For Quick Alerts
ALLOW NOTIFICATIONS  
For Daily Alerts

2019 ಕ್ಕೆ ಭಾರತದಲ್ಲಿ 20 ಬೆಸ್ಟ್ ಇನ್‌ವೆಸ್ಟ್‌ಮೆಂಟ್‌ ಪ್ಲಾನ್

2019 ರ ಹಣಕಾಸು ವರ್ಷದಲ್ಲಿ ಹೂಡಿಕೆಗೆ ಉತ್ತಮವಾದ ಯೋಜನೆಗಳು ಯಾವುವು? ಹೆಚ್ಚು ಆದಾಯ ಕೊಡುವ ವಿಧಾನಗಳಲ್ಲಿ ಹೂಡಿಕೆ ಮಾಡಲು ಏನು ಮಾಡಬೇಕು? ಯಾವ ತರಹದ ಹೂಡಿಕೆಗಳು ಸುರಕ್ಷಿತ ಹಾಗು ಉತ್ತಮ ರಿಟರ್ನ್ ಕೊಡಬಲ್ಲವು?

|

2019 ರ ಹಣಕಾಸು ವರ್ಷದಲ್ಲಿ ಹೂಡಿಕೆಗೆ ಉತ್ತಮವಾದ ಯೋಜನೆಗಳು ಯಾವುವು? ಹೆಚ್ಚು ಆದಾಯ ಕೊಡುವ ವಿಧಾನಗಳಲ್ಲಿ ಹೂಡಿಕೆ ಮಾಡಲು ಏನು ಮಾಡಬೇಕು? ಯಾವ ತರಹದ ಹೂಡಿಕೆಗಳು ಸುರಕ್ಷಿತ ಹಾಗು ಉತ್ತಮ ರಿಟರ್ನ್ ಕೊಡಬಲ್ಲವು? ಇತ್ಯಾದಿ ಪ್ರಶ್ನೆಗಳು ಹೆಚ್ಚಿನವರನ್ನು ಕಾಡುತ್ತಿರುತ್ತವೆ.

ಅತ್ಯುತ್ತಮ ಹೂಡಿಕೆ ಆಯ್ಕೆಗಳು ಹೇಗೆ ಪಡೆಯುವುದು? ನಿಮ್ಮ ಪ್ರಕಾರ ಯಾವುದು ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ? ಸರಿ, ಈ ಪ್ರಶ್ನೆಗೆ ಉತ್ತರ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಒಂದು ಸಣ್ಣ ಉದಾಹರಣೆ ಮೂಲಕ ನೋಡಲು ಪ್ರಯತ್ನಿಸೋಣ. ನಿಮ್ಮ ಪ್ರಕಾರ ಯಾವುದು ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ? ಇದು ನಿಮ್ಮ ಉತ್ತರ ಆಗಿರಬಹುದೇ..?
ಶೇರು ಮಾರುಕಟ್ಟೆ
ಸ್ಥಿರ ಠೇವಣಿ
ಮ್ಯೂಚುಯಲ್ ಫಂಡ್ ಗಳು
ರಿಯಲ್ ಎಸ್ಟೇಟ್
ಇದರಲ್ಲಿ ನಿಮ್ಮ ಉತ್ತರ ಸ್ಥಿರ ಠೇವಣಿ, ಮ್ಯೂಚುಯಲ್ ಫಂಡ್, ಸ್ಟಾಕ್ ಮಾರ್ಕೆಟ್ ಅಥವಾ ರಿಯಲ್ ಎಸ್ಟೇಟ್ ಆಗಿರಬಹುದು? ನಿಮ್ಮ ಆಯ್ಕೆಯು ಯಾವುದಾದರೂ ಇರಬಹುದು. ಆಯ್ಕೆ ಮಾಡುವಾಗ ನಿಮ್ಮ ಗುರಿ, ನಿರೀಕ್ಷಿತ ಆದಾಯ, ಹೂಡಿಕೆಯ ಹಾರಿಜಾನ್ ಮತ್ತು ರಿಸ್ಕ್ ಸಂಬಂಧಿತ ಅಂಶಗಳನ್ನು ಪರಿಗಣಿಸಬೇಕು ಎಂಬುದನ್ನು ಮರೆಯಬಾರದು.
ಆದ್ದರಿಂದ ಉತ್ತಮ ಹೂಡಿಕೆಯ ಆಯ್ಕೆಗಳನ್ನು ಕಂಡುಕೊಳ್ಳಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು...

