For Quick Alerts
ALLOW NOTIFICATIONS  
For Daily Alerts

30 ವಯಸ್ಸಿನೊಳಗೆ ಮಿಲಿಯನೇರ್ ಆಗಬಯಸುವವರು ಇದನ್ನು ಓದಲೇಬೇಕು..

|

ಮೂವತ್ತು ವಯಸ್ಸಿನ ಆಸುಪಾಸಿನಲ್ಲಿ ಮಿಲಿಯನೇರ್ ಆಗಿ ಹೊರಹೊಮ್ಮುವುದು ಅಚ್ಚರಿಯೆನಲ್ಲ. ಬದಲಾಗಿ ಇದು ಒಂಥರಾ ಪ್ಯಾಂಟಸಿ! ಆದರೆ ಇದು ಸಾದ್ಯ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಸಮಯ ವ್ಯರ್ಥ ಮಾಡುತ್ತಾ, ತಡ ಮಾಡುತ್ತಾ ಕೂರಬಾರದು. ನಿಮಗೆ ಮೂವತ್ತು ವಯಸ್ಸು ದಾಟುವ ಮುನ್ನ ಮಿಲಿಯನೇರ್ ಆಗಲು ಬಯಸಿದಲ್ಲಿ, ನಿಮಗೆ ಸಹಾಯಕವಾಗಬಲ್ಲ 9 ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಫಾಲೋ ಮನಿ
 

ಫಾಲೋ ಮನಿ

ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ನೀವು ಮಿಲಿಯನೇರ್ ಹಂತವನ್ನು ಸುಲಭವಾಗಿ ಏರಲು ಸಾಧ್ಯವಿಲ್ಲ. ಬದಲಾಗಿ ನೀವು ಕಷ್ಟಪಟ್ಟು ಸಾಧಿಸಬೇಕು. ಎಲ್ಲರೂ ಬಾಯಿಯಲ್ಲ ಬಂಗಾರದ ಚಮಚ ಇಟ್ಟುಕೊಂಡೆ ಹುಟ್ಟಿರುವುದಿಲ್ಲ. ಇದರ ಮೊದಲ ಹೆಜ್ಜೆಯೆಂದರೆ ನಿಮ್ಮ ಆದಾಯವನ್ನು ನಿಯಮಿತವಾಗಿ ಏರಿಸುವುದರ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಅದನ್ನು ಪುನರಾವರ್ತಿಸಿ. ಹಣದ ಮೇಲೆ ನಿಗಾವಹಿಸಿ ನಿಯಂತ್ರಿಸಲು ಪ್ರಾರಂಭಿಸಿ ಹಾಗು ಸದಾ ಅವಕಾಶಗಳನ್ನು ಎದುರು ನೋಡುತ್ತಿರಿ.

ಜಂಭ ಬೇಡ, ಕೆಲಸ ಮಾಡಿ

ಜಂಭ ಬೇಡ, ಕೆಲಸ ಮಾಡಿ

ನಿಮ್ಮ ವ್ಯವಹಾರ ಮತ್ತು ಹೂಡಿಕೆಗಳು ಸುರಕ್ಷಿತ ಬಹು ಆದಾಯ ಉತ್ಪಾದಿಸುವವರೆಗೆ ಐಷಾರಾಮಿ ವಾಚ್ ಅಥವಾ ಕಾರನ್ನು ಖರೀದಿಸಬೇಡಿ. ಬಡಾಯಿ ಕೊಚ್ಚಿಕೊಳ್ಳುವ ಬದಲು, ಐಷಾರಾಮಿ ವಸ್ತುಗಳನ್ನು ಖರೀದಿಸುವ ಬದಲು ನಿಮ್ಮ ಕೆಲಸಕ್ಕೆ ಒತ್ತು ನೀಡಿ.

