ಭಾರತದಲ್ಲಿ ಈ 25 ಆದಾಯ ಹಾಗು ಹೂಡಿಕೆಗಳಿಗೆ ತೆರಿಗೆ ಇಲ್ಲ!

Written By: Siddu
Subscribe to GoodReturns Kannada

ಸಾಮಾನ್ಯವಾಗಿ ಪ್ರತಿಯೊಬ್ಬರೂ ತೆರಿಗೆಗಳನ್ನು ದ್ವೇಷಿಸುತ್ತಾರೆ! ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾದಷ್ಟು ಹೆಣಗುವವರೇ ತೆರಿಗೆಯಿಂದ ವಿನಾಯತಿಯನ್ನು ಪಡೆದುಕೊಳ್ಳಲು ಕೆಲವೊಮ್ಮೆ ಕಾನೂನಾತ್ಮಕವಾಗಿ ಪ್ರಯತ್ನಿಸಿದರೆ, ಮತ್ತೆ ಕೆಲವೊಮ್ಮೆ ಕಾನೂನಿನ ಉಲ್ಲಂಘನೆಯನ್ನೂ ಮಾಡುತ್ತಾರೆ. ತೆರಿಗೆ ಇಲ್ಲದಿರುವ ಕೆಲವು ಆದಾಯ ಮತ್ತು ಹೂಡಿಕೆಯ ಯೋಜನೆಗಳು ಇನ್ನೂ ನಮ್ಮ ದೇಶದಲ್ಲಿವೆ.
ಅವುಗಳ ಕುರಿತು ತಿಳಿದು ಸದುಪಯೋಗವನ್ನು ಪಡೆದುಕೊಳ್ಳುವುದನ್ನು ಮರೆಯದಿರಿ.. ಪಿಪಿಎಫ್ ಖಾತೆಯನ್ನು ವರ್ಗಾವಣೆ ಮಾಡುವುದು ಹೇಗೆ?

1. ಕೃಷಿ ಆದಾಯ

ಕೃಷಿಯನ್ನು ಪ್ರೋತ್ಸಾಹಿಸುವುದಕ್ಕಾಗಿ ಕೃಷಿಯಾಧಾರಿತ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ದುರದೃಷ್ಟವಶಾತ್, ರಾಜಕೀಯ ದೃಷ್ಟಿಯಿಂದ ಕೃಷಿಯು ಒಂದು ಸೂಕ್ಷ್ಮವಾದ ಸಂಗತಿಯಾಗಿರುವುದರಿಂದ ಇಷ್ಟು ವರ್ಷಗಳ ಬಳಿಕವೂ ಕೂಡ ಕೃಷಿವಲಯವು ಇಂದಿಗೂ ತೆರಿಗೆ ಮುಕ್ತವಾಗಿಯೇ ಇದೆ. ಈ ಕೆಳಕಂಡ ಕೃಷಿಯಾಧಾರಿತ ಆದಾಯವು ತೆರಿಗೆ ವಿನಾಯತಿಗೆ ಒಳಪಡುತ್ತದೆ:

ವ್ಯವಸಾಯಾಧಾರಿತ ಬೆಳೆಗಳ ಸಂಸ್ಕರಣೆ ಮತ್ತು ಮಾರಾಟ.
ಕೃಷಿಭೂಮಿ ಅಥವಾ ಕಟ್ಟಡದಿಂದ ಲಭ್ಯವಾಗುವ ಬಾಡಿಗೆ ರೂಪದ ಆದಾಯ, ಕೃಷಿಭೂಮಿಯ ಮಾರಾಟ/ಖರೀದಿಯಿಂದ ಬರುವ ಆದಾಯ.

