ಕೋಟ್ಯಾಧಿಶ್ವರರಾಗಬೇಕೆಂದು ಪ್ರತಿಯೊಬ್ಬರು ಕನಸು ಕಾಣುತ್ತಾರೆ. ಆದರೆ ಕೋಟ್ಯಾಧಿಪತಿ ಆಗುವುದು ಹೇಗೆ? ಯಾವ ಬಿಸಿನೆಸ್ ಅಥವಾ ಕೆಲಸ ಮಾಡಿದರೆ ಕೋಟ್ಯಧಿಶ್ವರರಾಗಬಹುದು? ಇಂಥ ಪ್ರಶ್ನೆಗಳು ನಿಮ್ಮಲ್ಲಿ ಹಲವಾರು ಬಾರಿ ಮೂಡಿರಬಹುದು.
ಕೋಟ್ಯಾಧಿಶ್ವರರಾಗಬೇಕೆಂದು ಪ್ರತಿಯೊಬ್ಬರು ಕನಸು ಕಾಣುತ್ತಾರೆ. ಆದರೆ ಕೋಟ್ಯಾಧಿಪತಿ ಆಗುವುದು ಹೇಗೆ? ಯಾವ ಬಿಸಿನೆಸ್ ಅಥವಾ ಕೆಲಸ ಮಾಡಿದರೆ ಕೋಟ್ಯಧಿಶ್ವರರಾಗಬಹುದು? ಇಂಥ ಪ್ರಶ್ನೆಗಳು ನಿಮ್ಮಲ್ಲಿ ಹಲವಾರು ಬಾರಿ ಮೂಡಿರಬಹುದು. ಹಾಗಾದರೆ ಎಂಟಂಕಿಯ ಮೊತ್ತದಷ್ಟು ಹಣದ ಒಡೆಯನಾಗುವುದು ಹೇಗೆ ಸಾಧ್ಯ? ಇದಕ್ಕೆ ಉತ್ತರ 'ಇಕ್ವಿಟಿ ಮಾರ್ಕೆಟ್. ಹೌದು.. ಇಕ್ವಿಟಿ ಮಾರ್ಕೆಟ್‌ನ ಮ್ಯೂಚುವಲ್ ಫಂಡ್ ಸಿಸ್ಟೆಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್‌ಗಳ (ಸಿಪ್) ಮೂಲಕ ಉತ್ತಮ ಹಣ ಸಂಪಾದನೆ ಸಾಧ್ಯ. ಕೇವಲ 5 ವರ್ಷಗಳಲ್ಲಿ ನಿಮ್ಮ ಆದಾಯ ಡಬಲ್ ಮಾಡಬಲ್ಲ ಟಾಪ್ 10 ಮ್ಯೂಚುವಲ್ ಫಂಡ್
ಉದಾಹರಣೆಗೆ ನೋಡಿದರೆ- 15 ವರ್ಷಗಳವರೆಗೆ ಪ್ರತಿ ತಿಂಗಳು ರೂ. 20 ಸಾವಿರದಂತೆ ಸಿಪ್‌ನಲ್ಲಿ ಹೂಡಿಕೆ ಮಾಡಿದಲ್ಲಿ ಶೇ. 12ರ ಬಡ್ಡಿದರ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ನಿಮ್ಮ ಹಣ ಒಂದು ಕೋಟಿ ರೂಪಾಯಿಗಳಾಗುತ್ತದೆ ಎಂದು ಐಸಿಐಸಿಐ ಪ್ರುಡೆನ್ಷಿಯಲ್ ಎಎಂಸಿ ಎಂಡಿ ಹಾಗೂ ಸಿಇಓ ನಿಮೇಶ ಶಾ ಹೇಳುತ್ತಾರೆ. ಹಾಗಾದರೆ ಸಿಪ್ ಹೇಗೆ ಕೆಲಸ ಮಾಡುತ್ತದೆ ತಿಳಿಯೋಣ.
ಹನಿ ಹನಿಗೂಡಿಸಿ ಸಮುದ್ರ ಮಾಡಿ
ಸಿಪ್ ಎಂಬುದು ಮ್ಯೂಚುವಲ್ ಫಂಡ್ ಆಧರಿತ ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಇದರಲ್ಲಿ ನಿಯಮಿತವಾಗಿ ಚಿಕ್ಕ ಚಿಕ್ಕ ಕಂತುಗಳಲ್ಲಿ ಹಣ ಹೂಡಿಕೆ ಮಾಡುತ್ತ ಹೋಗಬಹುದು. ಇದೊಂದು ವ್ಯವಸ್ಥಿತವಾದ ಹೂಡಿಕೆ ಯೋಜನೆಯಾಗಿದೆ. ಹಣದಿಂದ ಹಣ ಬೆಳೆಯುವ ಶಕ್ತಿಯನ್ನು ಬಳಸಿ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಗಂಟು ಕೂಡಿಸಲು ಇದು ಸಹಕಾರಿಯಾಗಿದೆ.
ಶೇರುಗಳ ಬೆಲೆ ನಿರೀಕ್ಷಿತ ಕಡಿಮೆ ಮಟ್ಟದಲ್ಲಿರುವಾಗ ಕೊಂಡುಕೊಳ್ಳುವುದು ಹಾಗೂ ಅವುಗಳ ಬೆಲೆ ಹೆಚ್ಚಾದಾಗ ಸೂಕ್ತ ಸಮಯ ನೋಡಿ ಅವನ್ನು ಮಾರಿ ಲಾಭ ಗಳಿಸುವುದು ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುವ ಸಹಜ ವಿಧಾನವಾಗಿದೆ.
ಇಂಥದೊಂದು ವ್ಯವಹಾರದ ರೀತಿಯಿಂದ ಸಾಮಾನ್ಯ ಹೂಡಿಕೆದಾರರು ಕೆಲ ಸಾಮಾನ್ಯ ತಪ್ಪುಗಳನ್ನು ಮಾಡುವ ಸಾಧ್ಯತೆ ಇರುತ್ತದೆ ಹಾಗೂ ಹೆಚ್ಚು ಬೆಲೆಯಲ್ಲಿ (ಏರಿಕೆಯ ಮಾರುಕಟ್ಟೆಯ ಸಂದರ್ಭದಲ್ಲಿನ ಊಹಾಪೋಹಗಳು ಇದಕ್ಕೆ ಕಾರಣವಾಗುತ್ತವೆ) ಕೊಂಡು ಕಡಿಮೆ ಬೆಲೆಯಲ್ಲಿ ಮಾರುವಂತಾಗುತ್ತದೆ ಎನ್ನುತ್ತಾರೆ ಮೋತಿಲಾಲ ಓಸ್ವಾಲ್ ಕಂಪನಿಯ ಫಂಡ್ ಮ್ಯಾನೇಜರ ಗೌತಮ ಸಿನ್ಹಾ ರಾಯ್. 12 ಸಾವಿರ ಹೂಡಿಕೆ ಮಾಡಿದರೆ 15 ವರ್ಷಕ್ಕೆ 40 ಲಕ್ಷ ಗಳಿಸಬಹುದು..
ಬೇಗನೆ ಹೂಡಿಕೆ ಆರಂಭಿಸಿ
ಕೋಟ್ಯಧಿಪತಿಯಾಗುವ ಆಸೆ ನಿಮ್ಮಲ್ಲಿದ್ದರೆ ಆದಷ್ಟು ಬೇಗ ಸಿಪ್ ಯೋಜನೆಗಳಲ್ಲಿ ಹೂಡಿಕೆ ಆರಂಭಿಸಬೇಕಾಗುತ್ತದೆ. "ಬೇಗನೆ ಯೋಜನೆಯಲ್ಲಿ ಹಣ ತೊಡಗಿಸಲಾರಂಭಿಸಿದರೆ ಹಣ ಸಂಯೋಜನೆಯ ಲಾಭ ಸಿಗುತ್ತದೆ. ಅದರಲ್ಲೂ ದೀರ್ಘಾವಧಿ ಯೋಜನೆಗಳಲ್ಲಿ ಬೇಗ ಹೂಡಿಕೆ ಆರಂಭಿಸುವುದು ಹಾಗೂ ತಡ ಮಾಡುವುದರ ಮಧ್ಯೆ ಭಾರಿ ಅಂತರವಿದೆ. ತಡವಾದಷ್ಟೂ ಲಾಭ ಕಡಿಮೆಯಾಗುತ್ತದೆ.
ಕೆಲವೇ ತಿಂಗಳ ಅಂತರ ಸಹ ಕೊನೆಯಲ್ಲಿ ದೊಡ್ಡ ಮೊತ್ತದ ಹಣ ಕೊರತೆಯಾಗುವಂತೆ ಮಾಡಬಹುದು. ಅಧ್ಯಯನಗಳ ಪ್ರಕಾರ ಹೂಡಿಕೆ ಆರಂಭಿಸಲು ಒಂಚೂರು ತಡ ಮಾಡಿದರೂ ಅದು ದೀರ್ಘಾವಧಿಯಲ್ಲಿ ನಿಮಗೆ ದೊಡ್ಡ ನಷ್ಟವನ್ನುಂಟು ಮಾಡುತ್ತದೆ.
ಎಲ್ಲಿಂದ ಆರಂಭಿಸುವುದು?
"ಹೂಡಿಕೆದಾರರು ಮೊದಲಿಗೆ ತಮ್ಮ ದೀರ್ಘಾವಧಿಯ ಹೂಡಿಕೆ ಯೋಜನೆ ತಯಾರಿಸಬೇಕು. ಪ್ರತಿ ತಿಂಗಳು ಮ್ಯೂಚುವಲ್ ಫಂಡ್‌ನಲ್ಲಿ ಎಷ್ಟು ಹೂಡಿಕೆ ಮಾಡಬೇಕು ಹಾಗೂ ಇದರಲ್ಲಿ ಡೆಬ್ಟ್ ಹಾಗೂ ಇಕ್ವಿಟಿ ಪ್ರಮಾಣ ಎಷ್ಟು ಎಂಬುದನ್ನು ಸಹ ನಿರ್ಧರಿಸಬೇಕು ಎಂದು ಮೋತಿಲಾಲ ಓಸ್ವಾಲ್ ಕಂಪನಿಯ ಗೌತಮ ಸಿನ್ಹಾ ಹೇಳುತ್ತಾರೆ.
ನಿಪುಣ ಸಲಹೆಗಾರರನ್ನು ಭೇಟಿ ಮಾಡಿ
ಹೂಡಿಕೆಯ ಯೋಜನೆ ತಯಾರಾದ ನಂತರ ಫಂಡ್ ಹೌಸ್ ಹಾಗೂ ಫಂಡ್ ಮ್ಯಾನೇಜರರನ್ನು ಗುರುತಿಸುವುದು ಮುಖ್ಯವಾಗುತ್ತದೆ. ನೀವು ಹೂಡಿಕೆಯನ್ನು ಜಾರಿಯಲ್ಲಿಟ್ಟಿರುವ ಪ್ರತಿದಿನವೂ ನಿಮ್ಮ ಹಣವನ್ನು ನಿರ್ವಹಣೆ ಮಾಡುವವರು ಫಂಡ್ ಮ್ಯಾನೇಜರ್. ನಿಮ್ಮ ಜೀವಮಾನದ ಉಳಿತಾಯವನ್ನೆಲ್ಲ ಅವರ ಭರವಸೆಯ ಮೇಲೆಯೇ ನೀವು ಹೂಡಿಕೆ ಮಾಡಿರುತ್ತೀರಿ.
"ಇದರಲ್ಲಿ ಸಾಕಷ್ಟು ಶಕ್ತಿ ಹಾಗೂ ಸಮಯ ವ್ಯಯವಾಗುತ್ತದೆ. ಆದರೆ ಒಮ್ಮೆ ಮೂಲ ಯೋಜನೆ ತಯಾರಾಯಿತೆಂದರೆ ಸಾಕು ಮುಂದಿನ ಎಲ್ಲ ಹೂಡಿಕೆ ಕೆಲಸಗಳು ಯಾಂತ್ರಿಕವಾಗಿ ನಡೆದುಕೊಂಡು ಹೋಗುತ್ತವೆ" ಎನ್ನುತ್ತಾರೆ ರಾಯ್.
ಹೂಡಿಕೆಯಲ್ಲಿ ವಿಭಿನ್ನತೆ ಇರಲಿ
ಸಿಪ್‌ನಲ್ಲಿ ಇರುವ ಎಲ್ಲ ಹಣವನ್ನು ಇಕ್ವಿಟಿ ಮಾರ್ಕೆಟ್‌ನಲ್ಲಿ ಸುರಿಯಲಾಗುವುದಿಲ್ಲ. ಹೂಡಿಕೆ ಮಾಡುವ ಮುನ್ನ ಅಪಾಯದ ಅಂಶಗಳನ್ನು ಗಮನಿಸಿ ವಿಭಿನ್ನವಾಗಿ ಹೂಡಿಕೆ ಮಾಡಲಾಗುತ್ತದೆ.
"ಮೊತ್ತವನ್ನು ವಿಭಾಗಿಸಿ ಇಕ್ವಿಟಿ ಹಾಗೂ ಡೆಬ್ಟ್‌ಗಳಲ್ಲಿ ಹೂಡಿಕೆ ಮಾಡುವುದು ಮ್ಯೂಚುವಲ್ ಫಂಡ್‌ಗಳ ವಿಶಿಷ್ಟತೆಯಾಗಿದೆ. ಹೂಡಿಕೆದಾರನ ರಿಸ್ಕ್ ತಡೆಯುವ ಸಾಮರ್ಥ್ಯವನ್ನು ಆಗಾಗ ಪರಿಶೀಲಿಸಿ ಅಗತ್ಯ ಬಿದ್ದಲ್ಲಿ ಹೂಡಿಕೆಯನ್ನು ಮರು ಹೊಂದಾಣಿಕೆ ಮಾಡಬೇಕಾಗುತ್ತದೆ.
ನೀವೊಬ್ಬ ಗಾರ್ಡನರ್ ಆಗಬೇಕು
ಒಮ್ಮೆ ಹಣವನ್ನು ಹೂಡಿಕೆ ಮಾಡಿ ಮರೆತುಬಿಡುವುದು ಸಿಪ್ ಯೋಜನೆಯ ಲಕ್ಷಣವಲ್ಲ. ನೀವು ಹೂಡಿಕೆಯನ್ನು ಆಗಾಗ ಪರಿಶೀಲಿಸುತ್ತಿರಬೇಕಾಗುತ್ತದೆ. ತೋಟದ ಮಾಲಿಯೊಬ್ಬ ಗಿಡಗಳನ್ನು ನೆಟ್ಟು ಅವುಗಳಿಗೆ ಪ್ರತಿದಿನ ನೀರು, ಗೊಬ್ಬರ ನೀಡುವಂತೆ ನೀವೂ ಸಹ ಒಬ್ಬ ಗಾರ್ಡನರ್ ರೀತಿಯಲ್ಲಿ ಸಿಪ್ ಯೋಜನೆಯನ್ನು ಪರಿಶೀಲಿಸಬೇಕಾಗುತ್ತದೆ.
"ಹೂಡಿಕೆದಾರರು ಒಟ್ಟಾರೆಯಾಗಿ ತಮ್ಮ ಹೂಡಿಕೆ ಹೇಗೆ ಕಾರ್ಯನಿರ್ವಹಣೆ ಮಾಡುತ್ತಿದೆ ಎಂಬುದನ್ನು ನೋಡುತ್ತಿದ್ದರೆ ಸಾಕು. ಅವರು ತೀರಾ ಕೆಳಹಂತಕ್ಕೆ ಹೋಗಿ ಗಮನಿಸುವ ಅಗತ್ಯವಿಲ್ಲ. ಆದರೆ ಸಿಪ್ ಯೋಜನೆಗಳಲ್ಲಿನ ಹೂಡಿಕೆಯನ್ನು ಮೇಲಿಂದ ಮೇಲೆ ಗಮನಿಸುತ್ತಿರುವುದು ಮಾತ್ರ ಕಡ್ಡಾಯವಾಗಿದೆ. ಒಂದು ನಿರ್ದಿಷ್ಟ ಬೆಂಚಮಾರ್ಕ್ ಆಧರಿಸಿ ಸಿಪ್ ಯೋಜನೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ನೋಡುತ್ತಲೇ ಇರಬೇಕು ಹಾಗೂ ದೀರ್ಘಾವಧಿಯಲ್ಲಿ ಅದು ಎಷ್ಟು ಮೊತ್ತವನ್ನು ಸಂಗ್ರಹಿಸಬಹುದು ಎಂಬುದನ್ನು ಲೆಕ್ಕ ಹಾಕಬೇಕು" ಎಂಬುದು ಹಣಕಾಸು ತಜ್ಞರ ಸಲಹೆಯಾಗಿದೆ.
ನೆನಪಿರಲಿ..
ಕೋಟಿ ರೂಪಾಯಿ ನಿಮ್ಮದಾಗಿಸುವುದು
ನೀವು ಇಷ್ಟು ಹೊತ್ತಿನವರೆಗೆ ಹೂಡಿಕೆಯ ಮುಖ್ಯ ಅಂಶಗಳನ್ನು ತಿಳಿದುಕೊಂಡಿರುವಿರಿ. ಆದರೆ ಹೂಡಿಕೆ ಮಾಡಿ ಮರೆತು ಬಿಟ್ಟರೆ ಸಾಕಾಗದು. ಇಲ್ಲಿ ತಿಳಿಸಲಾದ ಎಲ್ಲ ವಿಷಯಗಳನ್ನು ಪಾಲಿಸಬೇಕಾಗುತ್ತದೆ. ಇನ್ನು ಕೆಲ ಸಿಸ್ಟೆಮ್ಯಾಟಿಕ್ ವಿತಡ್ರಾವಲ್ ಪ್ಲಾನ್ ಮೂಲಕ ನೀವು ನಿಯಮಿತವಾಗಿ ಆದಾಯ ಪಡೆಯಲಾರಂಭಿಸಬಹುದು. ರಿಟೈರಮೆಂಟ್ ಸಮಯ ಬಂದಾಗ ಈ ರೀತಿಯ ಯೋಜನೆ ತುಂಬಾ ಅನುಕೂಲಕರವಾಗಿರುತ್ತವೆ.
ಏನೇ ಆದರೂ ಹೂಡಿಕೆಯ ಉದ್ದೇಶವು ಯಾವಾಗಲೂ ಪವಿತ್ರವಾಗಿರುತ್ತದೆ ಹಾಗೂ ನಿಗದಿತ ಅವಧಿಯಲ್ಲಿ ಉದ್ದೇಶಿತ ಗುರಿಯನ್ನು ಸಾಧಿಸುವುದು, ಜೊತೆಗೆ ವಿವೇಕಯುತವಾಗಿ ರಿಸ್ಕ್ ನಿಭಾಯಿಸುವುದು ಹೂಡಿಕೆದಾರನ ಗುರಿಯಾಗಿರುತ್ತವೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

International Women's Day: ಮಹಿಳೆಯರೇ ಇಲ್ಲಿ ಗಮನಿಸಿ; ಇಲ್ಲಿದೆ ಬೆಸ್ಟ್ 5 ಹೂಡಿಕೆ ಯೋಜನೆಗಳು!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications