For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಈ 20 ಟ್ರಿಕ್ಸ್ ಗಳನ್ನು ಅಳವಡಿಸಿಕೊಂಡು ಉಳಿತಾಯ ಮಾಡೋದು ಹೇಗೆ?

ನೆಮ್ಮದಿಯ ಹಣಕಾಸು ಮಾರ್ಗ ಇರುವುದೊಂದೇ.. ಅದು ಉಳಿತಾಯ ಹೌದು. ನೆಮ್ಮದಿಯ ಜೀವನಕ್ಕೆ ಹಣದ ಉಳಿತಾಯ ಅತಿ ಮುಖ್ಯವಾಗಿದೆ. ಆದರೆ ಹಾಗಂತ ನಿಮ್ಮ ಆದಾಯದಲ್ಲಿನ ಕೆಲ ಪ್ರಮಾಣವನ್ನು ಉಳಿಸಿ ಶೇಖರಿಸಿ ಇಡುವುದು ಮಾತ್ರ ಉಳಿತಾಯವಲ್ಲ.

|

ನಿತ್ಯ ಜೀವನದ ಖರ್ಚು ವೆಚ್ಚಗಳನ್ನು ಸುಗಮವಾಗಿ ನಿಭಾಯಿಸಲು ಬೇಕಾಗುವಷ್ಟು ಹಣ ಸಂಪಾದಿಸಿ ಒಟ್ಟಾರೆಯಾಗಿ ಜೀವನದಲ್ಲಿ ನೆಮ್ಮದಿ ಪಡೆಯಲು ಎಲ್ಲರೂ ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ನಿತ್ಯದ ಖರ್ಚಿಗಾಗಿ ಹಣ ಮಿಕ್ಕಿದರೆ ಏನಾದರೂ ವಸ್ತುವನ್ನು ಕೊಳ್ಳಲು ಕೆಲವರು ಮುಂದಾಗುತ್ತಾರೆ.
ಉತ್ತಮ ಸಂಬಳ ಬರುವ ಉದ್ಯೋಗದಲ್ಲಿರುವುದು ಅಥವಾ ಒಳ್ಳೆಯ ಆದಾಯ ಬರುವಂಥ ಇನ್ನಾವುದಾದರೂ ಮೂಲ ಹೊಂದಿರುವುದು ಹಾಗೂ ಆ ಮೂಲಕ ನೆಮ್ಮದಿಯ ಜೀವನ ಸಾಗಿಸುವುದು ಉತ್ತಮ ಮಾರ್ಗವೇ ಆಗಿದೆ. ಆದರೂ ಇದನ್ನೆಲ್ಲ ಹೊರತುಪಡಿಸಿ ಇನ್ನೊಂದು ಮಾರ್ಗದ ಮೂಲಕ ತಿಂಗಳಾಂತ್ಯದಲ್ಲಿ ಸಾಕಷ್ಟು ಹಣಕಾಸು ನೆಮ್ಮದಿ ಪಡೆಯಬಹುದು. ಆ ಮಾರ್ಗ ಯಾವುದು ಎಂಬುದನ್ನು ತಿಳಿಯಲು ಮುಂದೆ ಓದಿ. ಪಿಪಿಎಫ್ ಮೂಲಕ ಕೋಟ್ಯಾಧಿಪತಿಯಾಗುವುದು ಹೇಗೆ? ಇಲ್ಲಿ ನೋಡಿ..

ನೆಮ್ಮದಿಯ ಹಣಕಾಸು ಮಾರ್ಗ ಇರುವುದೊಂದೇ.. ಅದು ಉಳಿತಾಯ ಹೌದು. ನೆಮ್ಮದಿಯ ಜೀವನಕ್ಕೆ ಹಣದ ಉಳಿತಾಯ ಅತಿ ಮುಖ್ಯವಾಗಿದೆ. ಆದರೆ ಹಾಗಂತ ನಿಮ್ಮ ಆದಾಯದಲ್ಲಿನ ಕೆಲ ಪ್ರಮಾಣವನ್ನು ಉಳಿಸಿ ಶೇಖರಿಸಿ ಇಡುವುದು ಮಾತ್ರ ಉಳಿತಾಯವಲ್ಲ. ನಿತ್ಯ ನಾವು ಮಾಡುವ ಹಲವಾರು ಅನವಶ್ಯಕ ಖರ್ಚುಗಳ ಮೇಲೆ ಕಡಿವಾಣ ಹಾಕುವುದು ಅಥವಾ ಅಂಥ ವಿಷಯಗಳ ಮೇಲೆ ಖರ್ಚು ಕಡಿಮೆ ಮಾಡುವುದು ಸಹ ಅಗತ್ಯ.
ಹಾಗಾದರೆ ಯಾವೆಲ್ಲ ವಿಧಾನಗಳನ್ನು ಅಳವಡಿಸಿಕೊಂಡರೆ ಹೆಚ್ಚು ಉಳಿತಾಯ ಮಾಡಬಹುದು ಎಂಬ ವಿಷಯಗಳನ್ನು ಅರಿತುಕೊಳ್ಳೋಣ.

