ಎಲ್ಐಸಿ ನ್ಯೂ ಮನಿ ಬ್ಯಾಕ್ ಪ್ಲಾನ್ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ಸಂಸ್ಥೆ ದೇಶದ ಅತಿದೊಡ್ಡ ಜೀವ ವಿಮಾ ಕಂಪೆನಿಯಾಗಿದೆ. ಎಲ್ಐಸಿ ಹಲವಾರು ವಿಧದ ವಿಮಾ ಯೋಜನೆಗಳನ್ನು ಒದಗಿಸುತ್ತಿದ್ದು, ಅದರಲ್ಲಿ ಮನಿ ಬ್ಯಾಕ್ ವಿಮಾ ಯೋಜನೆಗಳು ಕೂಡ ಸೇರಿವೆ.

ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ಸಂಸ್ಥೆ ದೇಶದ ಅತಿದೊಡ್ಡ ಜೀವ ವಿಮಾ ಕಂಪೆನಿಯಾಗಿದೆ. ಎಲ್ಐಸಿ ಹಲವಾರು ವಿಧದ ವಿಮಾ ಯೋಜನೆಗಳನ್ನು ಒದಗಿಸುತ್ತಿದ್ದು, ಅದರಲ್ಲಿ ಮನಿ ಬ್ಯಾಕ್ ವಿಮಾ ಯೋಜನೆಗಳು ಕೂಡ ಸೇರಿವೆ. ಸರ್ಕಾರಿ ಸ್ವಾಮ್ಯದ ಎಲ್ಐಸಿ ಕಂಪನಿಯು ನೀಡುವ ಮನಿ ಬ್ಯಾಕ್ ವಿಮೆ ಯೋಜನೆ ಎಂದರೆ ಎಲ್ಐಸಿ ನ್ಯೂ ಮನಿ ಬ್ಯಾಕ್ ಪ್ಲಾನ್ -20 ಇಯರ್ಸ್.
ಎಲ್.ಸಿ.ಸಿ ವೆಬ್ಸೈಟ್ ಪ್ರಕಾರ - www.licindia.in. ನಲ್ಲಿನ ಮಾಹಿತಿ ಪ್ರಕಾರ, ನ್ಯೂ ಮನಿ ಬ್ಯಾಕ್ ಪ್ಲಾನ್ -20 ಇಯರ್ಸ್ ಯೋಜನೆಯ ಮಿನಿಮಮ್ ಸಮ್ ಅಷೂರ್ಡ್ ರೂ. 1 ಲಕ್ಷ ಆಗಿರುತ್ತದೆ. ಈ ಸಮ್ ಅಷೂರ್ಡ್ ಮೊತ್ತದಲ್ಲಿ ಯಾವುದೇ ಮಿತಿ ಇಲ್ಲ. ಎಲ್ಐಸಿ ಪಾಲಿಸಿದಾರರು ತಿಳಿದುಕೊಳ್ಳಲೇಬೇಕಾದ 10 ಸಂಗತಿ

ಎಲ್ಐಸಿಯ ನ್ಯೂ ಮನಿ ಬ್ಯಾಕ್ ಪ್ಲಾನ್ 20 ಇಯರ್ಸ್ ಯೋಜನೆಯೆ ಪ್ರೀಮಿಯಂ, ಅರ್ಹತೆ ಮತ್ತು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಆಶ್ವಾಸಿತ ಮೊತ್ತ (Sum Assured)

ಆಶ್ವಾಸಿತ ಮೊತ್ತ (Sum Assured)

ಎಲ್ಐಸಿಯ ನ್ಯೂ ಮನಿ ಬ್ಯಾಕ್ ಪ್ಲಾನ್ -20 ಇಯರ್ಸ್ ವಿಮೆಯಲ್ಲಿ ಹೂಡಬಹುದಾದ ಕನಿಷ್ಠ ಮೊತ್ತ ರೂ. 1 ಲಕ್ಷ ಮತ್ತು ಗರಿಷ್ಠ ಆಶ್ವಾಸಿತ ಮೊತ್ತಕ್ಕೆ ಮಿತಿ ಇರುವುದಿಲ್ಲ.