ಇಲ್ಲಿ ದುರದೃಷ್ಟಕರ ಸಂಗತಿಯು ಏನೆಂದರೆ, ಕೃಷಿ ಆದಾಯವನ್ನು ತೆರಿಗೆ ಮುಕ್ತಗೊಳಿಸಿರುವುದನ್ನೇ ನೆಪವಾಗಿಸಿಕೊಂಡು ಅಕ್ರಮವಾಗಿ ತೆರಿಗೆಯಿಂದ ತಪ್ಪಿಸಿಕೊಳ್ಳುವುದಕ್ಕೋಸ್ಕರ ಈ ಸವಲತ್ತನ್ನೇ ಬಹು ದೀರ್ಘಕಾಲದಿಂದಲೂ ದುರುಪಯೋಗಪಡಿಸಿಕೊಳ್ಳುತ್ತಾ ಬರಲಾಗಿದೆ. ಈ ಸವಲತ್ತು ಹೀಗೆ ದುರುಪಯೋಗಗೊಳ್ಳುವುದನ್ನು ಆದಷ್ಟು ಮಟ್ಟಿಗೆ ತಪ್ಪಿಸಲೆಂದೇ ಇಲ್ಲೊಂದು ಜಾಣ್ಮೆಯ ಕ್ರಮವನ್ನೂ ಸೇರಿಸಲಾಗಿದೆ. ಅದೇನೆಂದರೆ ಆದಾಯ ತೆರಿಗೆಯನ್ನು ಹೇರುವ ವಿಚಾರಕ್ಕೆ ಬಂದಾಗ ಈ ಕೆಳಕಂಡ ಪ್ರಕರಣಗಳಲ್ಲಿ ನಿಮ್ಮ ಒಟ್ಟು ಆದಾಯದಲ್ಲಿ ನೀವು ನಿಮ್ಮ ಕೃಷಿ ಆದಾಯವನ್ನೂ ಸೇರಿಸಿಕೊಳ್ಳಬೇಕಾಗುತ್ತದೆ. ಆ ಪ್ರಕರಣಗಳು ಯಾವುವೆಂದರೆ:
ನಿರ್ಧಿಷ್ಟ ವಿತ್ತೀಯ ವರ್ಷದಲ್ಲಿ ನಿವ್ವಳ ಕೃಷಿ ಆದಾಯವು 5000 ರೂ.ಗಿಂತಲೂ ಹೆಚ್ಚಿದ್ದಲ್ಲಿ ಅಥವಾ ಒಟ್ಟು ಆದಾಯವು (ಕೃಷಿ ಆದಾಯವನ್ನು ಹೊರತುಪಡಿಸಿ) ತೆರಿಗೆ ವಿನಾಯಿತಿಯ ಮಿತಿಯನ್ನೂ ಮೀರಿದ್ದಲ್ಲಿ.

2. ವೇತನದ ಕೆಲವು ಭಾಗಗಳು

ವೇತನದ ಕೆಲವು ಘಟಕಗಳು ಅಥವಾ ಭಾಗಗಳು ಪೂರ್ಣವಾಗಿ ಇಲ್ಲವೇ ಭಾಗಶ: ತೆರಿಗೆಯಿಂದ ಮುಕ್ತವಾಗಿರುತ್ತವೆ. ವೈದ್ಯಕೀಯ ವೆಚ್ಚಗಳ ಮರುಪಾವತಿ, ಸಾರಿಗೆ ಭತ್ಯೆ, ಭೋಜನದ ಕೂಪನ್ ಗಳು, ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಬಿಲ್ ನ ಮರುಪಾವತಿ, ರಜಾ ಪ್ರವಾಸ ಭತ್ಯೆ ಇವೇ ಮೊದಲಾದ ಕೆಲವು ಸವಲತ್ತುಗಳು ಅಥವಾ ಭತ್ಯೆಗಳು ಒಂದು ನಿರ್ಧಿಷ್ಟ ಮಿತಿಯವರೆಗೆ ಕರ ವಿನಾಯಿತಿಯನ್ನು ಪಡೆಯುತ್ತವೆ.

3. ಪಾಲುದಾರಿಕಾ ಸಂಸ್ಥೆಗಳಿಂದ ಲಭ್ಯವಾಗುವ ಲಾಭಾಂಶದ ಪಾಲು

ಓರ್ವ ಪಾಲುದಾರನ ರೂಪದಲ್ಲಿ, ಪಾಲುದಾರಿಕಾ ಸಂಸ್ಥೆಗಳಿಂದ ಗಳಿಸಿಕೊಳ್ಳುವ ಲಾಭಾಂಶದ ಪಾಲೂ ಸಹ ಸಂಪೂರ್ಣವಾಗಿ ಕರ ಮುಕ್ತವಾಗಿರುತ್ತದೆ. ಏಕೆಂದರೆ, ಅಂತಹ ಲಾಭಾಂಶಕ್ಕೆ ಸಂಬಂಧಿಸಿದ ಕರವನ್ನು ಸಂಸ್ಥೆಯು ಅದಾಗಲೇ ಪಾವತಿಸಿರುತ್ತದೆ. ಆದಾಗ್ಯೂ ವೇತನ, ಬಡ್ಡಿಯಂತಹ ಇನ್ನಿತರ ಎಲ್ಲಾ ಪಾವತಿಗಳೂ ಸಹ ತೆರಿಗೆಯ ವ್ಯಾಪ್ತಿಯಲ್ಲಿ ಬರುತ್ತವೆ.

