For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ಮೂಲಕ ಕೋಟ್ಯಾಧಿಪತಿಯಾಗುವುದು ಹೇಗೆ? ಇಲ್ಲಿ ನೋಡಿ..

ಜೀವನದಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಈ ಗುರಿ ತಲುಪಲು ಏನು ಮಾಡಬೇಕು, ಆಯ್ಕೆ ಮಾಡಬೇಕಾದ ಮಾರ್ಗಗಳೇನು ಎಂಬುದರ ಬಗ್ಗೆ ಹೆಚ್ಚಿನವರಿಗೆ ಗೊಂದಲವಿರುತ್ತದೆ.

|

ಜೀವನದಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಈ ಗುರಿ ತಲುಪಲು ಏನು ಮಾಡಬೇಕು, ಆಯ್ಕೆ ಮಾಡಬೇಕಾದ ಮಾರ್ಗಗಳೇನು ಎಂಬುದರ ಬಗ್ಗೆ ಹೆಚ್ಚಿನವರಿಗೆ ಗೊಂದಲವಿರುತ್ತದೆ. ಜೀವನದಲ್ಲಿ ಕೋಟ್ಯಾಧಿಪತಿಯಾಗಬೇಕು ಎನ್ನುವವರಿಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ನಿಸ್ಸಂದೇಹವಾಗಿ ಹೇಳುವುದಾದರೆ, ದೀರ್ಘಾವಧಿಯಲ್ಲಿ ಸಂಪತ್ತನ್ನು ಸೃಷ್ಟಿಸಲು ಈಕ್ವಿಟಿ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಈಕ್ವಿಟಿ ಹೂಡಿಕೆ ಎಂಬುದು ಪ್ರತಿಯೊಬ್ಬರ ಕಪ್ನಲ್ಲಿರುವ ಚಹಾ ಅಲ್ಲ!

ಯಾರಿಂದ ಅಲ್ಪಾವಧಿಯ ಚಂಚಲತೆಯನ್ನು ಎದುರಿಸಲು ಸಾಧ್ಯವಿಲ್ಲವೋ ಅಂತವರು ಇಂತಹ ಹೂಡಿಕೆಗಳಿಂದ ದೂರವಿರುವುದೇ ಉತ್ತಮ. ಈಕ್ವಿಟಿ ಮಾರುಕಟ್ಟೆಗಳಲ್ಲಿನ ಇತ್ತೀಚಿನ ಚಂಚಲತೆಯನ್ನು ಗಮನಿಸಿರುವ ಚಿಲ್ಲರೆ ಹೂಡಿಕೆದಾರರು ನಿವೃತ್ತಿಯ ಕಾರ್ಪಸ್ ಅನ್ನು ಹೆಚ್ಚಿಸಲು ಯೋಜಿಸುತ್ತಿದ್ದು, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ನಂತಹ ನಿಶ್ಚಿತ ಆದಾಯ ಕೊಡುವ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ

ಪಿಪಿಎಫ್ ಪ್ರಯೋಜನವೇನು?

ಪಿಪಿಎಫ್ ಪ್ರಯೋಜನವೇನು?

- ಪಿಪಿಎಫ್ ಪ್ರತಿ ವರ್ಷವೂ ಸ್ಥಿರ ಬಡ್ಡಿಯನ್ನು ಒದಗಿಸುತ್ತದೆ.
- ಪಿಪಿಎಫ್ ವಿವಿಧ ಹಂತಗಳಲ್ಲಿ ತೆರಿಗೆ ಪ್ರಯೋಜನವನ್ನು ಒದಗಿಸುತ್ತದೆ.
- ಪಿಪಿಎಫ್ ಸರಕಾರದ ಬೆಂಬಲದೊಂದಿಗೆ ನಿರ್ವಹಿಸಲ್ಪಡುವುದರಿಂದ ಸುರಕ್ಷಿತ ಹೂಡಿಕೆ ವಿಧಾನವೆಂದು ಪರಿಗಣಿಸಲಾಗಿದೆ.
- ಪಿಪಿಎಫ್ ಬಡ್ಡಿ ಮೇಲೆ ಗಳಿಸಿದ ಆದಾಯ ಹಾಗು ಪಿಪಿಎಫ್ ಮೆಚ್ಯುರಿಟಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ.
- ವರ್ಷಕ್ಕೆ ಒಂದು ಇಪಿಎಫ್ ಖಾತೆಯಲ್ಲಿ ರೂ. 1.50 ಲಕ್ಷದವರೆಗೆ ಹೂಡಿಕೆ ಮಾಡಬಹುದು.

ಪಿಪಿಎಫ್ ಪ್ರಯೋಜನವೇನು?

ಪಿಪಿಎಫ್ ಪ್ರಯೋಜನವೇನು?