ಮನೆಯಲ್ಲಿ ಈ 20 ವಿಧಾನಗಳನ್ನು ಅಳವಡಿಸಿಕೊಂಡು ಖರ್ಚು ಕಡಿಮೆ ಮಾಡಿ ಉಳಿತಾಯ ಹೆಚ್ಚಿಸಬಹುದು:

1. ನಿಮ್ಮ ಬಿಲ್ಲುಗಳನ್ನು ಪರಿಶೀಲಿಸಿ

1. ನಿಮ್ಮ ಬಿಲ್ಲುಗಳನ್ನು ಪರಿಶೀಲಿಸಿ

ಸೂಕ್ತವಾದ ಹಣಕಾಸು ಉಳಿತಾಯದ ಬಗ್ಗೆ ನೀವು ಗಂಭೀರವಾಗಿದ್ದಲ್ಲಿ ಮೊದಲು ಇಡೀ ತಿಂಗಳು ನಿಮ್ಮ ಒಟ್ಟಾರೆ ಖರ್ಚು ಎಷ್ಟಿದೆ ಎಂಬುದನ್ನು ಲೆಕ್ಕ ಹಾಕಿ. ಅದರ ನಂತರವೇ ನಿಮಗೆ ಯಾವೆಲ್ಲ ಕಡೆ ಉಳಿತಾಯ ಮಾಡಬಹುದು ಎಂಬುದು ಅರಿವಾಗುತ್ತದೆ.
ಎಲ್ಲಿಯಾದರೂ ಖರೀದಿ ಮಾಡಿದಾಗ ಅಥವಾ ಯಾವುದೋ ಸೇವೆ ಪಡೆದುಕೊಂಡಾಗ ಅಲ್ಲಿ ನೀಡಲಾಗುವ ರಶೀದಿಗಳನ್ನು ಕಾಪಾಡದೆ ಬಿಸಾಕಿ ಬರುವ ಕೆಟ್ಟ ಹವ್ಯಾಸ ಬಹುತೇಕ ಜನರಲ್ಲಿದೆ. ಹೀಗೆ ಮಾಡದೆ ರಶೀದಿಗಳನ್ನು ಇಟ್ಟುಕೊಂಡು ತಿಂಗಳಾಂತ್ಯಕ್ಕೆ ಲೆಕ್ಕ ಮಾಡಿದಲ್ಲಿ ನಿಮ್ಮ ಖರ್ಚುಗಳ ಬಗ್ಗೆ ಒಂದು ಕಲ್ಪನೆ ಮೂಡುತ್ತದೆ.

2. ಇಂಧನ ಕ್ಷಮತೆಯ ದೀಪಗಳನ್ನು ಬಳಸಿ

2. ಇಂಧನ ಕ್ಷಮತೆಯ ದೀಪಗಳನ್ನು ಬಳಸಿ

ಹಳದಿ ಬಣ್ಣದ ಬೆಳಕು ನೀಡುವ ವಿದ್ಯುತ್ ಬಲ್ಬಗಳು ಹೆಚ್ಚು ವಿದ್ಯುಚ್ಛಕ್ತಿಯನ್ನು ಬಳಸುತ್ತವೆ ಎಂಬುದು ಗೊತ್ತಿರಲಿ. ಮನೆಯಲ್ಲಿ ಇಂಥ ಬಲ್ಬಗಳಿದ್ದರೆ ತಕ್ಷಣ ಕಡಿಮೆ ಇಂಧನ ಬಳಸುವ ಬಲ್ಬಗಳನ್ನು ಅಳವಡಿಸಿಕೊಳ್ಳಿ.
ಆದರೆ ಇದೊಂದು ಚಿಕ್ಕ ವಿಷಯ. ಬಲ್ಬಗಳಿಂದ ಅದೆಷ್ಟು ಹೆಚ್ಚು ಬಿಲ್ ಬರಬಹುದು ಎಂಬ ಉದಾಸೀನತೆ ಬೇಡ. ಇಂಧನ ಕ್ಷಮತೆಯ ಬಲ್ಬಗಳು ಸಾಂಪ್ರದಾಯಿಕ ಬಲ್ಬಗಳಿಗಿಂತ ಶೇ.೭೦ ರಿಂದ ೮೦ ರಷ್ಟು ಕಡಿಮೆ ವಿದ್ಯುತ್ ಬಳಸುತ್ತವೆ ಎಂಬುದು ಅಚ್ಚರಿಯಾದರೂ ಸತ್ಯ. ಹೆಚ್ಚು ವಿದ್ಯುತ್ ಬಳಸುವ ಬಲ್ಬಗಳನ್ನು ತೆಗೆದು ಹಾಕಿ ಇಂಧನ ಕ್ಷಮತೆಯ ಬಲ್ಬ ಅಳವಡಿಸಿದಲ್ಲಿ ಖಂಡಿತವಾಗಿಯೂ ನಿಮ್ಮ ವಿದ್ಯುತ್ ಬಿಲ್ ಸಾಕಷ್ಟು ಕಡಿಮೆಯಾಗುತ್ತದೆ. ಇಂಧನ ಕ್ಷಮತೆಯ ಬಲ್ಬಗಳ ದರ ಹೆಚ್ಚಾಗಿರುವುದರಿಂದ ಅನೇಕರು ಅವುಗಳನ್ನು ಕೊಳ್ಳಲು ಹಿಂಜರಿಯುತ್ತಾರೆ. ಆದರೆ ದೀರ್ಘಾವಧಿಯಲ್ಲಿ ಇಂಧನ ಕ್ಷಮತೆಯ ಬಲ್ಬಗಳು ನಿಮಗೆ ಉಳಿತಾಯವನ್ನೇ ಮಾಡುತ್ತವೆ.