1. ಬ್ಯಾಂಕ್ ಸ್ಥಿರ ಠೇವಣಿ (ಎಫ್ಡಿ)

1. ಬ್ಯಾಂಕ್ ಸ್ಥಿರ ಠೇವಣಿ (ಎಫ್ಡಿ)

ಸಂಬಳದಾತರು ಇಷ್ಟಪಡುವ ಅತ್ಯಂತ ಜನಪ್ರಿಯ ಹೂಡಿಕೆ ವಿಧಾನವೆಂದರೆ ಬ್ಯಾಂಕ್ ಸ್ಥಿರ ಠೇವಣಿ. ಇದರಲ್ಲಿ ಅಪಾಯ ಕಡಿಮೆಯಿದ್ದು, ಸ್ಥಿರವಾದ ಆದಾಯ ಇರುತ್ತದೆ. ರಿಸ್ಕ್ ತೆಗೆದುಕೊಳ್ಳು ಇಷ್ಟಪಡದ ಹೂಡಿಕೆದಾರರ ಜೆಚ್ಚಿನ ಆಯ್ಕೆ ಎಫ್ಡಿ. ಬ್ಯಾಂಕ್ ಸ್ಥಿರ ಠೇವಣಿ ಮಧ್ಯಮ ಆದಾಯವನ್ನು ನೀಡುತ್ತದೆ. ನೀವು ಬ್ಯಾಂಕಿನ ಸ್ಥಿರ ಠೇವಣಿಗಳ ಮೇಲೆ ಶೇ. 6.5 ರಿಂದ ಶೇ. 8 ಆದಾಯವನ್ನು ನಿರೀಕ್ಷಿಸಬಹುದು. ಬಡ್ಡಿ ಆದಾಯಕ್ಕೆ ತೆರಿಗೆಯಿದೆ. ನೀವು ಅತ್ಯಧಿಕ ತೆರಿಗೆ ಪಾವತಿಸುವವರಾಗಿದ್ದರೆ, ಪೋಸ್ಟ್-ಟ್ಯಾಕ್ಸ್ ರಿಟರ್ನ್ ತುಂಬಾ ಕಡಿಮೆಯಿರುತ್ತದೆ.

ನಿರೀಕ್ಷಿತ ರಿಟರ್ನ್ಸ್ - ಶೇ. 6.5-ಶೇ. 8

ಅವಧಿ - 7 ದಿನಗಳಿಂದ 10 ವರ್ಷಗಳು

ಅಪಾಯ - ಕಡಿಮೆ ಅಪಾಯ

 

2. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)

2. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಕಡಿಮೆ ಮತ್ತು ಮಧ್ಯಮ ಅಪಾಯ ಹೊಂಡಿರುವ ಹೂಡಿಕೆ ವಿಧಾನವಾಗಿದ್ದು, ನಂತರದ ಅತ್ಯುತ್ತಮ ಹೂಡಿಕೆ ಆಯ್ಕೆ ಇದಾಗಿದೆ. ಪಿಪಿಎಫ್ ಸುರಕ್ಷಿತವಾದ ಹೂಡಿಕೆ ಆಯ್ಕೆಯಾಗಿದ್ದು, ಸಂಬಳದಾರರು ಇದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಪಿಪಿಎಫ್ ರಿಟರ್ನ್ ಸಂಪೂರ್ಣವಾಗಿ ತೆರಿಗೆ ರಹಿತವಾಗಿರುತ್ತದೆ. ಆದಾಗ್ಯೂ, ಪಿಪಿಎಫ್ 15 ವರ್ಷಗಳ ಅವಧಿ ಹೊಂದಿದೆ. ದೀರ್ಘಾವಧಿಯ ಹೂಡಿಕೆ ಆಯ್ಕೆ ನಿಮ್ಮದಾಗಿದ್ದರೆ PPF ನಲ್ಲಿ ನೀವು ಹೂಡಿಕೆ ಮಾಡಬಹುದು.

