For Quick Alerts
ALLOW NOTIFICATIONS  
For Daily Alerts

ಬಂಡವಾಳ ಹೂಡಿಕೆ ಮಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ..

ಬಂಡವಾಳ ಹೂಡಿಕೆ ಮಾಡುವ ಮುನ್ನ ನಮ್ಮಲ್ಲಿ ಅನೇಕ ಗೊಂದಲ, ಪ್ರಶ್ನೆಗಳು ಎದುರಾಗುವುದು ಸಹಜ. ಹೂಡಿಕೆಯಲ್ಲುಂಟಾಗಬಹುದಾದ ಗೊಂದಲಗಳಿಗೆ ಸರಿಯಾದ ಉತ್ತರ ಸಿಗುವವರೆಗೆ ಬಂಡವಾಳ ಹೂಡಿಕೆಗೆ ಮುಂದಾಗಬಾರದು.

|

ಬಂಡವಾಳ ಹೂಡಿಕೆ ಮಾಡುವ ಮುನ್ನ ನಮ್ಮಲ್ಲಿ ಅನೇಕ ಗೊಂದಲ, ಪ್ರಶ್ನೆಗಳು ಎದುರಾಗುವುದು ಸಹಜ. ಹೂಡಿಕೆಯಲ್ಲುಂಟಾಗಬಹುದಾದ ಗೊಂದಲಗಳಿಗೆ ಸರಿಯಾದ ಉತ್ತರ ಸಿಗುವವರೆಗೆ ಬಂಡವಾಳ ಹೂಡಿಕೆಗೆ ಮುಂದಾಗಬಾರದು.

ಬಂಡವಾಳ ಹೂಡಿಕೆಯನ್ನು ಲಾಭದಾಯಕವನ್ನಾಗಿಸಲು ಬೇಕಾದ ನಿರ್ವಹಣಾ ಚತುರತೆ ಹಾಗೂ ಬಂಡವಾಳಕ್ಕೆ ತಕ್ಕ ಬಡ್ಡಿದರ ಹಾಗು ಎದುರಿಸಬೇಕಾದ ಅಪಾಯದ ಬಗ್ಗೆ ಹೂಡಿಕೆದಾರರು ಯೋಚಿಸಬೇಕು. ಆದರೆ ಖರ್ಚುವೆಚ್ಚಗಳು ಹಾಗೂ ತೆರಿಗೆಗಳು ಈ ಹಣಕಾಸು ಉತ್ಪನ್ನಗಳ ಅವಿಭಾಜ್ಯ ಅಂಗಗಳಾಗಿದ್ದು, ನಿಮ್ಮ ಬಂಡವಾಳದ ಹಣವು ಗಳಿಸಬಹುದಾದ ಮೊತ್ತದ ಮೇಲೆ ಪರಿಣಾಮ ಬೀರಬಹುದು. ನೀವು ಗಳಿಸುವ ಲಾಭದ ಮೇಲೆ ಬೀಳಬಹುದಾದ ಖರ್ಚುವೆಚ್ಚದ ಪರಿಣಾಮವನ್ನು ನೀವು ಗಮನವಿಡಬೇಕು. ಮಾತೃಶ್ರೀ ಯೋಜನೆ: ರೂ. 12 ಸಾವಿರ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಉದಾಹರಣೆಗೆ: ಒಂದು ವರ್ಷದ ಖಚರ್ುವೆಚ್ಚದ ಮೇಲೆ ವಿಧಿಸಲಾಗುವ ಶೇ.1 ಶುಲ್ಕವು, ಪ್ರತಿವರ್ಷ ವೃದ್ದಯಾಗುತ್ತಿದ್ದರೆ ಮುಂದಿನ 20 ವರ್ಷಗಳ ಅವಧಿಯಲ್ಲಿ ಅದು ಶೇ. 16 ರಷ್ಟು ಬದಲಾಗಿರುತ್ತದೆ. ಹಿಡುವಳಿಯು 25 ವರ್ಷಗಳಿಗಾದರೆ ಶುಲ್ಕವು ಶೇ. 20 ರಷ್ಟು ವೃದ್ದಿಸಿರುತ್ತದೆ. ಇದೇ ರೀತಿ ತೆರಿಗೆಯ ಮೇಲೂ ಪರಿಣಾಮ ಬೀರುವುದರಿಂದ ನಿಮ್ಮ ಮುಂದಿನ ಹೂಡಿಕೆಯ ಮೇಲೆ ಇವು ಪರಿಣಾಮ ಬೀರುತ್ತವೆ. ಬಂಡವಾಳ ಹೂಡಿಕೆಯಲ್ಲಿನ ವೆಚ್ಚಗಳು, ಶುಲ್ಕಗಳು, ಹಾಗು ತೆರಿಗೆಯು ನಿಮ್ಮ ಬಂಡವಾಳದ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸರಿಯಾಗಿ ವಿಚಾರಿಸಿದಲ್ಲಿ ನಿಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುತ್ತದೆ. ಅಂತಹ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದೆ.

