ಕಾಲಾವಧಿ ಹಾಕಿಕೊಳ್ಳಬಹುದು.

2019 ರಲ್ಲಿ ಈ ಅಂಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ

ನಿಮ್ಮ ಕತೆಯನ್ನು ನೀವೇ ಬರೆದುಕೊಳ್ಳಿ
 

ನಿಮ್ಮ ಕತೆಯನ್ನು ನೀವೇ ಬರೆದುಕೊಳ್ಳಿ

ನಿಮ್ಮನ್ನು ನೀವು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರುವ ಒಂದು ವಸ್ತು ಎಂದೇ ತಿಳಿದುಕೊಳ್ಳಿ. ನೀವು ಉತ್ತಮ ಬೆಲೆಗೆ ಮಾರಾಟವಾಗುವಂತೆ ಸಿದ್ಧತೆ ಮಾಡಿಕೊಂಡ ನಂತರವೇ ಹೊಸ ಜಾಬ್ ಹುಡುಕಾಟ ಆರಂಭಿಸಿ. ನಿಮ್ಮ ಬಗ್ಗೆ ನೀವೇ ಸೂಕ್ತವಾಗಿ ಬರೆದು ನಿಮ್ಮ ರೆಸ್ಯೂಮ್‌ಗೆ ಹೊಸ ರೂಪ ನೀಡಿ. ನಿಮ್ಮ ಬಗ್ಗೆ ನೀವೇ ಬರೆದುಕೊಳ್ಳುವುದರಿಂದ ಎರಡು ಲಾಭಗಳಿವೆ. ಮೊದಲನೆಯದಾಗಿ ನಿಮ್ಮ ಬಗ್ಗೆ ನಿಮಗೆ ಸ್ಪಷ್ಟತೆ ಮೂಡುತ್ತದೆ ಹಾಗೂ ಗುರಿ ನಿಖರವಾಗುತ್ತದೆ. ಎರಡನೆಯದಾಗಿ, ನೀವು ನಿಭಾಯಿಸಿದ ಜವಾಬ್ದಾರಿಗಳ ಮೂಲಕ ನಿಜವಾಗಿಯೂ ನೀವು ಸಾಧಿಸಿದ್ದೇನು ಎಂಬುದನ್ನು ಹೇಳಲು ಸೂಕ್ತವಾದ ವೇದಿಕೆಯನ್ನು ಸಿದ್ಧಪಡಿಸಬಹುದು.

ಅಂದರೆ ಮಾರಾಟ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದ್ದೆ ಎಂದು ರೆಸ್ಯೂಮ್‌ನಲ್ಲಿ ಹೇಳುವ ಬದಲು ನನ್ನ ಕಾಲಾವಧಿಯಲ್ಲಿ ಮಾರಾಟವನ್ನು ಶೇ.20 ರಷ್ಟು ವೃದ್ಧಿಯಾಗುವಂತೆ ಮಾಡಿದೆ ಎಂದು ಹೇಳುವುದು ಬಹಳ ಪರಿಣಾಮಕಾರಿಯಾಗಿರುತ್ತದೆ. ಒಂದೊಮ್ಮೆ ನೀವು ಹೊಸಬರಾಗಿದ್ದರೆ ನಿಮ್ಮ ಕ್ಲಾಸ್ ರೂಂ ಹೊರಗಡೆ ನೀವು ಮಾಡಿರುವ ಸಾಧನೆಗಳ ಮೂಲಕ ನಿಮ್ಮನ್ನು ಪರಿಚಯಿಸಿಕೊಳ್ಳಿ.