3. ವಾರದ ತಿಂಡಿ, ತಿನಿಸು ಬಿಲ್ ಪ್ಲಾನ್ ಮಾಡಿ

3. ವಾರದ ತಿಂಡಿ, ತಿನಿಸು ಬಿಲ್ ಪ್ಲಾನ್ ಮಾಡಿ

ಮನೆಯಲ್ಲಿ ಅಡುಗೆ ತಯಾರಿಸಿ ಸೇವಿಸುವುದು ಯಾವಾಗಲೂ ಮಿತವ್ಯಯಕರ ಎಂಬುದು ತಿಳಿದ ಸಂಗತಿಯೇ ಆಗಿದೆ. ಮನೆಯ ಒಬ್ಬ ಸದಸ್ಯರಿಗೆ ಹೋಟೆಲ್‌ನಿಂದ ಸಲಾಡ್ ಆರ್ಡರ್ ಮಾಡಿ ತರಿಸುವ ಖರ್ಚಿನಷ್ಟು ಮೊತ್ತದ ದಿನಸಿ ತಂದಲ್ಲಿ ಅದರಿಂದ ಅನೇಕ ಬಾರಿ ಅಡುಗೆ ಮಾಡಿ ಊಟ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ಹೊರಗೆ ಊಟ ಮಾಡುವುದು, ರಸ್ತೆ ಬದಿಯ ಸ್ಟಾಲ್‌ಗಳಲ್ಲಿ ತಿಂಡಿ ತಿನ್ನುವುದು ಹೆಚ್ಚಾಗುತ್ತಿದೆ. ಇನ್ನು ಆಪ್ ಮೂಲಕ ಮನೆಗೇ ಊಟ ತರಿಸುವುದು ಸಹ ಸಾಮಾನ್ಯವಾಗುತ್ತಿದೆ. ಆದರೆ ಇವೆಲ್ಲ ನಿಮ್ಮ ಜೇಬಿಗೆ ಭಾರ ಉಂಟು ಮಾಡುತ್ತವೆ ಎಂಬುದು ಗಮನದಲ್ಲಿರಲಿ.

4. ಇಂಧನ ಕ್ಷಮತೆಯ ಸಾಧನ, ಸಲಕರಣೆ ಖರೀದಿಸಿ

4. ಇಂಧನ ಕ್ಷಮತೆಯ ಸಾಧನ, ಸಲಕರಣೆ ಖರೀದಿಸಿ

ಮನೆಯಲ್ಲಿರುವ ಫ್ರಿಜ್ ಅಥವಾ ಫ್ರೀಜರ್‌ಗಳು ಹೆಚ್ಚು ವಿದ್ಯುಚ್ಛಕ್ತಿಯನ್ನು ಬಳಸುತ್ತವೆ ಎಂಬುದು ತಿಳಿದಿದೆ. ಆದರೆ ಇವನ್ನು ಬಿಟ್ಟು ಅನೇಕ ವಸ್ತುಗಳು ಇವಕ್ಕೂ ಹೆಚ್ಚು ವಿದ್ಯುತ್ ಕಬಳಿಸುತ್ತವೆ. ಅಂಥ ಸಾಧನ, ಸಲಕರಣೆಗಳ ಬಗ್ಗೆ ಗಮನವಿರಲಿ.
ಇತ್ತೀಚೆಗೆ ಹೊಸ ಮನೆ ಅಥವಾ ಅಪಾರ್ಟಮೆಂಟ್ ಕೊಂಡಾಗ ಅವುಗಳಲ್ಲಿ ಮೊದಲೇ ಎಲ್ಲ ರೀತಿಯ ಎಲೆಕ್ಟ್ರಿಕ್ ಸಾಧನಗಳನ್ನು ಅಳವಡಿಸಲಾಗಿರುತ್ತದೆ. ಆದರೆ ಅವನ್ನೆಲ್ಲ ಬಳಸಲಾರಂಭಿಸಿದಾಗ ಬಿಲ್ ಎಷ್ಟು ಬರಬಹುದು ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದಷ್ಟೂ ಇಂಧನ ಕ್ಷಮತೆಯ ಸಾಧನ ಸಲಕರಣೆಗಳು ಮನೆಯಲ್ಲಿರುವಂತೆ ನೋಡಿಕೊಳ್ಳಿ.