4. ಅವಿಭಜಿತ ಹಿಂದೂ ಕುಟುಂಬಗಳಿಂದ (ಹೆಚ್.ಯು.ಎಫ್) ಸದಸ್ಯರ ಹೆಸರಿನಲ್ಲಿ ಲಭ್ಯವಾಗುವ ಆದಾಯ

ಹೆಚ್.ಯು.ಎಫ್. ಆದಾಯದಿಂದ ಅದರ ಸದಸ್ಯರು ಪಡೆದುಕೊಳ್ಳುವ ಯಾವುದೇ ಆದಾಯವು ಕರ ಮುಕ್ತವಾಗಿರುತ್ತದೆ. ಏಕೆಂದರೆ, ತೆರಿಗೆಯ ವಿಚಾರದಲ್ಲಿ ಹೆಚ್.ಯು.ಎಫ್ ಅನ್ನು ಒಂದು ಪ್ರತ್ಯೇಕ ಸಂಗತಿಯೆಂದೇ ಪರಿಗಣಿಸಲಾಗಿದ್ದು, ತನ್ನ ಆದಾಯಕ್ಕಾಗಿ ಹೆಚ್.ಯು.ಎಫ್ ಅದಾಗಲೇ ತೆರಿಗೆಯನ್ನು ಪಾವತಿಸಿಯಾಗಿರುತ್ತದೆ.

5. ನಿವೃತ್ತಿಯ ಸೌಲಭ್ಯಗಳು

ನೀವು ಓರ್ವ ಸರಕಾರಿ ಅಥವಾ ಸರಕಾರೇತರ ನೌಕರರೋ ಎಂಬುದನ್ನು ಆಧರಿಸಿ ಹಾಗೂ ನೀವು ಪಡೆದುಕೊಳ್ಳುವ ಮೊತ್ತವನ್ನು ಅವಲಂಬಿಸಿಕೊಂಡು ಗ್ರಾಚ್ಯುಟಿ, ಲೀವ್ ಎನ್ಕ್ಯಾಶ್ಮೆಂಟ್ ನಂತಹ ನಿವೃತ್ತಿಯ ಸೌಲಭ್ಯಗಳು ಒಂದೋ ಪೂರ್ಣ ಪ್ರಮಾಣದಲ್ಲಿ ಇಲ್ಲವೇ ಭಾಗಶ: ತೆರಿಗೆಯಿಂದ ವಿನಾಯತಿ ಪಡೆದುಕೊಳ್ಳುತ್ತವೆ.

7. ತೆರಿಗೆ ಮುಕ್ತ ಪಿಂಚಣಿ

ಯು.ಎನ್.ಓ. ನಂತಹ ಕೆಲವು ಸಂಸ್ಥೆಗಳಿಂದ ಪಡೆಯಲಾಗುವ ನಿವೃತ್ತಿ ವೇತನವು ಕರ ಮುಕ್ತವಾಗಿರುತ್ತದೆ. ಅವಲಂಬಿತರು ಕೌಟುಂಬಿಕ ನಿವೃತ್ತಿ ವೇತನವನ್ನು ಪಡೆಯುತ್ತಿದ್ದಲ್ಲಿ, 15,000 ರೂ.ಗಳ ಮೂರನೇ ಒಂದು ಭಾಗವು (ಅಥವಾ ಯಾವುದು ಕಡಿಮೆಯೋ ಅದು) ಕರ ಮುಕ್ತವಾಗಿರುತ್ತದೆ.

8. ಸ್ವಯಂ ನಿವೃತ್ತಿ

ಸ್ವಯಂ ನಿವೃತ್ತಿಯನ್ನು ಪಡೆದುಕೊಂಡ ಅವಧಿಯಲ್ಲಿ ಅಥವಾ ಸೇವೆಯಿಂದ ವಜಾಗೊಂಡ ಸಮಯದಲ್ಲಿ, 5 ಲಕ್ಷ ರೂ.ವರೆಗೆ ಪಡೆದುಕೊಂಡ ಮೊತ್ತವು ಕರ ಮುಕ್ತವಾಗಿರುತ್ತದೆ. ಯಾವುದೇ ಅಧಿಕ ಮೊತ್ತವು ನಿಮಗೆ ಅನ್ವಯವಾಗುವಂತಹ ಆದಾಯ ತೆರಿಗೆ ಸ್ಲ್ಯಾಬ್ ಗಳ ಆಧಾರದ ಮೇಲೆ ತೆರಿಗೆಗೆ ಒಳಪಡುತ್ತದೆ.