ನಿರೀಕ್ಷಿತ ರಿಟರ್ನ್ಸ್ - ಶೇ. 7.5-ಶೇ. 8.5

ಅವಧಿ - 15 ವರ್ಷಗಳು

ಅಪಾಯ - ಕಡಿಮೆ ಅಪಾಯ

3. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್)

3. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್)

ಮುಖ್ಯವಾಗಿ ತೆರಿಗೆ ಪ್ರಯೋಜನಗಳ ಕಾರಣದಿಂದಾಗಿ ಇಂದಿನ ದಿನಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಶೀಘ್ರ ಜನಪ್ರಿಯತೆಯನ್ನು ಗಳಿಸುತ್ತಿದೆ. ಎನ್ಪಿಎಸ್ ಎರಡು ಆಯ್ಕೆಗಳನ್ನು ನೀಡುತ್ತದೆ. ಆಟೋ ಮತ್ತು ಆಕ್ಟಿವ್. (Auto and Active)
ಸ್ವಯಂಚಾಲಿತ (ಆಟೋ) ಅಡಿಯಲ್ಲಿ, ಹಣವು ವಿವಿಧ ಸ್ವತ್ತುಗಳಲ್ಲಿ ಸ್ವಯಂಚಾಲಿತವಾಗಿ ಹೂಡಿಕೆ ಮಾಡಲ್ಪಡುತ್ತದೆ. ಆದರೆ ಸಕ್ರಿಯ (Active)ಆಯ್ಕೆಯಲ್ಲಿ ಹೂಡಿಕೆದಾರರು ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಹೂಡಿಕೆದಾರರ ವಯಸ್ಸಿನ ಆಧಾರದ ಮೇಲೆ ಅವಧಿ ಅವಲಂಬಿತವಾಗಿರುತ್ತದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 9 ರಿಂದ ಶೇ. 11
ಸಮಯ ಅವಧಿ - ದೀರ್ಘಾವಧಿ
ಅಪಾಯ - ಮಧ್ಯಮ

4. ತೆರಿಗೆ ಉಳಿತಾಯ ಠೇವಣಿ

4. ತೆರಿಗೆ ಉಳಿತಾಯ ಠೇವಣಿ

ಸ್ಯಾಲರಿ ಪಡೆಯುವವರಿಗೆ ತೆರಿಗೆ ಉಳಿತಾಯ ಎಫ್ಡಿ ಮತ್ತೊಂದು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ತೆತೆರಿಗೆ ಉಳಿತಾಯ ಠೇವಣಿ ಮಧ್ಯಮ ಆದಾಯವನ್ನು ನೀಡುತ್ತದೆ. ಹೂಡಿಕೆಗೆ ಇದು ಸುರಕ್ಷಿತ ಆಯ್ಕೆಯಾಗಿ ಪರಿಗಣಿಸಲಾಗಿದೆ. ತೆರಿಗೆ ಉಳಿತಾಯ ಎಫ್ಡಿ 5 ವರ್ಷಗಳ ಅವಧಿಯಲ್ಲಿ ಬರುತ್ತದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 7.6
ಸಮಯ ಅವಧಿ - 5 ವರ್ಷಗಳು
ಅಪಾಯ - ಕಡಿಮೆ

5. ಇಎಲ್ಎಸ್ಎಸ್ (ELSS)

5. ಇಎಲ್ಎಸ್ಎಸ್ (ELSS)

ಇಎಲ್ಎಸ್ಎಸ್ (ELSS) (ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್)ಇನ್ನೊಂದು ಅತ್ಯುತ್ತಮ ಬಂಡವಾಳ ಆಯ್ಕೆಯಾಗಿದೆ. ಇತರ ತೆರಿಗೆ ಉಳಿಸುವ ಹೂಡಿಕೆಗಳಿಗೆ ಹೋಲಿಸಿದರೆ ELSS ಹೆಚ್ಚಿನ ಆದಾಯವನ್ನು ನೀಡುತ್ತದೆ. ನೀವು ಕನಿಷ್ಟ ಮಾಸಿಕ SIP ರೂ. 500 ರೊಂದಿಗೆ ELSS ನಲ್ಲಿ ಹೂಡಿಕೆ ಮಾಡಬಹುದು. ELSS ಯ ಲಾಕ್-ಇನ್ ಅವಧಿ 3 ವರ್ಷಗಳು.
ನಿರೀಕ್ಷಿತ ರಿಟರ್ನ್ಸ್ - ಶೇ. 11-13
ಸಮಯ ಅವಧಿ - 3 ವರ್ಷಗಳು
ಅಪಾಯ - ಮಧ್ಯಮ