5. ಪೆಟ್ರೋಲ್, ಡೀಸೆಲ್ ಮೇಲಿನ ಖರ್ಚು ಕಡಿಮೆ ಮಾಡಿ

5. ಪೆಟ್ರೋಲ್, ಡೀಸೆಲ್ ಮೇಲಿನ ಖರ್ಚು ಕಡಿಮೆ ಮಾಡಿ

ಸುಗಮ ಸಂಚಾರಕ್ಕಾಗಿ ಕಾರು ಕೊಳ್ಳುವುದು ಹಾಗೂ ಅದಕ್ಕಾಗಿ ಸಾಲ ಮಾಡಿಯಾದರೂ ದೊಡ್ಡ ಮೊತ್ತ ಖರ್ಚು ಮಾಡುವುದು ಓಕೆ. ಅದು ನಮ್ಮ ಜೀವನವನ್ನು ಸಾಕಷ್ಟು ಆರಾಮದಾಯಕವನ್ನಾಗಿ ಮಾಡುತ್ತದೆ. ಆದರೆ ಕಾರು ಓಡಿಸುವಾಗ ಪೆಟ್ರೋಲ್ ಬಂಕ್‌ಗೆ ಹೋಗಿ ಟ್ಯಾಂಕ್ ಫುಲ್ ಮಾಡಿಸಿದಾಗಲೇ ಗೊತ್ತಾಗುವುದು ಪೆಟ್ರೋಲ್ ಅಥವಾ ಡೀಸೆಲ್ ಮೇಲೆ ಒಂದು ಬಾರಿ ಎಷ್ಟು ದೊಡ್ಡ ಮೊತ್ತವನ್ನು ತೆರಬೇಕಾಗುತ್ತದೆ ಎಂಬುದು. ನಿಜವಾದ ಖರ್ಚು ಕಾರಿನ ಮೇಲೆ ಹಾಕಿದ ಮೊತ್ತವಲ್ಲ, ಪ್ರತಿದಿನವೂ ಅದರ ಹೊಟ್ಟೆಗೆ ಹಾಕಬೇಕಾದ ಇಂಧನವೇ ನಿಜವಾದ ಖರ್ಚು ಎಂಬುದು ದಿನಗಳೆದಂತೆ ನಮಗೆ ತಿಳಿಯಲಾರಂಭಿಸುತ್ತದೆ. ಹೀಗಾಗಿ ಅನವಶ್ಯ ಕಾರಣಗಳಿಗಾಗಿ ಕಾರು ಉಪಯೋಗಿಸದಿದ್ದರೆ ಸಾಕಷ್ಟು ಹಣ ಉಳಿತಾಯ ಮಾಡಬಹುದು.
ಪೆಟ್ರೋಲ್, ಡೀಸೆಲ್ ಇಷ್ಟೊಂದು ದುಬಾರಿಯಾಗಿರುವ ದಿನಗಳಲ್ಲೂ ಕೆಲವರು ರಸ್ತೆಯ ಕಾರ್ನರ್ ಅಂಗಡಿಗೆ ಹೋಗಲು ಸಹ ಕಾರು ಬಳಸುತ್ತಾರೆ. ಇದರ ಬದಲು ಒಂದಿಷ್ಟು ವಾಕ್ ಮಾಡಿದಲ್ಲಿ ಆರೋಗ್ಯಕ್ಕೂ ಒಳ್ಳೆಯದು, ಜೇಬಿಗೂ ಹಿತಕರ.

6. ನಿಮ್ಮ ಸೆಲ್ ಫೋನ್ ಬಳಕೆ ಕಡಿಮೆ ಮಾಡಲು ಯತ್ನಿಸಿ

6. ನಿಮ್ಮ ಸೆಲ್ ಫೋನ್ ಬಳಕೆ ಕಡಿಮೆ ಮಾಡಲು ಯತ್ನಿಸಿ

ಟೆಲಿಕಾಂ ಕಂಪನಿಗಳು ಹಲವಾರು ಉಚಿತ ಕಾಲಿಂಗ್, ಮೆಸೇಜ್ ಹಾಗೂ ಡೇಟಾ ಪ್ಲಾನ್‌ಗಳನ್ನು ನೀಡುತ್ತಿರುತ್ತವೆ. ಆದರೆ ಅವನ್ನು ಪಡೆದ ಅನೇಕರು ಸಂಪೂರ್ಣ ಪ್ಲಾನ್ ಬಳಸುವುದೇ ಇಲ್ಲ. ನಿಜ ಹೇಳಬೇಕೆಂದರೆ ಹಲವಾರು ಟೆಲಿಕಾಂ ಪ್ಲಾನ್‌ಗಳು ಹಣ ಉಳಿಸುವ ಪ್ಲಾನ್‌ಗಳಾಗಿರದೆ ಖರ್ಚು ಮಾಡುವ ಆಫರ್‌ಗಳೇ ಆಗಿರುತ್ತವೆ. ಇಲ್ಲೊಂದು ಸೀಕ್ರೆಟ್ ಅಡಗಿದೆ. ಯಾವುದೋ ಆಫರ್ ಮೂಲಕ ನಿಮಗೆ ಬೇಡವಾಗಿದ್ದನ್ನು ನೀವು ಬಳಸುವಂತೆ ಮಾಡುವುದು ಹಾಗೂ ಆ ಮೂಲಕ ಲಾಭ ಗಳಿಸುವುದು ಕಂಪನಿಗಳ ಹಿಡನ್ ಸೀಕ್ರೆಟ್ ಆಗಿರುತ್ತದೆ.

 

7. ಸೇಲ್ ಎಂಬ ಬೋರ್ಡ್ ನೋಡಿದಾಕ್ಷಣ ಕೊಳ್ಳಬೇಕೆಂದಿಲ್ಲ

7. ಸೇಲ್ ಎಂಬ ಬೋರ್ಡ್ ನೋಡಿದಾಕ್ಷಣ ಕೊಳ್ಳಬೇಕೆಂದಿಲ್ಲ

ಯಾವುದಾದರೂ ಅಂಗಡಿಯ ಮುಂದೆ ಸೇಲ್ ಎಂಬ ಬೋರ್ಡ್ ತಗುಲಿಸಿದ್ದನ್ನು ನೋಡಿದ ತಕ್ಷಣ ಅನೇಕರು ಒಳಗೆ ಹೊಕ್ಕು ಬಿಡುತ್ತಾರೆ. ಇಷ್ಟು ಪರ್ಸೆಂಟ್ ಕಡಿಮೆ ಸೇಲ್ ಎಂಬ ಬೋರ್ಡ್ ನೋಡಿ ಖರೀದಿಗೂ ಮುಂದಾಗುತ್ತಾರೆ. ಇದು ಗ್ರಾಹಕರನ್ನು ಮರಳು ಮಾಡುವ ಒಂದು ಟ್ರಿಕ್ ಅಷ್ಟೆ ಎಂಬುದು ಗೊತ್ತಿರಲಿ.

8. ಡ್ರೈಯರ್ ಅನ್ನು ಮಿತವಾಗಿ ಬಳಸಿ

8. ಡ್ರೈಯರ್ ಅನ್ನು ಮಿತವಾಗಿ ಬಳಸಿ

ಗೃಹೋಪಯೋಗಿ ಸಾಧನಗಳಲ್ಲಿ ಬಟ್ಟೆ ಒಣಗಿಸುವ ಡ್ರೈಯರ್ ಅತಿ ಹೆಚ್ಚು ಇಂಧನ ಕಬಳಿಸುವ ಉಪಕರಣವಾಗಿದೆ. ಬಟ್ಟೆ ಒಣಗಿಸಲು ಡ್ರೈಯರ್ ಬಳಸುವಿಕೆ ಖಂಡಿತವಾಗಿಯೂ ನಿಮ್ಮ ಎಲೆಕ್ಟ್ರಿಕ್ ಬಿಲ್ ಹೆಚ್ಚಿಸುತ್ತದೆ. ಇನ್ನು ಯಾವ್ಯಾವುದೋ ವಸ್ತುಗಳನ್ನು ಒಣಗಿಸಲು ಡ್ರೈಯರ್ ಬಳಕೆ ಇನ್ನೂ ಹೆಚ್ಚು ಖರ್ಚು ತರುತ್ತದೆ.

9. ಸಾಧ್ಯವಾದರೆ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಕೊಳ್ಳಿ

9. ಸಾಧ್ಯವಾದರೆ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಕೊಳ್ಳಿ

ಸೆಕೆಂಡ್ ವಸ್ತುಗಳನ್ನು ಕೊಳ್ಳುತ್ತೇನೆ ಎಂದಾಗ ನಿಮ್ಮ ಮಿತ್ರರು ಅಥವಾ ಸಂಬಂಧಿಕರು ನಿಮ್ಮ ನಿರ್ಧಾರವನ್ನು ಗೇಲಿ ಮಾಡುವುದೇ ಹೆಚ್ಚು. ಬಳಸಿದ ವಸ್ತುಗಳು ಹಾಳಾಗಿರುತ್ತವೆ, ಅವು ಯಾವ ಉಪಯೋಗಕ್ಕೂ ಬರಲಾರವು ಎಂದು ಹೇಳುತ್ತಾರೆ. ಆದರೆ ಎಲ್ಲ ಸಂದರ್ಭಗಳಲ್ಲಿ ವಿಷಯ ಹೀಗಿರಲಾರದು. ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಜಾಗವಿರದ ಕಾರಣಕ್ಕೂ ಅನೇಕರು ಸುಸ್ಥಿತಿಯಲ್ಲಿರುವ ತಮ್ಮ ವಸ್ತುಗಳನ್ನು ಮಾರುತ್ತಿರುತ್ತಾರೆ. ಅಡುಗೆ ಮನೆ ಉಪಕರಣಗಳು, ಫರ್ನಿಚರ್ ಸೇರಿದಂತೆ ಹಲವಾರು ವಸ್ತುಗಳು ಇಂಟರನೆಟ್‌ನಲ್ಲಿ ಸೇಲ್‌ಗೆ ಇರುತ್ತವೆ. ಇಂಥ ಸುಸ್ಥಿತಿಯಲ್ಲಿರುವ ವಸ್ತುಗಳನ್ನು ಕೊಳ್ಳುವುದು ತಪ್ಪೇನೂ ಅಲ್ಲ. ಕಡಿಮೆ ದರದಲ್ಲಿ ಸಿಗುವ ಇವು ನಿಮಗೆ ಸಾಕಷ್ಟು ಹಣದ ಉಳಿತಾಯ ಮಾಡಬಲ್ಲವು.

10. ಹೀಟರ್ ಕಡಿಮೆ ಬಳಸಿ

10. ಹೀಟರ್ ಕಡಿಮೆ ಬಳಸಿ

ಚಳಿಗಾಲದಲ್ಲಿ ಯಾವಾಗಲೂ ಹೀಟರ್ ಬಳಸುವುದು ಸಾಮಾನ್ಯ. ಆದರೆ ಚಳಿಗಾಲ ಕಡಿಮೆಯಾದರೂ ಹೀಟರ್ ಉರಿಸುವುದನ್ನು ಮಾತ್ರ ಅನೇಕರು ಬಿಡಲಾರರು. ಅದನ್ನೊಂದು ರೂಢಿಯಾಗಿ ಮಾಡಿಕೊಂಡುಬಿಟ್ಟಿರುತ್ತಾರೆ. ಹೀಗೆ ಮಾಡುವುದರಿಂದ ಸುಖಾಸುಮ್ಮನೆ ವಿದ್ಯುಚ್ಛಕ್ತಿ ವ್ಯಯ ಮಾಡಿದಂತಾಗುತ್ತದೆ. ಜೊತೆಗೆ ಕರೆಂಟ್ ಬಿಲ್ ಹೆಚ್ಚಾಗಿ ಜೇಬಿಗೆ ಭಾರವಾಗುತ್ತದೆ. ಇಂಥ ಅಭ್ಯಾಸ ನಿಮಗೂ ಇದ್ದಲ್ಲಿ ಆದಷ್ಟೂ ಇದನ್ನು ಕಡಿಮೆ ಮಾಡಿ.

