ನೀವು ವೇತನ ಪಡೆಯುವ ವ್ಯಕ್ತಿಗಳಾ..? ಹಾಗಿದ್ದರೆ ತಪ್ಪದೇ ಇಲ್ಲಿ ನೋಡಿ..

ನಮ್ಮ ದೇಶದಲ್ಲಿ ವೇತನ ಪಡೆಯುವ ಕೋಟಿ ಕೋಟಿ ಜನರು ಸರ್ಕಾರಿ ಮತ್ತು ಸರ್ಕಾರೆತರ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶದ ಹೆಚ್ಚಿನ ಜನರಿಗೆ ವೇತನದಲ್ಲಿನ ನಿರ್ದಿಷ್ಟ ಭಾಗವನ್ನು ಉಳಿತಾಯ ಮಾಡಬೇಕು ಎಂಬ ಮಾನಸಿಕತೆ ಇಲ್ಲ.

ನಮ್ಮ ದೇಶದಲ್ಲಿ ವೇತನ ಪಡೆಯುವ ಕೋಟಿ ಕೋಟಿ ಜನರು ಸರ್ಕಾರಿ ಮತ್ತು ಸರ್ಕಾರೆತರ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶದ ಹೆಚ್ಚಿನ ಜನರಿಗೆ ವೇತನದಲ್ಲಿನ ನಿರ್ದಿಷ್ಟ ಭಾಗವನ್ನು ಉಳಿತಾಯ ಮಾಡಬೇಕು ಎಂಬ ಮಾನಸಿಕತೆ ಇಲ್ಲ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಅದೇನೆ ಇರಲಿ ವೇತನ ಪಡೆಯುವ ಹೂಡಿಕೆದಾರರು ಯಾವಾಗಲೂ ಲಾಭದೊಂದಿಗೆ ಸುರಕ್ಷತೆಯನ್ನೂ, ತೆರಿಗೆ ವಿನಾಯಿತಿಯನ್ನೂ ಹಾಗೂ ಬಂಡವಾಳದ ದ್ರವ್ಯತೆಯನ್ನು ನಿರೀಕ್ಷೆ ಮಾಡುತ್ತಾರೆ. ಇಲ್ಲಿ ಹೇಳಿರುವಂತೆ ಮೇಲಿನ ವೇತನದಾರರು ಪ್ರತಿ ತಿಂಗಳು ಯಾವ ಯೋಜನೆಗಳಲ್ಲಿ ಹೂಡಿಕೆಗಳ ಮಾಡಬಹುದು ಎಂಬುದರ ಬಗ್ಗೆ ತಿಳಿಸಲಾಗಿದೆ.

KTDFC ಫಿಕ್ಸೆಡ್ ಡೆಪಾಸಿಟ್

KTDFC ಫಿಕ್ಸೆಡ್ ಡೆಪಾಸಿಟ್

ಒಂದು ವೇಳೆ ನೀವು ವೇತನದಾರರಾಗಿದ್ದು, ನಿಮ್ಮ ಗಳಿಕೆಯ ಸ್ವಲ್ಪ ಪ್ರಮಾಣದ ಹಣವನ್ನು ಉಳಿಸಲು ಬಯಸಿದ್ದರೆ ಕೇರಳ ಟ್ರಾನ್ಸ್ ಪೋರ್ಟ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಷನ್ ಠೇವಣಿಯನ್ನು ಆಯ್ಕೆ ಮಾಡಬಹುದು. ಇದು 1, 2 ಮತ್ತು 3 ವರ್ಷಗಳ ಅವಧಿಗೆ ಶೇ. 8.50 ಬಡ್ಡಿಯನ್ನು ಒದಗಿಸುತ್ತದೆ. ಕಡಿಮೆ ಅವಧಿಯಿಂದ ಮಧ್ಯಮ ಅವಧಿಯ ಹಿಡುವಳಿಯನ್ನು ನೀವು ಬಯಸುತ್ತಿದ್ದಲ್ಲಿ, ಇದು ತಕ್ಕಮಟ್ಟಿಗೆ ಉತ್ತಮ ಆಯ್ಕೆಯಾಗಿರುತ್ತದೆ. ಠೇವಣಿಯ ಹಣಕ್ಕೆ ಕೇರಳ ಸರ್ಕಾರವು ಭರವಸೆಯನ್ನು ನೀಡುವುದರಿಂದ ಹೂಡಿಕೆಗಾಗಿ ಈ ಆಯ್ಕೆ ಉತ್ತಮವಾಗಿದೆ. ಈ ಹೂಡಿಕೆಯ ಆಯ್ಕೆಯಲ್ಲಿರುವ ಒಂದೇ ಒಂದು ತೊಂದರೆ ಎಂದರೆ, ಯಾವುದೇ ಮಧ್ಯವರ್ತಿಗಳಿರದ ಕಾರಣ ನೀವು ಫಾರಂ ಅನ್ನು ಆನ್ಲೈನ್ ನಲ್ಲಿ ಭರ್ತಿ ಮಾಡಬೇಕಾಗುತ್ತದೆ ಮತ್ತು ಗಳಿಸಿದ ಬಡ್ಡಿಯ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ. ಅತಿಹೆಚ್ಚು ಆದಾಯ ಗಳಿಕೆಗೆ 5 ಎಫ್ಡಿ ವಿಧಾನಗಳು

ಪಿಪಿಎಫ್

ಪಿಪಿಎಫ್

ಸಾರ್ವಜನಿಕ ಭವಿಷ್ಯ ನಿಧಿ ಕೂಡಾ ವೇತನದಾರರಿಗೆ ಒಂದು ಒಳ್ಳೆಯ ಹೂಡಿಕೆ ವಿಧಾನವಾಗಿದೆ. ಏಕೆಂದರೆ ಗಳಿಸಿದ ಬಡ್ಡಿಯು ತೆರಿಗೆಯಿಂದ ವಿಮುಕ್ತವಾಗಿರುತ್ತದೆ ಮತ್ತು ಇದು ಸೆಕ್ಷನ್ 80ಸಿ ಯ ನಿಯಮದಡಿ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಈ ಸೆಕ್ಷನ್ ಪ್ರಕಾರ ರೂ. 1.5 ಲಕ್ಷ ಹೂಡಿಕೆಯ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಪ್ರಸ್ತುತ ಬಡ್ಡಿದರದ ಗಳಿಕೆ ಶೇ. 8 ರಷ್ಟಿದ್ದು, ಇದು ಒಳ್ಳೆಯ ದರವೇ ಆಗಿದೆ. ಇದರ ಮುಕ್ತಾಯದ ಅವಧಿ 15 ವರ್ಷ ಆಗಿರುವುದೊಂದೇ ಚಿಂತನೆಯ ವಿಷಯವಾಗಿದೆ. ನೀವು ಮೂರು ವರ್ಷಗಳ ನಂತರ ಸಾಲವನ್ನು ಪಡೆದುಕೊಳ್ಳಬಹುದು. ಅತೀ ಹೆಚ್ಚು ದ್ರವ್ಯತೆಯಿಲ್ಲದೆ, ಸುರಕ್ಷಿತ ಹಾಗೂ ಹೆಚ್ಚಿನ ತೆರಿಗೆ ವಿನಾಯಿತಿಯ ಆದಾಯವನ್ನು ಬಯಸುವವರಿಗೆ ಈ ಸ್ಕೀಮ್ ಉತ್ತಮವಾಗಿದೆ. ನೀವು ವರ್ಷಕ್ಕೆಕನಿಷ್ಟ ರೂ. 500 ರೂಪಾಯಿಗಳಷ್ಟು ಕಡಿಮೆ ಹೂಡಿಕೆಯನ್ನು ಮಾಡಬಹುದು.

ಮ್ಯೂಚುವಲ್ ಫಂಡ್ SIP

ಮ್ಯೂಚುವಲ್ ಫಂಡ್ SIP

ಪ್ರಸ್ತುತ ದಿನಗಳಲ್ಲಿ ಹೂಡಿಕೆದಾರರಿಗೆ ಇಷ್ಟವಾಗುತ್ತಿರುವ ಹೂಡಿಕೆಗಳೆಂದರೆ ಮ್ಯೂಚುವಲ್ ಫಂಡ್ ನ SIPಗಳು. ಇತ್ತೀಚೆಗೆ ಅನೇಕ ಹೂಡಿಕೆದಾರರು ಸಣ್ಣ ಪ್ರಮಾಣದ ಮೊತ್ತವನ್ನು ಇಕ್ವಿಟಿ ಮ್ಯೂಚುವಲ್ ಫಂಡ್ಸ್ ನ ವ್ಯವಸ್ಥಿತ ಹೂಡಿಕೆ ಯೋಜನೆ(SIP)ಗಳಲ್ಲಿ ವ್ಯವಸ್ಥಿತವಾಗಿ ಹೂಡಲು ಮುಂದಾಗುತ್ತಿದ್ದಾರೆ. ಆದಾಗ್ಯೂ ಈ ಯೋಜನೆಗಳು ಕಳೆದ ಒಂದು ವರ್ಷದಲ್ಲಿ ಷೇರುಗಳು ನೀಡಿದ ಅತ್ಯುತ್ತಮ ಆದಾಯದ ಆಧಾರದ ಮೇಲೆ ನಡೆಯುತ್ತಿವೆ. ಭವಿಷ್ಯದಲ್ಲಿ ಆದಾಯವು ಕಡಿಮೆಯಾಗುವುದರಿಂದ ಪ್ರತಿಯೊಬ್ಬರೂ ತಮ್ಮ ನಿರೀಕ್ಷೆಗಳನ್ನು ಕಡಿಮೆಗೊಳಿಸಬೇಕಿದೆ. ಉದಾಹರಣೆಗೆ, ಕೆಲವು ಇಕ್ವಿಟಿ ಸ್ಕೀಂಗಳು 3 ವರ್ಷಗಳಲ್ಲಿ ಆದಾಯವನ್ನು ಗಳಿಸಲು ವಿಫಲವಾದರೂ 5 ವರ್ಷಗಳಲ್ಲಿ ಯೋಗ್ಯ ಆದಾಯವನ್ನು ಗಳಿಸಿವೆ. ಸುರಕ್ಷತೆಯ ವಿಚಾರಕ್ಕೆ ಸಂಬಂಧಪಟ್ಟಂತೆ, ಇದು PPF ನಂತೆ ಖಾತರಿಯನ್ನು ನೀಡುವುದಿಲ್ಲ. ಆದ್ದರಿಂದ ರಕ್ಷಣಾಪೇಕ್ಷೆ ಇರುವ ಹೂಡಿಕೆದಾರರು ಈ ಆಯ್ಕೆಯನ್ನು ಆರಿಸಿಕೊಳ್ಳದಿರುವುದೇ ಒಳ್ಳೆಯದು.

ಮರುಕಳಿಸುವ ಠೇವಣಿಗಳು(RD)

ಮರುಕಳಿಸುವ ಠೇವಣಿಗಳು(RD)

ಅತೀ ಕಡಿಮೆ ಬಡ್ಡಿದರವೇ ಮರುಕಳಿಸುವ ಠೇವಣಿಯ ಒಂದು ತೊಡಕಾಗಿದೆ. ಅಲ್ಲದೇ ಇವು ತೆರಿಗೆಗೊಳಪಡುತ್ತವೆ. ಅಂದರೆ ಒಂದು ವೇಳೆ ನೀವು ಅತ್ಯಧಿಕ ತೆರಿಗೆಯ ವ್ಯಾಪ್ತಿಗೆ ಒಳಪಡುವವರಾಗಿದ್ದರೆ, ಇದು ಅತೀ ಕಡಿಮೆ ಗಳಿಕೆಯನ್ನು ನೀಡುತ್ತದೆ. ಇತರ ಬದಲಿ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಉತ್ತಮ ಆಯ್ಕೆ ಆಗಿರುತ್ತದೆ. ಆದಾಗ್ಯೂ, ಆವರ್ತಕ ಠೇವಣಿಗಳ ಅನುಕೂಲವೆಂದರೆ ಅವು ಹೂಡಿಕೆಯಲ್ಲಿ ಉತ್ತಮ ಲಿಕ್ವಿಡಿಟಿ ನೀಡುತ್ತವೆ. ಪ್ರತಿಯೊಬ್ಬರೂ ಹೂಡಿಕೆ ಮಾಡುವ ಮೊದಲು ಬಡ್ಡಿದರವನ್ನು ಹೋಲಿಸಿ, ಆನ್ಲೈನ್ ಹೂಡಿಕೆಯ ಇತರೆ ಅವಕಾಶಗಳನ್ನು ನೋಡಬಹುದು. ಈ ಆವರ್ತಕ ಠೇವಣಿಯ ಇನ್ನೊಂದು ಅನುಕೂಲವೆಂದರೆ, ಪ್ರಯಾಣ, ಮದುವೆಗಳಂತಹ ಯೋಜಿತ ಖರ್ಚುಗಳಿಗಾಗಿ ಬಳಸಬಹುದು.

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್

ವೇತನದಾರರ ವರ್ಗವು ಬಜಾಜ್ ಫೈನಾನ್ಸ್ ನ ಫಿಕ್ಸೆಡ್ ಡೆಪಾಸಿಟ್ ಗಳಲ್ಲಿ ಹೂಡಿಕೆಗಳ ಬಗ್ಗೆ ಯೋಚಿಸಬಹುದು. ಉದಾಹರಣೆಗೆ, ಬಜಾಜ್ ಫೈನಾನ್ಸ್ ಬೇರೆ ಬೇರೆ ಅವಧಿಗಳಿಗೆ ಶೇ. 8ರಿಂದ ಶೇ. 8.75ರವರೆಗೆ ಬಡ್ಡಿದರವನ್ನು ನೀಡುತ್ತದೆ. ಈ ಕಂಪೆನಿಯ ಫಿಕ್ಸೆಡ್ ಡೆಪಾಸಿಟ್ ಗಳು AAA ರೇಟೆಡ್ ಶ್ರೇಯಾಂಕ ಹೊಂದಿದ್ದು, ಹೆಚ್ಚು ಸುರಕ್ಷಿತವಾಗಿವೆ.

ಚಿನ್ನ

ಚಿನ್ನ

ವೇತನದಾರರಾದವರು ಆಯ್ಕೆ ಮಾಡಬಹುದಾದ ಇನ್ನೊಂದು ವಿಧಾನವೆಂದರೆ ಚಿನ್ನ. ಸಂಭವನೀಯ ಹಾನಿಯನ್ನು ತಪ್ಪಿಸಬೇಕೆಂದರೆ ನೀವು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಉದಾಹರಣೆಗೆ, ನೀವು ನಿಮ್ಮ ಎಲ್ಲಾ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಿದ್ದು, ಅವು ಒಂದು ವೇಳೆ ಕುಸಿತ ಕಾಣಲು ಪ್ರಾರಂಭಿಸಿದ್ದಲ್ಲಿ ಗಣನೀಯ ಪ್ರಮಾಣದಲ್ಲಿ ಹಣವನ್ನು ಕಳೆದುಕೊಳ್ಳಬಹುದು. ಒಂದು ವೈವಿದ್ಯೀಕರಣದ ಕ್ರಮವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ ವಿಧಾನವಾಗಿದೆ. ಮದುವೆ, ಹಬ್ಬ ಸಮಾರಂಭಗಳಿಗೆ ಬೇಕಾಗುವ ಚಿನ್ನದ ಅವಶ್ಯಕತೆಯನ್ನು ಪೂರೈಸಲೂ ಚಿನ್ನದ ಮೇಲೆ ಹೂಡಿಕೆಯನ್ನು ಮಾಡಬಹುದು.

ಮಹೀಂದ್ರಾ ಮತ್ತು ಮಹೀಂದ್ರಾ ಫೈನಾನ್ಸಿಯಲ್ ಸರ್ವೀಸಸ್

ಮಹೀಂದ್ರಾ ಮತ್ತು ಮಹೀಂದ್ರಾ ಫೈನಾನ್ಸಿಯಲ್ ಸರ್ವೀಸಸ್

ಇದು ಸಣ್ಣ ಹಣಕಾಸು ಬ್ಯಾಂಕ್ ಅಲ್ಲ, ಆದರೆ, ಒಂದು NBFC. ಕಂಪನಿಯ ಠೇವಣಿಗಳು ಎಎಎ ಶ್ರೇಯಾಂಕ ಹೊಂದಿದ್ದು, ಉತ್ತಮ ಭದ್ರತೆಯನ್ನು ಒದಗಿಸುತ್ತವೆ. ಆನ್ಲೈನ್ ​​ಹೂಡಿಕೆದಾರರಿಗೆ 36 ತಿಂಗಳಲ್ಲಿ ಶೇ. 9ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಈ ದರವು ಆನ್ಲೈನ್ ​​ಹೂಡಿಕೆದಾರರಿಗೆ ಮಾತ್ರ ಎಂಬುದನ್ನು ಗಮನಿಸಬೇಕು. ಶಾಖೆಗೆ ತೆರಳಿ ಎಫ್ಡಿ ತೆರೆಯುವವರು ಶೇ. 8.80 ಮಾತ್ರ ಬಡ್ಡಿಯ ದರಕ್ಕೆ ಅರ್ಹರಾಗಿರುತ್ತಾರೆ. ಇದು ಮಹೀಂದ್ರಾ ಗ್ರೂಪ್ ನಡೆಸುತ್ತಿರುವುದರಿಂದ ಈ ಎಫ್ಡಿ ಗಳನ್ನು ಸುರಕ್ಷಿತವೆಂದು ಪರಿಗಣಿಸಬಹುದು. ಈ ಕಂಪೆನಿಯ ಫಿಕ್ಸೆಡ್ ಡೆಪಾಸಿಟ್ ಗಳು AAA ರೇಟೆಡ್ ಶ್ರೇಯಾಂಕ ಹೊಂದಿದ್ದು, ಹೆಚ್ಚು ಸುರಕ್ಷಿತವಾಗಿವೆ.

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಈ ಬ್ಯಾಂಕ್ ಮೂರು ವರ್ಷಗಳವಧಿಗೆ ಶೇ. 9ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಠೇವಣಿಯ ವಾರ್ಷಿಕ ಇಳುವರಿ ಸುಮಾರು ಮೂರು ವರ್ಷಗಳವರೆಗೆ ಶೇ. 10.20ವರೆಗೆ ಹೊಗಬಹುದು. ಹಿರಿಯ ನಾಗರಿಕರು ಶೇ. 9.60 ಬಡ್ಡಿದರಕ್ಕೆ ಅರ್ಹರಾಗಿರುತ್ತಾರೆ. ಮೂರು ವರ್ಷಗಳ ಠೇವಣಿ ದರವು ಶೇ. 10.67ರಷ್ಟು ಪಡೆಯಬಹುದು. ಒಂದು ವರ್ಷದ ಠೇವಣಿ ಮೇಲೆ ಶೆ. 8.50 ಮತ್ತು ಹಿರಿಯ ನಾಗರಿಕರು ಶೇ. 9.10 ರಷ್ಟು ಬಡ್ಡಿ ದರವನ್ನು ಪಡೆಯಬಹುದು. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಂಬುದು ಬೆಂಗಳೂರಿನ ಮೂಲದ ಸಣ್ಣ ಹಣಕಾಸು ಬ್ಯಾಂಕ್ ಆಗಿದ್ದು, ಮೊದಲೇ ಹೇಳಿದಂತೆ ಈ ಬ್ಯಾಂಕ್ ನ್ನು ಆರ್ಬಿಐ ಅನುಮೋದಿಸಿದೆ. ಕೇವಲ 5 ವರ್ಷಗಳಲ್ಲಿ ನಿಮ್ಮ ಆದಾಯ ಡಬಲ್ ಮಾಡಬಲ್ಲ ಟಾಪ್ 10 ಮ್ಯೂಚುವಲ್ ಫಂಡ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+