ಯಾರು ಖರೀದಿಸಬಹುದು?

ಯಾರು ಖರೀದಿಸಬಹುದು?

13 ಮತ್ತು 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿಯು ನ್ಯೂ ಮನಿ ಬ್ಯಾಕ್ ಪ್ಲಾನ್ ವಿಮಾ ಉತ್ಪನ್ನವನ್ನು ಖರೀದಿಸಬಹುದು. ವಿಮೆದಾರನು ತನ್ನ 70 ವರ್ಷಗಳ ಗರಿಷ್ಠ ಮೆಚುರಿಟಿ ವಯಸ್ಸಿನೊಂದಿಗೆ ಖರೀದಿಸಬಹುದು.

ಪ್ರೀಮಿಯಂ

ಪ್ರೀಮಿಯಂ

ಎಲ್ಐಸಿಯ ನ್ಯೂ ಮನಿ ಬ್ಯಾಕ್ ಯೋಜನೆ -20 ಇಯರ್ಸ್, ಒಬ್ಬ ವ್ಯಕ್ತಿ 20 ವರ್ಷಗಳ ಪಾಲಿಸಿ ಅವಧಿಯಲ್ಲಿ 15 ವರ್ಷಗಳವರೆಗೆ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಪ್ರೀಮಿಯಂಗಳನ್ನು ವಾರ್ಷಿಕ, ಅರ್ಧ-ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ ಮಾದರಿಯಲ್ಲಿ (ಇಸಿಎಸ್ ಮೂಲಕ ಮಾತ್ರ) ಅಥವಾ ಪಾಲಿಸಿಯ ಅವಧಿಯ ಮೇಲೆ ಸಂಬಳ ಕಡಿತಗಳ ಮೂಲಕ ನಿಯಮಿತವಾಗಿ ಪಾವತಿಸಬಹುದು.

ಮನಿ ಬ್ಯಾಕ್ ಪ್ರಯೋಜನ

ಮನಿ ಬ್ಯಾಕ್ ಪ್ರಯೋಜನ

ಆಶ್ವಾಸಿತ ಮೊತ್ತ (sum assured) 20% ನಷ್ಟು ಮೊತ್ತದ ಮೊದಲ ಹಣವನ್ನು ಪಾಲಿಸಿ ಅವಧಿಯ ಐದನೇ ವರ್ಷದ ಪೂರ್ಣಗೊಂಡ ನಂತರ ವಿಮಾದಾರನಿಗೆ ಸಲ್ಲುತ್ತದೆ. ತರುವಾಯ, 10 ವರ್ಷ ಮತ್ತು 15 ನೇ ವರ್ಷದ ಪಾಲಿಸಿ ಅವಧಿ ಮುಗಿದ ನಂತರ ವಿಮಾದಾರರಿಗೆ ಶೇ. 20ರಷ್ಟು ಮೊತ್ತವನ್ನು ನೀಡಲಾಗುತ್ತದೆ. 20 ನೇ ವರ್ಷ ಪೂರ್ಣಗೊಂಡ ನಂತರ ಉಳಿದ ಶೇ. 40ರಷ್ಟು ಮೊತ್ತ ವಿಮೆದಾರರಿಗೆ ಹಿಂದಿರುಗಿಸಲಾಗುತ್ತದೆ.

ತೆರಿಗೆ ಪ್ರಯೋಜನ

ತೆರಿಗೆ ಪ್ರಯೋಜನ

ಎಲ್ಐಸಿ ವೆಬ್ಸೈಟ್ ಮಾಹಿತಿ ಪ್ರಕಾರ, ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಪಾವತಿಸಿದ ಪ್ರೀಮಿಯಂ ಮೇಲೆ ಆದಾಯ ತೆರಿಗೆ ಲಾಭ ಪಡೆಯಲು ಚಂದಾದಾರರು ಅರ್ಹರಾಗಿದ್ದಾರೆ. ಎಲ್ಐಸಿ (LIC) ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+