1. ಹಣಕಾಸು ಹೂಡಿಕೆ ಸಂದರ್ಭದಲ್ಲಿನ ಯಾವ ಶುಲ್ಕ ಪಾವತಿಸಬೇಕಾಗಬಹುದು?

1. ಹಣಕಾಸು ಹೂಡಿಕೆ ಸಂದರ್ಭದಲ್ಲಿನ ಯಾವ ಶುಲ್ಕ ಪಾವತಿಸಬೇಕಾಗಬಹುದು?

ಸಾಮಾನ್ಯವಾಗಿ, ನೀವು ಹೂಡಿಕೆ ಮಾಡುವ ಹಣದ ಮೌಲ್ಯದ ಆಧಾರದ ಮೇಲೆ ಕಮಿಷನ್ ಅಥವಾ ದಲ್ಲಾಳಿ ಶುಲ್ಕವನ್ನು ನೀವು ವಿಧಿಸಬೇಕಾಗಬಹುದು. ಶುಲ್ಕವನ್ನು ಹೂಡಿಕೆಯ ಹಣದ ಮೌಲ್ಯಕ್ಕೆ ಶೇಕಡಾವಾರು ಆಧಾರದ ಮೇಲೆ, ಅಥವಾ ನಿಗದಿತ ಮೌಲ್ಯವನ್ನು ಮುಂಚಿತವಾಗಿ ಸೂಚಿಸಲಾಗುತ್ತದೆ.(ಉದಾಹರಣೆ : ಷೇರು ದಲ್ಲಾಳಿ ವಿಧಿಸುವ ದಲ್ಲಾಳಿ ಶುಲ್ಕ ಅಥವಾ ಮ್ಯೂಚುಯಲ್ ಫಂಡ್ ವಿತರಕರು ವಿಧಿಸುವ ಶುಲ್ಕ)

2. ಹೂಡಿಕೆಯಾದ ಮೇಲೆ, ಬಂಡವಾಳದ ಲಾಭ ಹುಟ್ಟಲು, ಬಂಡಾಳವನ್ನು ಕಾಪಾಡಿಟ್ಟುಕೊಳ್ಳಲು ಹಾಗೂ ಅದನ್ನು ತಿರುಗಿ ಪಡೆದುಕೊಳ್ಳಲು ನಮಗೆ ತಗುಲಬಹುದಾಂತಹ ವೆಚ್ಚ.

2. ಹೂಡಿಕೆಯಾದ ಮೇಲೆ, ಬಂಡವಾಳದ ಲಾಭ ಹುಟ್ಟಲು, ಬಂಡಾಳವನ್ನು ಕಾಪಾಡಿಟ್ಟುಕೊಳ್ಳಲು ಹಾಗೂ ಅದನ್ನು ತಿರುಗಿ ಪಡೆದುಕೊಳ್ಳಲು ನಮಗೆ ತಗುಲಬಹುದಾಂತಹ ವೆಚ್ಚ.