6. ವಿಪಿಎಫ್

6. ವಿಪಿಎಫ್

ವೇತನದಾರರು ಸ್ವಯಂ ಸೇವಾ ನಿಧಿಯ (Voluntary Provident Fund) ಮೂಲಕ ಇಪಿಎಫ್ ನಲ್ಲಿ ಹೂಡಿಕೆ ಮಾಡಬಹುದು. VPF ವಿಧಾನ ಇಪಿಎಪ್ ನ ವಿಸ್ತರಣೆಗೊಂಡ ಭಾಗವಾಗಿದೆ. ವಿಪಿಎಫ್ ತೆರಿಗೆ ವಿನಾಯಿತಿ ವಿಭಾಗದಲ್ಲಿ ಬರುತ್ತದೆ. ಇದು ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 8.5-8.66
ಸಮಯ ಅವಧಿ - ದೀರ್ಘಾವಧಿ
ಅಪಾಯ - ಮಧ್ಯಮ

7. ಸ್ಟಾಕ್ ಮಾರುಕಟ್ಟೆ

7. ಸ್ಟಾಕ್ ಮಾರುಕಟ್ಟೆ

ಹೆಚ್ಚಿನ ಅಪಾಯ ಎದುರಿಸಲು ಸಿದ್ದರಿರುವ ಹೂಡಿಕೆದಾರರಿಗೆ ಸ್ಟಾಕ್ ಮಾರುಕಟ್ಟೆ ಉತ್ತಮ ಆಯ್ಕೆಯಾಗಿದೆ. ನೀವು ಹೂಡಿದ ಬಂಡವಾಳದಲ್ಲಿ ಶೇ. 50ರಷ್ಟು ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಸ್ಟಾಕ್ ಮಾರುಕಟ್ಟೆ ಹೂಡಿಕೆಗೆ ಹೆಚ್ಚಿನ ಜ್ಞಾನದ ಅಗತ್ಯವಿರುತ್ತದೆ. ಹೂಡಿಕೆಯ ಮೊದಲು ಷೇರುಪೇಟೆಯನ್ನು ಸಂಪೂರ್ಣವಾಗಿ ವಿಶ್ಲೇಷಿಸಬೇಕು. ಬಂಡವಾಳಕ್ಕಾಗಿ ಉತ್ತಮ ಸ್ಟಾಕ್ ಅನ್ನು ಗುರುತಿಸಲು ಸ್ಟಾಕ್ ಮಾರ್ಕೆಟ್ ತಜ್ಞರ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮ.
ನಿರೀಕ್ಷಿತ ರಿಟರ್ನ್ಸ್ - ಶೇ. 6-15
ಅವಧಿ - ಮಧ್ಯಮ ಅವಧಿಯವರೆಗೆ
ಅಪಾಯ - ಹೆಚ್ಚು

8. ಮ್ಯೂಚುವಲ್ ಫಂಡ್

8. ಮ್ಯೂಚುವಲ್ ಫಂಡ್

ಇಕ್ವಿಟಿ ಮ್ಯೂಚುವಲ್ ಫಂಡ್ ಎನ್ನುವುದು ಹೂಡಿಕೆ ಮಾಡಲು ತುಲನಾತ್ಮಕವಾಗಿ ಸುರಕ್ಷಿತವಾದ ಮಾರ್ಗವಾಗಿದೆ. ಮ್ಯೂಚುವಲ್ ಫಂಡ್ ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯವನ್ನು ನೀಡುತ್ತದೆ. ಇಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ನೀವು SIP ಮೂಲಕ ಭಾರೀ ಮೊತ್ತ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್ ಕನಿಷ್ಟ ಮಾಸಿಕ ಸಿಪ್ ರೂ. 500 ಆಗಿದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 9-15
ಅವಧಿ - ಮಧ್ಯಮ ಅವಧಿಯವರೆಗೆ
ಅಪಾಯ - ಹೆಚ್ಚು

9. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)

9. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)

ಇನಿಶಿಯಲ್ ಪಬ್ಲಿಕ್ ಆಫರ್ (ಐಪಿಒ) ಹೆಚ್ಚಿನ ಅಪಾಯಕಾರಿ ಹೂಡಿಕೆ ಆಯ್ಕೆಯಾಗಿದೆ. ಉತ್ತಮವಾದ IPO ದೀರ್ಘಕಾಲದವರೆಗೆ ಉತ್ತಮ ಆದಾಯವನ್ನು ಒದಗಿಸಬಲ್ಲದು. ಐಪಿಒ ಆಯ್ಕೆ ಮಾಡುವಾಗ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 10-20
ಅವಧಿ - ದೀರ್ಘಾವಧಿ
ಅಪಾಯ - ಹೆಚ್ಚು