- ಪಿಪಿಎಫ್ ಪ್ರತಿ ವರ್ಷವೂ ಸ್ಥಿರ ಬಡ್ಡಿಯನ್ನು ಒದಗಿಸುತ್ತದೆ.
- ಪಿಪಿಎಫ್ ವಿವಿಧ ಹಂತಗಳಲ್ಲಿ ತೆರಿಗೆ ಪ್ರಯೋಜನವನ್ನು ಒದಗಿಸುತ್ತದೆ.
- ಪಿಪಿಎಫ್ ಸರಕಾರದ ಬೆಂಬಲದೊಂದಿಗೆ ನಿರ್ವಹಿಸಲ್ಪಡುವುದರಿಂದ ಸುರಕ್ಷಿತ ಹೂಡಿಕೆ ವಿಧಾನವೆಂದು ಪರಿಗಣಿಸಲಾಗಿದೆ.
- ಪಿಪಿಎಫ್ ಬಡ್ಡಿ ಮೇಲೆ ಗಳಿಸಿದ ಆದಾಯ ಹಾಗು ಪಿಪಿಎಫ್ ಮೆಚ್ಯುರಿಟಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ.
- ವರ್ಷಕ್ಕೆ ಒಂದು ಇಪಿಎಫ್ ಖಾತೆಯಲ್ಲಿ ರೂ. 1.50 ಲಕ್ಷದವರೆಗೆ ಹೂಡಿಕೆ ಮಾಡಬಹುದು.

ಪಿಪಿಎಫ್ ಬಡ್ಡಿದರ

ಪಿಪಿಎಫ್ ಬಡ್ಡಿದರ

ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿದರವನ್ನು ಪರಿಷ್ಕರಿಸುತ್ತದೆ. ಪ್ರಸಕ್ತ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ, ಪಿಪಿಎಫ್ ಬಡ್ಡಿಯ ದರವನ್ನು 8% ಕ್ಕೆ ನಿಗದಿ ಮಾಡಲಾಗಿದೆ.
ಒಂದು ಪಿಪಿಎಫ್ ಖಾತೆಯು 15 ವರ್ಷಗಳ ಅವಧಿಯದ್ದಾಗಿರುತ್ತದೆ. ಒಂದು ವೇಳೆ ನೀವು ಖಾತೆಯನ್ನು ವಿಸ್ತರಿಸಲು ಬಯಸಿದರೆ ಅರ್ಜಿಯನ್ನು ನೀಡುವ ಮೂಲಕ 5 ವರ್ಷಗಳವರೆಗೆ ವಿಸ್ತರಿಸಬಹುದು.

ಸಿಗುವ ಸೌಲಭ್ಯಗಳು

ಸಿಗುವ ಸೌಲಭ್ಯಗಳು

ತೆರಿಗೆ ವಿನಾಯಿತಿ ಜೊತೆಗೆ ಪಿಪಿಎಫ್ ಮೂಲಕ ಸಾಲ ಮತ್ತು ಭಾಗಶಃ ವಾಪಸಾತಿ ಲಾಭಗಳು ಸಹ ಲಭ್ಯವಿವೆ. PPF ಖಾತೆದಾರರು ಖಾತೆ ತೆರೆದ ಮೂರನೇ ಮತ್ತು ಆರನೇ ಹಣಕಾಸು ವರ್ಷದ ನಡುವೆ ಸಾಲವನ್ನು ಪಡೆಯಬಹುದು. ಖಾತೆದಾರರು ಪಿಪಿಎಫ್ ಖಾತೆಯಲ್ಲಿ ಗರಿಷ್ಠ ಸಾಲವನ್ನು ಪಡೆಯಬಹುದು.
ಆರನೇ ಹಣಕಾಸು ವರ್ಷ ಅಥವಾ ಏಳನೇ ಹಣಕಾಸು ವರ್ಷದ ಆರಂಭದಿಂದ ಪಿಪಿಎಫ್ ಖಾತೆದಾರರು ತೆರಿಗೆ ಮುಕ್ತವಾಗಿರುವ ಭಾಗಶಃ ಹಿಂಪಡೆಯುವಿಕೆ ಪಡೆಯಬಹುದು.

ಕೋಟ್ಯಾಧಿಪತಿಯಾಗಲು ಏನು ಮಾಡಬೇಕು?

ಕೋಟ್ಯಾಧಿಪತಿಯಾಗಲು ಏನು ಮಾಡಬೇಕು?

ಈ ಮೇಲಿನ ಎಲ್ಲಾ ಪ್ರಯೋಜನೆ ಹಾಗು ಸೌಲಭ್ಯಗಳೊಂದಿಗೆ, ದೀರ್ಘಕಾಲದವರೆಗೆ ಹೂಡಿಕೆ ಮಾಡಲು ಯೋಗ್ಯವಾಗಿದೆ. ಪಿಪಿಎಫ್ ನಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ನೀವು ಕೋಟ್ಯಾಧಿಪತಿಯಾಗಬಹುದು.
ಪಿಪಿಎಫ್ ಖಾತೆ ತೆರೆದ ಆರಂಭದ ವರ್ಷದಿಂದ 24 ವರ್ಷಗಳವರೆಗೆ ರೂ. 1.5 ಲಕ್ಷ ಹೂಡಿಕೆ ಮಾಡುತ್ತಾ ಬಂದರೆ ರೂ. 1.08 ಕೋಟಿ ಮೊತ್ತ ಸಂಗ್ರಹಿಸಬಹುದು. ಇದನ್ನು ಶೇ. ೮ರಷ್ಟು ಬಡ್ಡಿದರರ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ. ಈ ಮೇಲಿನ ಟೇಬಲ್ ನಲ್ಲಿ ಮಾಹಿತಿ ನಿಡಲಾಗಿದೆ.