ಷೇರು ಮಾರುಕಟ್ಟೆಯಲ್ಲಿ ಖರೀದಿಸಿದ ಷೇರುಗಳು ಹಾಗೂ ಡಿಬೆಂಚಸರ್್ಗಳಿಂದ ಹೂಡಿಕೆಯ ಲಾಭ ಗಳಿಸಲು ಡೀಮ್ಯಾಟ್ ಮತ್ತು ದಲ್ಲಾಳಿ ಖಾತೆಯನ್ನು ತೆರೆದು ಅದರ ಮೂಲಕ ವ್ಯವಹಾರವನ್ನು ಮುಂದುವರೆಸಬಹುದು. ಕೆಲವೊಮ್ಮೆ ಹೀಗೆ ತೆರೆದ ಖಾತೆಯನ್ನು ರದ್ದುಗೊಳಿಸುವಾಗ ಮ್ಯೂಚುಯಲ್ ಫಂಡ್ ಗಳಿಂದ ಶುಲ್ಕ ಪಾವತಿಗೆ ಕೇಳಬಹುದು.ಇದು ಬಂಡವಾಳದ ಬಿಡುಗಡೆ ಮೌಲ್ಯವನ್ನು ಕಡಿಮೆ ಮಾಡುತ್ತದೆ.

3. ಹಣಕಾಸು ಹೂಡಿಕೆಯ ಕಾರ್ಯಾಚರಣೆಯ ವೇಳೆ ಖರ್ಚುವೆಚ್ಚಗಳಿರುತ್ತವೆಯೆ?

3. ಹಣಕಾಸು ಹೂಡಿಕೆಯ ಕಾರ್ಯಾಚರಣೆಯ ವೇಳೆ ಖರ್ಚುವೆಚ್ಚಗಳಿರುತ್ತವೆಯೆ?

ಹೂಡಿಕೆಯನ್ನು ವ್ಯವಸ್ತಿತಗೊಳಿಸಲು, ಹಣಕಾಸು ಹೂಡಿಕೆಯ ಅವಧಿಯಲ್ಲಿ ಕೆಲವು ಉತ್ಪನ್ನಗಳಿಂದ ಶುಲ್ಕ ವಿಧಿಸಲಾಗುತ್ತದೆ. ಉದಾಹರಣೆಗೆ ರಾಷ್ಟ್ರೀಯ ಪಿಂಚಣಿ ಮಂಡಳಿ, ಮ್ಯೂಚುವಲ್ ಫಂಡ್ಸ್, ಮತ್ತು ಯೂನಿಟ್ ಲಿಂಕ್ಡ್ ಹೂಡಿಕೆಗ. ಪಾವತಿಸಬೇಕಾದಂತಹ ಶುಲ್ಕಗಳ ಪಟ್ಟಿಯನ್ನು ಕೇಳಿ ಪಡೆದುಕೊಳ್ಳುವುದು ಉತ್ತಮ.

4. ವಿಧಿಸುವ ಶುಲ್ಕ ಸಮಾಧಾನಕರ ಶುಲ್ಕವಾಗಿರುತ್ತದೆಯೆ?

4. ವಿಧಿಸುವ ಶುಲ್ಕ ಸಮಾಧಾನಕರ ಶುಲ್ಕವಾಗಿರುತ್ತದೆಯೆ?