ರೆಫರೆನ್ಸ್ ಮಾಡುವವರನ್ನು ಆರಿಸಿಕೊಳ್ಳಿ

ರೆಫರೆನ್ಸ್ ಮಾಡುವವರನ್ನು ಆರಿಸಿಕೊಳ್ಳಿ

ನಿಮ್ಮ ಸಾಮರ್ಥ್ಯ ಹಾಗೂ ಕೌಶಲಗಳ ರೆಸ್ಯೂಮ್ ಹೇಳಿದರೆ, ನಿಮಗೆ ರೆಫರೆನ್ಸ್ ನೀಡುವವರಿಂದ ಕಂಪನಿಗೆ ನಿಮ್ಮ ಬಗ್ಗೆ ವಿಶ್ವಾಸ ಮೂಡುವಂತಾಗುತ್ತದೆ. ನಿಮ್ಮ ಹಳೆಯ ಬಾಸ್ ಅಥವಾ ಹಿರಿಯ ಸಹೋದ್ಯೋಗಿಗಳೊಂದಿಗೆ ಮಾತನಾಡಿ ಅವರನ್ನು ನಿಮ್ಮ ರೆಫರೆನ್ಸ್ ಆಗಿಸಲು ಮನವೊಲಿಸಿ. ನೀವು ಈಗ ತಾನೆ ಕಾಲೇಜು ಶಿಕ್ಷಣ ಮುಗಿಸಿ ನೌಕರಿ ಹುಡುಕುತ್ತಿದ್ದರೆ ನಿಮ್ಮ ಕಾಲೇಜಿನ ಪ್ರೊಫೆಸರ್‌ಗಳನ್ನೇ ರೆಫರೆನ್ಸ್ ಆಗಿ ಮಾಡಿಕೊಳ್ಳಿ. ನೀವು ಹುಡುಕುತ್ತಿರುವ ಕೆಲಸದ ಬಗ್ಗೆ ನಿಮ್ಮ ಅನುಮೋದಕರಿಗೆ ಆಗಾಗ ಮಾಹಿತಿ ನೀಡುತ್ತಿರಿ.

ನಿಮ್ಮ ಬಗ್ಗೆ ಹೇಳಿಕೊಳ್ಳಿ

ನಿಮ್ಮ ಬಗ್ಗೆ ಹೇಳಿಕೊಳ್ಳಿ

ನಿಮ್ಮ ಹಿತಚಿಂಕರೊಂದಿಗೆ ನಿಮ್ಮ ಗುರಿಯನ್ನು ಹಂಚಿಕೊಳ್ಳಿ. ಕುಟುಂಬ ಸದಸ್ಯರು, ಗೆಳೆಯರು ಹಾಗೂ ಹಿಂದಿನ ಸಹೋದ್ಯೋಗಿಗಳಿಗೆ ನಿಮ್ಮ ಯೋಜನೆಯ ಬಗ್ಗೆ ತಿಳಿಸಿ. ನಿಮ್ಮ ಯೋಜನೆ ಹೆಚ್ಚು ಜನರಿಗೆ ತಿಳಿದಷ್ಟೂ ಹೆಚ್ಚು ಬೇಗನೆ ನಿಮ್ಮ ಗುರಿ ಸಾಕಾರಗೊಳ್ಳುತ್ತದೆ. ನಿಮ್ಮ ಬಗ್ಗೆ ತಿಳಿದವರು ಯಾವುದೋ ಕಂಪನಿ ಮಾಲೀಕರಿಗೆ ನಿಮ್ಮ ಬಗ್ಗೆ ತಿಳಿಸುತ್ತಾರೆ. ಇದರಿಂದ ನಿಮಗೆ ಲೀಡ್‌ಗಳು ಸಿಗುತ್ತವೆ. ನಿಮ್ಮ ಪರಿಚಯದ ವಲಯದವರನ್ನು ಭೇಟಿಯಾಗಿ ನಿಮಗೆ ಉದ್ಯೋಗ ನೀಡಬಲ್ಲವರು ಯಾರಾದರೂ ಅವರಿಗೆ ಪರಿಚಯವಿದ್ದಲ್ಲಿ ಅವರನ್ನು ಮುಖತಃ ಭೇಟಿ ಮಾಡಿಸಲು ವಿನಂತಿ ಮಾಡಿಕೊಳ್ಳಿ.