ಪಿಪಿಎಫ್ ಮೆಚುರಿಟಿ ನಂತರ

ಪಿಪಿಎಫ್ ಮೆಚುರಿಟಿ ನಂತರ

1. ಖಾತೆಯು ತೆರೆದ ವರ್ಷದಿಂದ 15 ವರ್ಷಗಳ ಮುಕ್ತಾಯದ ನಂತರ ಪಿಪಿಎಫ್ ಖಾತೆಯನ್ನು ಮುಚ್ಚಬಹುದು.
2. ಮೆಚ್ಯೂರಿಟಿ ನಂತರ ಚಂದಾದಾರನು ತನ್ನ / ಅವಳ ಪಿಪಿಎಫ್ ಖಾತೆಯನ್ನು ಮಿತಿ ಇಲ್ಲದೆ ಯಾವುದೇ ಅವಧಿಯವರೆಗೆ ಯಾವುದೇ ಠೇವಣಿಗಳನ್ನು ಮಾಡದೆಯೇ ಉಳಿಸಿಕೊಳ್ಳಬಹುದು.
3. ಖಾತೆಯಲ್ಲಿನ ಬ್ಯಾಲೆನ್ಸ್ ಮುಚ್ಚುವವರೆಗೆ ಬಡ್ಡಿಯನ್ನು ಪಡೆಯಬಹುದು.
4. ಚಂದಾದಾರರು ಪ್ರತಿ ಹಣಕಾಸು ವರ್ಷದಲ್ಲಿ ಯಾವುದೇ ಪ್ರಮಾಣದ ವಿತ್ ಡ್ರಾ ಮೊತ್ತವನ್ನು ಹಿಂತೆಗೆದುಕೊಳ್ಳಬಹುದು. ಪಿಪಿಎಫ್ ಖಾತೆ ಮೆಚುರಿಟಿ ನಂತರ ವಿಸ್ತರಣೆ: ತಿಳಿದುಕೊಳ್ಳಲೇಬೇಕಾದ 10 ನಿಯಮ

ಪಿಪಿಎಫ್ ಖಾತೆ ವಿಸ್ತರಣೆ

ಪಿಪಿಎಫ್ ಖಾತೆ ವಿಸ್ತರಣೆ

- ಪಿಪಿಎಫ್ ಖಾತೆ ಮೆಚುರಿಟಿ ನಂತರ ಚಂದಾದಾರರು ಹೆಚ್ಚಿನ ಕೊಡುಗೆಗಳನ್ನು ಪಡೆಯಲು ಬಯಸಿದರೆ, ಅದನ್ನು ಐದು ವರ್ಷಗಳ ಕಾಲ ವಿಸ್ತರಿಸಬಹುದು.
-ನೀವು ಪಿಪಿಎಫ್ ಖಾತೆಯನ್ನು ಬಾರಿ ಬೇಕಾದರೂ ವಿಸ್ತರಿಸಬಹುದು. ಅದಕ್ಕ ಮಿತಿ ಇಲ್ಲ.
- ಆದರೆ ಅವಧಿ ಮುಗಿದ ನಂತರ, ಅವನು / ಅವಳು ಖಾತೆಯ ಮೆಚುರಿಟಿ ದಿನಾಂಕದಿಂದ ಒಂದು ವರ್ಷದಲ್ಲಿ ಫಾರ್ಮ್ ಎಚ್ ಅನ್ನು ಸಲ್ಲಿಸಬೇಕಾಗುತ್ತದೆ.
- ಪಿಪಿಎಫ್ ಖಾತೆಯ ನೂತನ ಠೇವಣಿಗಳು ಯಾವುದೇ ಬಡ್ಡಿ ಗಳಿಸುವುದಿಲ್ಲ.
-ಅಲ್ಲದೆ, ಈ ಸಂದರ್ಭದಲ್ಲಿ, ತೆರಿಗೆ ಇಲಾಖೆ ಸೆಕ್ಷನ್ 80 ಸಿ ಅಡಿಯಲ್ಲಿರುವ ಹೊಸ ಠೇವಣಿಗಳು ಕಡಿತಕ್ಕೆ ಅರ್ಹವಾಗಿರುವುದಿಲ್ಲ. ಪಿಪಿಎಫ್ ಖಾತೆ ಬಗ್ಗೆ ನಿಮಗೆ ಗೊತ್ತಿರದ ಹೊಸ ನಿಯಮಗಳು

English summary

Here's how to become crorepati through PPF (Public Provident Fund)?

It may be noted that the government fixes the interest rate on PPF every quarter. For the current January-March quarter, PPF interest rate has been fixed at 8%.
Story first published: Friday, February 15, 2019, 11:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X