11. ಕೆಟ್ಟು ಹೋದ ವಸ್ತುಗಳನ್ನು ಬಿಸಾಕದೆ ರಿಪೇರಿ ಮಾಡಲು ಯತ್ನಿಸಿ

11. ಕೆಟ್ಟು ಹೋದ ವಸ್ತುಗಳನ್ನು ಬಿಸಾಕದೆ ರಿಪೇರಿ ಮಾಡಲು ಯತ್ನಿಸಿ

ನಿಮ್ಮ ಕಂಪ್ಯೂಟರ್ ಮಾನಿಟರ್ ಅಥವಾ ಮೈಕ್ರೊವೇವ್ ಓವನ್ ಹೀಗೆ ಹಲವಾರು ಉಪಕರಣಗಳು ಒಮ್ಮೊಮ್ಮೆ ಕೆಟ್ಟು ಹೋಗಿ ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತವೆ. ಹೀಗಾದಾಗ ಸಿಟ್ಟಿನಿಂದ ಅವನ್ನು ಹೊರಗೆ ಹಾಕಬೇಡಿ. ಅದರ ಬದಲು ಚಿಕ್ಕ ಪುಟ್ಟ ವ್ಯತ್ಯಾಸವಾಗಿದ್ದಲ್ಲಿ ಅದನ್ನು ರಿಪೇರಿ ಮಾಡಿಸಲು ಯತ್ನಿಸಿ. ದುರಸ್ತಿಮಾಡಿಸಲು ಸಾಕಷ್ಟು ಖರ್ಚಾಗುತ್ತದೆ, ಅದರ ಬದಲು ಹೊಸದನ್ನೇ ಕೊಂಡರಾಯಿತು ಎಂಬುದು ಸರಿಯಲ್ಲ. ಹೊಸ ವಸ್ತು ಕೊಳ್ಳಲು ದೊಡ್ಡ ಮೊತ್ತದ ಹಣ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ವಸ್ತುಗಳನ್ನು ರಿಪೇರಿ ಮಾಡಿಸಿ ಮತ್ತೆ ಬಳಸುವುದರಿಂದ ಹಣ ಉಳಿತಾಯವಾಗುತ್ತದೆ.

12. ಶಾಪಿಂಗ್ ಮಾಡುವ ಮುನ್ನ ಪರಿಶೀಲಿಸಿ

12. ಶಾಪಿಂಗ್ ಮಾಡುವ ಮುನ್ನ ಪರಿಶೀಲಿಸಿ

ಸಾಮಾನ್ಯವಾಗಿ ವೀಕೆಂಡ್ ಅಂದರೆ ಶನಿವಾರ ಅಥವಾ ರವಿವಾರ ಎಲ್ಲರೂ ಮನೆಗೆ ಬೇಕಾದ ವಸ್ತುಗಳನ್ನು ಶಾಪಿಂಗ್ ಮಾಡುತ್ತಾರೆ. ಆದರೆ ಹೀಗೆ ಶಾಪಿಂಗ್ ಹೊರಡುವ ಮುನ್ನ ಮನೆಯಲ್ಲಿ ಯಾವ ವಸ್ತುಗಳು ಇನ್ನೂ ಸ್ಟಾಕ್ ಇವೆ ಹಾಗೂ ಯಾವ ವಸ್ತುಗಳು ಖಾಲಿಯಾಗಿವೆ ಎಂಬುದನ್ನು ನೋಡಿ. ಮನೆಯಲ್ಲಿ ಈಗಾಗಲೇ ಇರುವ ವಸ್ತುಗಳನ್ನು ಮತ್ತೆ ತಂದು ಸುರಿಯುವುದು ಜಾಣತನವಲ್ಲ. ಇದು ಸುಮ್ಮನೆ ಖರ್ಚಿಗೆ ದಾರಿ ಮಾಡಿದಂತೆ. ಯಾವಾಗಲೂ ಅವಶ್ಯಕವಿರುವಷ್ಟೆ ವಸ್ತುಗಳನ್ನು ಶಾಪಿಂಗ್ ಮಾಡಿ ಮಿತವ್ಯಯದ ಜೀವನ ನಡೆಸಿ.

13. ಕಿಟಕಿಗಳನ್ನು ಸದಾ ತೆರೆದಿಡಿ

13. ಕಿಟಕಿಗಳನ್ನು ಸದಾ ತೆರೆದಿಡಿ

ವಾತಾವರಣಕ್ಕೆ ತಕ್ಕಂತೆ ಯಾವಾಗಲೂ ಏರ್ ಕಂಡೀಶನ್ ರೂಮನಲ್ಲಿ ಇರುವುದು ಒಂದು ಸುಖಾನುಭವವೇ ಆಗಿದೆ. ಆದರೆ ಬೇಸಿಗೆ ಕಾಲದಲ್ಲೂ ಏರ್ ಕಂಡೀಶನ್ ಮೇಲೆ ಅವಲಂಬಿಸಿರುವುದು ಅಷ್ಟು ಸೂಕ್ತವಲ್ಲ. ಮನೆಯ ರೂಂಗಳಿಗೆ ಕಿಟಕಿಗಳಿದ್ದಲ್ಲಿ ಅವನ್ನು ತೆರೆದು ನೈಸರ್ಗಿಕವಾಗಿ ಗಾಳಿ, ಬೆಳಕು ಬರುವಂತೆ ಮಾಡಿ. ಇದರಿಂದ ಏರ್ ಕಂಡಿಶನ್ ಬಳಕೆಯನ್ನು ಕಡಿಮೆ ಮಾಡಬಹುದು. ಜೊತೆಗೆ ಕರೆಂಟ್ ಬಿಲ್ ಸಾಕಷ್ಟು ಉಳಿತಾಯವಾಗುತ್ತದೆ.