ಸೋಶಿಯಲ್ ಮೀಡಿಯಾ ಬಳಕೆ

ಸೋಶಿಯಲ್ ಮೀಡಿಯಾ ಬಳಕೆ

ಕಂಪನಿಗಳು ಸಹ ತಮಗೆ ಬೇಕಾದ ಸೂಕ್ತ ಅಭ್ಯರ್ಥಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹುಡುಕುತ್ತಿರುತ್ತವೆ. ಹೀಗಾಗಿ ನಿಮ್ಮ ಸೋಶಿಯಲ್ ಮಿಡಿಯಾ ಪ್ರೈವೆಸಿ ಸೆಟಿಂಗ್‌ಗಳನ್ನು ಸರಿಯಾಗಿ ಸೆಟ್ ಮಾಡಿ ನೀವು ಸರ್ಚ್ ಎಂಜಿನ್‌ಗಳಿಗೆ ಸಿಗುವಂಥವರಾಗಿ. ಲಿಂಕ್ಡ್ ಇನ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ open your jobs ಆಪ್ಷನ್ ಅನ್ನು ಆನ್ ಮಾಡಿಟ್ಟುಕೊಳ್ಳಿ. ಉದ್ಯೋಗ ನೀಡುವ ಸಂಸ್ಥೆಗಳು ಕಳುಹಿಸುವ ಮೆಸೇಜ್‌ಗಳ ಮೇಲೆ ಒಂದು ಕಣ್ಣು ಇಟ್ಟಿರಿ ಹಾಗೂ ಲಿಂಕ್ಡ್ ಇನ್ ಹಾಗೂ ಇತರ ಅಕೌಂಟ್‌ಗಳಿಂದ ನಿಮಗೆ ಸಿಗುವ ರೆಕಮೆಂಡೇಶನ್‌ಗಳಿಗೆ ಬೇಗನೆ ಸ್ಪಂದಿಸಿ.

ಕಂಪನಿ ಆಯ್ದುಕೊಳ್ಳಿ, ನೌಕರಿಯನ್ನಲ್ಲ

ಕಂಪನಿ ಆಯ್ದುಕೊಳ್ಳಿ, ನೌಕರಿಯನ್ನಲ್ಲ

ಈಗ ನೀವು ಬಯಸುವ ಹುದ್ದೆ, ಸ್ಥಳ ಹಾಗೂ ಯಾವ ರೀತಿಯ ಕಂಪನಿಗಳಲ್ಲಿ ನೀವು ಉದ್ಯೋಗ ಮಾಡಬಯಸುವಿರಿ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ನಿಮ್ಮ ಉದ್ದೇಶಿತ ವಲಯಕ್ಕೆ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಹಾಗೂ ಕಂಪನಿಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ. ಕಂಪನಿಗಳಲ್ಲಿರುವ ಖಾಲಿ ಹುದ್ದೆಗಳ ಹಿಂದೆ ಬೀಳುವುದಕ್ಕಿಂತ ನಿರ್ದಿಷ್ಟ ಕಂಪನಿಯಲ್ಲಿ ಕೆಲಸ ಗಿಟ್ಟಿಸುವ ಉದ್ದೇಶ ಹೊಂದಿರುವುದು ಸೂಕ್ತವಾಗಿದೆ. ಹಲವಾರು ಕಂಪನಿಗಳು ಸೂಕ್ತ ಅಭ್ಯರ್ಥಿ ಸಿಗುವವರೆಗೂ ಹುದ್ದೆಗಳನ್ನು ಖಾಲಿ ಬಿಟ್ಟಿರುತ್ತವೆ ಹಾಗೂ ಇವುಗಳ ಬಗ್ಗೆ ಪ್ರಚಾರವನ್ನೂ ಮಾಡಿರುವುದಿಲ್ಲ. ಅವನ್ನು ಗುರುತಿಸಲು ಯತ್ನಿಸಿ.