ಕೆಲವು ಖಚರ್ುವೆಚ್ಚಗಳು ಕಾಯಿದೆಯ ಮಿತಿಯೊಳಗೆ ಬರುತ್ತವೆ. ಅಂತಹ ವೆಚ್ಚಗಳು ಮ್ಯೂಚುವಲ್ ಫಂಡ್ ಗಳಿಂದ ವಿಧಿಸಲ್ಪಡುತ್ತವೆ. ವಾಸ್ತವವಾಗಿ, ವಿಧಿಸಲ್ಪಡುವ ವೆಚ್ಚಗಳು, ಹಾಗು ಅದರ ನಿರ್ಧಿಷ್ಟ ಮಿತಿಗಳು ಆಯಾ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಸ್ಪರ್ಧಾತ್ಮಕ ನಿಲುವುಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಇತರೆ ಠೇವಣಿ ಶುಲ್ಕಗಳು ಇಂತಹ ಕಾಯಿದೆಯ ಮಿತಿಯೊಳಗೆ ಬರುವುದಿಲ್ಲ ಮತ್ತು ಸೇವಾದಾರರ ಬಳಿ ವ್ಯವಹರಿಸಿ ಇಂತಹ ಕೆಲವು ಕಾಯಿದೆಯ ಮಿತಿಗಳನ್ನು ಸಡಿಲಗೊಳಿಸಿಕೊಳ್ಳಬಹುದು. ಆದರೆ ನೀವು ಬಳಸದೇ ಇರುವಂತಹ ಸೇವೆಗಳಿಗೆ ನೀವು ಸೇವಾ ಶುಲ್ಕವನ್ನು ತೆರಬೇಕಾಗಬಹುದು, ಇದರ ಬಗ್ಗೆ ಸದಾ ಎಚ್ಚರವಿರಲಿ.

5. ಹೂಡಿಕೆಗಳ ಮೇಲೆ ವಿಧಿಸಲ್ಪಡುವಂತಹ ಶುಲ್ಕಗಳ ಮಾಹಿತಿ ಎಲ್ಲಿ ಪಡೆಯಬಹುದು?

5. ಹೂಡಿಕೆಗಳ ಮೇಲೆ ವಿಧಿಸಲ್ಪಡುವಂತಹ ಶುಲ್ಕಗಳ ಮಾಹಿತಿ ಎಲ್ಲಿ ಪಡೆಯಬಹುದು?

ಸಾಮಾನ್ಯವಾಗಿ ಉತ್ಪನ್ನ ಹೂಡಿಕೆಯ ಸಮಯದಲ್ಲಿ ನೀಡಲಾಗುವಂತಹ ದಾಖಲೆಗಳಲ್ಲಿ ಇಂತಹ ಮಾಹಿತಿಯನ್ನು ನೀಡಿರುತ್ತಾರೆ. ನಿಮ್ಮ ಹೂಡಿಕೆಯ ಮೇಲೆ ಪರಿಣಾಮ ಬೀರಬಹುದಾದಂತಹ ಎಲ್ಲ ರೀತಿಯ ವೆಚ್ಚಗಳ ಮಾಹಿತಿಯನ್ನು ವಿವರಣೆ ಸಹಿತ ಕೇಳಿ ಪಡೆಯಲು ಮರೆಯದಿರಿ.

6. ಯಾವ ರೀತಿಯ ಹೆಚ್ಚುವರಿ ಶುಲ್ಕಗಳನ್ನು ಭರಿಸಬೇಕಾಗಬಹುದು?

6. ಯಾವ ರೀತಿಯ ಹೆಚ್ಚುವರಿ ಶುಲ್ಕಗಳನ್ನು ಭರಿಸಬೇಕಾಗಬಹುದು?

ಹೆಚ್ಚುವರಿ ಶುಲ್ಕ ಹಾಗು ವಿಧಿಸಲಾಗುವ ದಂಡಗಳ ಬಗ್ಗೆ ಹೂಡಿಕೆ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಬಳಿ ವಿವರಣೆಯನ್ನು ಕೇಳಿ ಪಡೆಯಬೇಕು. ಅದು ಬ್ಯಾಂಕ್ ಖಾತೆಯಲ್ಲಿ ಇಡಬೇಕಾದ ಕನಿಷ್ಟ ಮೊತ್ತದ ಅಭಾವವಿರಬಹುದು, ಮುಂಚಿತವಾಗಿ ಸ್ವಾಧೀನಪಡಿಸಲಾಗುವ ನ್ಯಾಷನಲ್ ಸರ್ಟಿಫಿಕೇಟ್ ಕೂಡ ಅತ್ಯಂತ ಕಡಿಮೆ ಮೊತ್ತದ ಬಡ್ಡಿಗೆ ಕಾರಣವಾಗಬಹುದು. ಅಧಿಕ ಮೊತ್ತದ ಹೂಡಿಕೆ ವ್ಯವಹಾರವು ಕಡಿಮೆ ಮೊತ್ತದ ದಲ್ಲಾಳಿ ಶುಲ್ಕಕ್ಕೆ ಎಡೆಮಾಡಿಕೊಡುತ್ತದೆ.

