For Quick Alerts
ALLOW NOTIFICATIONS  
For Daily Alerts

ಎಲ್ಐಸಿ ಪಾಲಿಸಿದಾರರು ತಿಳಿದುಕೊಳ್ಳಲೇಬೇಕಾದ 10 ಸಂಗತಿ

By Siddu Thorat
|

ದೇಶದ ವಿಮಾ ವಲಯದಲ್ಲಿ ಜೀವನ ವಿಮಾ ನಿಗಮವು((LIC) ಬಹುಮುಖ್ಯವಾದ ಹಣಕಾಸು ಸಂಸ್ಥೆಯಾಗಿ ಹೊರಹೊಮ್ಮಿದೆ.

ದೇಶವ್ಯಾಪಿ ಇದು ತನ್ನ ವಿಸ್ತಾರವನ್ನು ಹೊಂದಿಕೊಂಡಿದ್ದು, ಮಾರುಕಟ್ಟೆಯಲ್ಲಿ ವಿಧವಿಧದ ಎಲ್ಐಸಿ ಪಾಲಿಸಿಗಳು ಲಭ್ಯ ಇವೆ. ಎಲ್ಐಸಿ ಪಾಲಿಸಿಯನ್ನು ಆಯ್ಕೆ ಮಾಡುವ ಮುನ್ನ ಪಾಲಿಸಿಯ ಮಹತ್ವ ಮತ್ತು ಕಂಪನಿಯ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

ಹೀಗಾಗಿ ಪ್ರತಿಯೊಬ್ಬ ಎಲ್ಐಸಿ ಪಾಲಿಸಿದಾರರು ತಿಳಿದುಕೊಳ್ಳಲೇಬೇಕಾದ ಬಹುಮುಖ್ಯ 10 ಸಂಗತಿಗಳು ಇಲ್ಲಿವೆ ನೋಡಿ...

ಪಾಲಿಸಿ ಬಾಂಡ್ ಸುರಕ್ಷತೆ

ಪಾಲಿಸಿ ಬಾಂಡ್ ಸುರಕ್ಷತೆ

ಪಾಲಿಸಿ ಬಾಂಡ್ ಎಂಬುದು ನೀವು ಎಲ್ಐಸಿ ವಿಮೆಯನ್ನು ಮಾಡಿಸಿದ ನಂತರ ಕಂಪನಿಯವರು ನಿಮಗೆ ಕೊಡುವ ಸ್ವೀಕೃತಿ ದಾಖಲಾತಿ ಆಗಿರುತ್ತದೆ.
ಈ ಬಾಂಡಿನಲ್ಲಿ ಪಾಲಿಸಿಯ ಅವಧಿ, ನಿಯಮ, ವ್ಯಾಪ್ತಿಯ ಪ್ರಸ್ತಾವನೆ, ಷರತ್ತು, ನೀತಿ ಬಂಧಗಳ ಬಗ್ಗೆ ಉಲ್ಲೇಖಿಸಲಾಗಿರುತ್ತದೆ.
ಪಾಲಿಸಿಯ ಮೊತ್ತವನ್ನು ಪಡೆಯಬೇಕಾದ ಸಮಯದಲ್ಲಿ ಇದೇಲ್ಲವೂ ಬೇಕಾಗುತ್ತದೆ. ಅಲ್ಲದೇ ಸಾಲವನ್ನು ಪಡೆಯ ಬಯಸಿದಲ್ಲಿ ಅಥವಾ ಪಾಲಿಸಿಯನ್ನು ವರ್ಗಮಾಡಲು/ವಹಿಸಿಕೊಳ್ಳಲು ಬಯಸಿದಾಗ ಈ ಪಾಲಿಸಿ ಬಾಂಡ್ ಕಡ್ಡಾಯವಾಗಿ ಬೇಕಾಗುತ್ತದೆ.