9. ಉದ್ಯೋಗವನ್ನು ಕಳೆದುಕೊಂಡಾಗ ಲಭ್ಯವಾಗುವ ಮೊತ್ತ

ಸಂಸ್ಥೆಯೊಂದು ಕಾರ್ಯಸ್ಥಗಿತಗೊಳಿಸಿದಾಗ, ಆ ಸಂಸ್ಥೆಯ ಉದ್ಯೋಗಿಗಳು ಪಡೆದುಕೊಳ್ಳುವ ಪರಿಹಾರ ಧನವು ಕರ ಮುಕ್ತವಾಗಿರುತ್ತದೆ.

10. ವಿದ್ಯಾರ್ಥಿ ವೇತನ

ಶೈಕ್ಷಣಿಕ ಖರ್ಚುವೆಚ್ಚಗಳನ್ನು ನಿಭಾಯಿಸುವುದಕ್ಕಾಗಿ ಪಡೆದುಕೊಂಡ ಯಾವುದೇ ವಿದ್ಯಾರ್ಥಿ ವೇತನವು u/s 10(16)ರ ಅನ್ವಯ ಕರ ಮುಕ್ತವಾಗಿರುತ್ತದೆ. ವಿದ್ಯಾರ್ಥಿ ವೇತನವು ಸರಕಾರದ ವತಿಯಿಂದಲೇ ಕೊಡಲ್ಪಟ್ಟದ್ದಾಗಿರಬೇಕೆಂದೇನೂ ಇಲ್ಲ. "ಶೈಕ್ಷಣಿಕ ಖರ್ಚುವೆಚ್ಚ"ವು ಕೇವಲ ಬೋಧನಾ ಶುಲ್ಕವನ್ನಷ್ಟೇ ಒಳಗೊಂಡಿರುವುದಲ್ಲ. ಬದಲಿಗೆ ಶಿಕ್ಷಣವನ್ನು ಪಡೆದುಕೊಳ್ಳಲು ಪೂರಕವಾಗಿರುವ ಎಲ್ಲಾ ಖರ್ಚುವೆಚ್ಚಗಳನ್ನೂ ಒಳಗೊಂಡಿರುತ್ತದೆ. ವಿದ್ಯಾರ್ಥಿ ವೇತನವನ್ನು ಸರಕಾರ, ವಿಶ್ವವಿದ್ಯಾಲಯ, ಮಂಡಳಿ, ಟ್ರಸ್ಟ್ ಹೀಗೆ ಯಾವುದರಿಂದಲೂ ಪಡೆದುಕೊಂಡದ್ದಾಗಿರಬಹುದು.

11. ಸರಕಾರದಿಂದ ಪಡೆದ ಪ್ರಶಸ್ತಿ, ಪಾರಿತೋಷಕಗಳು

ನಗದು ಅಥವಾ ತತ್ಸಮಾನ ರೂಪದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಅಥವಾ ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದಿರುವ ಅಂಗ ಸಂಸ್ಥೆಯಿಂದ ಪ್ರಶಸ್ತಿಯ ರೂಪದಲ್ಲಿ ಪಡೆದುಕೊಳ್ಳಲಾದ ಮೊತ್ತವು ಕರ ಮುಕ್ತವಾಗಿರುತ್ತದೆ.

12. ಸರ್ಕಾರಿ ಪರಿಹಾರ ನಿಧಿಗಳಿಂದ ಪಡೆದ ಮೊತ್ತ

ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ಅಥವಾ ವಿದ್ಯಾರ್ಥಿ ನಿಧಿ ಅಥವಾ ಕೋಮು ಸೌಹಾರ್ದತೆಯ ಫೌಂಡೇಷನ್ ನಿಂದ ವ್ಯಕ್ತಿಗಳು ಪಡೆದುಕೊಳ್ಳುವ ಯಾವುದೇ ಮೊತ್ತವೂ ಕೂಡಾ ಕರ ಮುಕ್ತವಾಗಿರುತ್ತದೆ.

13. ಉಡುಗೊರೆಗಳು

ಯಾವುದೇ ಗರಿಷ್ಟ ಮಿತಿಯಿಲ್ಲದೇ u/s 56 (2)ರ ಅನ್ವಯ ಸಂಬಂಧಿಗಳಿಂದ ಪಡೆದುಕೊಳ್ಳಲಾದ ಉಡುಗೊರೆಗಳು ಕರ ಮುಕ್ತವಾಗಿರುತ್ತವೆ. ಜೊತೆಗೆ ಸಂಬಂಧಿಗಳಲ್ಲದವರಿಂದ 50,000 ರೂ.ವರೆಗಿನ ಮೌಲ್ಯದ ಯಾವುದೇ ಉಡುಗೊರೆಯು ಕರ ಮುಕ್ತವಾಗಿರುತ್ತದೆ. ಸಂಬಂಧಿಗಳಿಂದಲೇ ಆಗಲೀ ಅಥವಾ ಸಂಬಂಧಿಗಳಲ್ಲದವರಿಂದಲೇ ಆಗಲೀ ವಿವಾಹದ ಸಂದರ್ಭದಲ್ಲಿ ಪಡೆದುಕೊಳ್ಳಲಾದ ಎಲ್ಲಾ ಉಡುಗೊರೆಗಳೂ ಕೂಡಾ ಕರ ಮುಕ್ತವಾಗಿರುತ್ತವೆ.

