For Quick Alerts
ALLOW NOTIFICATIONS  
For Daily Alerts

12 ಸಾವಿರ ಹೂಡಿಕೆ ಮಾಡಿದರೆ 15 ವರ್ಷಕ್ಕೆ 40 ಲಕ್ಷ ಗಳಿಸಬಹುದು..

ನಮ್ಮಲ್ಲಿ ತುಂಬಾ ಜನರು ಸ್ಮಾರ್ಟ್ ವರ್ಕರ್ಸ್ ಹಾಗು ಸ್ಮಾರ್ಟ್ ಇನ್ವೆಸ್ಟರ್ ಇದ್ದಾರೆ. ಅತೀ ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚು ಹಣ ಗಳಿಸುವುದನ್ನು ಸ್ಮಾರ್ಟ್ ಇನ್ವೆಸ್ಟ್ಮೆಂಟ್ ಎನ್ನಬಹುದು.

|

ನಮ್ಮಲ್ಲಿ ತುಂಬಾ ಜನರು ಸ್ಮಾರ್ಟ್ ವರ್ಕರ್ಸ್ ಹಾಗು ಸ್ಮಾರ್ಟ್ ಇನ್ವೆಸ್ಟರ್ ಇದ್ದಾರೆ. ಅತೀ ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚು ಹಣ ಗಳಿಸುವುದನ್ನು ಸ್ಮಾರ್ಟ್ ಇನ್ವೆಸ್ಟ್ಮೆಂಟ್ ಎನ್ನಬಹುದು. ನಿಮಗೂ ಸ್ಮಾರ್ಟ್ ಇನ್ವೆಸ್ಟರ್ ಆಗುವ ಇಚ್ಛೆ ಇದ್ದಲ್ಲಿ ಪಿಪಿಎಫ್ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ.

 

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಖಾತೆಯನ್ನು ತೆರೆದು ಹಣ ಹೂಡಿಕೆ ಮಾಡಿ. ಇದಕ್ಕೆ ತೆರಿಗೆ ರಿಯಾಯಿತಿ ಸಿಗಲಿದೆ. ಅವಧಿ ಮುಗಿದ ನಂತರವೂ ಸಿಕ್ಕ ಹಣಕ್ಕೆ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ.

ಪ್ರತಿ ತಿಂಗಳು 12 ಸಾವಿರ ಹೂಡಿಕೆ

ಪ್ರತಿ ತಿಂಗಳು 12 ಸಾವಿರ ಹೂಡಿಕೆ

ಯಾವುದೇ ಒಬ್ಬ ವ್ಯಕ್ತಿ ಪಿಪಿಎಫ್ ಯೋಜನೆಯಲ್ಲಿ ಪ್ರತಿ ತಿಂಗಳು ರೂ. 12 ಸಾವಿರ ಹೂಡಿಕೆ ಮಾಡುತ್ತಾ ಸಾಗಬೇಕು. ಹೀಗೆ 15 ವರ್ಷಕ್ಕೆ ಆತನಿಗೆ ಒಟ್ಟು ರೂ. 39,65,072 ಸಿಗಲಿದೆ. ಪ್ರಸ್ತುತ ಪಿಪಿಎಫ್ ಮೇಲೆ ಶೇ. 8ರಷ್ಟು ಬಡ್ಡಿದರ ಸಿಗುತ್ತಿದೆ. ಕೇಂದ್ರ ಸರ್ಕಾರ ಮೂರು ತಿಂಗಳಿಗೊಮ್ಮೆ ಬಡ್ಡಿ ದರದಲ್ಲಿ ಪರಿಷ್ಕರಣೆ ಮಾಡುತ್ತದೆ.

ಪಿಪಿಎಫ್ ಕನಿಷ್ಟ ಗರಿಷ್ಠ ಹೂಡಿಕೆ ಮಿತಿ

ಪಿಪಿಎಫ್ ಕನಿಷ್ಟ ಗರಿಷ್ಠ ಹೂಡಿಕೆ ಮಿತಿ

ಒಬ್ಬ ವ್ಯಕ್ತಿ ಒಂದು ಪಿಪಿಎಫ್ ಖಾತೆಯನ್ನು ಮಾತ್ರ ತೆರೆಯಬಹುದು. ನಿಮ್ಮ ಮಕ್ಕಳ ಹೆಸರಿನಲ್ಲೂ ಪಿಪಿಎಫ್ ಖಾತೆ ತೆರೆಯಲು ಅವಕಾಶವಿದೆ. ಕನಿಷ್ಠ ರೂ. 500 ಹಾಗೂ ಗರಿಷ್ಠ ರೂ. 15000 ಹೂಡಿಕೆ ಮಾಡಬಹುದು. ತೆರಿಗೆ ರಿಯಾಯಿತಿ ಹಾಗು ಉತ್ತಮ ಬಡ್ಡಿದರ ಪಡೆಯಲು ಇಚ್ಛಿಸುವವರಿಗೆ ಇದು ಒಳ್ಳೆ ಹೂಡಿಕೆ ಯೋಜನೆ.

ಹೆಚ್ಚಿನ ಬಡ್ಡಿ ದರ ಮತ್ತು ಖಾತೆ ಅವಧಿ ವಿಸ್ತರಣೆ
 

ಹೆಚ್ಚಿನ ಬಡ್ಡಿ ದರ ಮತ್ತು ಖಾತೆ ಅವಧಿ ವಿಸ್ತರಣೆ

ಕೇಂದ್ರ ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿದರವನ್ನು ಪರಿಷ್ಕರಿಸುತ್ತದೆ. ಅದರ ಪ್ರಕಾರ ಪಿಪಿಎಫ್ ಬಡ್ಡಿದರವು ಬ್ಯಾಂಕುಗಳ ಬಡ್ಡಿದರಗಳಿಗಿಂತ ಹೆಚ್ಚಿರುವುದು ಖಚಿತವಾಗಿದೆ. ಬ್ಯಾಂಕುಗಳು ಪ್ರಸ್ತುತ ಶೇ. 6-7ರ ಮಿತಿಯಲ್ಲಿ ಬಡ್ಡಿದರ ನೀಡುತ್ತಿವೆ. ಆದರೆ ಪಿಪಿಎಪ್ ಹೂಡಿಕೆ ಮೇಲೆ ನೀವು ಶೇ. 8 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ.
ಆರಂಭದಲ್ಲಿ ಪಿಪಿಎಫ್ ಹೂಡಿಕೆ ಅವಧಿ 15 ವರ್ಷಗಳದ್ದಾಗಿರುತ್ತದೆ. ಆದರೂ 15 ವರ್ಷದ ಪಕ್ವತಾ (Maturity) ಅವಧಿಯ ನಂತರ ಮತ್ತೆ ಪ್ರತಿ ಬಾರಿ 5 ವರ್ಷಗಳಂತೆ ಖಾತೆಯ ಅವಧಿಯನ್ನು ವಿಸ್ತರಿಸಿಕೊಳ್ಳುವ ಅವಕಾಶ ಇರುತ್ತದೆ. ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ

English summary

Without a risk you can Earn 40 lakhs in 15 years

Without a risk you can Earn 40 lakhs in 15 years. You have to open PPF account for this benefit.
Story first published: Wednesday, February 6, 2019, 16:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X