14. ವಾಶಿಂಗ್ ಮಶೀನ್ ಬಳಕೆ ತಿಳಿದುಕೊಳ್ಳಿ

14. ವಾಶಿಂಗ್ ಮಶೀನ್ ಬಳಕೆ ತಿಳಿದುಕೊಳ್ಳಿ

ಮನೆಯಲ್ಲಿರುವ ಹಲವಾರು ಎಲೆಕ್ಟ್ರಿಕ್ ವಸ್ತುಗಳನ್ನು ಯಾವ ರೀತಿ ಬಳಸಬೇಕೆಂಬುದು ಅನೇಕರಿಗೆ ತಿಳಿದೇ ಇರುವುದಿಲ್ಲ. ಅದರಲ್ಲೂ ವಾಶಿಂಗ್ ಮಶೀನ್ ಬಳಕೆಯ ಬಗ್ಗೆ ಸೂಕ್ತ ಜ್ಞಾನವಿರುವುದಿಲ್ಲ. ಸಾಮಾನ್ಯವಾಗಿ ಅಟೊಮ್ಯಾಟಿಕ್ ಮೋಡ್‌ನಲ್ಲಿಟ್ಟು ವಾಶಿಂಗ್ ಮಶೀನ್ ಅನ್ನು ಬಳಸುತ್ತಾರೆ. ಆದರೆ ವಾತಾವರಣ ಚಳಿಯಾಗಿದೆಯಾ ಅಥವಾ ಬೇಸಿಗೆ ಇದೆಯಾ ಎಂಬ ಬಗ್ಗೆ ತಿಳಿದುಕೊಳ್ಳುವುದೇ ಇಲ್ಲ. ಜೊತೆಗೆ ಎಷ್ಟು ಬಟ್ಟೆಗೆ ಎಷ್ಟು ಡಿಟರ್ಜೆಂಟ್ ಬಳಸಬೇಕು ಎಂಬ ಬಗ್ಗೆಯೂ ಸೂಕ್ತ ತಿಳುವಳಿಕೆ ಇರುವುದಿಲ್ಲ. ಆದ್ದರಿಂದ ಉಪಕರಣ ಬಳಸಲಾರಂಭಿಸುವ ಮುನ್ನ ಅದರ ಜೊತೆಗೆ ನೀಡಿರುವ ಮ್ಯಾನ್ಯುಯಲ್ ಓದಿ ಬಳಕೆಯ ಸೂಕ್ತ ವಿಧಾನ ತಿಳಿದುಕೊಳ್ಳಿ. ಇದರಿಂದ ಸಾಕಷ್ಟು ಮಿತವ್ಯಯಕರವಾಗಿ ಉಪಕರಣಗಳನ್ನು ಬಳಸಲು ಸಾಧ್ಯವಾಗುತ್ತದೆ.

15. ಸಾಲಗಳನ್ನು ತೀರಿಸಿ

15. ಸಾಲಗಳನ್ನು ತೀರಿಸಿ

ಹಲವಾರು ಸಾಲಗಳನ್ನು ಪಡೆದು ಅವಕ್ಕೆ ಪ್ರತಿ ತಿಂಗಳು ಇಎಂಐ ಪಾವತಿಸುತ್ತ ಹೋಗುವುದು ಒಳ್ಳೆಯದಲ್ಲ. ಆದಾಯದ ಬಹುಭಾಗವನ್ನು ತಿಂದು ಹಾಕುವ ಈ ಇಎಂಐಗಳು ತಿಂಗಳ ಕೊನೆಗೆ ನಿಮ್ಮ ಜೇಬು ಖಾಲಿಯಾಗುವಂತೆ ಮಾಡುತ್ತವೆ. ಹೀಗಾಗಿ ಅವಶ್ಯಕವಿರುವಷ್ಟೆ ಸಾಲ ಮಾಡಿ. ಮನೆ ಅಥವಾ ಕಾರು ಕೊಳ್ಳಲು ಸಾಲ ಮಾಡಿದರೆ ಓಕೆ. ಆದರೆ ಶೋಕಿಗಾಗಿ ಯಾವುದೋ ಗ್ಯಾಜೆಟ್ ಅಥವಾ ವಾಹನ ಕೊಳ್ಳುವುದು ಖಂಡಿತ ಸರಿಯಲ್ಲ. ಇನ್ನು ಈಗಾಗಲೇ ಸಾಲಗಳು ಹೆಚ್ಚಾಗಿದ್ದರೆ ಆದಷ್ಟೂ ಬೇಗ ಅವುಗಳನ್ನು ತೀರಿಸುವತ್ತ ಗಮನ ಹರಿಸಿ. ಹೀಗೆ ಮಾಡಿದಲ್ಲಿ ಉಳಿತಾಯದ ದಾರಿ ತೆರೆದುಕೊಳ್ಳುತ್ತವೆ.

16. ತಾಜಾ ಆಹಾರ ಪದಾರ್ಥಗಳನ್ನು ಖರೀದಿಸಿ

16. ತಾಜಾ ಆಹಾರ ಪದಾರ್ಥಗಳನ್ನು ಖರೀದಿಸಿ

ಬೇಗ ಬೆಳಗ್ಗೆ ಎದ್ದು ಮಾರ್ಕೆಟ್‌ಗೆ ಹೋಗಿ ತಾಜಾ ತರಕಾರಿ ಹಾಗೂ ಇತರ ಪದಾರ್ಥಗಳನ್ನು ಖರೀದಿಸಿ ತರುವುದು ಉತ್ತಮವಾಗಿದೆ. ಇದರಿಂದ ಹಣದ ಉಳಿತಾಯವಾಗುತ್ತದೆ ಹಾಗೂ ತಾಜಾ ಪದಾರ್ಥಗಳು ಆರೋಗ್ಯಕ್ಕೂ ಸಹಕಾರಿ. ವಾರಕ್ಕೆ ಬೇಕಾಗುವಷ್ಟು ತರಕಾರಿಗಳನ್ನು ಒಮ್ಮೆಲೇ ತಂದು ಫ್ರಿಜ್‌ನಲ್ಲಿ ಇಟ್ಟರೆ ಅಷ್ಟು ಹೆಚ್ಚು ಪ್ರಮಾಣದ ವಿದ್ಯುತ್ ವ್ಯಯವಾಗುತ್ತದೆ.

17. ಆನ್ಲೈನ್ ಶಾಪಿಂಗ್ ಮಾಡಿ

17. ಆನ್ಲೈನ್ ಶಾಪಿಂಗ್ ಮಾಡಿ

ಆಹಾರ ಪದಾರ್ಥಗಳು ಹಾಗೂ ಇತರೆ ದಿನನಿತ್ಯ ವಸ್ತುಗಳನ್ನು ಹೊರತುಪಡಿಸಿ ಇತರ ವಸ್ತುಗಳನ್ನು ಆನ್ಲೈನ್ ಮೂಲಕ ಖರೀದಿಸುವುದು ಬೆಸ್ಟ್. ಆನ್ಲೈನ್‌ನಲ್ಲಿ ಸಾಕಷ್ಟು ಆಫರ್‌ಗಳಿದ್ದು ಹಣ ಉಳಿತಾಯ ಮಾಡಬಹುದಾಗಿದೆ.

18. ಬಳಸದ ವಿದ್ಯುಚ್ಛಕ್ತಿ ಪ್ಲಗ್ ತೆಗೆದಿಡಿ

18. ಬಳಸದ ವಿದ್ಯುಚ್ಛಕ್ತಿ ಪ್ಲಗ್ ತೆಗೆದಿಡಿ

ಕಂಪ್ಯೂಟರ್ ಅಥವಾ ಮೊಬೈಲ್‌ಗಳನ್ನು ಚಾರ್ಜಿಂಗ್ ಹಾಕಿದಾಗ ಅವು ಫುಲ್ ಚಾರ್ಜ್ ಆದೊಡನೆ ಪ್ಲಗ್ ತೆಗೆದುಬಿಡಿ. ಅದನ್ನು ಹಾಗೆಯೇ ಇಟ್ಟಲ್ಲಿ ಸುಮ್ಮನೆ ವಿದ್ಯುಚ್ಛಕ್ತಿ ವ್ಯಯವಾಗುತ್ತದೆ.

19. ವಸ್ತುಗಳನ್ನು ಕೊಳ್ಳುವ ಮುನ್ನ ಬೆಲೆ ಪರೀಕ್ಷಿಸಿ

19. ವಸ್ತುಗಳನ್ನು ಕೊಳ್ಳುವ ಮುನ್ನ ಬೆಲೆ ಪರೀಕ್ಷಿಸಿ

ಯಾವುದೇ ವಸ್ತು ಕೊಳ್ಳುವ ಮುನ್ನ ಮಾರ್ಕೆಟ್‌ನಲ್ಲಿ ಅಥವಾ ಆನ್ಲೈನ್ ಮೂಲಕ ಬೆಲೆಗಳನ್ನು ಪರೀಕ್ಷಿಸಿ. ಕಡಿಮೆ ದರದಲ್ಲಿ ಸಿಗುವ ಉತ್ತಮ ಗುಣಮಟ್ಟದ ವಸ್ತುಗಳನ್ನೇ ಆಯ್ಕೆ ಮಾಡಿಕೊಳ್ಳಿ.

20. ಮಕ್ಕಳಿಗೂ ಉಳಿತಾಯದ ಮಹತ್ವ ತಿಳಿಸಿಕೊಡಿ

20. ಮಕ್ಕಳಿಗೂ ಉಳಿತಾಯದ ಮಹತ್ವ ತಿಳಿಸಿಕೊಡಿ

ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದಲ್ಲಿ ಅವರಿಗೂ ಉಳಿತಾಯದ ಪಾಠ ಹೇಳಿಕೊಡಲಾರಂಭಿಸಿ. ಕನಿಷ್ಠ ವಾರಕ್ಕೊಮ್ಮೆಯಾದರೂ ಒಂದು ವಿಷಯ ತಿಳಿಸುತ್ತ ಅವರಲ್ಲಿ ಉಳಿತಾಯದ ಪ್ರವೃತ್ತಿ ಬೆಳೆಸಲು ಪ್ರಯತ್ನಿಸಿ. ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಮಿತವ್ಯಯದ ಬಗ್ಗೆ ತಿಳಿಸುವುದರಿಂದ ಅವರು ದೊಡ್ಡವರಾದಾಗ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

English summary

20 Tricks to Save Money at Home

this don’t just mean saving a percentage of your earnings every month. But stopping overspending on things or services that aren’t necessary or have them without spending much.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X