ನೇರ ಸಂಪರ್ಕ ಸಾಧಿಸಲು ಯತ್ನಿಸಿ

ನೇರ ಸಂಪರ್ಕ ಸಾಧಿಸಲು ಯತ್ನಿಸಿ

ರೆಸ್ಯೂಮ್ ಅಥವಾ ಸಿವಿ ಎಂಬುದು ಕಂಪನಿಯೊಳಗಿನ ಅಧಿಕಾರಿಗಳೊಂದಿಗೆ ಮುಖತಃ ಭೇಟಿಯ ಅವಕಾಶ ಪಡೆಯುವ ಒಂದು ವಿಧಾನವಾಗಿದೆ. ಆದಾಗ್ಯೂ ಸಿವಿ ಇಲ್ಲದೆಯೇ ಕಂಪನಿಯ ಅಧಿಕಾರಿಗಳ ಸಂಪರ್ಕ ಸಾಧಿಸಿ ಭೇಟಿಯಾಗಲು ಯತ್ನಿಸಿ. ಕಂಪನಿಯ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ನಿಮ್ಮ ಬಗ್ಗೆ ಹೇಳಿಕೊಳ್ಳಿ. ಇಷ್ಟಾದರೆ ಸಿವಿ ಎಂಬುದು ಕೊನೆಗೆ ನೀಡುವ ಒಂದು ತಾಂತ್ರಿಕ ದಾಖಲೆಯಾಗುತ್ತದೆ ಅಷ್ಟೆ.

ಪ್ರತಿ ಬಾರಿ ಹೊಸ ರೆಸ್ಯೂಮ್ ತಯಾರಿಸಿ

ಪ್ರತಿ ಬಾರಿ ಹೊಸ ರೆಸ್ಯೂಮ್ ತಯಾರಿಸಿ

ಒಂದೇ ರೆಸ್ಯೂಮ್ ಅನ್ನು ಎರಡು ಬಾರಿ ಉಪಯೋಗಿಸಲೇಬೇಡಿ. ಪ್ರತಿ ಬಾರಿ ಹೊಸ ಕಂಪನಿಗೆ ರೆಸ್ಯೂಮ್ ನೀಡುವಾಗ ಅಲ್ಲಿನ ಅಗತ್ಯತೆಗಳಿಗೆ ತಕ್ಕಂತೆ ಅದನ್ನು ಮಾರ್ಪಡಿಸಿ. ಖಾಲಿ ಇರುವ ಹುದ್ದೆಯ ಜವಾಬ್ದಾರಿಗಳ ಬಗ್ಗೆ ಸಾಧ್ಯವಾದರೆ ಅರಿತುಕೊಳ್ಳಲು ಪ್ರಯತ್ನಿಸಿ. ನಂತರ ಕಂಪನಿಯ ಅವಶ್ಯಕತೆಗಳಿಗೆ ತಕ್ಕಂತೆ ರೆಸ್ಯೂಮ್ ಮಾರ್ಪಡಿಸಿ ಬೇಡವಾದ ಅಂಶಗಳನ್ನು ತೆಗೆದು ಹಾಕಿ.

