For Quick Alerts
ALLOW NOTIFICATIONS  
For Daily Alerts

ಕೇವಲ 500 ಹೂಡಿಕೆ ಮಾಡಬಹುದಾದ ಬೆಸ್ಟ್ ಸಿಪ್ ಪ್ಲಾನ್

ಪ್ರತಿ ತಿಂಗಳು ನಮಗೆ ಗೊತ್ತಿಲ್ಲದೆ ಎಷ್ಟೋ ಹಣ ವ್ಯರ್ಥವಾಗುತ್ತಿರುತ್ತದೆ. ಉಳಿತಾಯ ಮಾಡಬೇಕು, ಹೂಡಿಕೆ ಮಾಡಬೇಕು ಎನ್ನುವ ತುಂಬಾ ಜನರು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವಿಫಲವಾಗಿರುತ್ತಾರೆ.

|

ಪ್ರತಿ ತಿಂಗಳು ನಮಗೆ ಗೊತ್ತಿಲ್ಲದೆ ಎಷ್ಟೋ ಹಣ ವ್ಯರ್ಥವಾಗುತ್ತಿರುತ್ತದೆ. ಉಳಿತಾಯ ಮಾಡಬೇಕು, ಹೂಡಿಕೆ ಮಾಡಬೇಕು ಎನ್ನುವ ತುಂಬಾ ಜನರು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವಿಫಲವಾಗಿರುತ್ತಾರೆ. ತಿಂಗಳಿಗೆ ಸಣ್ಣ ಪುಟ್ಟ ಕಾರಣಕ್ಕೆ ಐನೂರು, ಸಾವಿರ ರೂಪಾಯಿ ಖರ್ಚು ಮಾಡುವುದು ಅತ್ಯಂತ ಸುಲಭ. ಆದರೆ ಅದೇ 500 ರೂಪಾಯಿಗಳನ್ನು ಹೂಡಿಕೆ ಮಾಡುವುದು ಇಲ್ಲವೇ ಉಳಿತಾಯ ಮಾಡುವುದು ಮಾತ್ರ ಕಷ್ಟ!

ಪ್ರತಿ ತಿಂಗಳು ನೀವು ಸಿಪ್ (ಮ್ಯೂಚುವಲ್ ಫಂಡ್) ಗಳಲ್ಲಿ ಕೇವಲ 500 ರೂ.ಗಳನ್ನು ಹೂಡಿಕೆ ಮಾಡಬಹುದು. ಹಾಗೇ ಸುಮ್ಮನೆ ತಿಂಗಳಿಗೆ 500 ರೂಪಾಯಿ ಉಳಿಕೆ ಮಾಡಿದರೆ ವರ್ಷಕ್ಕೆ ೧೨೦೦ ರೂಪಾಯಿ ಹಾಗೂ 20 ವರ್ಷಕ್ಕೆ 1.20 ಲಕ್ಷ ರೂಪಾಯಿಗಳಾಗುತ್ತದೆ ಎಂಬುದನ್ನು ಬಹುತೇಕ ಜನ ಅರ್ಥ ಮಾಡಿಕೊಳ್ಳೊದಿಲ್ಲ! ತಿಂಗಳಿಗೆ ಕೇವಲ 500 ಹೂಡಿಕೆ ಮಾಡಿ ಶ್ರೀಮಂತರಾಗುವ 5 ವಿಧಾನ

ಹಾಗಿದ್ದರೆ ಯಾವ ಸಿಪ್ ಗಳಲ್ಲಿ ಹೂಡಿಕೆ ಮಾಡಬೇಕು, ಯಾವುದು ಅತ್ಯುತ್ತಮ ರೇಟಿಂಗ್ ಹೊಂದಿದೆ, ದೀರ್ಘಾವಧಿ - ಅಲ್ಪಾವಧಿಗೆ ಯಾವ ಹೂಡಿಕೆ ಉತ್ತಮ ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಮೂಡುವುದು ಸಹಜ ಅಲ್ಲವೇ?
ಪ್ರತಿ ತಿಂಗಳು ಕೇವಲ 500 ರೂಪಾಯಿ ಹೂಡಿಕೆ ಮಾಡಬಹುದು ಕೆಲ ಪ್ರಮುಖ ಸಿಪ್ (SIPs) ಆಯ್ಕೆಗಳನ್ನು ನೀಡಲಾಗಿದೆ..