10. ರಿಯಲ್ ಎಸ್ಟೇಟ್

10. ರಿಯಲ್ ಎಸ್ಟೇಟ್

ವಾಣಿಜ್ಯಾತ್ಮಕ ರಿಯಲ್ ಎಸ್ಟೇಟ್ ಪ್ರಾಪರ್ಟಿ ಬಾಡಿಗೆ ಆದಾಯ ಒದಗಿಸುತ್ತದೆ. ಆಫೀಸಿಯಲ್, ವಾಣಿಜ್ಯಾತ್ಮಕ ಬೇಡಿಕೆಯಿಂದಾಗಿ ಈ ಆಯ್ಕೆಯು ಅಧಿಕ ಆದಾಯ ನೀಡುತ್ತದೆ. ವಾಣಿಜ್ಯ ಆಸ್ತಿಯಲ್ಲಿ ಹೂಡಿಕೆ ಮಾಡುವಾಗ ಸ್ಥಳ, ಕಟ್ಟಡದ ಗುಣಮಟ್ಟ, ಸ್ಥಳದ ಬಾಡಿಗೆ ಮತ್ತು ಸರಬರಾಜು ಬೇಡಿಕೆಗಳನ್ನು ಗಮನಿಸಿ ಜಾಗರೂಕತೆಯಿಂದ ಆಯ್ಕೆ ಮಾಡಬೇಕು.
ನಿರೀಕ್ಷಿತ ರಿಟರ್ನ್ಸ್ - ಶೇ. 12
ಸಮಯ ಅವಧಿ - ದೀರ್ಘಾವಧಿ
ಅಪಾಯ - ಹೆಚ್ಚು

11.ಚಿನ್ನ

11.ಚಿನ್ನ

ಚಿನ್ನದ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಎಂದು ಪರಿಗಣಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ, ಚಿನ್ನ ಹೂಡಿಕೆದಾರರಿಗೆ ಸ್ಥಿರವಾದ ಆದಾಯ ಒದಗಿಸಿದೆ. ನಿಮ್ಮ ಹಣವನ್ನು ಚಿನ್ನದ ರೂಪದಲ್ಲಿ ಹೂಡಿಕೆ ಮಾಡಲು ನೀವು ಯೋಜಿಸುತ್ತಿದ್ದರೆ, ಗೋಲ್ಡ್ ಇಟಿಎಫ್ ಅಥವಾ ಚಿನ್ನದ ಬಾಂಡ್ ಗಳ ಮೂಲಕ ಹೂಡಿಕೆ ಮಾಡುವುಉದ ಉತ್ತಮ.
ನಿರೀಕ್ಷಿತ ರಿಟರ್ನ್ಸ್ - ಶೇ. 10
ಅವಧಿ - ದೀರ್ಘಾವಧಿಯ ಮಧ್ಯಮ
ಅಪಾಯ - ಮಧ್ಯಮ

12. ಕಂಪನಿ ಸ್ಥಿರ ಠೇವಣಿ

12. ಕಂಪನಿ ಸ್ಥಿರ ಠೇವಣಿ

ಹೆಚ್ಚಿ ರಿಸ್ಕ್ ಎದುರಿಸಲು ಬಯಸುವ ಹೂಡಿಕೆದಾರರಿಗೆ ಕಂಪನಿ ಸ್ಥಿರವಾದ ಠೇವಣಿ ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಇದು ಬ್ಯಾಂಕ್ ಎಫ್ಡಿ ಗಳಿಗೆ ಹೋಲಿಸಿದರೆ ಹೆಚ್ಚಿನ ಆದಾಯ ನೀಡುತ್ತದೆ. ಕಂಪನಿಯ ಎಫ್ಡಿ ಗಳನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರಬೇಕು. ಆಯ್ಕೆ ಮಾಡುವ ಮೊದಲು ಕಂಪನಿಯ ರೇಟಿಂಗ್ ಮತ್ತು ಹಿಂದಿನ ಫಲಿತಾಂಶ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.
ನಿರೀಕ್ಷಿತ ರಿಟರ್ನ್ಸ್ - ಶೇ. 10
ಅವಧಿ - ದೀರ್ಘಾವಧಿಯ ಮಧ್ಯಮ
ಅಪಾಯ - ಹೆಚ್ಚು

13. ಲಿಕ್ವಿಡ್ ಮ್ಯೂಚುವಲ್ ಫಂಡ್

13. ಲಿಕ್ವಿಡ್ ಮ್ಯೂಚುವಲ್ ಫಂಡ್

ಲಿಕ್ವಿಡ್ ಮ್ಯೂಚುವಲ್ ಫಂಡ್ ಕಡಿಮೆ ಅಪಾಯ ಹೊಂದಿರುವ ಹೂಡಿಕೆ ಆಯ್ಕೆಯಾಗಿದೆ. ಇದು ಅಲ್ಪಾವಧಿಯ ವಿಧಾನವಾಗಿದ್ದು, ಹೆಚ್ಚಿನ ದ್ರವ್ಯತೆ ನೀಡುತ್ತದೆ. ಈ ರೀತಿಯ ಮ್ಯೂಚುವಲ್ ಫಂಡ್ ನಿಮ್ಮ ಹಣವನ್ನು ಬ್ಯಾಂಕ್ ಎಫ್ಡಿ, ಟಿ-ಬಿಲ್, ವಾಣಿಜ್ಯ ಪೇಪರ್ ಇತ್ಯಾದಿಗಳಲ್ಲಿ 91 ದಿನಗಳಿಗಿಂತಲೂ ಕಡಿಮೆ ಅವಧಿಗೆ ಹೂಡಿಕೆ ಮಾಡುತ್ತದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 6.5
ಅವಧಿ - ಅಲ್ಪಾವಧಿ
ಅಪಾಯ - ಮಧ್ಯಮ

14. ಮರುಕಳಿಸುವ ಠೇವಣಿ (RD)

14. ಮರುಕಳಿಸುವ ಠೇವಣಿ (RD)

ಮರುಕಳಿಸುವ ಠೇವಣಿ ಸ್ಥಿರವಾದ ಠೇವಣಿಯಂತೆ ಕಾರ್ಯನಿರ್ವಹಿಸುತ್ತದೆದಲ್ಲದೇ, ಹಣವನ್ನು ಮಾಸಿಕ ಆಧಾರದ ಮೇಲೆ ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಬಹುದು. ಮರುಕಳಿಸುವ ಠೇವಣಿಯಿಂದ ಸಿಗುವ ರಿಟರ್ನ್ ಸ್ಥಿರವಾದ ಠೇವಣಿಯಂತೆಯೇ ಇರುತ್ತದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 7
ಅವಧಿ - 3 ವರ್ಷಗಳು
ಅಪಾಯ - ಕಡಿಮೆ

15. ಅಲ್ಟ್ರಾ ಅಲ್ಪಾವಧಿಯ ಡೆಬ್ಟ್ ಮ್ಯೂಚುವಲ್ ಫಂಡ್ (Ultra Short Term Debt Mutual Funds)

15. ಅಲ್ಟ್ರಾ ಅಲ್ಪಾವಧಿಯ ಡೆಬ್ಟ್ ಮ್ಯೂಚುವಲ್ ಫಂಡ್ (Ultra Short Term Debt Mutual Funds)

ಅಲ್ಟ್ರಾ ಅಲ್ಪಾವಧಿಯ ಸಾಲ ಮ್ಯೂಚುವಲ್ ಫಂಡ್ ಡೆಬ್ಟ್ ಮ್ಯೂಚುವಲ್ ಫಂಡ್ ಆಗಿದೆ. ಇದನ್ನು ನಿಶ್ಚಿತ ಆದಾಯದ ವಿಧಾನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಕಡಿಮೆ ಅವಧಿಯ ಅಲ್ಟ್ರಾ ಅಲ್ಪಾವಧಿಯ ಡೆಬ್ಟ್ ಮ್ಯೂಚುವಲ್ ಫಂಡ್ ಅತ್ಯುತ್ತಮ ಹೂಡಿಕೆಯ ಆಯ್ಕೆಯಾಗಿದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 7-9
ಅವಧಿ - ಅಲ್ಪಾವಧಿ
ಅಪಾಯ - ಕಡಿಮೆ