ನಿಮ್ಮ ಪಾಲಿಸಿ ನಂಬರ್

ನಿಮ್ಮ ಪಾಲಿಸಿ ನಂಬರ್

9 ಅಂಕೆಗಳ ಪಾಲಿಸಿ ನಂಬರ್ ವಿಶಿಷ್ಟ ಗುರುತಿನ ಸಂಖ್ಯೆಯಾಗಿರುತ್ತದೆ. ಇದರಿಂದಾಗಿ ಇತರರ ಪಾಲಿಸಿ ನಂಬರ್ ಗಳಿಂದ ನಿಮ್ಮನ್ನು ಪ್ರತ್ಯೇಕವಾಗಿ ಹಾಗೂ ಸುರಕ್ಷಿತವಾಗಿ ಇಡುತ್ತದೆ. ಇದು ಪಾಲಿಸಿಯ ಅವಧಿಯವರೆಗೂ ಬದಲಾಗುವುದಿಲ್ಲ. ಯಾವುದೇ ಪತ್ರ ವ್ಯವಹಾರ ಅಥವಾ ಗೊಂದಲಗಳನ್ನು ನಿವಾರಿಸಬೇಕಾದಲ್ಲಿ ಪಾಲಿಸಿ ನಂಬರನ್ನು ಕಡ್ಡಾಯವಾಗಿ ಪ್ರಸ್ತಾಪಿಸಬೇಕಾಗುತ್ತದೆ.

ಪಾಲಿಸಿ ನೀತಿ

ಪಾಲಿಸಿ ನೀತಿ

ಪ್ರತಿಯೊಂದು ಪಾಲಿಸಿಯನ್ನು ಪ್ರತ್ಯೇಕವಾದ ಉಪಯೋಗಗಳಿಗಾಗಿ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ವಿಮಾ ಅವಧಿ ಮತ್ತು ಯೋಜನೆಗೆ ಅನುಗುಣವಾಗಿ ಇವು ಭಿನ್ನವಾಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು.

ಪಾಲಿಸಿಯಲ್ಲಿನ ಬದಲಾವಣೆಗಳು

ಪಾಲಿಸಿಯಲ್ಲಿನ ಬದಲಾವಣೆಗಳು

ಪಾಲಿಸಿದಾರರು ಅನೇಕ ಬದಲಾವಣೆಗಳನ್ನು ಮಾಡಬಹುದಾಗಿದ್ದು, ಪಾಲಿಸಿ ಅವಧಿ ಸರಿ ಹೊಂದದಿದ್ದಲ್ಲಿ ಅದನ್ನು ಬದಲಾಯಿಸಬಹುದು. ಅದಾಗ್ಯೂ, ಪಾಲಿಸಿ ಶುರುವಾದ ಒಂದು ವರ್ಷದ ಒಳಗಾಗಿ ಬದಲಾವಣೆಗೆ ಯಾವುದೇ ಅವಕಾಶ ಇರುವುದಿಲ್ಲ. ಆದರೆ ಪ್ರೀಮಿಯಂ ಕಂತನ್ನು ತುಂಬುವ ಸಂದರ್ಭದಲ್ಲಿ ಬೇಕಾದಲ್ಲಿ ಬದಲಾಯಿಸಬಹುದು.

ಒಂದು ವೇಳೆ ಪಾಲಿಸಿ ಕಳೆದುಕೊಂಡಲ್ಲಿ

ಒಂದು ವೇಳೆ ಪಾಲಿಸಿ ಕಳೆದುಕೊಂಡಲ್ಲಿ

ಒಂದು ವೇಳೆ ಪಾಲಿಸಿಯನ್ನು ಕಳೆದುಕೊಂಡಲ್ಲಿ ಬದಲಿಗೆ ನಕಲಿ ಪಾಲಿಸಿ ನೀಡಲಾಗುತ್ತದೆ. ಆದರೆ ಪಾಲಿಸಿ ಸಂಖ್ಯೆ, ನಿಯಮ ಹಾಗೂ ಅವಧಿ ಎಲ್ಲವೂ ಮೊದಲಿನದೆ ಆಗಿರುತ್ತದೆ. ಆದರೆ ನಷ್ಟಭರ್ತಿ ಬಾಂಡ್, ನಕಲಿ ಪಾಲಿಸಿಗಾಗಿ ತಗಲುವ ವೆಚ್ಚ, ಸ್ಟಾಂಪ್ ಫೀ ಮತ್ತು ಇನ್ನೀತರ ಅಗತ್ಯ ದಾಖಲಾತಿಗಳನ್ನು ನೀಡಬೇಕಾಗುತ್ತದೆ.

