For Quick Alerts
ALLOW NOTIFICATIONS  
For Daily Alerts

ಅತಿಹೆಚ್ಚು ಆದಾಯ ಗಳಿಕೆಗೆ 5 ಎಫ್ಡಿ ವಿಧಾನಗಳು

ಆರ್ಬಿಐ ದುರ್ಬಲ ಹಣದುಬ್ಬರದ ಹಿನ್ನೆಲೆಯಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ಬಡ್ಡಿದರಗಳು ಕಡಿಮೆಯಾಗುವ ಸಾದ್ಯತೆಯಿದೆ. ಆದ್ದರಿಂದ ಹೆಚ್ಚಿನ ಆದಾಯ ಕೊಡುವ ಸ್ಥಿರ ಠೇವಣಿಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ಸೂಕ್ತವಾಗಿದೆ.

|

ಆರ್ಬಿಐ ದುರ್ಬಲ ಹಣದುಬ್ಬರದ ಹಿನ್ನೆಲೆಯಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ಬಡ್ಡಿದರಗಳು ಕಡಿಮೆಯಾಗುವ ಸಾದ್ಯತೆಯಿದೆ. ಆದ್ದರಿಂದ ಹೆಚ್ಚಿನ ಆದಾಯ ಕೊಡುವ ಸ್ಥಿರ ಠೇವಣಿಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ಸೂಕ್ತವಾಗಿದೆ. ಇಲ್ಲಿ ಹೆಚ್ಚಿನ ಕಂಪನಿಗಳ ಎಫ್ಡಿಗಳನ್ನು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಏಕೆಂದರೆ ಇವುಗಳು ಉನ್ನತ ಆದಾಯವನ್ನು ನೀಡುತ್ತದೆ. ಈ ಬ್ಯಾಂಕುಗಳನ್ನು ಆರ್ಬಿಐ ನಿಯಂತ್ರಿಸುವುದರಿಂದ ಅವುಗಳನ್ನು ಸಮಂಜಸವಾಗಿ ಸುರಕ್ಷಿತವೆಂದು ಪರಿಗಣಿಸಬಹುದು. ಫಿಕ್ಸೆಡ್ ಡಿಪಾಸಿಟ್ ಹೂಡಿಕೆಗೆ ಮುನ್ನ ಇಲ್ಲೊಮ್ಮೆ ನೋಡಿ

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಈ ಬ್ಯಾಂಕ್ ಮೂರು ವರ್ಷಗಳವಧಿಗೆ ಶೇ. 9ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಠೇವಣಿಯ ವಾರ್ಷಿಕ ಇಳುವರಿ ಸುಮಾರು ಮೂರು ವರ್ಷಗಳವರೆಗೆ ಶೇ. 10.20ವರೆಗೆ ಹೊಗಬಹುದು. ಹಿರಿಯ ನಾಗರಿಕರು ಶೇ. 9.60 ಬಡ್ಡಿದರಕ್ಕೆ ಅರ್ಹರಾಗಿರುತ್ತಾರೆ. ಮೂರು ವರ್ಷಗಳ ಠೇವಣಿ ದರವು ಶೇ. 10.67ರಷ್ಟು ಪಡೆಯಬಹುದು. ಒಂದು ವರ್ಷದ ಠೇವಣಿ ಮೇಲೆ ಶೆ. 8.50 ಮತ್ತು ಹಿರಿಯ ನಾಗರಿಕರು ಶೇ. 9.10 ರಷ್ಟು ಬಡ್ಡಿ ದರವನ್ನು ಪಡೆಯಬಹುದು. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಂಬುದು ಬೆಂಗಳೂರಿನ ಮೂಲದ ಸಣ್ಣ ಹಣಕಾಸು ಬ್ಯಾಂಕ್ ಆಗಿದ್ದು, ಮೊದಲೇ ಹೇಳಿದಂತೆ ಈ ಬ್ಯಾಂಕ್ ನ್ನು ಆರ್ಬಿಐ ಅನುಮೋದಿಸಿದೆ.

ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಇದು ಬಹಳ ಯೋಗ್ಯವಾದ ಬಡ್ಡಿ ದರಗಳನ್ನು ಹೊಂದಿರುವ ಮತ್ತೊಂದು ಸಣ್ಣ ಹಣಕಾಸು ಬ್ಯಾಂಕ್ ಆಗಿದೆ. ಈ ಬ್ಯಾಂಕ್ ಸಾಮಾನ್ಯ ಜನರಿಗೆ ಶೇ. 9 ರಷ್ಟು ಬಡ್ಡಿದರವನ್ನು ಮತ್ತು ಹಿರಿಯ ನಾಗರಿಕರಿಗೆ ಶೇ. 9.50 ಬಡ್ಡಿದರ 24 ತಿಂಗಳಿನಿಂದ 36 ತಿಂಗಳವರೆಗೆ ಠೇವಣಿ ಮೇಲೆ ನೀಡುತ್ತದೆ.
21 ತಿಂಗಳ 1 ದಿನದಿಂದ 24 ತಿಂಗಳವರೆಗೆ ಠೇವಣಿ ಮೇಲೆ ಶೇ. 8.75 ರಷ್ಟು ಬಡ್ಡಿದರವನ್ನು ನೀಡುತ್ತದೆ. ಇದು ದೇಶದ ವಾಣಿಜ್ಯ ಠೇವಣಿಗಳಿಗೆ ಹೋಲಿಸಿದರೆ ಹೆಚ್ಚಿದ್ದು, ವಾಣಿಜ್ಯ ಬ್ಯಾಂಕುಗಳು ಗರಿಷ್ಠ ಬಡ್ಡಿ ದರವನ್ನು 8 ಶೇಕಡಾ ನೀಡುತ್ತವೆ.

ಮಹೀಂದ್ರಾ ಮತ್ತು ಮಹೀಂದ್ರಾ ಫೈನಾನ್ಸಿಯಲ್ ಸರ್ವೀಸಸ್

ಮಹೀಂದ್ರಾ ಮತ್ತು ಮಹೀಂದ್ರಾ ಫೈನಾನ್ಸಿಯಲ್ ಸರ್ವೀಸಸ್

ಇದು ಸಣ್ಣ ಹಣಕಾಸು ಬ್ಯಾಂಕ್ ಅಲ್ಲ, ಆದರೆ, ಒಂದು NBFC. ಕಂಪನಿಯ ಠೇವಣಿಗಳು ಎಎಎ ಶ್ರೇಯಾಂಕ ಹೊಂದಿದ್ದು, ಉತ್ತಮ ಭದ್ರತೆಯನ್ನು ಒದಗಿಸುತ್ತವೆ. ಆನ್ಲೈನ್ ​​ಹೂಡಿಕೆದಾರರಿಗೆ 36 ತಿಂಗಳಲ್ಲಿ ಶೇ. 9ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಈ ದರವು ಆನ್ಲೈನ್ ​​ಹೂಡಿಕೆದಾರರಿಗೆ ಮಾತ್ರ ಎಂಬುದನ್ನು ಗಮನಿಸಬೇಕು. ಶಾಖೆಗೆ ತೆರಳಿ ಎಫ್ಡಿ ತೆರೆಯುವವರು ಶೇ. 8.80 ಮಾತ್ರ ಬಡ್ಡಿಯ ದರಕ್ಕೆ ಅರ್ಹರಾಗಿರುತ್ತಾರೆ. ಇದು ಮಹೀಂದ್ರಾ ಗ್ರೂಪ್ ನಡೆಸುತ್ತಿರುವುದರಿಂದ ಈ ಎಫ್ಡಿ ಗಳನ್ನು ಸುರಕ್ಷಿತವೆಂದು ಪರಿಗಣಿಸಬಹುದು.

ಬಜಾಜ್ ಫೈನ್ ಸರ್ವ್

ಬಜಾಜ್ ಫೈನ್ ಸರ್ವ್

ಇದು ಎಎಎ ಶ್ರೇಯಾಂಕ ಹೊಂದಿರುವ ಬಜಾಜ್ ಸಂಸ್ಥೆಯ ಠೇವಣಿ. 36-60 ತಿಂಗಳ ಠೇವಣಿ ಬಡ್ಡಿ ದರವು ಶೇ. 8.75ರಷ್ಟಿರುತ್ತದೆ. 12-23 ತಿಂಗಳ ಠೇವಣಿ ಮೇಲೆ ಶೇ. 8 ಬಡ್ಡಿದರ ಪಡೆಯಬಹುದು. ಬ್ಯಾಂಕಿನ ಠೇವಣಿಗಳ ಮೇಲೆ ಹೆಚ್ಚು ಸುರಕ್ಷತೆ ಮತ್ತು ಆದಾಯವನ್ನು ನೋಡುತ್ತಿರುವವರಿಗೆ ಇದು ಒಂದು ಉತ್ತಮವಾದ ಆಯ್ಕೆಯಾಗಿದೆ.

ಕೇರಳ ಸಾರಿಗೆ ಅಭಿವೃದ್ಧಿ ಹಣಕಾಸು ನಿಗಮ (ಕೆಟಿಡಿಎಫ್ಸಿ)

ಕೇರಳ ಸಾರಿಗೆ ಅಭಿವೃದ್ಧಿ ಹಣಕಾಸು ನಿಗಮ (ಕೆಟಿಡಿಎಫ್ಸಿ)

ಇದು ಕೇರಳ ಸರ್ಕಾರದ ಉದ್ಯಮ ಮತ್ತು ಠೇವಣಿಗಳನ್ನು ಕೇರಳ ಸರ್ಕಾರವು ಬೆಂಬಲಿಸುತ್ತದೆ. ಸಂಚಿತ ಆಧಾರದ ಮೇಲೆ ಎಫ್ಡಿ ಗಳು ಶೇ. 8.50 ಬಡ್ಡಿ ದರವನ್ನು ಪಡೆದುಕೊಳ್ಳುತ್ತವೆ. ಇದು ತುಂಬಾ ಸುರಕ್ಷಿತವೆಂದು ಪರಿಗಣಿಸಬಹುದಾಗಿದ್ದು, ಹೆಚ್ಚಿನ ಇಳುವರಿಯನ್ನು ಖಾತ್ರಿಗೊಳಿಸುತ್ತದೆ. ( Read in English: 5 Fixed Deposit Ideas With SuperbReturns And for Finance articles click here https://www.goodreturns.in/authors/sunil.html )

Read in English: Best Finance Articles
Read more about: fd money savings investments
English summary

5 Fixed Deposit Ideas With Superb Returns

Interest rates are likely to move lower in the next couple of months, as the RBI may cut interest rates on benign inflation data.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X