ಆದಾಯ ತೆರಿಗೆಯ ನಿಯಮಾವಳಿಗಳ ಪ್ರಕಾರ, ಈ ಕೆಳಗಿನವರನ್ನು ಸಂಬಂಧಿಗಳೆಂದು ಪರಿಗಣಿಸಲಾಗುತ್ತದೆ:
ವ್ಯಕ್ತಿಯೋರ್ವರ ಬಾಳ ಸಂಗಾತಿ
ವ್ಯಕ್ತಿಯೋರ್ವರ ಸಹೋದರ ಅಥವಾ ಸಹೋದರಿ
ವ್ಯಕ್ತಿಯೊರ್ವರ ಬಾಳ ಸಂಗಾತಿಯ ಸಹೋದರ ಅಥವಾ ಸಹೋದರಿ
ವ್ಯಕ್ತಿಯೋರ್ವರ ಇಬ್ಬರೂ ಹೆತ್ತವರ ಸಹೋದರ ಅಥವಾ ಸಹೋದರಿ
ವ್ಯಕ್ತಿಯೋರ್ವರ ಪೀಳಿಗೆಯ ಮಕ್ಕಳು ಅಥವಾ ಹಿರಿಯರು
ವ್ಯಕ್ತಿಯೋರ್ವರ ಬಾಳ ಸಂಗಾತಿಯ ಪೀಳಿಗೆಯ ಮಕ್ಕಳು ಅಥವಾ ಹಿರಿಯರು
ಮೇಲಿನ ವ್ಯಾಖ್ಯಾನಗಳಲ್ಲಿ ಬೊಟ್ಟುಮಾಡಲಾದ ವ್ಯಕ್ತಿಯ ಬಾಳಸಂಗಾತಿ

ತೆರಿಗೆ ಮುಕ್ತ ಹೂಡಿಕೆಗಳು

15. ಈಕ್ವಿಟಿ ಅಥವಾ ಮ್ಯೂಚುವಲ್ ಫಂಡ್ ಗಳಿಂದ ಗಳಿಸಿದ ಡಿವಿಡೆಂಡ್ ರೂಪದ ಆದಾಯ
ಸೆಕ್ಷನ್ 10(34) ರ ಅಡಿ, ಭಾರತೀಯ ಕಂಪನಿಗಳಿಂದ ಪಡೆದ ಡಿವಿಡೆಂಡ್ ಗಳು ಕರ ಮುಕ್ತವಾಗಿರುತ್ತವೆ. 2016ರ ಆಯವ್ಯಯವು ಡಿವಿಡೆಂಡ್ ಗಳ ಮೇಲಿನ ಕರ ವಿನಾಯಿತಿಯ ಮಿತಿಯನ್ನು 10 ಲಕ್ಷ ರೂ.ಗಳಿಗೆ ಬದಲಾಯಿಸಿದೆ. ಇದಕ್ಕಿಂತಲೂ ಅಧಿಕ ಮೌಲ್ಯದ ಡಿವಿಡೆಂಡ್ ಗಳನ್ನು ಪಡೆದ ವ್ಯಕ್ತಿಗಳು ಅಥವಾ ಹೆಚ್.ಯು.ಎಫ್. ಗಳು ಶೇ. 10 ರ ದರದಲ್ಲಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಸೆಕ್ಷನ್ 10(35) ರ ಅಡಿ, ಮ್ಯೂಚುವಲ್ ಫಂಡ್ ಗಳಿಂದ ಗಳಿಸಿಕೊಂಡ ಡಿವಿಡೆಂಡ್ ಗಳು ಕರಮುಕ್ತವಾಗಿರುತ್ತವೆ. ಆದಾಗ್ಯೂ, ಏಪ್ರಿಲ್ 1, 2018 ಯಿಂದ ಅನ್ವಯವಾಗುವಂತೆ ಡಿವಿಡೆಂಡ್ ಗಳನ್ನು ಪಾವತಿಸುವುದಕ್ಕೆ ಮೊದಲು, ಕಂಪನಿಗಳು ಶೇ. 10ರ ದರದಲ್ಲಿ ಡಿ.ಡಿ.ಟಿ. (ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ ಟ್ಯಾಕ್ಸ್) ಅನ್ನು ಪಾವತಿಸಬೇಕಾಗುತ್ತದೆ.

16. ತೆರಿಗೆ ಮುಕ್ತ ಬಾಂಡ್

ಹೆಸರೇ ಸೂಚಿಸುವಂತೆ, ಕರ ಮುಕ್ತ ಬಾಂಡ್ ಗಳ ಮೇಲೆ ಪಡೆಯಲಾಗುವ ಯಾವುದೇ ಬಡ್ಡಿಯ ಹಣವು ತೆರಿಗೆಯ ವ್ಯಾಪ್ತಿಗೆ ಬರುವುದಿಲ್ಲ.

17. ಉಳಿತಾಯ ಖಾತೆಯ ಮೇಲಿನ ಬಡ್ಡಿ

ಉಳಿತಾಯ ಖಾತೆಯಲ್ಲಿರಿಸಲಾದ (ಬ್ಯಾಂಕುಗಳಲ್ಲಿ ಅಥವಾ ಅಂಚೆ ಕಛೇರಿಗಳಲ್ಲಿ) ಹಣವು ಗಳಿಸುವ 10,000 ರೂ.ವರೆಗಿನ ಬಡ್ಡಿಯ ಹಣಕ್ಕೆ ಸೆಕ್ಷನ್ u/s 800TTA ರ ಅನ್ವಯ ತೆರಿಗೆಯಿಂದ ವಿನಾಯಿತಿ ಇರುತ್ತದೆ. ಇದಕ್ಕಿಂತಲೂ ಹೆಚ್ಚಿನ ಬಡ್ಡಿಯ ಹಣಕ್ಕೆ ಮಾರ್ಜಿನಲ್ (ಕನಿಷ್ಟ) ಆದಾಯ ತೆರಿಗೆಯ ದರಗಳನ್ನು ವಿಧಿಸಲಾಗುತ್ತದೆ.

18. ಎನ್.ಆರ್.ಇ. ಖಾತೆಗಳು

ಅನಿವಾಸಿ ಭಾರತೀಯರ ಎನ್.ಆರ್.ಇ. (ನಾನ್ ರೆಸಿಡೆಂಡ್ ಎಕ್ಸ್ ಟರ್ನಲ್ ಖಾತೆ) ಡಿಪಾಸಿಟ್ ಗಳು ಗಳಿಸುವ ಬಡ್ಡಿಯು ಸಂಪೂರ್ಣವಾಗಿ ಕರಮುಕ್ತವಾಗಿರುತ್ತವೆ. ಎನ್.ಆರ್.ಇ. ಖಾತೆಯ ಹಣವನ್ನು ಸಂಪೂರ್ಣವಾಗಿ ವರ್ಗಾವಣೆ ಮಾಡಿಕೊಳ್ಳಬಹುದು. ಅರ್ಥಾತ್, ಒಂದು ವೇಳೆ ನೀವು ಅಮೇರಿಕಾದಲ್ಲಿ ನೆಲೆಸಿದ್ದು, ಭಾರತದಲ್ಲಿರುವ ನಿಮ್ಮ ಎನ್.ಆರ್.ಇ. ಖಾತೆಯಲ್ಲಿ ನೀವೊಂದಿಷ್ಟು ಹಣವನ್ನು ಹೂಡಿದ್ದಲ್ಲಿ ನೀವು ಬಯಸಿದಾಗ ಈ ಖಾತೆಯಿಂದ ನಿಮ್ಮ ಅಸಲು ಹಣ ಮತ್ತು ಬಡ್ಡಿಯ ಹಣವನ್ನು ಅಮೇರಿಕಾಕ್ಕೆ ವರ್ಗಾಯಿಸಿಕೊಳ್ಳಬಹುದು. ಹೀಗಾಗಿ ಕರಮುಕ್ತ ಆದಾಯವನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಎನ್.ಆರ್.ಇ. ಖಾತೆಯು ಅನಿವಾಸಿ ಭಾರತೀಯರ ಪಾಲಿಗೆ ಒಂದು ಆದರ್ಶಪ್ರಾಯವಾದ ಮಾರ್ಗೋಪಾಯವಾಗಿದೆ.

19. ಇಪಿಎಫ್ (ಉದ್ಯೋಗಿಯ ಭವಿಷ್ಯ ನಿಧಿ)

ನಿರಂತರ ಸೇವೆ ಸಲ್ಲಿಸಿದ ಐದು ವರ್ಷಗಳ ಬಳಿಕ, ಇಪಿಎಫ್ ಮೊತ್ತವನ್ನು ಖಾತೆಯಿಂದ ಪಡೆದುಕೊಂಡರೆ, ಅದು ಕರ ಮುಕ್ತವಾಗಿರುತ್ತದೆ. ಒಂದು ವೇಳೆ ಇಪಿಎಫ್ ಮೊತ್ತವನ್ನು ಐದು ವರ್ಷಗಳಿಗಿಂತಲೂ ಮೊದಲೇ ಖಾತೆಯಿಂದ ಪಡೆದುಕೊಂಡಲ್ಲಿ ಆ ಮೊತ್ತವು ಸಂಪೂರ್ಣವಾಗಿ ತೆರಿಗೆಯ ವ್ಯಾಪ್ತಿಗೆ ಬರುತ್ತದೆ. "ಐದು ವರ್ಷಗಳ ನಿರಂತರ ಸೇವೆ" ಎಂಬುದರ ಅರ್ಥವೇನೆಂದರೆ, ಈ ಐದು ವರ್ಷಗಳ ಅವಧಿಯಲ್ಲಿ ನೀವು ಹಲವಾರು ಉದ್ಯೋಗಗಳನ್ನು ಅಥವಾ ಸಂಸ್ಥೆಗಳನ್ನು ಬದಲಾಯಿಸಿದ್ದರೂ ಕೂಡಾ ನಿಮ್ಮ ಇಪಿಎಫ್ ಖಾತೆಯು ಐದು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯವರೆಗೂ ಕ್ರಿಯಾತ್ಮಕವಾಗಿದೆ (ಸಕ್ರಿಯವಾಗಿ ಪಿಎಫ್ ದೇಣಿಗೆಯನ್ನು ಉದ್ಯೋಗದಾತ ಸಂಸ್ಥೆಯಿಂದ ನಿರಂತರವಾಗಿ ಪಡೆಯುತ್ತಿದೆ) ಎಂದಾಗಿರುತ್ತದೆ.

20. ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ)

ಪರಿಪಕ್ವಗೊಂಡ ಮೊಬಲಗು ಅಥವಾ ಪಿಪಿಎಫ್ ಖಾತೆಯಿಂದ ಒಂದಕ್ಕಿಂದ ಹೆಚ್ಚು ಬಾರಿ ಭಾಗಶ:ವಾಗಿ ಪಡೆದುಕೊಂಡ ಹಣವು ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ.

21. ಸುಕನ್ಯಾ ಸಮೃದ್ಧಿ ಖಾತೆ

ಸುಕನ್ಯಾ ಸಮೃದ್ಧಿ ಖಾತೆಯ ಮೇಲೆ ಗಳಿಸಿಕೊಂಡ ಬಡ್ಡಿಯ ಹಣವು ಕರಮುಕ್ತವಾಗಿರುತ್ತದೆ. ಆದ್ದರಿಂದ, ಹೆಣ್ಣು ಮಗುವಿನ ಮೇಲೆ ಹೂಡಿಕೆ ಮಾಡಲು ಈ ಖಾತೆಯು ಒಂದು ಉತ್ತಮ ಆಯ್ಕೆಯಾಗಿದೆ.

22. ಜೀವ ವಿಮಾ ಪಾಲಿಸಿ ಪರಿಪಕ್ವಗೊಂಡಾಗ ಲಭಿಸುವ ಮೊತ್ತ

ಪಾಲಿಸಿಯ ಎಲ್ಲಾ ವರ್ಷಗಳಿಗೂ ಪಾವತಿಸಲಾದ ಪ್ರೀಮಿಯಂ ಹಣದ ಮೊತ್ತವು, ಪಾಲಿಸಿಯ ಪರಿಪಕ್ವಗೊಂಡ ಮೊತ್ತಕ್ಕಿಂತ ಶೇ. 10ಕ್ಕಿಂತಲೂ ಕಡಿಮೆ ಇದ್ದಲ್ಲಿ, ಜೀವ ವಿಮಾ ಪಾಲಿಸಿಯು ಪರಿಪಕ್ವಗೊಂಡಾಗ ಲಭಿಸುವ ಮೊತ್ತವು ಕರಮುಕ್ತವಾಗಿರುತ್ತದೆ. ಎಂಡೊಮೆಂಟ್ ಅಥವಾ ಸಾಂಪ್ರದಾಯಿಕ ವಿಮಾ ಪಾಲಿಸಿಯನ್ನು ಸಲ್ಲಿಸಿದಾಗ ಲಭ್ಯವಾಗುವ ಮೊತ್ತವು ಮೂರು ವರ್ಷಗಳ ಬಳಿಕ ಕರಮುಕ್ತವಾಗಿರುತ್ತದೆ. ಯುಲಿಪ್ಸ್ (ಯು.ಎಲ್.ಐ.ಪ್) ಗಳಿಗೆ ಲಭ್ಯವಾಗುವ ಮೊತ್ತವು ಐದು ವರ್ಷಗಳ ಬಳಿಕ ತೆರಿಗೆ ಮುಕ್ತವಾಗಿರುತ್ತದೆ.