ಆಧುನಿಕ ತಂತ್ರಜ್ಞಾನದ ಮಾಹಿತಿ ಇರಲಿ

ಆಧುನಿಕ ತಂತ್ರಜ್ಞಾನದ ಮಾಹಿತಿ ಇರಲಿ

2019 ರಲ್ಲಿ ಬಹುತೇಕ ಕಂಪನಿಗಳು ತಮ್ಮಲ್ಲಿ ನೇಮಕಾತಿಗಾಗಿ ಆಧುನಿಕ ತಾಂತ್ರಿಕತೆಯನ್ನು ಬಳಸುತ್ತಿವೆ. ಖಾಲಿ ಹುದ್ದೆಗಾಗಿ ಬೇಕಾಗಿರುವ ಅವಶ್ಯಕತೆಗಳಿಗೆ ತಕ್ಕಂತೆ ಇರುವ ಕೀ ವರ್ಡ್‌ಗಳು ನಿಮ್ಮ ರೆಸ್ಯೂಮ್‌ನಲ್ಲಿ ಇರುವಂತೆ ನೋಡಿಕೊಳ್ಳಿ. ಇನ್ನು ಕೆಲ ಕಂಪನಿಗಳು ಸೀಮಿತ ಕಾಲಾವಧಿಯ ಆನ್ಲೈನ್ ಟೆಸ್ಟ್‌ಗಳನ್ನು ಸಹ ನಡೆಸುತ್ತವೆ. ಸಾಧ್ಯವಾದರೆ ಇಂಥ ಟೆಸ್ಟ್‌ಗಳನ್ನು ನೀಡುವ ಫ್ರೀ ವೆಬ್ಸೈಟ್‌ಗಳ ಮೂಲಕ ಅವಶ್ಯಕ ತಯಾರಿ ಮಾಡಿಕೊಳ್ಳಿ. ಅಲ್ಲದೆ ಕೆಲವು ಕಂಪನಿಗಳು ವಿಡಿಯೋ ಸಂದರ್ಶನಗಳನ್ನು ಸಹ ನಡೆಸುತ್ತಿವೆ. ಹೀಗಾಗಿ ವಿಡಿಯೋ ಆಪ್‌ಗಳನ್ನು ಬಳಸಿ ಪ್ರ್ಯಾಕ್ಟೀಸ್ ಮಾಡಿ.

ರಿಹರ್ಸಲ್ ಮಾಡಿ

ರಿಹರ್ಸಲ್ ಮಾಡಿ

ಸಂದರ್ಶನ ಎಂಬುದು ನಿಮಗೆ ಕೆಲಸ ಖಾತರಿ ಪಡಿಸುವ ಕೊನೆಯ ಪ್ರಕ್ರಿಯೆಯಾಗಿರುತ್ತದೆ. ಹೀಗಾಗಿ ಇದರ ಬಗ್ಗೆ ಗಂಭೀರತೆಯಿಂದ ಸಿದ್ಧತೆ ಮಾಡಿಕೊಳ್ಳುವುದು ಸೂಕ್ತ. ಬಹುತೇಕ ಸಂದರ್ಶಕರು ಮೊದಲ 90 ಸೆಕೆಂಡ್‌ಗಳಲ್ಲಿಯೇ ನಿಮ್ಮ ಬಗ್ಗೆ ಮನಸ್ಸಿನಲ್ಲಿ ಒಂದು ನಿರ್ಧಾರ ಮಾಡಿಬಿಡುತ್ತಾರಂತೆ. ಆದ್ದರಿಂದ ಸಂದರ್ಶನದ ಬಗ್ಗೆ ಸೂಕ್ತ ರಿಹರ್ಸಲ್ ಮಾಡಿಕೊಂಡೇ ಹೋಗಿ. ಸಂದರ್ಶನಕ್ಕೆ ಹೋಗುವ ಮುನ್ನ ನಿಮ್ಮ ಡ್ರೆಸ್ ಹೇಗಿದೆ, ಹೇಗೆ ಕಾಣಿಸುತ್ತಿರುವಿರಿ ಎಂಬ ಬಗ್ಗೆ ಗೆಳೆಯನ ಮುಂದೆ ನಿಂತು ಆತನ ಅಭಿಪ್ರಾಯ ಪಡೆದುಕೊಳ್ಳಿ.

English summary

Looking for a new job? Fallow these steps..

Have you made a New Year resolution for your career? Else let’s choose one now. You can work towards a promotion or greater responsibilities at your workplace.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more