7. ಗುಪ್ತ ವೆಚ್ಚಗಳು ಇದ್ದಲ್ಲಿ ಅವು ಯಾವುವು?

7. ಗುಪ್ತ ವೆಚ್ಚಗಳು ಇದ್ದಲ್ಲಿ ಅವು ಯಾವುವು?

ನಿಮ್ಮ ಹೂಡಿಕೆಗಳು ಶುಲ್ಕ ಪಾವತಿಗೆ ಒಳಪಡದಂತಹ ಪಟ್ಟಿಗೆ ಸೇರಿದ್ದರೂ, ಅದರಿಂದ ಶುಲ್ಕ ಪಾವತಿಯಾಗುತ್ತಿದ್ದರೆ ಅದು ಗುಪ್ತ ವೆಚ್ಚಗಳಿಗೆ ಒಳಪಡುತ್ತದೆ. ಉದಾಹರಣೆಗೆ: ಕೆಲವೊಂದು ಯೋಜನೆಗಳಲ್ಲಿ ಮ್ಯೂಚುವಲ್ ಫಂಡ್ ಗಳು ನಿಮ್ಮ ಖಾತೆಯಿಂದ ಭದ್ರತಾ ಠೇವಣಿಗಳ ಕೊಂಡು ಕೊಳ್ಳುವಿಕೆಯಲ್ಲಿ ತೊಡಗಿಕೊಂಡಾಗ ಪರೋಕ್ಷವಾಗಿ ಸಂಬಂಧಪಟ್ಟ ಹೆಚ್ಚುವರಿ ಶುಲ್ಕವನ್ನು ಹೂಡಿಕೆದಾರರು ಪಾವತಿಸಬೇಕಾಗುತ್ತದೆ. ಇಂತಹ ನಿಮ್ಮ ಆದಾಯವನ್ನು ಕಡಿಮೆಗೊಳಿಸುವಂತಹ ಯಾವುದಾದರೂ ವೆಚ್ಚಗಳಿದ್ದಲ್ಲಿ ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ಕೇಳಿ ಪಡೆಯಿರಿ.

8. ವಿಧಿಸಲ್ಪಟ್ಟ ಶುಲ್ಕಗಳ ಮಾಹಿತಿ ಹೇಗೆ ಪಡೆಯಬಹುದು?

8. ವಿಧಿಸಲ್ಪಟ್ಟ ಶುಲ್ಕಗಳ ಮಾಹಿತಿ ಹೇಗೆ ಪಡೆಯಬಹುದು?

ಹಣಕಾಸು ಹಾಗೂ ಬಂಡವಾಳ ಹೂಡಿಕೆ ಸೇವೆಯನ್ನು ಒದಗಿಸುವವರು ನೀಡಲಾಗುವ ಖಾತೆಯ ವರದಿಯಲ್ಲಿ ನಿಮಗೆ ಇದರ ಮಾಹಿತಿ ಸಿಗುತ್ತದೆ. ನೀವು ಹೂಡಿದ ಬಂಡವಾಳಕ್ಕೆ ಅದರ ಮೌಲ್ಯವನ್ನು ನಿಗದಿಪಡಿಸುವ ಮುನ್ನ ನಿಮ್ಮ ಬಂಡವಾಳದ ಮೊತ್ತಕ್ಕೆ ಕೆಲವು ವೆಚ್ಚಗಳನ್ನು ಭರಿಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಇವುಗಳನ್ನು ನಿಮ್ಮ ಖಾತೆಯ ವರದಿಯಲ್ಲಿ ನಮೂದಿಸಿರುವುದಿಲ್ಲ. ಇವುಗಳ ಬಗ್ಗೆ ಮಾಹಿತಿಯನ್ನು ಕೊಡುವ ಬಗ್ಗೆ ಸೇವಾದಾರರನ್ನು ಕೇಳಿರಿ ಹಾಗೂ ಇಂತಹ ವಿವರಣೆಗಳು ಇದ್ದಲ್ಲಿ ಅಂತಹ ವಿವರಣೆಯನ್ನು ಕೂಲಂಕುಷವಾಗಿ ತಾಳೆ ಮಾಡಿ ನೋಡಿ.