23. ಸಾವರಿನ್ ಗೋಲ್ಡ್ ಬಾಂಡ್ ಗಳು

ಬಾಂಡ್ ಗಳು ಪರಿಪಕ್ವಗೊಳ್ಳುವವರೆಗೂ ಹಾಗೆಯೇ ಇಟ್ಟರೆ, ಅದಕ್ಕೆ ಯಾವುದೇ ಕ್ಯಾಪಿಟಲ್ ಗೇನ್ಸ್ ತೆರಿಗೆ ಇರುವುದಿಲ್ಲ. ಆದಾಗ್ಯೂ, ಪಡೆದುಕೊಂಡ ಬಡ್ಡಿ ಹಣವು ತೆರಿಗೆಯ ವ್ಯಾಪ್ತಿಗೆ ಬರುತ್ತದೆ. ಜೊತೆಗೆ ಪರಿಪಕ್ವಗೊಳ್ಳುವುದಕ್ಕೆ ಮೊದಲೇ ಬಾಂಡ್ ಗಳನ್ನು ಮಾರಾಟ ಮಾಡಿದಲ್ಲಿ ಅವು ಕ್ಯಾಪಿಟಲ್ ಗೇನ್ಸ್ ತೆರಿಗೆಗೆ ಭಾಜನವಾಗುತ್ತವೆ.

24. ಗೋಲ್ಡ್ ಮಾನಿಟೈಜೇಷನ್ ಸ್ಕೀಮ್

ಗೋಲ್ಡ್ ಮಾನಿಟೈಜೇಷನ್ ಸ್ಕೀಮ್ ಗಳಿಸಿದ ಬಡ್ಡಿ ಹಣವು ಕರ ಮುಕ್ತವಾಗಿರುತ್ತದೆ. ಜೊತೆಗೆ, ಠೇವಣಿಯಾಗಿರಿಸಲಾಗಿರುವ ಚಿನ್ನದ ಮೌಲ್ಯವರ್ಧನೆಯಾದರೂ ಕೂಡ ಅದಕ್ಕೆ ಕ್ಯಾಪಿಟಲ್ ಗೇನ್ಸ್ ತೆರಿಗೆಯು ಅನ್ವಯವಾಗುವುದಿಲ್ಲ.

25. ಪಿತ್ರಾರ್ಜಿತ ಸ್ವತ್ತುಗಳು

ಭಾರತದಲ್ಲಿ ವಂಶಪಾರಂಪರ್ಯ ತೆರಿಗೆ ಅಸ್ತಿತ್ವದಲ್ಲಿಲ್ಲ ಎಂಬ ಸಂಗತಿಯು ಸಮಾಧಾನಕರವಾಗಿದೆ. ಹೀಗಾಗಿ, ಪಿತ್ರಾರ್ಜಿತವಾಗಿ ನೀವು ಪಡೆದುಕೊಳ್ಳುವ ಎಲ್ಲಾ ಸೊತ್ತು, ಹಣವೂ ಸಹ ಕರಮುಕ್ತವಾಗಿರುತ್ತದೆ. ಆದರೆ ಆ ಪಿತ್ರಾರ್ಜಿತ ಸೊತ್ತುಗಳು ನಿಮಗೆ ವರ್ಗಾವಣೆಗೊಂಡ ಬಳಿಕ, ಆ ಸೊತ್ತುಗಳನ್ನು ಬಳಸಿಕೊಂಡು ನೀವೇನಾದರೂ ಆದಾಯವನ್ನು ಹುಟ್ಟು ಹಾಕಿದಲ್ಲಿ ಅದು ನಿಮ್ಮ ಸ್ವಂತ ಆದಾಯವೆಂದು ಪರಿಗಣಿಸಲ್ಪಡುತ್ತದೆ ಹಾಗೂ ಆದಾಯ ತೆರಿಗೆ ಕಾನೂನಿನ ಅನ್ವಯ ಆ ಆದಾಯವು ತೆರಿಗೆ ವ್ಯಾಪ್ತಿಯಡಿಯಲ್ಲಿ ಬರುತ್ತದೆ.

English summary

25 Tax Free Incomes and Investments in India

Everyone hates Taxes and go out in full force to save it – sometime legally and sometimes beyond the law.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns