For Quick Alerts
ALLOW NOTIFICATIONS  
For Daily Alerts

ನಿರಂತರ ಮತ್ತು ಸುರಕ್ಷಿತ ಮಾಸಿಕ ಆದಾಯಕ್ಕಾಗಿ ಬೆಸ್ಟ್ ಪ್ಲಾನ್

ದೀರ್ಘಾವಧಿಯಲ್ಲಿ ಉಳಿತಾಯ ಮಾಡುವುದು ಹಾಗೂ ದೊಡ್ಡ ಮೊತ್ತದ ಹಣ ಸಂಗ್ರಹಿಸುವುದೇ ಬಹುತೇಕ ಜನರ ಹಣಕಾಸು ಹೂಡಿಕೆಯ ಉದ್ದೇಶವಾಗಿರುತ್ತದೆ. ಆದಾಗ್ಯೂ ದೊಡ್ಡ ಮೊತ್ತದ ನಿಧಿ ಸಂಗ್ರಹಿಸುವುದೇ ದೀರ್ಘಾವಧಿ ಉಳಿತಾಯದ ಗುರಿಯಾಗಿರುತ್ತದೆ.

|

ದೀರ್ಘಾವಧಿಯಲ್ಲಿ ಉಳಿತಾಯ ಮಾಡುವುದು ಹಾಗೂ ದೊಡ್ಡ ಮೊತ್ತದ ಹಣ ಸಂಗ್ರಹಿಸುವುದೇ ಬಹುತೇಕ ಜನರ ಹಣಕಾಸು ಹೂಡಿಕೆಯ ಉದ್ದೇಶವಾಗಿರುತ್ತದೆ. ಆದಾಗ್ಯೂ ದೊಡ್ಡ ಮೊತ್ತದ ನಿಧಿ ಸಂಗ್ರಹಿಸುವುದೇ ದೀರ್ಘಾವಧಿ ಉಳಿತಾಯದ ಗುರಿಯಾಗಿರುತ್ತದೆ. ಆದರೆ ಹೀಗೆ ದೀರ್ಘಾವಧಿಯಲ್ಲಿ ನಿಧಿ ಸಂಗ್ರಹಿಸಲು ಹೂಡಿಕೆ ಮಾಡುತ್ತಿರುವಾಗ ಮಾಸಿಕವಾಗಿಯೂ ಆದಾಯ ಪಡೆಯಲು ಕೆಲವು ದಾರಿಗಳಿವೆ. ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಹಾಗೂ ಮ್ಯೂಚುವಲ್ ಫಂಡ್ ಮಾಸಿಕ ಆದಾಯ ಯೋಜನೆಗಳು ನಿಯಮಿತವಾಗಿ ಆದಾಯ ಪಡೆಯಲು ಅತ್ಯಂತ ಸೂಕ್ತ ಯೋಜನೆಗಳಾಗಿವೆ. ಇವುಗಳಲ್ಲಿನ ಹೂಡಿಕೆ ಹಾಗೂ ಆದಾಯಕ್ಕೆ ಉತ್ತಮ ಖಾತರಿಯೂ ಇರುತ್ತದೆ. ಈ ಯೋಜನೆಗಳ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಸ್ಯಾಲರಿ ಹೆಚ್ಚಿಸಿಕೊಳ್ಳಬೇಕೆ?

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (Post Office monthly income scheme-POMIS)

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (Post Office monthly income scheme-POMIS)

ಇದು 5 ವರ್ಷಗಳ ಅವಧಿಯ ಹೂಡಿಕೆ ಯೋಜನೆಯಾಗಿದ್ದು ಒಬ್ಬ ವ್ಯಕ್ತಿ ಗರಿಷ್ಠ 4.5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು. ಇಬ್ಬರು ವ್ಯಕ್ತಿಗಳಾದರೆ ಜಂಟಿಯಾಗಿ ಗರಿಷ್ಠ 9 ಲಕ್ಷ ರೂ. ಹೂಡಿಕೆ ಮಾಡಲು ಅವಕಾಶವಿದೆ. ಪ್ರಸ್ತುತ ಈ ಯೋಜನೆಯಲ್ಲಿ ವಾರ್ಷಿಕ ಶೇ.7.7 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದ್ದು, ಇದನ್ನು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಷ್ಕರಿಸಲಾಗುತ್ತದೆ. ಉದಾಹರಣೆಗೆ ನೋಡಿದರೆ- ವ್ಯಕ್ತಿಯೊಬ್ಬ ಇದರಲ್ಲಿ 2 ಲಕ್ಷ ರೂ. ತೊಡಗಿಸಿದಲ್ಲಿ ಮಾಸಿಕವಾಗಿ 1300 ರೂ. ಬಡ್ಡಿ ಆದಾಯ ಪಡೆಯಬಹುದು. ಪ್ರತಿ ತಿಂಗಳು ಸುರಕ್ಷಿತ ಹಾಗೂ ಖಾತರಿದಾಯಕ ಆದಾಯ ಪಡೆಯಲು ಬಯಸುವವರು ಈ ಯೋಜನೆಯನ್ನು ಆಯ್ದುಕೊಳ್ಳಬಹುದು. ಅತಿ ಸರಳವಾದ ನಿಯಮಗಳನ್ನೊಳಗೊಂಡ ಈ ಯೋಜನೆ ಮಾಸಿಕ ಆದಾಯ ಹೂಡಿಕೆಗೆ ಉತ್ತಮವಾಗಿದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme-SCSS)

ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme-SCSS)

ಹಿರಿಯ ನಾಗರಿಕರಿಗಾಗಿ ನಿರಂತರವಾಗಿ ಆದಾಯ ನೀಡುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ. ಇದು ಅತ್ಯಂತ ಸುರಕ್ಷಿತವಾದ ಹೂಡಿಕೆ ಯೋಜನೆಯಾಗಿದ್ದು, ಇದರಲ್ಲಿ ತೆರಿಗೆ ವಿನಾಯಿತಿ ಸೌಲಭ್ಯಗಳೂ ಇವೆ. 60 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ವಯಸ್ಸಿನವರು ಮಾತ್ರ ಯೋಜನೆಯ ಲಾಭ ಪಡೆಯಬಹುದು. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರು ಕನಿಷ್ಠ 50 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ 55 ರಿಂದ 60 ನೇ ವಯಸ್ಸಿನ ಮಧ್ಯದಲ್ಲಿ ಸ್ವಯಂ ನಿವೃತ್ತಿ ಯೋಜನೆ ಪಡೆದವರು ಸಹ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಪ್ರಸ್ತುತ ವಾರ್ಷಿಕವಾಗಿ ಶೇ.8.3 ರಷ್ಟು ಬಡ್ಡಿದರ ಇದ್ದು ಇದನ್ನು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಷ್ಕರಿಸಲಾಗುತ್ತದೆ. ಇದೊಂದು ಖಾತರಿದಾಯಕ ಆದಾಯ ಯೋಜನೆಯಾಗಿದೆ. ಹೂಡಿದ ಹಣದ ಮೇಲೆ ಪ್ರತಿ ತಿಂಗಳು ಬಡ್ಡಿ ಆದಾಯ ನೀಡಲಾಗುತ್ತದೆ. ಯೋಜನೆಯ ಅವಧಿಯ ಕೊನೆಯಲ್ಲಿ ಹೂಡಿಕೆ ಮಾಡಲಾದ ಸಂಪೂರ್ಣ ಮೊತ್ತವನ್ನು ಮರಳಿ ನೀಡಲಾಗುತ್ತದೆ. ನಿವೃತ್ತಿ ನಂತರ ನಿರಂತರ ಆದಾಯ ಪಡೆಯಬಯಸುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ವರಿಷ್ಠ ಪೆನ್ಷನ್ ಬಿಮಾ ಯೋಜನಾ (Varishtha Pension Bima Yojana)

ವರಿಷ್ಠ ಪೆನ್ಷನ್ ಬಿಮಾ ಯೋಜನಾ (Varishtha Pension Bima Yojana)

ಹಿರಿಯ ನಾಗರಿಕರಿಗಾಗಿ ರೂಪಿಸಲಾದ ಏಕ ಕಂತಿನ ಪ್ರೀಮಿಯಂ ಹೂಡಿಕೆ ಯೋಜನೆಯಾಗಿದೆ. ಹೂಡಿಕೆಯ ಒಂದು ತಿಂಗಳ ನಂತರ ಹೂಡಿಕೆದಾರ ತಾನು ಬಯಸಿದ ನಿರ್ದಿಷ್ಟ ಅವಧಿಯ ಅಂತರದಲ್ಲಿ ಆದಾಯ ಪಡೆಯಬಹುದು. ಈ ಯೋಜನೆಯ ಬಡ್ಡಿದರವನ್ನು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಷ್ಕರಿಸಲಾಗುತ್ತದೆ. ಸಾಮಾನ್ಯವಾಗಿ ಈ ಯೋಜನೆಯಲ್ಲಿ ವಾರ್ಷಿಕ ಶೇ.8 ರಷ್ಟು ಬಡ್ಡಿ ನೀಡಲಾಗುತ್ತಿದ್ದು, 15 ವರ್ಷಗಳ ಅವಧಿಗೆ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಇದೊಂದು ಸುರಕ್ಷಿತವಾದ ಹೂಡಿಕೆ ಯೋಜನೆಯಾಗಿದ್ದು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕವಾಗಿ ಆದಾಯ ಪಡೆಯಬಹುದಾಗಿದೆ.

ಮ್ಯೂಚುವಲ್ ಫಂಡ್ ಮಾಸಿಕ ಆದಾಯ ಯೋಜನೆ (Mutual Funds Monthly Income Scheme-MIP)

ಮ್ಯೂಚುವಲ್ ಫಂಡ್ ಮಾಸಿಕ ಆದಾಯ ಯೋಜನೆ (Mutual Funds Monthly Income Scheme-MIP)

ಇದೊಂದು ಮಾರ್ಕೆಟ್ ಲಿಂಕ್ಡ್ ಹೂಡಿಕೆ ಯೋಜನೆಯಾಗಿದ್ದು ಇದರಲ್ಲಿ ಯಾರು ಬೇಕಾದರೂ ಹಣ ತೊಡಗಿಸಬಹುದು. ಇದರಲ್ಲಿ ಮಾಸಿಕ ಅಥವಾ ತ್ರೈಮಾಸಿಕವಾಗಿ ಆದಾಯದ ಖಾತರಿ ನೀಡಲಾಗುವುದಿಲ್ಲ. ಇದು ಡೆಬ್ಟ್ ಮ್ಯೂಚುವಲ್ ಫಂಡ್ ಸ್ಕೀಂ ಆಗಿದ್ದು, ಒಟ್ಟಾರೆ ಮೊತ್ತದಲ್ಲಿ ಶೇ.15 ರಿಂದ 25 ರಷ್ಟು ಹಣವನ್ನು ಇಕ್ವಿಟಿಗಳಲ್ಲಿ ಹಾಗೂ ಉಳಿದ ಮೊತ್ತವನ್ನು ಡೆಬ್ಟ್ ಸಾಧನಗಳಲ್ಲಿ ಹೂಡಲಾಗುತ್ತದೆ. ಈ ಯೋಜನೆಗಳಲ್ಲಿ ಮಾಸಿಕ, ತ್ರೈಮಾಸಿಕ ಹಾಗೂ ಅರ್ಧವಾರ್ಷಿಕವಾಗಿ ಆದಾಯ ಪಡೆಯಬಹುದು. ತಿಂಗಳಿಗೆ 5000 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೇ ಓದಿ..

Read more about: savings money investments
English summary

These options offer regular income, safe returns

People often associate investments with long-term savings and higher returns. However, most investments are made to build a corpus for a goal.
Story first published: Thursday, March 14, 2019, 10:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X