ಹೂಡಿಕೆಗಾಗಿ ಉಳಿಸಿ, ಉಳಿಸಲು ಉಳಿಸಬೇಡಿ

ಹೂಡಿಕೆಗಾಗಿ ಉಳಿಸಿ, ಉಳಿಸಲು ಉಳಿಸಬೇಡಿ

ಹಣ ಉಳಿತಾಯ ಮಾಡುವುದರ ಏಕೈಕ ಉದ್ದೇಶ ಹೂಡಿಕೆ ಮಾಡುವುದು. ನಿಧಾನವಾಗಿ ಸುರಕ್ಷಿತ ಮತ್ತು ಹೆಚ್ಚು ಆದಾಯ ಕೊಡುವ ವಿಧಾನಗಳಲ್ಲಿ ಹೂಡಿಕೆ ಮಾಡಿ. ಖಾತೆ ಮತ್ತು ತುರ್ತುನಿಧಿಗಳಲ್ಲಿ ಉಳಿಸುವ ಬದಲಿ ಹೆಚ್ಚು ರಿಟರ್ನ್ ಕೊಡುವ ವಿಧಾನ ನಿಮ್ಮ ಆಯ್ಕೆಯಾಗಿರಲಿ.

ಪಾವತಿಸದ ಸಾಲ ತಪ್ಪಿಸಿ

ಪಾವತಿಸದ ಸಾಲ ತಪ್ಪಿಸಿ

ಶ್ರೀಮಂತ ಜನರು ಅವರ ನಗದು ಹರಿವಿಗಾಗಿ ಸಾಲ ಬಳಸುತ್ತಾರೆ. ಹೂಡಿಕೆಗಳನ್ನು ಹೆಚ್ಚ್ಇಸಲು ಸಾಲ ಬಳಸುತ್ತಾರೆ. ಆದರೆ ಬಡವರು ವಸ್ತುಗಳನ್ನು, ಅಗತ್ಯ ಪರಿಕರ ಖರೀದಿಸಲು ಸಾಲ ಬಳಸುತ್ತಾರೆ.

ಪ್ರೇಮಿಯ ಅಸೂಯೆಯಂತೆ ಹಣ ನೋಡಿಕೊಳ್ಳಿ
 

ಪ್ರೇಮಿಯ ಅಸೂಯೆಯಂತೆ ಹಣ ನೋಡಿಕೊಳ್ಳಿ

ಲಕ್ಷಾಂತರ ಜನರು ಆರ್ಥಿಕ ಸ್ವಾತಂತ್ರ್ಯ ಬಯಸುತ್ತಾರೆ. ಆದರೆ ಯಾರು ಇದಕ್ಕೆ ಆದ್ಯತೆ ನೀಡುತ್ತಾರೆ ಅವರು ಲಕ್ಷಾಧಿಪತಿಗಳಾಗಿದ್ದಾರೆ. ಶ್ರೀಮಂತರಾಗಿರಿ ಮತ್ತು ಶ್ರೀಮಂತರಾಗಿಯೇ ಉಳಿಯಿರಿ, ಇದಕ್ಕಾಗಿ ಆದ್ಯತೆ ನಿಡಿ. ನೀವು ಹಣವನ್ನು ನಿರ್ಲಕ್ಷಿಸಿದರೆ ಅದು ನಿಮ್ಮನ್ನು ನಿರ್ಲಕ್ಷಿಸುತ್ತದೆ.

ಹಣ ನಿದ್ರೆ ಮಾಡುವುದಿಲ್ಲ

ಹಣ ನಿದ್ರೆ ಮಾಡುವುದಿಲ್ಲ

30 ವರ್ಷ ಆಸುಪಾಸಿನವರು ಇದನ್ನು ಓದಲೇಬೇಕು

ಲಕ್ಷಾಧಿಪತಿಯನ್ನು ಮಾರ್ಗದರ್ಶಿಯಾಗಿ ಹುಡುಕಿ

ಲಕ್ಷಾಧಿಪತಿಯನ್ನು ಮಾರ್ಗದರ್ಶಿಯಾಗಿ ಹುಡುಕಿ

ನಮ್ಮಲ್ಲಿ ಹೆಚ್ಚಿನ ಜನ ನಕರಾತ್ಮಕ ವಿಚಾರಧಾರೆ ಹೊಂದಿರುವವರ ಮಧ್ಯೆಯೇ ಬೆಳೆದಿರುತ್ತಾರೆ. ಹಾಗಾಗಿ ಒಂದು ಸೀಮಿತ ಆಲೋಚನೆಗಳಿಗೆ ನಮ್ಮನ್ನು ಸೀಮಿತಗೊಳಿಸುತ್ತೇವೆ. ಲಕ್ಷಾಧಿಪತಿಗಳು ಹೇಗೆ ಉನ್ನತ ಮಟ್ಟ ತಲುಪಿದ್ದಾರೆ ಎಂಬುದನ್ನು ತಿಳಿದು ಅವರನ್ನು ನಕಲು ಮಾಡಿ. ನಿಮ್ಮ ಮಾರ್ಗದರ್ಶಿಗಳನ್ನು ಹುಡುಕಿ ಅವುಗಳನ್ನು ಅಧ್ಯಯನ ಮಾಡಿ. ಹೆಚ್ಚಿನ ಶ್ರೀಮಂತರು ತಮ್ಮ ಜ್ಞಾನ ಮತ್ತು ಸಂಪನ್ಮೂಲಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಉದಾರಿಗಳಾಗಿರುತ್ತಾರೆ.