16. ಪೋಸ್ಟ್ ಆಫೀಸ್ ಯೋಜನೆ

16. ಪೋಸ್ಟ್ ಆಫೀಸ್ ಯೋಜನೆ

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ. ನಿಯಮಿತ ಮಾಸಿಕ ಆದಾಯಕ್ಕಾಗಿ ನೋಡುತ್ತಿದ್ದರೆ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಜಿಸಬಹುದು. ಇದು ನಿವೃತ್ತ ಅಥವಾ ಹಿರಿಯ ನಾಗರಿಕರ ನೆಚ್ಚಿನ ಆಯ್ಕೆಯಾಗಿದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 7.7
ಅವಧಿ - 5 ವರ್ಷಗಳು (ಮಾಸಿಕ ಆದಾಯ)
ಅಪಾಯ - ಕಡಿಮೆ

17. ಡೈರೆಕ್ಟ್ ಮ್ಯೂಚುವಲ್ ಫಂಡ್

17. ಡೈರೆಕ್ಟ್ ಮ್ಯೂಚುವಲ್ ಫಂಡ್

ಡೈರೆಕ್ಟ್ ಮ್ಯೂಚುವಲ್ ಫಂಡ್ ಹೂಡಿಕೆಯು ಸಂಪತ್ತು ಸೃಷ್ಟಿಗೆ ಉತ್ತಮ ಆಯ್ಕೆಯಾಗಿದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 16-18
ಸಮಯ ಅವಧಿ - 5 ವರ್ಷಗಳು
ಅಪಾಯ - ಮಧ್ಯಮ

18. ರಿಯಲ್ ಎಸ್ಟೇಟ್ ರೆಸಿಡೆನ್ಸಿಯಲ್

18. ರಿಯಲ್ ಎಸ್ಟೇಟ್ ರೆಸಿಡೆನ್ಸಿಯಲ್

ರಿಯಲ್ ಎಸ್ಟೇಟ್ ರೆಸಿಡೆನ್ಸಿಯಲ್ ಹೂಡಿಕೆ ಇನ್ನೊಂದು ದೀರ್ಘಾವಧಿಯ ಬಂಡವಾಳ ಆಯ್ಕೆಯಾಗಿದೆ. ನಿಮ್ಮ ಹೆಚ್ಚುವರಿ ಹಣವನ್ನು ಹೊಂದಿದ್ದರೆ ರಿಯಲ್ ಎಸ್ಟೇಟ್ ರೆಸಿಡೆನ್ಸಿಯಲ್ ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ಬಾಡಿಗೆ ಆದಾಯ ಮತ್ತು ಬಂಡವಾಳದ ಮೆಚ್ಚುಗೆಯ ಲಾಭವನ್ನು ನೀವು ಪಡೆಯಬಹುದು.
ನಿರೀಕ್ಷಿತ ರಿಟರ್ನ್ಸ್ - ಶೇ. 11
ಸಮಯ ಅವಧಿ - ದೀರ್ಘಾವಧಿ
ಅಪಾಯ - ಹೆಚ್ಚು

19. ಬ್ಲೂ ಚಿಪ್ ಸ್ಟಾಕ್

19. ಬ್ಲೂ ಚಿಪ್ ಸ್ಟಾಕ್

ಬ್ಲೂ ಚಿಪ್ ಸ್ಟಾಕ್ ಗಳಲ್ಲಿನ ಹೂಡಿಕೆಯು ನೆಚ್ಚಿನ ಬಂಡವಾಳ ಆಯ್ಕೆಗಳಲ್ಲಿ ಒಂದಾಗಿದ್ದು, ದೀರ್ಘಕಾಲದವರೆಗೆ ಬ್ಲೂ ಚಿಪ್ ಸ್ಟಾಕ್ ಹೂಡಿಕೆ ಮಾಡಬಹುದು. ಇದು ಹೆಚ್ಚಿನ ಆದಾಯವನ್ನು ನೀಡುತ್ತದೆ. ಬ್ಲೂ ಚಿಪ್ ಸ್ಟಾಕ್ ನಿಯಮಿತವಾಗಿ ಲಾಭಾಂಶವನ್ನು ಪಾವತಿಸುತ್ತದೆ.
ನಿರೀಕ್ಷಿತ ರಿಟರ್ನ್ಸ್ - ಶೇ. 12-18
ಅವಧಿ - ದೀರ್ಘಾವಧಿ
ಅಪಾಯ - ಹೆಚ್ಚು

English summary

Best Investment Options in India for 2019

Which are Best Investment Options in India for 2019? Where I should invest my money for getting better returns?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X