9. ಸಲಹೆಗಾರರು ಸ್ವೀಕರಿಸಬಹುದಾದಂತಹ ಪರಿಹಾರ ಶುಲ್ಕಗಳು ಯಾವುವು?

9. ಸಲಹೆಗಾರರು ಸ್ವೀಕರಿಸಬಹುದಾದಂತಹ ಪರಿಹಾರ ಶುಲ್ಕಗಳು ಯಾವುವು?

ಸಲಹೆಗಾರರ ಪರಿಹಾರದ ಬಗ್ಗೆ ವಿವರಗಳನ್ನು ಮುಂಚೆಯೇ ಕೇಳಿ ಪಡೆದುಕೊಳ್ಳಬೇಕು. ಇದರಿಂದ ಉತ್ಪನ್ನ ಹಾಗೂ ಸೇವೆಗಳ ಬಡ್ಡಿದರಗಳು ಸೇವಾದಾರರ ಲಾಭಕ್ಕಾಗಲ್ಲದೆ, ನಿಮ್ಮ ಸೂಚನೆಯಂತೆ ಇರುತ್ತದೆ. ಪರಿಹಾರದ ಮೊತ್ತ, ಅವರ ಲೆಕ್ಕಾಚಾರದ ಆಧಾರದ ಮೂಲಗಳು ಹಾಗೂ ಅವುಗಳು ಯಾರಿಂದ ಸ್ವೀಕರಿಸಲ್ಪಡುತ್ತದೆ ಎಂಬ ಅವಶ್ಯಕ ಪ್ರಶ್ನೆಗಳಿಗೂ ವಿವರಗಳನ್ನು ಪಡೆಯಿರಿ.
ಹೂಡಿಕೆಗೆ ಮುನ್ನ ಮಾರುಕಟ್ಟೆಯಲ್ಲಿ ಲಭ್ಯವಿರುವ, ಉತ್ತಮ ಸೇವೆ ಒದಗಿಸುವ ಸೇವಾದಾರರ ಬಗ್ಗೆ ಅಧ್ಯಯನ ನಡೆಸಿ, ಖರ್ಚುವೆಚ್ಚಗಳ ಬಗ್ಗೆ ಕೂಲಂಕಷವಾಗಿ ಸಮಾಲೋಚಿಸಿ. ಇದರಿಂದ ಕೆಲವು ಅನಾವಶ್ಯಕ ಖರ್ಚುಚ್ಚಗಳನ್ನು ತಡೆಯಬಹುದು. ಹೂಡಿಕೆಗಳ ಮೇಲೆ ಅನ್ವಯವಾಗುವಂತಹ ವೆಚ್ಚಗಳು ಹಾಗೂ ತೆರಿಗೆಗಳ ಆಧಾರದ ಮೇಲೆ, ನಿಮ್ಮ ಹೂಡಿಕೆಯ ವೆಚ್ಚಗಳನ್ನು ಕಡಿಮೆ ದರಕ್ಕೆ ಮಾರ್ಪಡಿಸಬಹುದಾಗಿದೆ.

English summary

Before Investing Must know these things

You would think that managing an investment portfolio for returns and risk should be sufficient to protect your interests as an investor.
Story first published: Wednesday, February 27, 2019, 12:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X