ಹಣ ಮಾಡಿ, ಮತ್ತೆ ಹಣ ಮಾಡಿ

ಹಣ ಮಾಡಿ, ಮತ್ತೆ ಹಣ ಮಾಡಿ

ಹೂಡಿಕೆದಾರರು ಮಿಲಿಯನೇರ್ ಆಗುವುದು ಪವಿತ್ರ ಎಂದುಕೊಳ್ಳುತ್ತಾರೆ. ನಿಮ್ಮ ಕೆಲಸಕ್ಕಿಂತ ಹೆಚ್ಚು ಹೂಡಿಕೆಯಿಂದ ಹಣ ಮಾಡಬೇಕು. ನಿಮ್ಮ ಬಳಿ ಹೆಚ್ಚುವರಿ ಹಣ ಇಲ್ಲದಿದ್ದರೆ ನೀವು ಹೂಡಿಕೆ ಮಾಡುವುದಿಲ್ಲ.

1 ಮಿಲಿಯನ್ ಅಲ್ಲ, 10 ಮಿಲಿಯನ್ ಗುರಿ ಇಟ್ಟುಕೊಳ್ಳಿ

1 ಮಿಲಿಯನ್ ಅಲ್ಲ, 10 ಮಿಲಿಯನ್ ಗುರಿ ಇಟ್ಟುಕೊಳ್ಳಿ

ನಮ್ಮಲ್ಲಿನ ಅತಿದೊಡ್ಡ ತಪ್ಪೆಂದರೆ ದೊಡ್ಡದಾಗಿ ಯೋಚಿಸದೇ ಇರುವುದು. ಒಂದು ಮಿಲಿಯನ್ ಎಂದರೆ ಹತ್ತು ಲಕ್ಷ. ಹತ್ತು ಮಿಲಿಯನ್ ಅಂದರೆ ಒಂದು ಕೋಟಿ. ಹಾಗಾಗಿ ನಿಮ್ಮ ಗುರಿ ಹತ್ತು ಮಿಲಿಯನ್ ಆಗಿರಬೇಕು. ಜಗತ್ತಿನ ಹಣಕ್ಕೆ ಬರಗಾಲವಿಲ್ಲ. ಬದಲಾಗಿ ದೊಡ್ಡದಾಗಿ ಕನಸು ಕಾಣುವ ಜನರ ಬರಗಾಲವಿದೆ

ಈ 9 ವಿಧಾನಗಳನ್ನು ಅನ್ವಯಿಕೊಂಡರೆ ನೀವು ಮಿಲಿಯನೇರ್ ಆಗುತ್ತೀರಿ. ನಿಮ್ಮ ಹಣಕಾಸಿನ ಕನಸುಗಳು ದುರಾಸೆ ಎಂದು ಹೇಳುವ ಜನರಿಂದ ದೂರವಿರಿ. ವೇಗವಾಗಿ ಶ್ರೀಮಂತರಾಗುವ ಸ್ಕೀಮ್ ಗಳಿಂದ ದೂರವಿರಿ. ಪ್ರಾಮಾಣಿಕತೆ, ನೈತಿಕತೆ ಎಂದಿಗೂ ಬಿಟ್ಟುಕೊಡಬಾರದು. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ. Short cut will cut you Short! 2019 ಕ್ಕೆ ಭಾರತದಲ್ಲಿ 20 ಬೆಸ್ಟ್ ಇನ್‌ವೆಸ್ಟ್‌ಮೆಂಟ್‌ ಪ್ಲಾನ್

Read more about: money finance news savings
English summary

Want to Become a Millionaire before age 30, Must Read..

Becoming a millionaire at 30 seems more like a fantasy. But this is possible. In fact, its never too late to achieve anything in life.
Story first published: Monday, May 13, 2019, 15:19 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more