ಡಿಎಸ್ಪಿ ಬ್ಲ್ಯಾಕ್ ರಾಕ್ ಸ್ಮಾಲ್ ಕ್ಯಾಪ್ ಫಂಡ್ (DSP Blackrock Smallcap Fund)

ಡಿಎಸ್ಪಿ ಬ್ಲ್ಯಾಕ್ ರಾಕ್ ಸ್ಮಾಲ್ ಕ್ಯಾಪ್ ಫಂಡ್ (DSP Blackrock Smallcap Fund)

ಕಳೆದ ವರ್ಷದ ಆರಂಭದಲ್ಲಿ ನೀಡಿದ ಉತ್ತಮವಾದ ಆದಾಯ ಕಾರಣ ಇದು ನೆಚ್ಚಿನ ಆಯ್ಕೆಯಾಗಬಹುದು. ವಾಸ್ತವವಾಗಿ, ಫಂಡ್ ಕಳೆದ ಒಂದು ವರ್ಷದಲ್ಲಿ 19 ಪ್ರತಿಶತದಷ್ಟು ಋಣಾತ್ಮಕ ಆದಾಯವನ್ನು ಸೃಷ್ಟಿಸಿದೆ.

ಲಾರ್ಜ್ ಕ್ಯಾಪ್ ಫಂಡ್ ಗಿಂತ ಸ್ಮಾಲ್ ಕ್ಯಾಪ್ ಫಂಡ್ ಗಿಂತ ಹೆಚ್ಚು ಅಪಾಯಕಾರಿ.
ಕಳೆದ ಮೂರು ವರ್ಷಗಳಲ್ಲಿ ಡಿಎಸ್ಪಿ ಬ್ಲ್ಯಾಕ್ ರಾಕ್ ಮೈಕ್ರೋ ಕ್ಯಾಪ್ ಫಂಡ್ 27 ಪ್ರತಿಶತದಷ್ಟು ಆದಾಯ ಸೃಷ್ಟಿಸಿದೆ. ನೀವು ರೂ. 500 ಸಣ್ಣ ಮೊತ್ತದೊಂದಿಗೆ ಈ SIP ಲ್ಲಿ ಹೂಡಿಕೆ ಮಾಡಬಹುದು.

ಎಚ್ಡಿಎಫ್ಸಿ ಸ್ಮಾಲ್ ಕ್ಯಾಪ್ ಫಂಡ್ - ನಿಯಮಿತ ಯೋಜನೆ

ಎಚ್ಡಿಎಫ್ಸಿ ಸ್ಮಾಲ್ ಕ್ಯಾಪ್ ಫಂಡ್ - ನಿಯಮಿತ ಯೋಜನೆ

ಇದು ಖರೀದಿ ಮಾಡಬಹುದಾದ ಮತ್ತೊಂದು ಸ್ಮಾಲ್ ಕ್ಯಾಪ್ ಫಂಡ್. ಕಳೆದ ವರ್ಷ ಋಣಾತ್ಮಕ ಆದಾಯ ಕಂಡಿದ್ದರೂ, ಈ ಬಾರಿ ಉತ್ತಮ ಆದಾಯ ಹೊಂದುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ ಕಡಿಮೆ ಪ್ರಮಾಣದ ನಿವ್ವಳ ಆಸ್ತಿ ಮೌಲ್ಯದಲ್ಲಿ ನಫಂಡ್ ಪಡೆಯುತ್ತಿರಿ.
ನೀವು ಈ ಫಂಡ್ ನಲ್ಲಿ ಸಣ್ಣ ಪ್ರಮಾಣದ 500 ರೂಪಾಯಿಗಳೊಂದಿಗೆ ಹೂಡಿಕೆ ಆರಂಭಿಸಬಹುದು. ಸ್ಮಾಲ್ ಕ್ಯಾಪ್ ಫಂಡ್ ಅಪಾಯಕಾರಿಯಾಗಿರುವುದರಿಂದ ಲಾರ್ಜ್ ಕ್ಯಾಪ್ ಫಂಡ್ ಅನ್ನು ಆರಿಸಿಕೊಳ್ಳಬಹುದು. ಸಂಪತ್ತು ಹೆಚ್ಚಿಸಲು 10 ಪ್ರಕಾರದ ಈಕ್ವಿಟಿ ಮ್ಯೂಚುವಲ್ ಫಂಡ್ ಮಾಹಿತಿ ಇಲ್ಲಿದೆ..