ಸಂಪರ್ಕ ವಿಳಾಸ ಸರಿಪಡಿಸಿ

ಸಂಪರ್ಕ ವಿಳಾಸ ಸರಿಪಡಿಸಿ

ಸಂಪರ್ಕ ವಿಳಾಸದಲ್ಲಿ ತಪ್ಪುಗಳಿದ್ದಲ್ಲಿ ತಕ್ಷಣವೇ ಬದಲಾಯಿಸಬೇಕಾಗುತ್ತದೆ. ಇಲ್ಲದಿದ್ದರೆ ಫ್ರೀಮಿಯಂ ನೋಟಿಸು, ಮೆಚುರಿಟಿ ಪ್ರಕಟಣೆಗಳು ಹಾಗೂ ಇನ್ನೀತರ ಲಾಭ ವ್ಯವಹಾರ ಪತ್ರಗಳು ನಿಮಗೆ ಸೇರುವಲ್ಲಿ ತಡವಾಗಬಹುದು ಇಲ್ಲವೇ ತಲುಪದೇ ಇರಬಹುದು.

ನಾಮನಿರ್ದೇಶನ

ನಾಮನಿರ್ದೇಶನ

ನಾಮಿನಿಗಳ ಹೆಸರು ಸರಿಯಾಗಿ ಪಾಲಿಸಿ ಬಾಂಡ್ ನಲ್ಲಿ ಉಲ್ಲೇಖಿಸಲಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪಾಲಿಸಿಯ ಅವಧಿಯ ಯಾವುದೇ ಹಂತದಲ್ಲೂ ನಾಮಿನಿಯ ಹೆಸರನ್ನು ಬದಲಾವಣೆ ಮಾಡಬಹುದು.

ನಿಯೋಜನೆ

ನಿಯೋಜನೆ

ಒಂದು ವೇಳೆ ನೀವು ಪಾಲಿಸಿಯ ಅಡಿಯಲ್ಲಿ ಎಲ್ಐಸಿ ಅಥವಾ ಇನ್ಯಾವುದೇ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯಬಯಸಿದಲ್ಲಿ ನಿಮ್ಮ ಪಾಲಿಸಿಯನ್ನು ಎಲ್ಐಸಿ ಅಥವಾ ಹಣಕಾಸು ಸಂಸ್ಥೆಗಳೊಂದಿಗೆ ನಿಯೋಜಿಸಬೇಕಾಗುತ್ತದೆ. ಸಾಲವನ್ನು ತಿರಿಸಿದ ನಂತರ ಪಾಲಿಸಿಯನ್ನು ನಿಮಗೆ ಮರಳಿಸಲಾಗುತ್ತದೆ.

ಪಾಲಿಸಿಗಳ ರದ್ದಾಗುವಿಕೆ

ಪಾಲಿಸಿಗಳ ರದ್ದಾಗುವಿಕೆ

ಅಂತಿಮ ದಿನಾಂಕದ ಒಳಗಾಗಿ ಪಾಲಿಸಿಯ ಫ್ರೀಮಿಯಂ ಮೊತ್ತ ಕಟ್ಟದಿದ್ದಲ್ಲಿ ಪಾಲಿಸಿಯ ನೀತಿ-ಒಪ್ಪಂದಗಳು ಫ್ರೀಮಿಯಂ ಮೊತ್ತ ಕಟ್ಟುವವರೆಗೂ ನಿರರ್ಥಕವಾಗಿರುತ್ತದೆ. ಹೀಗಾಗಿ ಸೂಕ್ತ ಸಮಯದಲ್ಲಿ ಫ್ರೀಮಿಯಂ ಮೊತ್ತವನ್ನು ಬಡ್ಡಿಯೊಂದಿಗೆ ಕಟ್ಟಿ ಪಾಲಿಸಿಗಳನ್ನು ಪುನಶ್ಚೇತನಗೊಳಿಸುವುದು ಉತ್ತಮ.

ಪಾಲಿಸಿಗಳ ಮೇಲೆ ಸಾಲ ಲಭ್ಯ

ಪಾಲಿಸಿಗಳ ಮೇಲೆ ಸಾಲ ಲಭ್ಯ

ಎಂಡೋನ್ಮೆಂಟ್ ವಿಧದ ಪಾಲಿಸಿಗಳ ಮೇಲೆ ಪಾಲಿಸಿದಾರರು ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ. ನೀವು ಬಡ್ಡಿ ಜತೆಗೆ ಸಾಲ ಮರುಪಾವತಿಸಬಹುದು ಅಥವಾ ಬಡ್ಡಿ ಪಾವತಿಸುವುದನ್ನು ಮುಂದುವರೆಸಬಹುದು.

English summary

10 Must Know Facts For All LIC Policyholders

Life Insurance Corporation (LIC) is the most preferred financial institution to avail insurance. There are are a wide range of LIC policies available in the market. Before opting for any policy it is better to know about the product and the company.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X