ರಿಲಯನ್ಸ್ ಲಾರ್ಜ್ ಕ್ಯಾಪ್ ಫಂಡ್
 

ರಿಲಯನ್ಸ್ ಲಾರ್ಜ್ ಕ್ಯಾಪ್ ಫಂಡ್

ರಿಲಯನ್ಸ್ ಲಾರ್ಜ್ ಕ್ಯಾಪ್ ಫಂಡ್ ನಲ್ಲಿ ಸಣ್ಣ ಮೊತ್ತದ ಸಿಪ್ ರೂ. 100 ಹೂಡಿಕೆ ಮಾಡಬಹುದು. ಆದರೆ, ಆರಂಭಿಕ ಹೂಡಿಕೆಯು ರೂ 5,000 ಅಗತ್ಯವಿದೆ. ರಿಲಯನ್ಸ್ ಲಾರ್ಜ್ ಕ್ಯಾಪ್ ಫಂಡ್ ಕಳೆದ ಒಂದು ವರ್ಷದಲ್ಲಿ ಋಣಾತ್ಮಕ ಶೇ. 5.98 ಆದಾಯ ಕಂಡಿದೆ.
ಈ ಫಂಡ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಮತ್ತು ಲಾರ್ಸೆನ್ ಮತ್ತು ಟರ್ಬೊ ಷೇರುಗಳಂತೆ ಉತ್ತಮ ಗುಣಮಟ್ಟದ ಹೊಂದಿದೆ. ಮ್ಯೂಚುವಲ್ ಫಂಡ್ ಎಂದರೇನು? ಹೂಡಿಕೆಯ ಲಾಭ ಹಾಗು ನಷ್ಟಗಳೇನು?

ಎಸ್ಬಿಐ ಮ್ಯಾಗ್ನಮ್ ಇಕ್ವಿಟಿ ಇಎಸ್ಜಿ ಫಂಡ್

ಎಸ್ಬಿಐ ಮ್ಯಾಗ್ನಮ್ ಇಕ್ವಿಟಿ ಇಎಸ್ಜಿ ಫಂಡ್

ಕಳೆದ ಒಂದು ವರ್ಷದಲ್ಲಿ ಎಸ್ಬಿಐ ಮ್ಯಾಗ್ನಮ್ ಇಕ್ವಿಟಿ ಇಎಸ್ಜಿ ಫಂಡ್ ಮಾರುಕಟ್ಟೆಗಳಿಗೆ ಅನುಗುಣವಾಗಿ ಕಳಪೆ ಪ್ರದರ್ಶನ ನೀಡಿದ್ದ ಮತ್ತೊಂದು ಫಂಡ್. ಕಳೆದ ಒಂದು ವರ್ಷದಲ್ಲಿ ಫಂಡ್ -1 ಪ್ರತಿಶತದಷ್ಟು ಆದಾಯವನ್ನು ಸೃಷ್ಟಿಸಿದೆ. ಬ್ಯಾಂಕ್ ಠೇವಣಿಗಳಿಗಿಂತ ಇದು ಮತ್ತಷ್ಟು ಕೆಟ್ಟದಾಗಿದೆ.
ನೀವು ಈ ಯೋಜನೆಯಲ್ಲಿ ಸಣ್ಣ ಮಾಸಿಕ ಮೊತ್ತ ರೂ. 500 ಹೂಡಿಕೆ ಮಾಡಬಹುದು. ಫಂಡ್ ನ ನಿವ್ವಳ ಆಸ್ತಿ ಮೌಲ್ಯವು ರೂ. 98.38 ರಷ್ಟಿದೆ. ಮ್ಯೂಚುಯಲ್ ಫಂಡ್ ನಿಂದ ಪಡೆದ ಲಾಭಾಂಶಗಳ ಮೇಲೆ ಯಾವುದೇ ತೆರಿಗೆ ಇಲ್ಲದ ಕಾರಣ ಡಿವಿಡೆಂಡ್ ಯೋಜನೆಗಳು ಹೆಚ್ಚು ತೆರಿಗೆ ಪ್ರಯೋಜನಕಾರಿಯಾಗಿರುತ್ತವೆ ಎಂಬುದನ್ನು ಮರೆಯಬಾರದು.

ಐಸಿಐಸಿಐ ಪ್ರುಡೆನ್ಶಿಯಲ್ ಪೊಕಸ್ಡ್ ಬ್ಲೂಚಿಪ್ ಈಕ್ವಿಟಿ

ಐಸಿಐಸಿಐ ಪ್ರುಡೆನ್ಶಿಯಲ್ ಪೊಕಸ್ಡ್ ಬ್ಲೂಚಿಪ್ ಈಕ್ವಿಟಿ

ಈ ಫಂಡ್ ರೂ. 20,115 ಕೋಟಿಗಿಂತ ಹೆಚ್ಚು ಆಸ್ತಿಗಳನ್ನು ಹೊಂದಿದೆ. ಕಡಿಮೆ ಮೊತ್ತವಾದ ರೂ. 500 ಹೂಡಿಕೆ ಮಾಡಬಹುದಾದ ಇನ್ನೊಂದು ಆಯ್ಕೆ ಐಸಿಐಸಿಐ ಪ್ರುಡೆನ್ಶಿಯಲ್ ಪೊಕಸ್ಡ್ ಬ್ಲೂಚಿಪ್ ಈಕ್ವಿಟಿ. ಹೂಡಿಕೆಯ ಆರಂಭಿಕ ಮೊತ್ತ ರೂ. 5,000. ಕಳೆದ 3 ವರ್ಷಗಳಲ್ಲಿ ಫಂಡ್ ಶೇ. 13.73ರಷ್ಟು ಆದಾಯ ಸೃಷ್ಟಿಸಿದೆ.
ಐಸಿಐಸಿಐ ಪ್ರುಡೆನ್ಶಿಯಲ್ ಫೋಕಸ್ಡ್ ಬ್ಲೂಚಿಪ್ ಇಕ್ವಿಟಿ ಗ್ರೋಥ್ ಪ್ಲಾನ್ ಅಡಿಯಲ್ಲಿ ರೂ 38.64 ಮತ್ತು ಡಿವಿಡೆಂಡ್ ಯೋಜನೆಯಡಿ ರೂ. 21.39 ನಿವ್ವಳ ಆಸ್ತಿ ಮೌಲ್ಯ (NAV)ಹೊಂದಿದೆ. ದೀರ್ಘಾವಧಿ ಹೂಡಿಕೆ ಮಾಡಲು ಬಯಸುವವರು ಇದನ್ನು ಆಯ್ಕೆ ಮಾಡಬಹುದು. 7 ಬೆಸ್ಟ್ ಎಸ್ಬಿಐ(SBI) ಮ್ಯೂಚುವಲ್ ಫಂಡ್ ಯೋಜನೆಗಳು

ಓದುಗರಿಗೆ ಸೂಚನೆ

ಓದುಗರಿಗೆ ಸೂಚನೆ

ಮ್ಯೂಚುವಲ್ ಫಂಡ್ ಎಂದರೇನು? ಹೂಡಿಕೆಯ ಲಾಭ ಹಾಗು ನಷ್ಟಗಳೇನು? ಮ್ಯೂಚುವಲ್ ಫಂಡ್ ಎಂದರೇನು? ಹೂಡಿಕೆಯ ಲಾಭ ಹಾಗು ನಷ್ಟಗಳೇನು?

English summary

Best SIPs Where You Can Invest Small Amounts Of Rs 500

Systematic Investment Plans (SIPs) allow you to invest small amounts each month, which can be as small as Rs 500.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X